ಗಜಲ್ ಜುಗಲ್ ಬಂದಿ
ಈ ವಾರದಿಂದ ನಮ್ಮ ನಡುವಿನ ಯುವ ಕವಯಿತ್ರಿಯರಾದ ಸ್ಮಿತಾಭಟ್ ಮತ್ತು ರೇಖಾಭಟ್ ಗಜಲ್ ಜುಗಲ್ ಬಂದಿ ಯಲ್ಲಿ ಬರೆಯಲಿದ್ದಾರೆ.
ರೇಖಾಭಟ್
ಮನಸು ಮುಗಿಲೇರಿದೆ ರೆಕ್ಕೆ ಮೂಡಿದ್ದು ನಿನ್ನಿಂದ
ಕನಸಿನೂರು ಬೀಗುತಿದೆ ಬಣ್ಣ ಉದಿಸಿದ್ದು ನಿನ್ನಿಂದ
ಬಯಕೆಗಳ ಬೇರು ಚಿಗುರಿದ ಸಂಚಲನವೀಗ
ಹೊಸತು ಮೂಡುತಿದೆ ಜೀವ ಪಡೆದದ್ದು ನಿನ್ನಿಂದ
ಬತ್ತಿಹೋದ ಭಾವಗಂಗೆಯ ಉಕ್ಕಿಸಿದ್ದು ಹೇಗೆ
ಮತ್ತೆ ಒಲವಾಗಿದೆ ಗೆಲುವು ಫಲಿಸಿದ್ದು ನಿನ್ನಿಂದ
ನಿನ್ನ ಮಡಿಲಿನ ಮಗುವಾದ ಭಾವವಿದೆ ಇಲ್ಲಿ
ಬದುಕು ಶುರುವಾಗಿದೆ ಮರುಹುಟ್ಟಿದ್ದು ನಿನ್ನಿಂದ
‘ರೇಖೆ’ಯ ಗುರಿಯನು ಅರಿತ ಮನವು ನಿನ್ನದು
ದಾರಿ ಕಂಪೇರಿದೆ ಹೂಗಳು ಅರಳಿದ್ದು ನಿನ್ನಿಂದ
*******************************
ಸ್ಮಿತಾಭಟ್
ಬುವಿಯು ಕಂಪಿಸುತಿದೆ ಸ್ಥಾನ ಬದಲಿಸಿದ್ದು ನಿನ್ನಿಂದ
ದಟ್ಟ ಮೋಡ ಚದುರಿದೆ ,ಮಳೆಬಿಲ್ಲು ಕರಗಿದ್ದು ನಿನ್ನಿಂದ
ಬರಿದೆ ಉಸುರುವ ಭಾವಕ್ಕೆ ಯಾವ ಬಿಸುಪಿಲ್ಲ
ಕಳೆದ ಘಳಿಗೆಗೀಗ ಮಾತು ,ಮೌನ ಮರೆತಿದ್ದು ನಿನ್ನಿಂದ
ಪ್ರೀತಿಯೇ ಇರಬೇಕೆಂದೇನಿಲ್ಲ ನದಿ ಕಡಲ ಸೇರಲು
ಹೂ ಹಾಸಿನ ಮೇಲೂ ಕನಸಿನ ಚೂರು ಬಿಕ್ಕಿದ್ದು ನಿನ್ನಿಂದ
ಜೀವವೇ ನೀನಾಗಿ ಆವರಿಸಿಕೊಂಡ ಘಳಿಗೆ ಮರಳುವದೇ
ನೋವು ನಲಿವು ಅರಿವಾಗುತ್ತಿಲ್ಲ ಕಳೆದುಳಿದದ್ದು ನಿನ್ನಿಂದ
ಬಿದ್ದ ಹನಿಯನ್ನೆಲ್ಲ ಒಡಲೊಳಗೆ ಸೇರಿಸಿದ್ದು ಯಾರು ಸಖಿ
ಸಿಂಪಿಯೊಳಗೆ ಹೊಳಪಿಲ್ಲ ಮುತ್ತು ಮುನಿದಿದ್ದು ನಿನ್ನಿಂದ
************
Wow super
Thanku
ಧನ್ಯವಾದ
Soooooper
Thanku
ಸೊಗಸಾದ ಜುಗಲ್ ಬಂದಿ ಜೀ…
ಧನ್ಯವಾದಗಳು
ತುಂಬಾ ಚೆಂದದ ಜುಗಲ್ ಬಂದಿ ಇಬ್ಬರಿಗೂ ಅಭಿನಂದನೆಗಳು. ಮೇಡಂ
ಧನ್ಯವಾದಗಳು ಸರ್
ಭಿನ್ನ ಕವನ ವಿಭಿನ್ನ ಭಾವ
ಧನ್ಯವಾದಗಳು ಸರ್
ಚೆಂದ
ಧನ್ಯವಾದಗಳು
ವಾವ್…. ಚೆಂದ ಚೆಂದ…
Thanku thanku so much
Nice❤
Thanku
ಚೆಂದದ ಜುಗಲ್ ಬಂಧಿ…
ಧನ್ಯವಾದಗಳು ಸರ್
ಜುಗಲ್ ಬಂದಿ ಹೀಗೆ ಮುಂದುವರಿಯಲಿ. ಚೆನ್ನಾಗಿದೆ.
ಎಲ್ಲರಿಗೂ ಪ್ರೀತಿಯ ಧನ್ಯವಾದಗಳು..
Very nice
ವಿಭಿನ್ನ ಭಾವದ ಚಂದದ ಗಜಲ್ ಗಳು
Super