ಕವಿತೆ
ಮೌನ’ದ್ವನಿ’
ರೇಖಾ ಭಟ್
ರಕ್ಕಸರು ಸುತ್ತುವರೆದು
ಕತ್ತಲಾಗಿದೆ
ಹೆಜ್ಜೆ ಹೊರಗಿಡಲೂ ಭಯ
ವಿಕೃತಿಗೆ ಸಜ್ಜಾಗಿ ನಿಂತಿದೆ
ದುಶ್ಯಾಸನನ ಸಂತತಿ
ಬರೀ ಸೀರೆ ಸೆಳೆಯುವುದಿಲ್ಲ ಈಗ
ಮೌನದೇವಿಯ
ನಾಲಿಗೆಯೂ ಬೇಕು
ಮಾಂಸ ಮಜ್ಜೆಯ ಹರಿದು ತಿನ್ನುವವರಿಗೆ
ಕೇವಲ ಕಾಮುಕರೆನ್ನಲಾಗದು
ಇವರ
ಧರಿಸಲು ಹೇಗೆ ಬಂದಾವು
ಅರ್ಥಕೋಶದ ಪದಗಳು
ಹೇಸಿಕೊಳ್ಳುತ್ತಿವೆ
ಸ್ತ್ರೀ ಅಸ್ಮಿತೆ ನರನಾಡಿಗಳು
ಒಳಗೊಳಗೆ ಕುದಿಯುತ್ತಿವೆ
ರೋಷದ ಲಾವಾಗ್ನಿ
ಚಿಮ್ಮಿದರೆ
ದೂಷಿಸಬೇಡಿ ನೀವು
****************
ತುಂಬಾ ಚನ್ನಾಗಿದೆ
ಶಾಂತಲಾ ಮಧು
ಧನ್ಯವಾದಗಳು
Nicely written
ಭಾವನೆಗಳು ಒಡಲಾಳದಿಂದ ಬಂದಿವೆ
ಸೂಪರ್
True lines rekha
Super
Wow