ಆರೋಗ್ಯದ ಬಗ್ಗೆ ಕಾಳಜಿ ಇರಲಿ

ಅನುಭವ

ಆರೋಗ್ಯದ ಬಗ್ಗೆ ಕಾಳಜಿ ಇರಲಿ

Physiotherapy Internship Program - Gulf Medical University

ಚಂದ್ರಮತಿ

ಅದೊಂದು ಸಂಜೆ ! ಸಹಿಸಲಾರದ ವೇದನೆ ಆತಂಕ .ಬಲಹೀನ ತೋಳುಗಳು . ಏನಾಯ್ತು , ಹೇಗಾಯ್ತು ಮುಂದೆ ನಾನು  ಕೆಲಸ ಮಾಡೋದು ಹೇಗೆ  ಎಂದೆಲ್ಲ ಯೋಚಿಸ್ತಾ ಸಮಯ ವ್ಯರ್ಥಮಾಡಿ ಸಹಿಸಿಕೊಳ್ಳಲು ಅಸಾಧ್ಯ ವಾದಾಗ ಮೊರೆ ಹೋಗಿದ್ದು ಗೂಗಲ್ ಮಹಾಶಯನನ್ನು . ಅವನ ಸಲಹೆಯಂತೆ ಮನೆಯ ಸನಿಹದಲ್ಲೇ ಇರುವ ರೂಪೇಶ್ ಆರ್ಥೋಪೆಡಿಕ್ ಸೆಂಟರ್ಗೆ ಬೇಟಿ ಕೊಟ್ಟಾಗ ಅಲ್ಲಿಯ ಡಾ. ರೂಪೇಶ್ ಅವರು ಸರಳ ಮಾತು ಹಾಗೂ ಸೌಜನ್ಯತೆಯಿಂದ ಸರಿಯಾದ ಚಿಕಿತ್ಸೆ ಮಾಡಿಸ್ಕೊಂಡರೆ ಸರಿ ಹೋಗ್ತೀರ . ಚಿಂತೆ ಭಯವನ್ನೆಲ್ಲಾ ಬಿಟ್ಟು ಪಿಸಿಯೋತೆರಪಿ  ಹತ್ತು ಸೆಶನ್ ಮಾಡಿಸಿಕೊಳ್ಳಿ ಎಂದು ಧೈರ್ಯ ತುಂಬಿದಂತಹ ಪ್ರಾಮಾಣಿಕ ವೈದ್ಯರು.



ಎಷ್ಟು ವಯಸ್ಸು ? ವಾವ್ ಹಾಗೆ ಕಾಣಸೋದೇ ಇಲ್ಲ ಎಷ್ಟು ಯಂಗ್ ಕಾಣ್ತಿದೀರ ಅದು ನಿಮಗೆ ಗೊತ್ತೇ ? ಅಂತ ಪ್ರೀತಿಯಿಂದ ಕೇಳಿದಾಗ ಮನಸ್ಸಿನಲ್ಲೇ ನಕ್ಕು  ‘ ರೋಗಿ ಬಯಸಿದ್ದು ಹಾಲು ಅನ್ನ ಡಾಕ್ಟರ್ ಕೇಳಿದ್ದು ಹಾಲು ಅನ್ನ ‘  ಅನ್ನೋ ಹಾಗೆ ಮೊದಲೇ ಸ್ವಲ್ಪ ಮಟ್ಟಿಗೆ ಆರೋಗ್ಯ ದ ಕಾಳಜಿ ಹಾಗೂ ಸೌಂದರ್ಯ ಪ್ರಜ್ಞೆ ಇರುವ ಹಾಗೂ ಅರ್ಧ ಶತಕ ಬಾರಿಸಿದ ನನಗೆ ಆ ನೋವಿನಲ್ಲೂ ಅವರ ಮಾತು ಹಿತವೆನಿಸಿ ಇದಕ್ಕಿಂತ ಹೆಚ್ಚು ರೋಗಿಗೆ ಇನ್ನೇನು ಬೇಕು ಅಂದುಕೊಂಡು ಹೌದಾ ! ಎಂದು ಅಚ್ಚರಿ ತೋರಿಸಿ ಧನ್ಯವಾದಗಳನ್ನು ತಿಳಿಸಿದೆ.



ಮೃದು ಮಾತು ನಡತೆಯಿಂದಲೇ ಅರ್ಧ ನೋವು  ಕಡಿಮೆ ಮಾಡಿ ಗೆಳೆಯರಂತೆ ಚಿಕಿತ್ಸೆ ನೀಡಿದ್ದು ಭರವಸೆಯನ್ನು ತುಂಬಿದ್ದು ಫಿಸಿಯೋತೆರಪಿಷ್ಟ  ಮಿ.ಮಾನ್ತೇಷ್    ತುಂಬಾ  ಸರಳ ಹಾಗೂ ಪ್ರಾಮಾಣಿಕ ವ್ಯಕ್ತಿತ್ವ.  ‘ ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ‘ ಅನ್ನೋ ಹಾಗೆ ವಯಸ್ಸು ಚಿಕ್ಕ ದಾದರೂ  ಪಿಸಿಯೋಥೆರಪಿಯಲ್ಲಿ ಹೆಚ್ಚಿನ ಅನುಭವವುಳ್ಳ ವ್ಯಕ್ತಿ .
ಕೆಲವು ತಿಂಗಳುಗಳಿಂದ ನಿದ್ದೆಯನ್ನೇ ಕಾಣದ ನನಗೆ ಹಾಗೂ ಒಂದು ಚಿಕ್ಕ ವಸ್ತು ವನ್ನೂ ಹಿಡಿಯಲು ಸಾಧ್ಯವಾಗದ ಈ ನನ್ನ ತೋಳುಗಳಿಗೆ ಭರವಸೆಯಿಂದ ಸಾಂತ್ವನ ನೀಡಿದ ಪುಣ್ಯಾತ್ಮರು ಎಂದರೂ ಅತಿಶಯೋಕ್ತಿಯಾಗಲಿಕ್ಕಿಲ್ಲ.


ಎರಡು ವರ್ಷಗಳ ಅವರ ವೃತ್ತಿಯಲ್ಲಿ 2000 ಕ್ಕೂ ಹೆಚ್ಚು ಮತ್ತು ಒಂದು ವರ್ಷ ಅವಧಿಯಲ್ಲಿ ಬೆಂಗಳೂರಿನಲ್ಲಿ 800ಕ್ಕೂ ಹೆಚ್ಚು  ವಿವಿಧ ತರಹದ ಆರ್ಥೋ ಗೆ ಸಂಬಂಧ ಪಟ್ಟಂತಹ ಎಲ್ಲಾ  ರೋಗಿಗಳಿಗೆ ಫಿಸಿಯೋತೆರಪಿ ನೀಡಿ ಗಣಮುಖಮಾಡಿದಂತಹ ಅದ್ಭುತ ಫಿಸಿಯೋಥೆರಪಿಷ್ಟ್.  ಏಕೆಂದರೆ ಯಾವುದೇ ರೀತಿಯ ನೋವು ಉಪಶಮನ ಔಷಧಿಗಳನ್ನು ಸಲಹೆ ನೀಡದೆ ಕೇವಲ ಫಿಸಿಯೋ ಮತ್ತು ಬ್ರೀಥಿಂಗ್ ವಿಥ್ ಮೆಲೋಡಿ ಮ್ಯೂಸಿಕ್,  ನೀಡಲ್ ಚಿಕಿತ್ಸೆ ಹೀಗೆ ಅನೇಕ   ಥೆರಪಿ  ಯಿಂದಲೇ ನನಗೆ ಕೇವಲ ಒಂದು ತಿಂಗಳಲ್ಲೇ  ಸಂಪೂರ್ಣ ಗುಣಮುಖಳನ್ನಾಗಿಸಿದ್ದು ನನಗೆ ಸರಿಯಾದ ಸಮಯಕ್ಕೆ ಸಿಕ್ಕ ರತ್ನ ಎಂಬುದು ನನ್ನ ಅಭಿಮತ.
‘ ಯಾವುದೇ ರೋಗವಿರಲಿ ಆರಂಭದಲ್ಲೇ ಅದನ್ನು ಸರಿಯಾಗಿ ಗುರುತಿಸಿ ಚಿಕಿತ್ಸೆ ನೀಡುವಂತಹ ಇಂತಹ ವೈದ್ಯರುಗಳ ಅವಶ್ಯಕತೆಯಿದೆ ‘
ದೇವರನ್ನು ನಾವು ಒಂದು ಒಳ್ಳೆಯ ವ್ಯಕ್ತಿ ಯಲ್ಲೇ ಕಾಣಬಹುದು . ಬೇರೆ ಕಡೆ ಹುಡುಕುವ ಅವಶ್ಯಕತೆ ಇಲ್ಲವೆಂದನಿಸಿತು.
‘ ವೈದ್ಯಃ ನಾರಾಯಣೋ ರೂಪಃ ‘   ಅನ್ನೋ ಹಾಗೆ  ವೈದ್ಯರಲ್ಲೇ ದೇವರನ್ನು ಕಂಡ  ಕ್ಷಣ . ದಿನದಿಂದ ದಿನಕ್ಕೆ ನೋವು ಗುಣಮುಖವಾದಂತೆ ಅವರಲ್ಲಿ  ನಾರಾಯಣನ ರೂಪವನ್ನೇ ಕಂಡ ನಾನು ಅವರ ಶ್ರಮಕ್ಕೆ ಹಾಗೂ ಚಿಕಿತ್ಸೆಗೆ  ಚಿರ ಋಣಿಯಾಗಿರುತ್ತೇನೆ. 
ಆಪತ್ಕಾಲದ ಬಾಂಧವರೆಂದರೆ ಹೃದಯವಂತ ವೈದ್ಯರು.

ಹೆಚ್ಚಾಗಿ ನಲವತ್ತರ ಹರೆಯದಲ್ಲಿ ಕಾಣಿಸಿಕೊಳ್ಳುವ ಫ್ರೋಜನ್ ಶೋಲ್ಡರ್ ಎಂಬ ದೈತ್ಯ ನೋವನ್ನು ನಿರ್ಲಕ್ಷಿಸ ಬಾರದು.  ಹಾಗೂ  ಪ್ರಾರಂಭದಲ್ಲೇ ಪರೀಕ್ಷಿಸಿ  ಚಿಕಿತ್ಸೆ ಮಾಡಿಸಿ ಕೊಳ್ಳಲೇ ಬೇಕು  ಮೂಢ ನಂಬಿಕೆಗೆ ಅವಕಾಶ ಕೊಡದೆ ಮೊದಲು ವೈದ್ಯಕೀಯ ತಪಾಸಣೆ ಮಾಡಿಸ ಬೇಕು ಅನ್ನೋ ಅರಿವು ಪ್ರತಿ ಯೊಬ್ಬರಲ್ಲೂ  ಬರಬೇಕು. ಮಿತಿ ಮೀರಿದ ಸಂದರ್ಭದಲ್ಲಿ ಭಗವಂತನೂ ಅಸಹಾಯಕನಾಗಿ ಬಿಡುತ್ತಾನೆ.
ವಯಸ್ಸು ಯಾವುದೇ ಇರಲಿ ಇರುವಷ್ಟೂ ದಿನ ಆರೋಗ್ಯವಂತರಾಗೇ ಇದ್ದು ಚಟುವಟಿಕೆಯಿಂದ ಕ್ರಿಯಾಶೀಲರಾಗಿ ಜೀವನ ಪಯಣ ಮುಗಿಸ ಬೇಕು ಅನ್ನೋ ಮನೋಭಾವ ಎಲ್ಲರಲ್ಲೂ ಮೂಡಬೇಕು. ಅದರ ಜೊತೆ ದೇವರಂಥ ವೈದ್ಯರು ದೊರಕಬೇಕು.

*************************************

Leave a Reply

Back To Top