ಕವಿತೆ
ನವರಾತ್ರಿ ಶಕ್ತಿ
ಶಾಂತಲಾ ಮಧು
ಚಿತ್ರ ಕೃಪೆ- ಶಾಂತಲಾ ಮಧು
ಬಿರುಕು ಬಿಟ್ಟಗೋಡೆಗಳು
ಶಿಥಿಲ ಗೊಂಡ
ಕಿಟಕಿ ಬಾಗಿಲು
ಮಾನವೀಯ ಮನುಷ್ಯತ್ವದ
ಅಂತಕರಣದ ಒಂದೊಂದು
ಕಲ್ಲುಗಳು ಪುಡಿಪುಡಿಯಾಗಿ
ಬಟಂಬಯಲಾಗಿ
ಬಯಲ ನಡುವೆ
ಚೀತ್ಕಾರ ರಕ್ತ ಬಸಿಯುವ
ಕಣ್ಣಿನಲಿ ಅದೊಂದೆೇ ಆಸೆ
ದಯತೋರಿ ದಯತೋರಿ
ರಕ್ಷಿಸೀ ಈ ರಾಕ್ಷಸರಿಂದ
ಅಮ್ಮಗಳಿರ ಅಕ್ಕಗಳಿರ
ನನ್ನೀ ಸಬಲ ಅಣ್ಣ ತಮ್ಮಗಳಿರ
ರಕ್ಷಿಸೀ ಅಬಲೆಯರ
ಬೆಟ್ಟದಷ್ಟು ಆಕಾಶ ಭೂಮಿಯಷ್ಟು
ಕನಸ ಕಂಡಿಹೆ ನಾನು
ಬಿಟ್ಟು ಬಿಡಿ ಎನ್ನ ದಮ್ಮಯ್ಯ
ಪುತ್ರಿಯಾಗಿ ತಾಯಿ ತಂಗಿ
ಸಖಿಯಾಗಿ ಪತ್ನಿಯಾಗಿ
ಬಂಧುಬಳಗವಾಗಿ
ದೀಪವಾಗಿ
ಮನ ಮನೆಗಳ
ಬೆಳಗುವೆ ನಾ
ಹೊಸಕಿ ಹಾಕದಿರು ಎನ್ನ
ನಿನ್ನೀ ಕ್ಷಣಿಕ ಕಾಮತೃಷೆಗೆ
ಅಂಗಲಾಚಿ ಬೇಡುವೆನು
ಬಿಟ್ಟುಬಿಡು ದಮ್ಮಯ್ಯ
ಮಾನಸಿಕ ರೋಗ ಎನಲೆ
ರಾಕ್ಷಸೀ ದ್ವೇಷ ಎನಲೆ
ತುತ್ತಿಟ್ಟ ತಾಯಿ ತಂಗಿ
ಮರೆತ ನೀಚ ನೀ ಎನಲೆ
ಕರೆದರೀ ಪುಣ್ಯಭೂಮಿಯ
ಭಾರತಾಂಬೇ ಎಂದು
ಹೆಣ್ಣೆಂದು ಸ್ತ್ರೀ ಶಕ್ತಿ ನೀನೆಂದು
ನಿನ್ನಮಡಿಲಲ್ಲಿ ಉಸಿರಾಡಿ
ಹಸಿರಾಗಿ ಭಯಭಕ್ತಿ ಸೃಷ್ಟಿಸಿದ
ಅಷ್ಟಲಕ್ಷೀಯರು
ಸಂಸ್ಕೃತಿ ಸಂಸ್ಕಾರದ ತಿಲಕ
ಸ್ತ್ರೀ ಶಕ್ತಿ ಸಂಪನ್ನತೆಗೆ
ಅರ್ಥಗರ್ಭಿತ
ನವರಾತ್ರಿ ಆಡಂಬರ
ಹೆಮ್ಮೆ ಎನಿಸಿತ್ತೆನಗೆ
ಪೂಜ್ಯ ಶಿವನ ಸಂವೇದನೆ
ಸತಿಗಾಗಿ
ಸಕಾಲದಲಿ ದೌಪಧಿಯ
ಮಾನರಕ್ಷಿಸಿದ ಶ್ರೀ ಕೃಷ್ಣ
ಪರಮಾತ್ಮ
ದುಷ್ಟರ ಸಂಹಾರ
ಈ ಪುಣ್ಯ ಭೂಮಿಯಲಿ
ವಚನ ಶ್ರೇಷ್ಟರು
ಅಲ್ಲಮ ಬಸವಣ್ಣ
ಅಕ್ಕಮಾಹಾದೇವಿ
ನಡೆದಾಡಿದ
ಪುಣ್ಯ ಭೂಮಿ ಇದು
ಮರೆಯಾಯಿತೆ…?
ಕಾವ್ಯ ಪುಾರಾಣಗಳು
ದಾಖಲೆಯ ಪುಟಗಳಾದವೆ?
ಅರ್ಥ ವಿಲ್ಲದಾಯಿತೆ
ನವರಾತ್ರಿ?
ಬಿರುಕು ಬಿಟ್ಟ ಬಾಗಿಲು
ಶಿಥಿಲ ಗೋಡೆಗೆ ರಕ್ಷಕರಿಲ್ಲವೆ?
ಪ್ರತಿ ಶೋಧವೆ,
ನೇಣುಗಂಬವೆ,
ಬಿಸಿಲ ಬಯಲಲಿ
ಬತ್ತಲಾಗಿಸಿ ಕಲ್ಲು ತೂರುವುದೆ
ಶಿಕ್ಷಿಸುವ ಮಹನೀಯನಾರು?
ಕತ್ತಲು ಬೆಳಕು ತಿಕ್ಕಾಟಗಳ ನಡುವೆ
ಅವಿತ ನ್ಯಾಯದ ಹುಡುಕಾಟಕೆ
ಮುಷ್ಕರ ಕಲ್ಲು ತೂರಾಟ
ಮೌನ ಮೆರವಣಿಗೆ
ಮೊಸಳೆ ಕಣ್ಣೀರು
ಕಣ್ಣು ಒರೆಸುವ
ರಾಜಿಕೀಯ ಜೂಜಾಟ
ಪಾಪಿ ಮೂಲವ
ಹುಡುಕು ಹುಡುಕಿ
ಹೊರಹಾಕು
ಅನುಜ ಅಗ್ರಜನಿರಲಿ
ಬಂಧು ಬಳಗವೆ ಇರಲಿ
ಮನಸ್ಸಿನ ಅಂಧಕಾರ
ಪರಿವರ್ತನೆ ಇಲ್ಲದೆ
ಅಬಲೆ ನಾನಲ್ಲ
ಸ್ರೀ ಶಕ್ತಿನಾನು
ನವ ಯುಗದ ನವ ಶಕ್ತಿ
ಭಕ್ತಿ ವಿಶ್ವಾಸ ನನ್ನಲ್ಲಿ
ನನಗೆ ನಾ
ನವರಾತ್ರಿಶಕ್ತಿ
***************