ಅನಿರ್ಬಂಧ
ಚಂದ್ರಪ್ರಭ
ಮಗೂ
ಅಮಾವಾಸ್ಯೆಯ ಆ ಇರುಳು ನೀ
ಮೊದಲ ಬಾರಿ ಅತ್ತ ಕ್ಷಣ ಬೆಳದಿಂಗಳ ಸುಧೆಯಿತ್ತು
ನಿನ್ನ ಅರೆ ಬಿರಿದ ಕಣ್ಣುಗಳಲಿ
ಅದುರಿದ ತುಟಿಗಳಲಿ
ಬೆಚ್ಚನೆಯ ನಿನ್ನ ಅಪ್ಪುಗೆಯಲಿ.
ನಿನ್ನ ನಗು ಕೇಕೇ ಆಟ
ನನ್ನ ಜಗತ್ತಾದವು ಆ ದಿನದಿಂದ
ಮುಸ್ಸಂಜೆ ಆವರಿಸುತ್ತಿರುವ ಈ ಹೊತ್ತಲಿ
ತುದಿ ಬೆರಳ ಹಿಡಿದು ನಡೆಸುತ್ತಿದೆ
ನಿನ್ನದೇ ಪ್ರತಿಬಿಂಬ
ಅದರ ತೊದಲು ನುಡಿ ಜೇನು
ಪುಟ್ಟ ಪಾದದ ಗುರುತು
ಮೊಗದ ಮಂದಹಾಸ ..ಈಗ ನನ್ನ ಜಗತ್ತು
ಆಗಲೂ ಈಗಲೂ..
ನಿರ್ಬಂಧಿಸಲಿಲ್ಲ ನಾ ಯಾರನ್ನೂ
ಆದರೆ…ಮಗೂ
ಅನ್ಯರು ಯಾರೂ ಒಳ ಪ್ರವೇಶಿಸಲೇ ಇಲ್ಲ..!
******************************************