ಅಪ್ಪನ ಕವಿತೆಗಳು

ಕವಿತೆ

ಅಪ್ಪನ ಕವಿತೆಗಳು

ಮಂಜೇಶ್ ದೇವಗಳ್ಳಿ

ಆತ ಇಂದಿಗೂ ಕೈ ಬೀಸಿ ಬೆದರಿಸಿಲ್ಲ
ತೊಳ ತೆಕ್ಕೆಯಲಿ ತಬ್ಬಿದ ನೆನಪು ಮಾಸಿಲ್ಲ
ಛಲಕೆ ಮನ ಬಲಕೆ ಸಾಟಿ ಯಾರಿಲ್ಲ
ಹರೆಯದ ಭುಜದಿ ಬದುಕ ನೊಗ ಹೊತ್ತವ
ಬವಣೆ ಬಿಗಿದರು ನಿಟ್ಟುಸಿರಲೆ ನೆಲೆಕಂಡವ
ದಣಿವರಿಯದೆ ಮಣ್ಣ ನಂಬಿ ದುಡಿದವ
ಜಾಣ್ಮೆ ತಾಳ್ಮೆ ಸಹಬಾಳ್ವೆಯೆ ಈತನ ಉಕ್ತಿ
ಆತನ ಬೆವರ ಹನಿಯೆ ನೀಗಿತೆ ನನ್ನಸಿವ.


ಆತನ ಉಕ್ತಿ ಸೂರ ನೆತ್ತಿಯಂತೆ ನೆರಳು
ಮಣ್ಣ ಕಣ್ಣಿಗೊದ್ದು ನೇಗಿಲ ನಂಬಿಹನು
ದಣಿವರಿಯದ ದುಡಿಮೆ ಮನ ಬಲವು
ಬೆವರತ್ತೆತು ಭರವಸೆಯ ನಾಳೆಯಿತ್ತವ
ಆತನ ಗಳಿಕೆ ಗರಿಯೆ ಗುಡಿಸಲಾಯಿತು
ತುಸು ಮೌನಿ ತುಸು ಕೋಪಿ, ಜಾಣನು
ನಗುಮೊಗದವ ಕಂಬನಿ ಮರೆಮಾಚಿಹನು
ಬಯಸನೆನು ಬರಿದಾದರು ಒಡಲ ಮಡಿಲು
ಬೇಡುವ ಹರಸುವ ನನ್ನ ಬಾಳ ಹೆಣೆಯುತ
ತೊಟ್ಟಿಲ ಕುಡಿ ಭುಜದೆತ್ತರ ಬೆಳೆದರು ಹೊತ್ತು ತಿರುಗುವ.


ಸ್ವಾರ್ಥದ ನೆಲೆಯಲಿ ನಿಸ್ವಾರ್ಥದ ನೆರೆಳವ ಬೆಂದವ
ನೆಮ್ಮದಿಯ ಸೂರನಿತ್ತಲು ನೆಲಕಚ್ಚಿದರು ಬಿಡನವ
ಮುಗುಳು ನಗುವ ಬೆನ್ನತ್ತಟ್ಟಿ ಬೇಗುದಿಯು ಮನದಿ
ನಾಳೆಗಳ ಕೂಡಿಡಲು ಇಂದು ನೆನ್ನೆಗಳ ಸವೆಸುತಿರುವ
ದಣಿವ ದೂಡಿ ತನ್ನವರ ಬದುಕ ಕಟ್ಟಲು ನಿಂತನವ
ಆತನ ಬೆವರ ಹನಿಯೆ ಹರಸುತಿದೆ ಬಾಳ ದಿನಗಳ
ಸವೆದನವ ನೊಂದವ ಜರಿದರು ನಿಂದಿಸಿದರು ಹರಸುವ
ಉಸಿರನಿತ್ತ ಒಡಲು ಜಗದಿ ಬಯಸೊದು ಬೊಗಸೆ ಪ್ರೀತಿ
ಮರುಗದಿರಲಿ ಆತನೊಡಲು ನಿದಿರೆಯ ನಿಟ್ಟುಸಿರಲಿ
ನಮ್ಮ ಬಯಕೆ ಹೊನ್ನು ಚಿಂತೆಯ ಹೊರೆಯಾಗದಿರಲಿ ಆತಗೆ.

***************

Leave a Reply

Back To Top