ಗಜಲ್
ಲಕ್ಷ್ಮೀ ದೊಡಮನಿ
ಕೆಟ್ಟವರು ಒಳ್ಳೆಯವರೆನಿಸುವದು ಮೊದಮೊದಲು ಹೀಗೆ
ಬೆಂಕಿ ಬೂದಿಯೆನಿಸುವದು ಮೊದಮೊದಲು ಹೀಗೆ
ಕಲ್ಪಕತೆ,ನಾವೀನ್ಯತೆ, ವರ್ಣನೆಯೇ ಮುದನೀಡುವದಿಲ್ಲವೇ
ಸತ್ಯ ಕಹಿಯೆನಿಸುವುದು ಮೊದಮೊದಲು ಹೀಗೆ
ನೋಯಿಸುವುದು,ಪರಿತಪಿಸುವುದು,ತಲ್ಲಣಿಸುವುದು ನಂತರವೇ
ಸಂಸಾರ ಸುಖವೆನಿಸುವುದು ಮೊದಮೊದಲು ಹೀಗೆ
ನಿರ್ಧರಿಸಿದರು, ಕಾದಂಬರಿ ಮುಗಿಯಲಿ ತಡಿ
ನಾಯಕ ಖಳನಾಯಕ ಎನಿಸುವದು ಮೊದಮೊದಲು ಹೀಗೆ
ಸಾಧನೆ ಸಾಗುವಾಗಲೇ ಕಣ್ಣೀರು ಕಪ್ಪಾಳಕ್ಕಿಳಿವವು
ಸಂಕಲ್ಪದಿ ಸಂಭ್ರಮಿಸುವದು ಮೊದಮೊದಲು ಹೀಗೆ
ಇನ್ನೂ ಆಳಕ್ಕಿಳಿದಾಗಲೇ ನಿಜ ಗೋಚರಿಸುವದು’ಚೆಲುವೆ’
ಭ್ರಮೆಯ ಬಲೆ ಹಿತವೆನಿಸುವದು ಮೊದಮೊದಲು ಹೀಗೆ