ಬುದ್ದಾಂತರಾತ್ಮ

ಕವಿತೆ

ಬುದ್ದಾಂತರಾತ್ಮ

ಶಾಂತಿವಾಸು

ಅಂತರಾತ್ಮದಿ ಅಂಕುರಿಪ ಜ್ಞಾನವ, ಜಗಕೆ ಪಸರಿಸಿ, ಆಸೆಪಡದೆ ದುಃಖವಿಲ್ಲವೆಂದು ಸಾರಿದ ಬುದ್ಧ….
ಸಕಲರಲಿ ತುಂಬಿದದಂದಕಾರಕೆ ಜ್ಯೋತಿರೂಪನಾಗಲು ತಾನೆದ್ದ….

ಬೆಳಕನ್ನು ಅಂತರಾತ್ಮನೊಳಗೂಡಿಸಿ, ಧ್ಯಾನವದುವೇ ಎಂದವನಲ್ಲವೇ ಬುದ್ಧ….
ಅನುಸರಿಸಿ ನಡೆದವರ ಅನುಭವದಿ ಬುದ್ಧ ಗೆದ್ದ….

ಕಣ್ಮುಚ್ಚಿ ಕತ್ತಲೆಯ ಮೂಡಿಸಿ, ಜ್ಞಾನದ ದಾರಿಯಲ್ಲೇ ಬೆಳಕ ಕಾಣಲು ಬೋಧಿಸಿದವನಲ್ಲವೇ ಬುದ್ಧ….
ಮಾರ್ಗದಿ ನಡೆದವರ ಸನ್ನಡತೆಯಲಿ ಬುದ್ಧ ಗೆದ್ದ….

ದುಃಖಪಡುವ ಮೊದಲೇ ಆಸೆ ಬಿಡಲು ಲೇಸೆಂದು, ಮಾಡಿ ತೋರಿದವನಲ್ಲವೇ ಪರಮಗುರು ಬುದ್ಧ….
ಆಸೆ ಪಟ್ಟುದ ನೀನರಿತು ದುಃಖಿತನಾಗದಿರೆ ಬುದ್ಧ ಗೆದ್ದ….

***

Leave a Reply

Back To Top