ನಾನೆಂದರೆ…

ಕವಿತೆ

ನಾನೆಂದರೆ…

ಮೀನಾಕ್ಷಿ ಸೂಡಿ

Ornament, Color, Vivid, Pattern, Art

ನಾನೆಂದರೆ
ನನ್ನೊಳಗಿನ ಕಪ್ಪು ಬಿಳುಪಿನ ಚಿತ್ರ
ಧುತ್ತನೆ ಕಣ್ಣೆದುರಿಗೆ
ಭಾವನೆಗಳ ತಾಕಲಾಟದಲ್ಲಿ
ಉತ್ತರ ಸಿಗದೆ ನಿರುತ್ತರಿ

ನನ್ನದು ಎಂಬ ಮಮಕಾರ
ಮನಸ ತುಂಬಾ ಪ್ರೀತಿ ಚಿತ್ತಾರ
ಸಾಧನೆ ಸಾಧಕಿ ಅಲ್ಲವೇ ಅಲ್ಲ
ಆದರೂ
ಎಲ್ಲರಂತಲ್ಲ ನಾನು ಅಗೋಚರ

ನನ್ನ ಉಸಿರಿಗೂ ಒಂದು ಹೆಸರಿದೆ
ಪ್ರೀತಿ ಆಗಸದಲ್ಲಿ ಮಿನುಗುವ ಎಳಸು ನಕ್ಷತ್ರ
ಬದುಕ ಪುಟ ತಿರುವಿದಷ್ಟೂ ಖುಷಿಗಳ ಹಾವಳಿ
ಕಷ್ಟ ಸುಖಗಳ ಕ್ಯಾಲೆಂಡರ್ ಲ್ಲಿ
ದಿಟ್ಟ ನಿರ್ಧಾರ ಗಳ ಪ್ರಭಾವಳಿ

ಬೆಳಕಿಲ್ಲದ ಹಾದಿಯಲ್ಲಿಯೂ ನಡೆಯುವ ಧೈರ್ಯ
ಭ್ರಮೆ ಅಲ್ಲ,ದಿಟ್ಟತೆ ; ಸ್ಪಷ್ಟತೆ,ಸನ್ನಡತೆ

ಗೊಂದಲಗಳ ಗೂಡು ಒಮ್ಮೊಮ್ಮೆ
ಭಾವನೆಗಳ ಪರಿಧಿಯಲ್ಲಿ
ಮತ್ತೊಮ್ಮೆ ಗೆದ್ದು ಬೀಗುತ್ತೇನೆ, ಭೌದ್ಧಿಕತೆಯ ಪ್ರಶಾಂತತೆಯಲಿ

ಬದುಕಿಗೆ ವಿಷ ಉಣಿಸಿದವರ ಎದಿರು
ಎಚ್ಚರದಿಂದ ಎದ್ದು ನಿಂತದ್ದು ನೆನಪಿದೆ

ನಾನು ನಾನಲ್ಲ
ನನ್ನಂತೆ ಪರರು ಎಂದಾಕಿ
ಬದುಕ ರಂಗಾಯಣದಲಿ ಎಲ್ಲ ಪಾತ್ರಗಳಿಗೂ ಸೈ ಅನಿಸಿಕೊಂಡಾಕಿ
ನಾ…
ನೀರಿನಂತೆ ಶುಭ್ರ ಪರಿಶುಭ್ರ
………..

Leave a Reply

Back To Top