ನನಗಿಷ್ಟವಾದ ಸಿನಿಮಾ

ಗರ್ಲ್ ಇನ್ ದಿ ಬೇಸ್ ಮೆಂಟ್‍

Girl in the basement

ಈ ಇಂಗ್ಲಿಷ್ ಚಲನಚಿತ್ರದ ಕಥೆಯು ಆಸ್ಟ್ರೀಯಾ ದೇಶದ ನೈಜವಾದ ಘಟನೆಯನ್ನು ಆಧರಿಸಿ ಚಿತ್ರಿಸಲಾಗಿದೆ. ಮಗಳು Sarah, ತಂದೆ Don cody, ತಾಯಿ Irene Cody, ಬಾಯ್ಫ್ರೆಂಡ್ Chris.ಮಗಳು ತಂದೆಯ ಮಾತು ಕೇಳದಕ್ಕೆ 20 ವರ್ಷ ಏನೆಲ್ಲ ಕಷ್ಟಪಡುತ್ತಾಳೆ. ಮಗಳು ತಪ್ಪು ಮಾಡಿದಾಗ ತಿದ್ದಿಕೊಳ್ಳದಿದ್ದರೆ ತಂದೆ ಎಂತಹ ಕೆಲಸವಾದರೂ ಸರಿ ಮಾಡಲಿಕ್ಕೆ ಹೇಸೋದಿಲ್ಲ ಅಂತ ತಿಳಿಸುವ ಆಶಯದ ಚಿತ್ರವಾಗಿದೆ ಎಂದರೂ ತಪ್ಪಾಗಲಾರದು.

ಪಾರ್ಟಿಗೆ ಹೋಗಲು ಸಾರಾ ತಾಯಿಯ ಒಪ್ಪಿಗೆ ಕೇಳಿದಾಗ ಒಪ್ಪುತ್ತಾಳೆ. ಡಾನ್ ಗೆ ಒಮ್ಮೆ ಕೇಳು ಎಂದಾಗ ತಂದೆ ನಿರಾಕರಿಸುತ್ತಾನೆ.

ಅಲ್ಲಿ ಸಾರಾ ಮತ್ತು ಡಾನ್ ಜೊತೆ ವಾಗ್ವಾದ ನಡೆಯುತ್ತದೆ. ಆಗ ರೂಮಿಗೆ ಹೋಗಿ ಹೇಗೋ ತಪ್ಪಿಸಿಕೊಂಡು ಪಾರ್ಟಿಗೆ ಹೋಗುತ್ತಾಳೆ. ಬರುವಾಗ ಮನೆಯತ್ರ ಮಗಳು ಸಾರಾ ಮತ್ತು ಅವಳ ಬಾಯ್ಫ್ರೆಂಡ್ ಕ್ರಿಸ್ ನ್ನು ಡಾನ್ ನೋಡಿ ಏನಿದು ಎಂದು ಕೇಳುತ್ತಾನೆ. ಡಾನ್ ಗೆ ಕೋಪ ಬಂದಿರುತ್ತದೆ.

ನಂತರ ಒಂದು ದಿನ ಸಾರಾಳ ತಾಯಿ & ಅಕ್ಕ ಒಂದು ದಿನ ರೂಂನಲ್ಲಿದ್ದಾಗ ಸಾರಾ ಆಗ 17 ನೇ ವಯಸ್ಸಿನವಳು, Graduation ಮುಗಿಯಲಿಕ್ಕಿನ್ನೂ ಇನ್ನೂ ಕೆಲವು ತಿಂಗಳು ಇರುತ್ತವೆ. ಮಾತಾಡುವಾಗ ನಾನು 18 ವರ್ಷ ಆದಮೇಲೆ ಸ್ವತಂತ್ರವಾಗಿ ಜೀವಿಸುತ್ತೇನೆ ಎಂದಾಗ, ಇವೆಲ್ಲವನ್ನೂ ಕೇಳಿಸಿಕೊಳ್ಳುತ್ತಾನೆ. ಡಾನ್ ಕೇಳಿದ್ರೂ ಹೌದು ನನಗೀಗ ಹದಿನೇಳು ಹದಿನೆಂಟು ಮುಗಿದ ನಂತರ ಬಾಯ್ಫ್ರೆಂಡ್ ಜೊತೆ ದೂರ ಹೋಗಿ ಸ್ವತಂತ್ರಳಾಗಿ ಜೀವಿಸುವೆ ಮತ್ತೆ ಎಂದಾಗ ಡಾನ್ ಮತ್ತಷ್ಟು ಮಗಳ ಮೇಲೆ ಕೋಪಗೊಳ್ಳಲು ಇದೇ ಮೂಲಕಾರಣವಾಗುತ್ತದೆ.

ಇದನ್ನು ಕೇಳಿದ ನಂತರ ಮಗಳನ್ನು ಮನೆಯ Basement ನಲ್ಲಿ ಕೂಡಿ ಹಾಕಲು ತಯಾರಿ ನಡೆಸಿ, ಸಾರಾನ ಪದವಿ ಮುಗಿದ ಮೇಲೆ ಒಂದು ದಿನ ಮನೆಯವರೆಲ್ಲರೂ ಮಾರ್ಕೆಟ್ಗೆ ಹೋಗಲು ಸಾರಾನ ಕರೆಯುತ್ತಾರೆ, ಆಗವಳು ನಿರಾಕರಿಸುತ್ತಾಳೆ ಆಗ  ಮಗಳು ಬಾಯ್ಫೆಂಡ್ ಜೊತೆ ಮೋಬೈಲ್ ನಲ್ಲಿ ಮಾತಾಡುತ್ತಿರುವಾಗ ಡಾನ್ ಬಂದು ಪೋನ್ ಸಾಕು ಮಾಡು ಸ್ವಲ್ಪ ಹೆಲ್ಪ್ ಮಾಡು ಬಾ ಎಂದು ಸಾಮಾನುಗಳಿರುವ ಟೇಬಲ್ ನಂತಿರುವ ಡಬ್ಬಿಯನ್ನು ತೆಗೆದುಕೊಂಡು ಬೆಸ್ ಮೆಂಟ್ ಗೆ ಕರೆದುಕೊಂಡು ಹೋಗಿ ಕೂಡಿ ಹಾಕುತ್ತಾನೆ..

ಆ ಟೇಬಲಿನಲ್ಲಿ ಆಕೆಗೆ ಬೇಕಾಗುವ ಆಕೆಯ (ಬಟ್ಟೆ, ಇತ್ಯಾದಿ) ವಸ್ತುಗಳನ್ನೇ ಇಟ್ಟಿರುತ್ತಾನೆ.ಡಾನ್ ಡೋರ್‌ನ್ನು ಕ್ಲೋಸ್ ಮಾಡಿಕೊಂಡು ಹೋದಾಗ ನೋಡಿ ಕೂಗಿ Dad Dad ಅಂತ ಚೀರುತ್ತಾಳೆ. ತಂದೆ Basement ನ್ನು ಲಾಕ್ ಮಾಡಿಕೊಂಡು ಹೋಗುತ್ತಾನೆ. ಆ ಲಾಕ್ ಕ್ಕೊಂದು Password ಸಹ ಇಟ್ಟಿರುತ್ತಾನೆ.

ಮತ್ತೆ ಕೆಲವೇ ದಿನಗಳ ನಂತರ ಡಾನ್ ಬಂದಾಗ ಸಾರಾ ಅವನ ಮೇಲೆ ಕೂಗಾಡುತ್ತಾಳೆ.ಆಗ ಡಾನ್ ಕೋಪಿತಗೊಂಡು ಸ್ವಂತ ಮಗಳು ಎಂದು ನೋಡದೇ ಪಿಶಾಚಿತರ ಅತ್ಯಾಚಾರವೆಸಗುತ್ತಾನೆ.ಮತ್ತೆ ತಾಯಿ ಕಾಣೆಯಾಗಿದ್ದಾಳೆಂದು ಪೋಲಿಸ ಕಂಪ್ಲೆಂಟ್ ಕೊಟ್ಟರೂ ಪೋಲಿಸ್ ಮನೆಗೆ ಬಂದು ವಿಚಾರಿಸಿದರೂ ವ್ಯರ್ಥವಾಗುತ್ತದೆ. ಮತ್ತೆ ಕೆಲವು ವರ್ಷಗಳ ಕಾಲ ಹೀಗೆ ಅತ್ಯಾಚಾರವೆಸಗುತ್ತಲೇ ಇರುತ್ತಾನೆ. ಸಾರಾಳ ತಾಯಿ ಮತ್ತು ಯಾರಿಗೂ ಅನುಮಾನ ಬರದಂತೆ ನಡೆದುಕೊಳ್ಳುತ್ತಾನೆ.

ಇದಾದ ನಂತರ, ಸಾರಾಳ ಹುಟ್ಟು ಹಬ್ಬಕ್ಕೆ ಡಾನ್ ಕೇಕ್ ಒಂದು ಜೊತೆ ಬಟ್ಟೆ ತಂದು ವಿಶ್ ಮಾಡುತ್ತಾ, ನಿನಗೆ ಗಿಪ್ಟ್ ಏನು ಬೇಕೆಂದಾಗ ಅವಳು ಇಲ್ಲಿಂದ ನನ್ನ ಬಿಡುಗಡೆ ಮಾಡು ಎನ್ನುತ್ತಾಳೆ.ಡಾನ್ ಖಡಾಖಂಡಿತವಾಗಿ ನಿರಾಕರಿಸುತ್ತಾನೆ. ಆಗ ಸಾರಾ ಸಮಯ ಹೋಗುವುದು ತಿಳಿಯುತ್ತಿಲ್ಲ ಟಿವಿ ಗಡಿಯಾರ ಗಿಫ್ಟ್ ಕೇಳುತ್ತಾಳೆ. ತಂದು ಕೊಡುತ್ತಾನೆ.

ಆಗ ಗರ್ಭಾವತಿಯಾಗಿ ಒಂದು ಮಗುನ ಹಡೆಯುತ್ತಾಳೆ. ಹೀಗೆ ನಾಲ್ಕು ಮಕ್ಕಳನ್ನು ಹಡೆಯುತ್ತಾಳೆ.ಒಂದು ಮಗುನ ಸಾಕುವುದಕ್ಕೆ ಆಗುವುದಿಲ್ಲ ಕಾರಣ ಡಾನ್ ನ ಹಣವೆಲ್ಲವೂ ಇವರಿಗೆಯೇ ಹೋಗುತ್ತಿರುತ್ತದೆ.

ಮಳೆ ಬರುವಾಗ Basementನ ಯಾವುದೋ ಮೂಲೆಯಲ್ಲಿ ಹನಿಗಳು ಬೀಳುತ್ತಿರುತ್ತವೆ ಟಾರ್ಚ್ ಹಾಕುವುದರ ಮೂಲಕ ಅಲ್ಲಿಂದ ತಪ್ಪಿಸಿಕೊಳ್ಳುವಾಗ ಅಪರಿಚಿತ ವ್ಯಕ್ತಿ ಟಾರ್ಚ್ ನ್ನು ನೋಡಿ ಡೋರ್ ಬಡಿದು ಅಲ್ಲಿ ಏನೋ ಟಾರ್ಚ್ ಬರ್ತಿದೆ ಎಂದು ಹೇಳಿದಾಗ ಸಾರಾಳ ದುರಾದೃಷ್ಟವಶಾತ್ ಡಾನ್ ಹೋಗಿ ಆಕೆ ಗರ್ಭಿಣಿ ಎಂದು ನೋಡದೇ ತಪ್ಪಿಸಿಕೊಳ್ತಿಯಾ ಎಂದು ಹೊಟ್ಟೆಗೆ ಜಾಡಿಸಿ ಒದ್ದಾಗ ಮಗು ಸಾಯುತ್ತದೆ. ಗರ್ಭಾಧಾರಣೆಯ ಪ್ರೋಟೋಕಾಲ್ ಇರುವ ಪುಸ್ತಕವೊಂದನ್ನು ತಂದು ಕೊಡುತ್ತಾನೆ. ಒಂದು ಮಗುವನ್ನು ಮನೆಮುಂದೆ ಡಾನ್ ಇಟ್ಟಾಗ Irene cody ನೋಡಿ ಖುಷಿಯಿಂದ ಸಾಕುತ್ತಾಳೆ..

ಹೀಗೆ ಬರೊಬ್ಬರಿ 20 ವರ್ಷ ಕೂಡಾಕುತ್ತಾನೆ. ಒಂದು ದಿನ ಸಾರಾ ತಮ್ಮ ಮಕ್ಕಳಿಗೆ ಡಾನ್ ನನಗೂ ತಂದೆ ನಿಮಗೂ ತಂದೆ ಎಂದಾಗ ಕೂಗಾಡಿ ಎರಗಿ ಹಲ್ಲೆ ಮಾಡುವ ಸಾರಾಳ ಮಗನ ಪ್ರಯತ್ನ ವ್ಯರ್ಥವಾಗುತ್ತೆ. ವಯಸ್ಸಿಗೆ ಬಂದ ಸಾರಾಳ ಮಗಳಿಗೂ ಬ್ಯೂಟಿಪುಲ್ ಎಂದಾಗ ಡಾನ್ ಗೆ ಸಾರಾ ಬೇಡ, ಆ ಆಲೋಚನೆ ಬಿಟ್ಟಾಕು ಎನ್ನುತ್ತಾಳೆ.

ಒಂದು ದಿನ ಸಾರಾಳ ಮಗುವಿಗೆ ವಿಪರೀತ ಆರೋಗ್ಯದಲ್ಲಿ ಏರುಪೇರಾದಾಗ ಆಸ್ಪತ್ರೆಗೆ ತೋರಿಸು ಎಂದಾಗ, ಡಾನ್ ನ ಕಂಡಿಷನ್ ಗೆ ಒಪ್ಪಿ ಹೊರಬಂದರೂ ಆಸ್ಪತ್ರೆಯಲ್ಲಿ ಜನನ ನೋಡಿ ಖುಷಿಯಾಗಿ ಹೇಗೋ ಕಣ್ಮರೆಸಿ ನರ್ಸ್ ಗೆ ಹೋಗಿ ತನ್ನ ವೃತ್ತಾಂತವನ್ನೆಲ್ಲ ಹೇಳಿ ಸಹಾಯ ಮಾಡಿ ಎಂದಾಗ ಅಲ್ಲೆ ಯಾವುದೋ ಕೆಲಸಕ್ಕೆ ಅದೇ ಪೋಲಿಸ್ ಸಹ ಬಂದಿರುತ್ತಾನೆ.ಆಗ ಪೋಲಿಸ್ ಡಾನ್ ನ್ನು ಅರೆಸ್ಟ್ ಮಾಡುತ್ತಾನೆ.

ದಿನಾಲೂ ನಿಜವಾದ ಪ್ರೇಮಿ ಕ್ರೀಸ್ ಸಾರಾಳ ಮನೆಗೆ 20 ವರ್ಷವಾದರೂ ಬರುತ್ತಿರುತ್ತಾನೆ.ಬಂದಾಗ ಯಾರ ಜೊತೆಗೋ ಓಡಿ ಹೋಗಿದ್ದಾಳೆಂದು ಸುಳ್ಳು ಹೇಳಿ ನಂಬಿಸಿರುತ್ತಾರೆ. ಆದರೂ ನನ್ನ ಪ್ರೀತಿ ಸುಳ್ಳಾಗದು ಎಂದು ಬರುತ್ತಲೇ ಇರುತ್ತಾನೆ.ಸಾರಾ ಸಿಗುತ್ತಾಳೆ. ಅವರಿಬ್ಬರೂ ಸಿಕ್ಕು ತಮ್ಮ ಹೊಸ ಜೀವನ ಹರಸಿ ಸಾರಾ ಮತ್ತು ಕ್ರೀಸ್ ತಮ್ಮ ಮುಂದಿನ ಜೀವನದ ನಡೆಯ ಕಡೆ ಸಾಗುತ್ತಾರೆ.

ತನ್ನಿಂದಲೇ ಜೀವ-ಜೀವನ ಸಾಗಿಸುವವರು ತಪ್ಪು ಮಾಡಿದಾಗ ತಿದ್ದಿಕೊಳ್ಳದಿದ್ದರೆ ಅವನ ಮಾತು ಕೇಳದಿದ್ದರೆ ಮನುಷ್ಯ ಯಾವ ಕೆಳಹಂತಕ್ಕಾದರೂ ಪಿಶಾಚಿಯಾದರೂ ಸರಿ ಹಿಂಜರಿಯಲ್ಲ ಅಂತ ಸಾರಾಳ ಕಥೆಯು ಒಂದು ಪಾಠವಾಗಲಿದೆ ಎಂದರೂ ತಪ್ಪಾಗಲಾರದು.

(Online, Telegram ನಲ್ಲಿ ಸಿಗುತ್ತದೆ, ಆಸಕ್ತರು ವಿಕ್ಷಿಸಬಹುದು.)

******************

 ಶಿವರಾಜ್ ಮೋತಿ

Leave a Reply

Back To Top