ಮಗಳು ಬಂದಳು ಮನೆಗೆ
ಅರುಣ್ ಕೊಪ್ಪ
ಒಡಲಾಳದ ಅಳುವನ್ನು ಜಗದೆಡೆಗೆ ಪಸರಿಸಿದಳು ,ಅಮ್ಮನ ಕಂಕುಳದಲಿ ಕಸವು ಹಚ್ಚಿ, ಬೇನೆ ಸೋನೆಗಳ ಸುಮ್ಮನಿರಿಸಿ
ಮಿಡುಕಾಡಿದಳು ಹೊರಗೂ ಒಳಗೂ
ಜಗದ ಕಣ್ಣಾಗುವಳು ಇಂದು ಮುಂದೂ ಎಂದೆಂದೂ
ಆರತಿಗೊಬ್ಬಳು ಆಸರೆ ಇವಳು ಹುಸಿಯನ್ನೆಲ್ಲ ಹೊಸೆತಳು
ಕೀರ್ತಿಗೊಬ್ಬನ ಕಿವಿಯಲ್ಲೇ ಧೈರ್ಯದುಂಬಿ ಬಂಧ ಬೆಸೆವಳು
ನನ್ನವಳ ಉದರದಲ್ಲೇ ನನ್ನವಳ ಆಗಮನ ಹೆಣ್ಣು ಇವಳು
ಧೈರ್ಯದಲಿ ಮಿಗಿಲು ಸಂಭ್ರಮಿಸುವದು ಕೂಡ ಮುಗಿಲು
ಗುರುವಾರದ ಅಧಿಕ ಸೀಗಿ ಹುಣ್ಣಿಮೆಯ ಪವಿತ್ರ ಗಳಿಗೆ
ಪುಣ್ಯ ದಿನವೂ ಸಿಕ್ಕಿ ಆನಂದ ಭಾಷ್ಪ ಉಕ್ಕಿ ನಮಗೆ
ಹೆಣ್ಣಿಲ್ಲದ ಮನೆಯಿಲ್ಲ ಇದ್ದೂ ಸಿರಿಯಿಲ್ಲ
ಜಗ ಜನಿಸಿ ಯುಗವಾಗಿದ್ದೇ ಹೆಣ್ಣು ಎಂಬ ಮಾಯೆಯಿಂದ
***************************