ಕ್ಷಿಣೀಸುತ್ತಿದೆ ಮೌಲ್ಯ ಗಳ ನೆಲೆ

ಲೇಖನ

ಕ್ಷಿಣೀಸುತ್ತಿದೆ ಮೌಲ್ಯ ಗಳ ನೆಲೆ

ಭಾರತಿ ಕೇದಾರಿ ನಲವಡೆ

photography of sun glaring through the hole of finger

ಮಾನವ ಸಂಘಜೀವಿ” ಎಂದು ತತ್ವಜ್ಞಾನಿ ಅರಿಸ್ಟಾಟಲ ಹೇಳಿದ್ದಾರೆ. ಅಂದರೆ ಮಾನವ ಒಬ್ಬಂಟಿಯಾಗಿ ಇರಲಾರ ತನ್ನ ಕಷ್ಟ ಸುಖ ಹಂಚಿಕೊಳ್ಳುವ ಹಾಗೂ ವಿಚಾರ ಮಾಡುವ ಸಾಮರ್ಥ್ಯವನ್ನು ಹೊಂದಿದ್ದರಿಂದ ಸಂಬಂಧಗಳು ಕುಟುಂಬಗಳು ಎಂಬ ಸಮಾಜದ ಅತಿ ಚಿಕ್ಕ ಘಟಕದಿಂದ ನಿರ್ಮಾಣವಾಗಿ ಜೀವನದ ಮನ್ನಡೆಗೆ ಕಾರಣವಾಗಿವೆ.  ಪ್ರಸ್ತುತ ಕಾಲಘಟ್ಟದಲ್ಲಿ ಈ “ಸಂಬಂಧಗಳು”ಇಂದು ಅರ್ಥವನ್ನು ಕಳೆದುಕೊಂಡು ಬರೀ ವ್ಯಾವಹಾರಿಕತೆಯೇ ಜೀವನವಾಗಿದೆ. ತುಸು ಹಿಂದಿನ ದಿನಗಳನ್ನು ಮೆಲುಕು ಹಾಕಿದಾಗ ಹಬ್ಬ ಹರಿದಿನಗಳಲ್ಲಿ ಒಂದೆಡೆ ಸೇರಿ ಆಚರಿಸುವ ಅನ್ಯೋನ್ಯತೆ ಈಗ ಇಲ್ಲವಾಗಿದೆ. ಆಗಿನ ಅವಿಭಕ್ತ ಕುಟುಂಬಗಳಲ್ಲಿ ಚಿಕ್ಕಪ್ಪ,ಚಿಕ್ಕಮ್ಮ ಅಜ್ಜ ಅಜ್ಜಿ ದೊಡ್ಡಪ್ಪ ದೊಡ್ಡಮ್ಮ ಎಂಬ ಸಂಬಂಧಗಳಲ್ಲಿ ಹಿರಿಯರಿಗೆ ಗೌರವಿಸಬೇಕು, ಎದುರುಮಾತನಾಡಬಾರದು ಎಂಬುವದರೊಂದಿಗೆ ಎಲ್ಲರೂ  ಹಂಚಿಕೊಂಡು ಕೆಲಸ ಮಾಡುವುದರಿಂದ ಸಹಬಾಳ್ವೆ ಪ್ರೀತಿ, ವಿಧೇಯತೆ ಒಗ್ಗಟ್ಟು ತಾಳ್ಮೆಯಂತ ಮೌಲ್ಯಗಳು ಒಂದೆಡೆಯಾದರೆ ಅಜ್ಜಿ ಹೇಳುವ  ಕಥೆಯಿಂದ ಮಕ್ಕಳಲ್ಲಿ ಒಂದುರೀತಿಯ ಗೌರವ ಭಾವನೆ ಕುತೂಹಲ, ತೋಟ ಹೊಲಕ್ಕೆ ಅಜ್ಜನೊಂದಿಗೆ ಹೋಗುತ್ತಿದ್ದರಿಂದ ಬೇಸಾಯದ ಪರಿಚಯ ಗಿಡಮರ ಸಾಕಿದ ಪ್ರಾಣಿಪಕ್ಷಿಗಳ ಬಗ್ಗೆ ಕರುಣೆ, ಪರಿಸರ ಕಾಳಜಿಯಂತಹ ಮೌಲ್ಯಗಳು ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುತ್ತಿದ್ದವು. ಆದರೆ ಇಂದು ನಗರೀಕರಣ, ಔದ್ಯೋಗಿಕರಣದ ಕಾರಣದಿಂದ  ಇಂದು ಕೂಡು ಕುಟುಂಬಗಳು ಒಂಟಿಕುಟುಂಬಗಳಾಗಿ ನಗರದೆಡೆ ಧಾವಿಸಿವೆ. ಇದರ ಪರಿಣಾಮವಾಗಿ ಮೌಲ್ಯಗಳು ಕುಸಿತ ಇನ್ನೂ ಹೆಚ್ಚಾಗಿದೆ. ನಮ್ಮದು ಎಂದ ಮನವಿಂದು ನನ್ನದು ಎಂಬ ಸ್ವಾರ್ಥದ ಗೂಡಾಗಿ ವೈಯಕ್ತಿಕ ಸುಖವೇ ಜೀವನದ ಪರಮೋಚ್ಚ ಗುರಿಯಾಗಿದೆ. ಇವೆಲ್ಲವುಗಳ ನಡುವೆ ತಂತ್ರಜ್ಞಾನವೆಂಬ ಮಾಯಾಲೋಕ ಎಲ್ಲರ ಮನಗಳನ್ನು

 ತನ್ನ ಮುಷ್ಟಿಯಲ್ಲಿ ಬಂಧಿಸಿದೆ. ಮೊಬೈಲ ಎಂಬ ಅದ್ಭುತವಾದ ವಸ್ತು ಅನಿವಾರ್ಯವಾದರೂ ಅವಶ್ಯಕತೆಗಿಂತ ಮೀರಿ ಬಳಸುವ ಪರಿ ಸಂಬಂಧಗಳ ಪರಿವೆಯೇ ಇಲ್ಲದೆ ತನ್ನದೇ ಜಗತ್ತನ್ನು ಸೃಷ್ಟಿಸಿ ಯುವಕರ ಮುಗ್ಧಮನಗಳ ವಿಕೃತತೆಗೆ ಕಾರಣವಾಗಿ ಅವರ ಭವಿಷ್ಯಕೆ ಕೊಡಲಿಏಟನ್ನು ಹಾಕಿದೆ ಎಂದರೆ ತಪ್ಪಾಗಲಾರದು.ಮಕ್ಕಳ ಆನ್ಲೈನ್ ಶಿಕ್ಷಣದೊಂದಿಗೆ ಹಲವಾರು ಸೌಲಭ್ಯಗಳನ್ನು ಪಡೆಯಲು ಅದು ಈ ಕೊರೋನಾ ಮಹಾಮಾರಿ ಅಟ್ಟಹಾಸದ ಪರಮಾವಧಿಯಲ್ಲಿ ಆ ಸೌಲಭ್ಯಗಳನ್ನು ಒದಗಿಸಿ ಕೊಟ್ಟದೆಯೇನೋ ಸರಿ. ಆದರೆ ಅದರ ಮಾರಕದ ಬಗ್ಗೆ ವಿಚಾರಮಾಡಬೇಕಾದ ಅವಶ್ಯಕತೆ ತುಂಬಾ ಇದೆ. ಕಾರಣ ಅದರ ದುರುಪಯೋಗ ಹೆಚ್ಚಾಗಿ ಯುವಕರು ಮಕ್ಕಳು ತಮ್ಮ ಭವಿಷ್ಯವನ್ನು ಹಾಳುಮಾಡಿಕೊಳ್ಳುತ್ತಿದ್ದಾರೆ. ಅಶ್ಲೀಲ ದೃಶ್ಯಗಳನ್ನು ನೋಡಿ ಅನುಭವಿಸುವ ಮನೋವೃತಿಯೊಂದಿಗೆ ಮಾದಕವಸ್ತುಗಳಿಗಗ ದಾಸರಾಗುತ್ತಿದ್ದಾರೆ. ಇದರಿಂದ ಸಂಬಂಧಗಳ ವಯಸ್ಸಿನ ಬೆಲೆ ತಿಳಿಯದೇ ವಿಕೃತ ಕಾಮಿಗಳು, ಬಾಲಾಪರಾಧಿಗಳುಆಗುತ್ತಿದ್ದದಾರೆ. ಬಯಸಿದ್ದನ್ನು ಪಡೆಯಲು ಕಷ್ಟ ಪಡದೇ ತಕ್ಷಣ ಪಡೆಯಲುಕಲಿಯುವ ಅವಧಿಯಲ್ಲಿ ಮೋಜು ಮಸ್ತಿ ಕಳ್ಳತನ,ಮಾದಕವಸ್ತುಗಳ ಸೇವನೆ, ಸಾಗಣೆ, ವೇಶ್ಯಾವೃತ್ತಿಯಂತಹ ಕೆಟ್ಟ ಅಭ್ಯಾಸಗಳಿಗೆ ಬಲಿಯಾಗುತ್ತಿದ್ದಾರೆ. ಇವರ ಅವಶ್ಯಕತೆ ಪೂರೈಸಲು ದುಡಿವ ಪೋಷಕರಿಗೆ ಇವರ ಮೇಲೆ ಗಮನಿಡಲಾಗದೆ ಇವರ ಬೇಡಿಕೆ ಪೂರೈಸುವದೇ ನಮ್ಮ ಆದ್ಯಕರ್ತವ್ಯ ಎಂದು ಕನವರಿಸುವ ಅತಿ ಪ್ರೀತಿ. ಇದರಿಂದ ಮಕ್ಕಳಲ್ಲಿ ಸ್ವಾಭಿಮಾನ, ತಾಳ್ಮೆ, ಕರುಣೆ. ಸಮಯಪ್ರಜ್ಞೆಯ ಮೌಲ್ಯಗಳಿರದೆ ಹಿರಿಯರನ್ನು ಅಗೌರವದಿಂದ ನೋಡುವದರೊಂದಿಗೆ ದುಶ್ಚಟಗಳಲ್ಲಿ ಗೆಳೆಯರೊಂದಿಗೆ ಕಾಲಹರಣ ಮಾಡುತ್ತಾರೆ. ಹೀಗೆ ವೈಯಕ್ತಿಕ ಸ್ವಾರ್ಥ, ನಗರೀಗರಣ, ಮಕ್ಕಳಮೇಲಿನ ಅತೀವಿಶ್ವಾಸ, ಕೆಟ್ಟ ಹವ್ಯಾಸಗಳು, ಸಂಬಂಧಗಳ ವ್ಯಾವಹಾರಿಕತೆಯೇ ಕುಟುಂಬದಲ್ಲಿ, ಸಮಾಜದಲ್ಲಿ ಮೌಲ್ಯಗಳು ಕ್ಷೀಣಿಸಲು ಕಾರಣವಾಗಿವೆ.

ಸಲಹೆಗಳು:

*ಮಕ್ಕಳಲ್ಲಿ ಉತ್ತಮ ಹವ್ಯಾಸಗಳನ್ನು ಬೆಳೆಸಬೇಕು.

*ಹಬ್ಬಹರಿದಿನ, ರಜಾದಿನ, ವಿಶೇಷ ಸಮಾರಂಭಗಳಲ್ಲಿ ಮಕ್ಕಳಿಗೆ ಕುಟುಂಬದ ಎಲ್ಲ ಸದಸ್ಯರ ಪರಿಚಯ,ಒಡನಾಡವಿರುವಂತೆ ನೋಡಿಕೊಳ್ಳಬೇಕು

*ಮೊಬೈಲ ಬಳಕೆಯ ಇತಿಮಿತಿಯನ್ನು ಗಮನಿಸಿ ಸದುಪಯೋಗವಾಗುವಂತೆ ನೋಡಿಕೊಳ್ಳಬೇಕು

*ಗುರುಹಿರಿಯರೊಡನೆ ನಡೆದುಕೊಳ್ಳುವ ಸಂಸ್ಕಾರದೊಂದಿಗೆ ಪ್ರಾಣಿ-ಪಕ್ಷಿಗಳ ಬಗ್ಗೆ ಕಾಳಜಿ ಮೂಡಿಸುವ ಅವಕಾಶ ಒದಗಿಸಿ ಕೊಡುವುದು.

*ಸಂಬಂಧಗಳು ವ್ಯವಹಾರಿಕವಾಗಿರದೆ ಆತ್ಮೀಯತೆಯಿಂದ ಕೂಡಿರಬೇಕೆಂಬ ನಡೆಯನ್ನು ಪುಸ್ತಕಗಳನ್ನು ಓದುವ ರೂಢಿಯನ್ನು ಬೆಳೆಸಿ ಆ ಮೂಲಕ ತಿಳಿಸಿ ಕೊಡಬೇಕು.

*ಮೊಟ್ಟಮೊದಲು ಪಾಲಕರಾದವರು ಈ  ಮೇಲಿನವುಗಳನ್ನೆಲ್ಲ ಸ್ವತಃಅಳವಡಿಸಿಕೊಳ್ಳಬೇಕು ಯಾಕೆಂದರೆ,  ಮನೆಯೇ ಮೊದಲ ಪಾಠಶಾಲೆ ಎಂಬುದು ನೆನಪಿರಲಿ. ಮಕ್ಕಳಲ್ಲಿ ಪರೋಪಕಾರ, ಆತ್ಮಸ್ಥೈರ್ಯ, ಸ್ವಾಭಿಮಾನ,ಪರಿಶ್ರಮದಂತ ಮೌಲ್ಯಗಳನ್ನು ಬೆಳೆಸುವಲ್ಲಿ ಪಾಲಕರ ಪಾತ್ರ ತುಂಬಾ ತುಂಬಾ ಮುಖ್ಯ ಆಗ ಮಾತ್ರ ಮಗು ಒಂದು ದೇಶದ ಪ್ರಗತಿಗೆ ಪೂರಕವಾದ ಮಾನವಸಂಪನ್ಮೂಲವಾಗಲು ಸಾಧ್ಯ . ಅಂದಾಗ ಮಾತ್ರ ಕವಿ ಕುವೆಂಪು ಹೇಳುವಂತೆ”ಮಗು ಹುಟ್ಟುತ್ತ ವಿಶ್ವಮಾನವ, ಬೆಳೆಯುತ್ತ ಅಲ್ಪಮಾನವ ಅವನನ್ನು ಮತ್ತೆ ವಿಶ್ವಮಾನವನನ್ನಾಗಿಸುವ ಮುಖ್ಯ ಕಾರ್ಯ ಶಿಕ್ಷಣದ್ದಾಗಿದೆ”ಎಂಬಂತೆ ಮಕ್ಕಳ ಶಿಕ್ಷಣದ ಪ್ರಾರಂಭಿಕ ಹಂತದಿಂದಲೆ ಗಮನ ನೀಡಿದರೆ ಅವರ ಭವಿಷ್ಯ ಮೌಲ್ಯಗಳ ನೆಲೆಯಲ್ಲಿ ಯಶಸ್ವಿಯಾಗಲು ಸಾಧ್ಯ ಅಲ್ಲವೇ?


2 thoughts on “ಕ್ಷಿಣೀಸುತ್ತಿದೆ ಮೌಲ್ಯ ಗಳ ನೆಲೆ

  1. ಸಂದರ್ಭೋಚಿತ ಲೇಖನ. ವಿಷಯ ಮಂಡನೆ ಚೆನ್ನಾಗಿದೆ

Leave a Reply

Back To Top