ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಲೇಖನ

ಉಪವಾಸ ಒಂದು ತಪಸ್ಸು

ಆಸೀಫಾ

Corona Impact: No mass prayers by Bohras during Ramzan

 ಹಬ್ಬಗಳ ಆಚರಣೆ ತನ್ನದೇ ಆದ ಮಹತ್ವ ಹಾಗೂ ವೈಶಿಷ್ಟ್ಯತೆಯನ್ನು ಹೊಂದಿದ್ದು ಜೀವನದಲ್ಲಿ ಅದನ್ನು ಅಳವಡಿಸಿಕೊಳ್ಳಲು ಪ್ರೇರೇಪಿಸುತ್ತದೆ.ಅದರಂತೆ ರಂಜಾನ್ ಮುಸ್ಲಿಮರಿಗೆ ಪವಿತ್ರ ಹಾಗೂ ಪುಣ್ಯ ಸಂಪಾದಿಸಿಕೊಳ್ಳುವ ತಿಂಗಳಾಗಿದೆ.ಮೂವತ್ತು ದಿನಗಳು ಉಪವಾಸಾಚಾರಣೆ,ಖುರಾನ್ ಪಠಣ , ದಾನಧರ್ಮ ಹಾಗೂ ಸನ್ನಡತೆ ಈ ತಿಂಗಳ ವಿಶಿಷ್ಟತೆಗಳು.

ಸೂರ್ಯೋದಯದ ಮೊದಲು ಆಹಾರ ಸೇವನೆ ಅಂದರೆ  ಸೆಹರಿ ಮಾಡಲಾಗುವುದು, ಸೂರ್ಯೋದಯದ ನಂತರ ಉಪವಾಸ ಬಿಡುವುದು ಅಂದರೆ ಇಫ್ತಾರ್ ಮಾಡಲಾಗುವುದು. . ದಿನವೆಲ್ಲಾ ಖುರಾನ್ ಓದುವುದು,ಜಪಮಾಡುವುದು, ನಮಾಜ್ ಮಾಡುವುದು, ಕೈಲಾದಷ್ಟು ದಾನ ಮಾಡುವುದು.ಇಲ್ಲಿ ಕೈಲಾದಷ್ಟು ಅಂದರೆ ಏನೂ ಇಲ್ಲ ಕಡುಬಡವರು ಅಂದ ಪಕ್ಷದಲ್ಲಿ ತಲೆಗೆ 💯 ರೂ ಆದರೂ ದಾನಮಾಡಲೇ ಬೇಕು ಇದನ್ನು ಝಕಾತ್  ಎನ್ನುವರು.ಇನ್ನು ಉಳ್ಳವರು ಬಂಗಾರ,ಮನೆಮಠ, ಆಸ್ತಿಪಾಸ್ತಿಗಳನ್ನು ಲೆಕ್ಕ ಹಾಕಿ ಒಂದು ಲಕ್ಷಕ್ಕೆ ಎರಡೂವರೆ ಸಾವಿರ ರೂಪಾಯಿಯಂತೆ ದಾನ ಮಾಡಲೇಬೇಕು ಇದು ಕಡ್ಡಾಯ.ಹಣ,ಊಟ,ಬಟ್ಟೆ, ದವಸಧಾನ್ಯ ವಿತರಣೆಮಾಡುವುದು ಈ ತಿಂಗಳಲ್ಲಿ ಸಾಮಾನ್ಯ.ಈ ರೀತಿ ಮಾಡುವುದರಿಂದ ಪವಿತ್ರ ಮಾಸ ರಂಜಾನ್ ನಲ್ಲಿ ಅಲ್ಲಾಹನು ಯಾರಿಗೂ ಬರಿಹೊಟ್ಟೆ ಮಲಗದಂತೆ ಕಾಪಾಡುವನು ಎನ್ನುವ ನಂಬಿಕೆ ನಿಜವಾಗುವುದು..ಉಪವಾಸವೆನ್ನುವುದು ಒಂದು ಬಗೆಯ ತಪಸ್ಸು.  ಇದು ದೈಹಿಕ ಹಾಗೂ ಮಾನಸಿಕವಾಗಿ ಮನುಷ್ಯನನ್ನು ದೃಢಗೊಳಿಸುವುದಲ್ಲದೆ ಸುಳ್ಳು, ಮೋಸ, ವಂಚನೆ, ಲೈಂಗಿಕತೆ ,ನೀಚಕೃತ್ಯಗಳಿಗೆ ಕಡಿವಾಣ ಹಾಕುತ್ತದೆ.ಇದರಿಂದ ಉತ್ತಮ ಸಮಾಜದ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು.ಆದರೆ ಇತ್ತೀಚಿನ ದಿನಗಳಲ್ಲಿ ಕೇವಲ ಈ ಒಂದು ತಿಂಗಳು ಮಾತ್ರ ಸನ್ಮಾರ್ಗದಲ್ಲಿ ನಡೆದು ನಂತರ ಮೊದಲಿನಂತಾಗುವುದು ವಿಷಾದನೀಯ.

ಹಬ್ಬದ ದಿನ ಬಡವ, ಬಲ್ಲಿದ, ಮೇಲು, ಕೀಳು ಇವ ಶತ್ರು ,ಮಿತ್ರ,ಎಂಬ ಭಾವನೆಗಳಿಲ್ಲದೆ ಒಂದೆಡೆ ಸೇರಿ ನಮಾಜ್ ಹಾಗೂ ಪ್ರಾರ್ಥನೆಯನ್ನು ನೆರವೇರಿಸಿ ಒಬ್ಬರನೊಬ್ಬರು ಆಲಿಂಗಿಸಿಕೊಳ್ಳುವ ದೃಶ್ಯ ಸಮಾನತೆ ಹಾಗೂ ಸೌಹಾರ್ದತೆಯನ್ನು ತೋರುತ್ತದೆ.ಈ ಭಾವನೆಗಳು ಸದಾ ಜನರಲ್ಲಿ ಹೀಗೆ ಇದ್ದರೆ ಎಷ್ಟು ಒಳಿತು ಅಲ್ಲವೇ.

*******************

About The Author

1 thought on “ಉಪವಾಸ ಒಂದು ತಪಸ್ಸು”

  1. ಶಿಕ್ಷಕಿ, ಗಜಲ್ ಬರಹಗಾರರಾದ ಆಸಿಫಾ ಮೇಡಂ ಅವರ ಬರಹ ಆಪ್ತವಾಗಿದೆ ಶುಭಾಶಯಗಳು ಮೇಡಂ

Leave a Reply

You cannot copy content of this page

Scroll to Top