ಈ ವಾರದಿಂದ ನಮ್ಮ ನಡುವಿನ ಯುವ ಕವಯಿತ್ರಿಯರಾದ ಸ್ಮಿತಾಭಟ್ ಮತ್ತು ರೇಖಾಭಟ್ ಗಜಲ್ ಜುಗಲ್ ಬಂದಿ ಯಲ್ಲಿ ಬರೆಯಲಿದ್ದಾರೆ
ಗಜಲ್
ಗಜಲ್ ಮರುಳಸಿದ್ದಪ್ಪ ದೊಡ್ಡಮನಿ ನಿನ್ನ ಹೆಜ್ಜೆ ಗುರುತು ಮಣ್ಣಿನ ಹುಡಿಯಲಿ ಅಳುಕಿದೆ ಸಾಕಿಎದೆಯ ದಾರಿಯಲಿ ನಡೆದು ಬದುಕು ತುಂಬಿ ತುಳುಕಿದೆ ಸಾಕಿ ಒಲವಿನ ಪರಿಮಳ ಒಡೆದ ಕನ್ನಡಿ ಚೂರಿಗೆ ಮುತ್ತಿಕ್ಕಿದೆ ನೋಡುಉಸಿರ ಬಸಿದು ಕನಸು ಕಟ್ಟಿ ಕಾಲು ಹಾದಿ ಸಾಗಲು ನರಳುತಿದೆ ಸಾಕಿ ಭಾವ ಬಯಲಿಗೆ ಬೆಸುಗೆ ಹಾಕಿ ಮೌನ ಮನೆ ಮಾಡಿದೆಬಾಹು ಬಂಧನದಿ ಬಂಧಿಯಾಗುವ ಹೊಸ ಕನಸು ಚಿಗುರುತಿದೆ ಸಾಕಿ ಕಮರಿದ ಆಸೆ ಹಸಿರಾಗಿ ಉಸಿರ ಸೂಸಲು ಬಂದಿದೆಒಳಗಿನ ಗಾಯ ಮಾಯುವ ಮುನ್ನ ಪ್ರತಿ ಬಿಂಬ […]
ಜ್ಞಾನ ಬಿತ್ತಿದವ….ಬುದ್ದ
ಕವಿತೆ ಜ್ಞಾನ ಬಿತ್ತಿದವ….ಬುದ್ದ ಶಿವಲೀಲಾ ಶುದ್ಧೋದನ ಮಗನಂತೆ ಇವನುಮಗ್ಗುಲು ಹೊರಳಿಸಿದಂತೆಲ್ಲನಿದ್ರೆಯ ಕಂಬಳಿ ಕಿತ್ತೊಗೆದುಮೆಲ್ಲಗೆ ಸದ್ದಿಲ್ಲದಂತೆ ಎದ್ದೊದನಂತೆ ಹಣೆಗೊಂದು ಭಾವ ಲೇಪಿಸಿಕೊಂಡುವೈಭೋಗವ ವಸ್ತ್ರ ಕಳಚಿ ಬೆತ್ತಲಾಗಿಸಿಇರುಳಿಗೆಲ್ಲವ ಅರ್ಪಿಸಿ ಹೊಂಟವನುಬೀದಿ ಓಣಿಯಲಿ ದಿಟ್ಟಹೆಜ್ಜೆಯಿಟ್ಟವನು ನಿಶ್ಯಬ್ದ ದಾರಿಗುಂಟ ನಿಶಾಚರಿಗಳ ಘೀಳುರಕ್ತ ಸಿಕ್ತ ಪಾದದಲಿ ಮುಕ್ತಿಯ ಹಂಬಲವುಹಪಹಪಿಸಿದರು ಜ್ಞಾನ ದಾಹ ತೀರಲೊಲ್ಲದುದೇಹ ದಂಡಿಸಿದಷ್ಟು ಬಳಲಿತು ಭಾವದೊಡಲು ದಕ್ಕಿದುಡುಗೊರೆಯು ಮೋಕ್ಷವಾಗಲಿಲ್ಲಮೋಕ್ಷದ ಬೆನ್ನ ಹತ್ತಿದವಗೆ ದಿಕ್ಷೆಯಾಗಲಿಲ್ಲಆಸೆಯೇ ದುಃಖಕ್ಕೆ ಮೂಲವೆನ್ನುವಾಗೆಲ್ಲಕಾಯಕಕೆ ಮರಣಮೃದಂಗದಾ ಅಮಲೆಲ್ಲ ಮಿಂಚಿತೊಂದು ಬೆಳ್ಳಿರೇಖೆ ಕಣ್ಣಂಚಲ್ಲಿಪೂರ್ಣ ಚಂದಿರನ ಬೆಳದಿಂಗಳಲ್ಲಿದಿವ್ಯ ಮಂಗಳ ವಾದ್ಯ ಮೊಳಗಿದಂತೆಲ್ಲಹುಣ್ಣಿಮೆ ಶಶಿಯಲ್ಲಿ ಲೀನವಾದಂತೆಲ್ಲ […]
ಗೀತಕಾರಂಜಿ
ಕವಿತೆ ಗೀತಕಾರಂಜಿ ವಿದ್ಯಾಶ್ರೀ ಅಡೂರ್ ಗೀತೆ ಮೂಡಿ ಮನದೇರಾಗ ತಾಳ ಹಾಕಿ ಕುಣಿಯುತಿಹುದುನವಿಲಿನಂತೆ….ಕಾರ್ಮುಗಿಲು ಬಿಡದೆ ಮಳೆಯಸುರಿಸಿದಂತೆ…. ಹೊಕ್ಕಿ ಮನದಿ ವಿವಿಧ ಭಾವಸಿಕ್ಕಿದೆಲ್ಲ ನಲಿವು ನೋವಅಕ್ಕಪಕ್ಕ ಸುಳಿವ ಸಾವಕಂಡು ಹೃದಯ ನಲುಗಿಬೆದರಿದಂತೆ….ಮೊಂಡು ಹಠವ ಮಾಡಿ ನಮ್ಮಒಲಿಸಿದಂತೆ….. ಜರುಗಿ ಮನದ ಒಳಗೆ ಜಾತ್ರೆತುಂಬುತಿಹುದು ಹಿಡಿದ ಪಾತ್ರೆಕವಿತೆಯೊಂದು ನಿತ್ಯ ಯಾತ್ರೆಬರಡು ನೆಲದಿ ಹಸಿರಹರಡಿದಂತೆ…ಕೆಸರಲ್ಲೂನೂ ಕಮಲ ತಾನೇಅರಳಿದಂತೆ… ಬಿಸಿಲ ಬೇಗೆಯಲ್ಲಿ ಬೆವರಮಾಗಿ ಚಳಿಯಲ್ಲೂನು ಪದರಸೋನೆ ಮಳೆಯು ಕೂಡ ಮಧುರನೀಗುತಿಹುದು ಮನದ ಬರಡಕಾರಂಜಿಯಂತೆ…ಒಂಟಿ ಮನದ ಜತೆಗೆ ಜಗವೇನಡೆಯುವಂತೆ…. ******************************
ಬುದ್ಧನಾಗಲೂ ಕಷ್ಟವೀಗ
ಕವಿತೆ ಬುದ್ಧನಾಗಲೂ ಕಷ್ಟವೀಗ ಹೇಮಚಂದ್ರ ದಾಳಗೌಡನಹಳ್ಳಿ ಈಗಲೀಗ ಎದ್ದು ಹೊರಡಬೇಕೆನಿಸುತಿದೆನಿನ್ನಂತೆ ತೊರೆದು ಎಲ್ಲವಕಂಡೊಂದು ಸಾವಿಗೇ; ಶರಣಾದೆ ಮುಕ್ತಿಗೆಭಾಜನ ನೀನೀಗಲೂ ಜನಭಕ್ತಿಗೆತಮಗೇ ಸಾವು ಬಂದಡರಿ ನಿಂತರೂನಿಂತ ಕಟ್ಟಡ ಕಾಮಗಾರಿಗೆ ಬಳಲಿಅಳಲುಗೊಂಡಳುತ ನರಳುವರ ಕಂಡು(ಈಗಲೀಗ) ತರಿದು ಹಸುರ; ತೋಡಿ ನೆಲಬಸುರಮೀರಿದಂಕೆಗೆ ಮುತ್ತಿ ಮಾರಿ ಶಂಕೆಸುಳಿವ ಉಳಿದ ಗಾಳಿಯನೂ ಮುಕ್ತ ಮೂಸದಂತೆಮೂಗು ಬಾಯಿ ಬಂಧಿಸಿ; ಮನೆಯೊಳಗೇ ಸಂಧಿಸಿಕೊರೆದ ಕೊಳವೆ ಬಾವಿ ಕೆಲಸವರ್ಧಕೆ ನಿಂತುದಕೆಅವಲತ್ತುಕೊಂಡಳಲುತಿರುವ ತಿರುಕರ ಕಂಡು(ಈಗಲೀಗ) ಬಿರುಕು ಗೋಡೆ; ತೂತು ಮಾಡುಳ್ಳಮನೆಯೊಳಗೆ ಬರಲು ಮಳೆನೀರುಮಳೆಗೆ ಶಾಪ ಹಾಕುವ ಅಂಧರುಹುತ್ತಗಳ ಕೆಡವಿ ಮನೆಯ […]
ಬುದ್ದಾಂತರಾತ್ಮ
ದುಃಖಪಡುವ ಮೊದಲೇ ಆಸೆ ಬಿಡಲು ಲೇಸೆಂದು, ಮಾಡಿ ತೋರಿದವನಲ್ಲವೇ ಪರಮಗುರು ಬುದ್ಧ
ಯಶೋಧರೆಯಉವಾಚ
ಯುಗಯುಗಗಳೇಕಳೆದರೂ,
ಕಾದಿದ್ದೇನೆ,
ಕೇಳಿಯೇಕೇಳಿವಿಯೆಂದು,
“ನಿನಗೇನುಬೇಕು, ಯಶೋಧರೆ?”
ಕರುಣಾಳು ಬಾ ಬೆಳಕೆ
ಜ್ಞಾನದ ಸುದೀಪ ಹೊತ್ತಿಸಿ
ಅಜ್ಞಾನದ ತಮವ ಓಡಿಸಿದ
ಕರುಣಾಳು ಬೆಳಕು ಬುದ್ಧ
ಮತ್ತೊಮ್ಮೆ ಅವತರಿಸಿ ಬಾ
ಬುದ್ಧ ಪೂರ್ಣಿಮೆ
ತನ್ನ 29ನೇ ವಯಸ್ಸಿನಲ್ಲಿಯೇ ಸತ್ಯವನ್ನು ಹುಡುಕುತ್ತಾ ಪ್ರಪಂಚ ಪರ್ಯಟನೆ ಕೈಗೊಂಡ ಮಹಾನ್ ವ್ಯಕ್ತಿ ಬುದ್ಧ. ಬಡವರಿಗಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟವನು. ಮೋಕ್ಷ ಸಾಧಿಸಲು ಕರುಣೆ ಮತ್ತು ಶಾಂತಿಯ ಮಾರ್ಗದಲ್ಲಿ ಸಾಗಬೇಕು ಎಂದು ಲೋಕಕ್ಕೆ ಸಾರಿದಾತ.
‘ಸ್ಟ್ರಗಲ್ ಫಾರ್ ಬರ್ತ್’, ‘ಸ್ಟ್ರಗಲ್ ಫಾರ್ ಎಗ್ಸಿಸ್ಟೆನ್ಸಿ’ಯ ಜೊತೆಯಲ್ಲಿ ಈಗ ಮಗಳು, ಸೊಸೆ, ಅಕ್ಕತಂಗಿ, ಅತ್ತಿಗೆ-ನಾದಿನಿ, ಹೆಂಡತಿ, ಅಮ್ಮನ ಪಾತ್ರಗಳನ್ನು ನಿರ್ವಹಿಸುತ್ತಿರುವ ಬಹಳ ಹೆಣ್ಣುಮಕ್ಕಳಿಗೆ ‘ಆದರ್ಶ ಗೃಹಿಣಿ’ಯ ಕಾಲ್ಪನಿಕ ಚೆಕ್ ಲಿಸ್ಟ್ ಗಳಲ್ಲಿನ ಮಾದರಿಗಳಿಗೆ ಒಗ್ಗಿಕೊಳ್ಳುವುದು ಬಹಳ ತ್ರಾಸದಾಯಕ.