ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ನಿನದೇ ನೆನಪು

ಕವಿತೆ ಮಾಲತಿ ಶಶಿಧರ್ ಈಗೀಗ ದಾರಿಯಲಿ ಒಬ್ಬಳೇಸ್ಕೂಟಿ ಬಿಡುವಾಗ ಹಿಂದೆಯಾರೋ ಕೂತು ನನ್ನನೆಚ್ಚಿನ ಗೀತೆ ಗುನುಗಿದಂತೆ,ತಿರುಗಿ ನೋಡಿದರೆ ಖಾಲಿಸೀಟುಕನ್ನಡಿಯ ಸರಿಪಡಿಸಿಗಮನಿಸಿದರೆ ಕಣ್ಮನಸೆಳೆವ ರೂಪವೊಂದುನಸುನಕ್ಕನಂತೆ.. ಇತ್ತ ಮನೆಯ ಮುಂದಿನರಂಗೋಲಿಯ ಚುಕ್ಕಿಯೊಂದುತಪ್ಪಿಸಿಕೊಂಡಂತೆಎಷ್ಟೇ ಗೆರೆ ಎಳೆದರುರಂಗೋಲಿ ಅಪೂರ್ಣವಾದಂತೆ.. ಮನೆಯ ಸೂರಿನ ಮೇಲೆಕಡಜವೊಂದು ಕಟ್ಟಿದ್ದಮಣ್ಣಿನ ಗೂಡು ಕುಸಿದುಬಿದ್ದಂತೆ,ಮನೆಗಾಗಿ ಹುಡುಕಾಡಿಏಕಾಂಗಿಯಾಗಿ ಬಿಕ್ಕಿದಂತೆ.. ಸ್ನೇಹಿತೆ ನೀಡಿದಗಿಳಿಮರಿ ಜೋಡಿಗಳುಪಂಜರದಲ್ಲಿಬಂಧಿಯಾದಂತೆ,ಲೋಕವನೇ ಮರೆತುಕೊಕ್ಕಿಗೆ ಕೊಕ್ಕುಅಂಟಿಸಿಕೊಂಡು ಅದೇನೊಮಾತಾಡಿದಂತೆ ಹಾಡಿನಲ್ಲೂ, ಕನ್ನಡಿಯಲ್ಲೂಅಪೂರ್ಣತೆಯಲ್ಲೂ,ಅಸಹಾಯಕತೆಯಲ್ಲೂ,ಪಂಜರದಲ್ಲೂಮಾತಿನಲ್ಲೂ,ನೋವಲ್ಲು ನಲಿವಿನಲ್ಲೂಬರೀ ನಿನದೇ ನೆನಪು.. ******************************

ನಿನದೇ ನೆನಪು Read Post »

ಇತರೆ

ಏಕಾಂತದಿಂದ ಲೋಕಾಂತಕ್ಕೆ

ಏಕಾಂತದಿಂದ ಲೋಕಾಂತಕ್ಕೆ –ಲೇಖಿಕಾ ಸಾಹಿತ್ಯ ವೇದಿಕೆ ಪುಸ್ತಕ ಪರಿಚಯ ಸಾರ್ಥ್ಯಕ್ಯ ಡಿ.ಯಶೋದಾ ವಿಶ್ವಕ್ಕೇ ಕೊರೋನ   ಕಾರ್ಮೋಡ ಕವಿದಿರುವ ಇಂತಹ ಕಾಲದಲ್ಲಿ ಎಲ್ಲರೂ ಒಟ್ಟಿಗೆ ಸೇರಿ ತಾಂತ್ರಿಕತೆಯ ಮೂಲಕ ಒಂದು ಗೂಡುವು ದು ವಿಶೇಷ. ಏಕಾಂತದಿಂದ ಲೋಕಾಂತಕ್ಕೆ ಎಂಬಂತೆ ತಂತ್ರ ಜ್ಞಾನದ ಮೂಲಕ ಸಂವಹನ ಮಾಡುವುದು ಇಂದಿಗೆ ಅತಿ ಮುಖ್ಯ ಎಂಬುದು ಹಿರಿಯ ಪತ್ರಕರ್ತೆ ಡಾ. ಆರ್. ಪೂರ್ಣಿಮಾ ಅಭಿಮತ.ಲೇಖಿಕಾ ಸಾಹಿತ್ಯ ವೇದಿಕೆ ಯ ನನ್ನ ಮೆಚ್ಚಿನ ಪುಸ್ತಕ ಪರಿಚಯದ ಫೇಸ್‌ಬುಕ್ ಲೈವ್ ಸರಣಿ ಕಾರ್ಯಕ್ರಮದ ಅವಲೋಕನದಲ್ಲಿ ಮಾತನಾಡಿದ ಅವರು, ಮಹಿಳೆ ತನ್ನ ಚಿಂತನೆ, ಅನಿಸಿಕೆಯನ್ನು ಹಂಚಿಕೊ ಳ್ಳುವುದಕ್ಕೆ ಇದಕ್ಕಿಂತ ಉತ್ತಮ ಸಾಧನ ಬೇರೆ ಏನಿದೆ ಎಂದು ಪ್ರಶ್ನಿಸಿದರೆ. ಕೊರೋನಾ ಕಾರಣವಾಗಿ ಬಹಳಷ್ಟು ಮಂದಿ ಮನೆಯಲ್ಲಿ ಬಂಧಿ. ಆದರೆ ಮನಸ್ಸನ್ನು ಬಂಧಿಸಲು ಸಾಧ್ಯವೇ? ನಮ್ಮ ಕಲ್ಪನೆ, ಕನಸು,ಕ್ರಿಯಾಶೀಲತೆಯನ್ನು ಎಂದೂ ಬಂಧಿಸಲು ಸಾಧ್ಯವಿಲ್ಲ.ಕೊರೋನಾದಿಂದ ಒಂದು ರೀತಿಯಲ್ಲಿ ನಮಗೆ ನಿರ್ಬಂಧ ಉಂಟಾಗಿದ್ದರೂ ನಮ್ಮ ಹಲವಾರು ಚಟುವಟಿ ಕೆಗಳು ಸಮೃದ್ಧಿಗೊಳ್ಳುತ್ತಿವೆ. ಯಾರನ್ನೂ ಭೇಟಿಯಾಗದೆ, ಸಭೆ, ಸಮಾರಂಭಗಳು ನಡೆಯದೆ ಇರುವಂತಹ ಈ ಕಾಲದಲ್ಲಿ,ತಂತ್ರಜ್ಞಾನದ ಮೂಲಕ ಮನೆಯಲ್ಲಿಯೇ ಕೂತು ಜಗತ್ತನ್ನೇ ಸಂಚರಿಸುವ, ವೈವಿಧ್ಯಮಯ ಜನರನ್ನು ಭೇಟಿಯಾಗುವ, ವಿವಿಧ ವಿಚಾರಗಳನ್ನು ತಿಳಿದುಕೊಳ್ಳುವ ಸದಾವಕಾಶ ನಮ್ಮದು. ಕತೆ, ಕವನ, ವಚನಗಳ ಗೋಷ್ಠಿಗಳು, ವಿವಿಧ ವಿಚಾರಗಳ ಮಂಡನೆ, ಸ್ತ್ರೀ ವಾದಿ ಚಿಂತನೆಗಳ ಚರ್ಚೆಗಳು,ಪುಸ್ತಕ ಗಳ ಪರಿಚಯ, ಹಾಡು, ನೃತ್ಯ… ಒಂದೇ ಎರಡೇ ಸಾಹಿತ್ಯ, ಸಾಂಸ್ಕೃತಿಕ ಕಲೆಗಳಿಗೆ ಸಂಬಂಧಿಸಿದಂತೆ ಹಲವಾರು ಕಾರ್ಯಕ್ರಮಗಳು ಫೇಸ್‌ಬುಕ್ ಲೈವ್‌ನಲ್ಲಿ ನಡೆಯುತ್ತಿವೆ. ನಮ್ಮ ನಮ್ಮ ವಿಷಯ ಮಂಡನೆಗಳಿಗೆ, ನಮ್ಮ ಪ್ರತಿಭಾ ಪ್ರದರ್ಶನಕ್ಕೆ ದೊಡ್ಡ ದೊಡ್ಡ ಸಮಾರಂಭಗಳೇ ಆಗಬೇಕೆಂ ದೇನಿಲ್ಲ,ನೂರಾರು ಜನರು ಸೇರಬೇಕು ಎಂದೂ ಇಲ್ಲ. ಫೇಸ್‌ಬುಕ್ ವೇದಿಕೆಯಲ್ಲಿ, ನಮ್ಮ ಚೌಕಟ್ಟಿನಲ್ಲಿ ಅಚ್ಚು ಕಟ್ಟಾಗಿ ಮನಮುಟ್ಟುವಂತಹ ಕಾರ್ಯಕ್ರಮಗಳು ಜರುಗು ತ್ತಿರುವುದು ಜಗಮೆಚ್ಚುಗೆಗೆ ಕಾರಣವಾಗಿದೆ.ಇಂದಿನ ಪರಿ ಸ್ಥಿತಿಯನ್ನು ಅನುಕೂಲಕರವಾಗಿ ಮಾಡಿಕೊಂಡು ಬೆಂಗ ಳೂರಿನ ಲೇಖಿಕಾ ಸಾಹಿತ್ಯ ವೇದಿಕೆಯು ಲೇಖಕಿಯರ ಮೂಲಕ ವಿವಿಧ ಪುಸ್ತಕಗಳನ್ನು ಪರಿಚಯಿಸುವ ಕಾರ್ಯ ಕ್ರಮ ಮಾಡಿದ್ದು ಸ್ಫೂರ್ತಿದಾಯಕವಾಗಿದೆ. ಲೇಖಿಕಾ ಸಾಹಿತ್ಯ ವೇದಿಕೆಯ ನನ್ನ ಮೆಚ್ಚಿನ ಪುಸ್ತಕ ಪರಿಚ ಯ ಸರಣಿ ಕಾರ್ಯಕ್ರಮ ಫೇಸ್‌ಬುಕ್ ಲೈವ್‌ನಲ್ಲಿ ಒಂ ದೂವರೆ ತಿಂಗಳ ಕಾಲ ಮೂಡಿ ಬಂದು ಜನಪ್ರಿಯಗೊಂ ಡಿದೆ. ಇದರ ಯಶಸ್ಸು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ದ ಎಲ್ಲ ಲೇಖಕಿಯರಿಗೆ ಸಲ್ಲುತ್ತದೆ. ಇಂತಹ ವಿನೂತನ ಕಾರ್ಯಕ್ರಮದ ರೂವಾರಿ ಲೇಖಿಕಾ ಸಾಹಿತ್ಯ ವೇದಿಕೆಯ ಸಂಚಾಲಕರಾದ ಲೇಖಕಿ ಶೈಲಜಾ ಸುರೇಶ್ ಅವರು ವಿಶೇ ಷವಾಗಿ ಅಭಿನಂದನಾರ್ಹರು.ಈ ಕಾರ್ಯಕ್ರಮದ ಒಂದು ಗಮನಾರ್ಹ ಅಂಶವೆಂದರೆ ಈ ಫೇಸ್‌ಬುಕ್ ತಂತ್ರಜ್ಞಾನದ ಅರಿವಿಲ್ಲದವರು, ಅದಕ್ಕೆ  ತೊಡಗಿಕೊಳ್ಳದವರೂ ಸಹ ಇದರಲ್ಲಿ ಭಾಗವಹಿಸಿ ಸೈ ಎನಿಸಿಕೊಂಡದ್ದು. ಫೇಸ್‌ಬಕ್ ಲೈವ್‌ನಲ್ಲಿ ಕೆಲವೊಮ್ಮೆ ಗೊಂದಲವಿದ್ದದ್ದು ನಿಜ, ಆದರೆ ಮಹಿಳೆಯರು ಗಲಿಬಿಲಿಯಾಗಲಿಲ್ಲ. ೨೫ ಲೇಖಕಿಯರು ೨೫ ಕೃತಿಗಳು,ಕಾರ್ಯಕ್ರಮದಲ್ಲಿ ೨೫ ಲೇಖಕಿಯರು ೨೫ ಕೃತಿಗಳು ಮತ್ತು ೨೫ ಕೃತಿಕಾರರನ್ನು ಪರಿಚಯಿಸಿದರು. ಭೈರಪ್ಪನವರ ಪರ್ವ ಕಾದಂಬರಿಯಿಂ ದ ಶುರುವಾಗಿ ನುಗ್ಗೇಹಳ್ಳಿ ಪಂಕಜಾ ಅವರ ಮದುವೆ ಗೊ ತ್ತಾದಾಗ ಕೃತಿಯೊಂದಿಗೆ ಪುಸ್ತಕ ಪರಿಚಯ ಕಾರ್ಯಕ್ರಮ ಮುಕ್ತಾಯವಾಗುತ್ತದೆ.ಜೂನ್ ೧೯ರಂದು ಡಾ. ಜಯಂತಿ ಮನೋಹರ್  ಅವರು ಡಾ. ಎಸ್.ಎಲ್. ಭೈರಪ್ಪ ಅವರ ಪರ್ವ ಕಾದಂಬರಿಯನ್ನು  ಪರಿಚಯಿಸುವ ಮೂಲಕ ಲೇ ಖಿಕಾ ಸಾಹಿತ್ಯ ವೇದಿಕೆಯ ‘ನನ್ನ ಮೆಚ್ಚಿನ ಪುಸ್ತಕ ಪರಿಚ ಯ’ಸರಣಿ ಕಾರ್ಯಕ್ರಮದ ಪರ್ವವನ್ನು ಶುರುಮಾಡಿದ ರು. ನಂತರ ಮಾಲತಿ ಮುದಕವಿ ಅವರು ಶಂಕರ ಮೊಕಾ ಶಿ ಪುಣೇಕರ ಅವರ ಗಂಗವ್ವ ಗಂಗಾಮಾಯಿ, ಶೈಲಜಾ ಸುರೇಶ್ ಅವರು  ಡಾ. ಎಸ್.ಎಲ್. ಭೈರಪ್ಪ ಅವರ ಗೃಹ ಭಂಗ, ಪ್ರಜ್ಞಾ ಮತ್ತಿಹಳ್ಳಿ ಅವರು ಜಯಂತ್ ಕಾಯ್ಕಿಣಿ ಅವರ ಚಾರ್‌ಮಿನರ್, ಡಿ.ಎನ್.ಗೀತಾ ಅವರು ಗಿರಿಮನೆ ಶ್ಯಾಮರಾವ್ ಅವರ ಒಂದು ಆನೆಯ ಸುತ್ತಾ, ವಿಜಯಾ ಗುರುರಾಜ್ ಅವರು ಭಾಗ್ಯಲಕ್ಷ್ಮೀ ಅವರ ತರಗು, ಸಹನಾ ಪ್ರಸಾದ್ ಅವರು ಬಿ.ಯು. ಗೀತಾ ಅವರ ಕೈಹಿಡಿದು ನಡೆಸೆನ್ನನು,  ಎ. ಎಸ್. ವಸುಂಧರಾ ಅವರು ಯು.ಆರ್. ಅನಂತಮೂರ್ತಿ ಅವರ ಸಂಸ್ಕಾರ, ಮಧುರಾ ಕರ್ಣಮ್ ಅವರು  ಶ್ರೀನಿವಾಸ ವೈದ್ಯ ಅವರ ಹಳ್ಳ ಬಂತು ಹಳ್ಳ,  ಕೃಷ್ಣಬಾಯಿ ಹಾಗಲವಾಡಿ ಅವರು ಕಮಲಾ ಹಂಪನಾ ಅವರ ಬಲಾಕ, ಡಿ. ಯಶೋದಾ ಅವರು ಬೇಬಿ ಹಾಲ್ದಾರ್ ಅವರ  ನೋವು ತುಂಬಿದ ಬದುಕು, ಸುಮಾ ವೀಣಾ ಅವರು ಡಿವಿಜಿ ಅವರ ಅಂತಃಪುರ ಗೀತೆಗಳು, ವಿಭಾ ಪುರೋಹಿತ್ ಅವರು ಕೆಎಸ್ ನರಸಿಂಹಸ್ವಾಮಿ ಅವರ ತೆರೆದ ಬಾಗಿಲು,  ಶಾಂತಲಾ ಸುರೇಶ್ ಅವರು ಸೋನು ಅವರ ಸಂಶಯದ ಬಲೆ, ಎಂ. ವಾಣಿ ಅವರು ಸುರೇಶ್ ಸೋಮಪುರ ಅವರ ಅಘೋರಿಗಳ ನಡುವೆ, ರತ್ನಾ ನಾಗರಾಜ್  ಅವರು ಮಾಣಿಕ್ ಬಂಡೋಪಾಧ್ಯಯ ಅವರ ಪ್ರಿಮಿವಾಲ್ ಮತ್ತು ಇತರ ಕತೆಗಳು, ಅರುಣಾ ಉದಯ ಭಾಸ್ಕರ್ ಅವರು ಗುರುರಾಜ ಕರ್ಜಗಿ ಅವರ ಕರುಣಾಳು ಬಾ ಬೆಳಕೆ,  ಶೈಲಜಾ ಪ್ರಸಾದ್ ಅವರು ನೇಮಿಚಂದ್ರ ಅವರ ಸಾವೇ ಬರುವುದಿದ್ದರೆ ನಾಳೆ ಬಾ,  ಲೇಖಿಕಾ ವೇದಿಕೆಯ ಹಿರಿಯ ಲೇಖಕಿ ಸತ್ಯವತಿ ರಾಮನಾ ಥ್ ಅವರು ಶ್ರೀ ಸಚ್ಚಿದಾನಂದ ಸರಸ್ವತಿ. ಸ್ವಾಮೀಜಿಯವರ  ಗೀತಾ ಶಾಸ್ತ್ರೋಪದೇಶ ಸೋಪಾನ ಪಂಕ್ತಿ, ಇಂದಿರಾ ಶರಣ್ ಜಮ್ಮಲದಿನ್ನಿ ಅವರು ವಿವೇಕ್ ಶಾನ್‌ಬಾಗ್ ಅವರ ಹುಲಿಸವಾರಿ,ಎಲ್.ಎಚ್.ಶಕುಂತಲಾ ಅವರು ಶಿವರಾಮ ಕಾರಂತರ ಅಳಿದ ಮೇಲೆ, ಸುಶೀಲಾ ಸೋಮಶೇಖರ್ ಅವರು ನರಹಳ್ಳಿ ಬಾಲಸುಬ್ರಹ್ಮಣ್ಯಂ ಅವರ ಕೆ.ಎಸ್. ನರಸಿಂಹಸ್ವಾಮಿ, ಪರಿಣಿತಾ ರವಿ ಅವರು ಎ.ಆರ್. ಮಣಿಕಾಂತ ಅವರ ಅಪ್ಪನೆಂಬ ಆಕಾಶ,ನಾಗರ ತ್ನಾ ಮೂರ್ತಿ ಅವರು ಶತಾವಧಾನಿ ಆರ್. ಗಣೇಶ್ ಅವರ ಧೂಮದೂತ,ವಿನುತಾ ಹಂಚಿನಮನೆ ಅವರು ನೇಮಿಚಂ ದ್ರ ಅವರ ಯಾದ್ ವ ಶೇಮ್,  ಸವಿತಾ ನಾಗೇಶ್ ಅವರು  ನುಗ್ಗೇಹಳ್ಳಿ ಪಂಕಜಾ ಅವರ ಮದುವೆ ಗೊತ್ತಾದಾಗ ಪುಸ್ತ ಕಗಳನ್ನು ಪರಿಚಯಿಸಿದರು. ಹಿರಿಯ ಲೇಖಕಿಯರ ಅವಲೋಕನ ಐದು ವಾರದ ಈ ಕಾರ್ಯಕ್ರಮದ ಬಗ್ಗೆ ಮತ್ತೊಂದು ವಾರ ಐದು ಹಿರಿಯ ಲೇಖಕಿಯರಾದ ಬಿ.ಯು. ಗೀತಾ, ವನಮಾಲ ಸಂಪನ್ನ ಕುಮಾರ್, ಕಾನ್ಸೆಪ್ಟಾ ಫರ್ನಾಂಡಿಸ್, ಆರ್. ಪೂರ್ಣಿಮಾ ಹಾಗೂ ಶೈಲಜಾ ಸುರೇಶ್ ಅವರು ಅವಲೋಕನ ಮಾಡಿ ದ್ದು ವಿಶೇಷ. ಇದರ ಜೊತೆಗೆ ಪ್ರತಿ ಶುಕ್ರವಾರ ಪುಸ್ತಕ ಪರಿ ಚಯವಾದ ಮೇಲೆ ಒಂದು ವಾರದ ಪುಸ್ತಕ ಪರಿಚಯ ಕಾರ್ಯಕ್ರಮದ ಬಗ್ಗೆ ತಮ್ಮ ಅನಿಸಿಕೆಯನ್ನು ಶೈಲಜಾ ಸು ರೇಶ್ ಅವರು ವ್ಯಕ್ತಪಡಿಸುತ್ತಿದ್ದರು. ಪುಸ್ತಕದ ಬಗ್ಗೆ ತಿಳಿಸುವಾಗ ಪುಸ್ತಕದ ಕತೆ ಹೇಳುವ ಅವ ಶ್ಯಕತೆ ಇಲ್ಲ, ಕೃತಿಕಾರರ ಶೈಲಿಯ ಬಗ್ಗೆ, ಕತೆಯನ್ನು ಬೆಳೆಸಿ ಕೊಂಡು ಹೋಗುವ ರೀತಿಯನ್ನು ಹೇಳಿದರೆ ಉತ್ತಮ ಎಂ ದು ಲೇಖಕಿ ಬಿ.ಯು. ಗೀತಾ ಅವರು ಸಲಹೆ ನೀಡಿದರು. ಓದು ನಾವು ಕಾಣದ ಪ್ರಪಂಚವನ್ನು ತೆರೆದಿಡುತ್ತದೆ ಹಾಗಾ ಗಿ ಹೆಚ್ಚು ಹೆಚ್ಚು  ಓದಬೇಕು ಎಂದೂ ಅವರು ಹೇಳಿದರು. ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷರಾದ ವನಮಾ ಲ ಸಂಪನ್ನಕುಮಾರ್ ಅವರು ಪುಸ್ತಕಗಳನ್ನು ಓದುವುದ ರಿಂದ ನಮ್ಮಲ್ಲಿ ಒಂದು ಗಟ್ಟಿತನ ಮೂಡುತ್ತದೆ. ಓದುವು ದರಿಂದ ಬರೆಯುವ ಹಂಬಲವೂ ಉಂಟಾಗುತ್ತದೆ ಎಂದ ರು. ಮಹಿಳಾ ವೇದಿಕೆಯಲ್ಲಿ ಮಹಿಳೆಯರ ಪುಸ್ತಕಗಳನ್ನೇ ಪರಿ ಚಯಿಸುವುದು ಸೂಕ್ತ ಎಂದು ಬೆಂಗಳೂರು ಆಕಾಶವಾಣಿ ಕೇಂದ್ರದ ಕಾನ್ಸೆಪ್ಟಾ ಫರ್ನಾಂಡಿಸ್ ಅವರು ಹೇಳಿದರು.  ಎಷ್ಟೋ ಸಂದರ್ಭಗಳಲ್ಲಿ ಮಹಿಳೆಯರ ಪುಸ್ತಕಗಳು ಪರಿಗಣನೆಗೇ ಬರುವುದಿಲ್ಲ, ಸಾಹಿತ್ಯ ಸಮ್ಮೇಳನಗಳಲ್ಲಿ ಕೆಲವರಿಗಷ್ಟೇ ಗೋಷ್ಟಿಗಳ ಅಧ್ಯಕ್ಷತೆ ಸಿಕ್ಕಿರುತ್ತದೆ. ಹಾಗಾಗಿ ನಮ್ಮದೇ ವೇದಿಕೆ ಇರುವಾಗ ನಾವು ನಮ್ಮದೇ ಪುಸ್ತಕಗಳನ್ನು ಪರಿಚಯಿಸುವ ಕೆಲಸ ಮಾಡಬಹುದು ಎಂದರು.ಒಂದು ಪುಸ್ತಕ ಓದಿದಾಗ ನಮಗೆ ಸಾಕಷ್ಟು ವಿಷಯ ತಿಳಿಯುತ್ತದೆ. ಆ ವಿಷಯಗಳನ್ನು ಬೇರೆಯ‌ವ ರೊಂದಿಗೆ ಹಂಚಿ ಕೊಂಡಾಗ ನಾವೂ ಕೂಡ ವಿಚಾರಗಳಲ್ಲಿ ಬೆಳೆಯುತ್ತವೆ, ಇನ್ನೊಬ್ಬರ ವಿಚಾರವೂ ತಿಳಿಯುತ್ತದೆ. ಇದು ಕೂಡ ಒಂದು ರೀತಿಯ ಓದು ಬರಹ ಎಂದು ಪುಸ್ತಕ ಪರಿಚಯ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ಸೂಚಿಸಿದವರು ಆರ್. ಪೂರ್ಣಿಮಾ‘ನಾನು ಕೇವಲ ಓದು ಬರಹ ಮಾಡಿ ಕೊಂಡು ಇರುತ್ತೇನೆ’ ಎಂದು ಯಾವ ಲೇಖಕಿಯೂ ಹೇಳ ಲಿಕ್ಕಾಗುವುದಿಲ್ಲ. ಯಾವುದೇ ಪುಸ್ತಕದಲ್ಲಿದ್ದರೂ ಅದು ಹೇಳಬೇಕಾದ ಸಾಮಾಜಿಕ ಸಂದೇಶ ಇರುತ್ತದೆ. ಅದನ್ನು ಗುರುತಿಸಿ, ಚರ್ಚಿಸಬೇಕು. ವಿವಿಧ ಆಯಾಮಗಳನ್ನು ಗಮನಿಸುವಂತಹ ಚರ್ಚಾ ಕಾರ್ಯಕ್ರಮಗಳು ಲೇಖಿಕಾ ಸಾಹಿತ್ಯ ವೇದಿಕೆ ವತಿಯಿಂದ ನಡೆಯಲಿ ಎಂಬ ಆಶಯ ವ್ಯಕ್ತಪಡಿಸಿದರು. ಕಾರ್ಯಕ್ರಮದ ಕೊನೆಯ ದಿನ ಶೈಲಜಾ ಸುರೇಶ್ ಇಡೀ ಕಾರ್ಯಕ್ರಮದ ಬಗ್ಗೆ ಮಾತನಾಡಿದರು. ನಾವು ಬೆಳೆಯು ವುದರ ಜೊತೆಗೆ ನಮ್ಮ ಜೊತೆ ಇನ್ನಷ್ಟು ಜನರನ್ನು ಬೆಳೆಸು ವ ಆಸೆಯೇ ಈ ಕಾರ್ಯಕ್ರಮಕ್ಕೆ ಕಾರಣ ಎಂದ ಅವರು,  ಅವಕಾಶಗಳನ್ನು ಯಾರೂ ಬಂಗಾರದ ಹರಿವಾಣದಲ್ಲಿಟ್ಟು ಕೊಡುವುದಿಲ್ಲ. ಮಹಿಳೆಯರಂತೂ ಒಂದೊಂದು ಅವಕಾ ಶವನ್ನು ಪಡೆದುಕೊಳ್ಳಲು ಹೋರಾಟ ಮಾಡಬೇಕು.ಹಾಗೆ ಯೇ ನಮ್ಮ ನಮ್ಮ ಅವಕಾಶಗಳನ್ನು ನಾವೇ ಸೃಷ್ಟಿ ಮಾಡಿ ಕೊಳ್ಳಬೇಕು ಎಂದರು.ಈ ಕಾರ್ಯಕ್ರಮದ ಆಧಾರದ ಮೇಲೆ ಬೆಂಗಳೂರು ಆಕಾಶವಾಣಿ ಸಹ ನನ್ನ ಮೆಚ್ಚಿನ ಪುಸ್ತಕ ಕಾರ್ಯಕ್ರಮವನ್ನು ಪ್ರಸಾರ ಮಾಡಿರುವುದಾಗಿ ಅವರು ಹೇಳಿದರು. ಲೇಖಿಕಾ ವೇದಿಕೆಯ ಪುಸ್ತಕ ಪರಿಚಯ ಕಾರ್ಯಕ್ರಮದ ಜನಪ್ರಿಯತೆಯಿಂದ ಸಾಕಷ್ಟು ಲೇಖಕಿಯರು ಇದರ ಸದಸ್ಯತ್ವ ಪಡೆಯಲು ಬಯಸಿದರೆ. ಈ ವೇದಿಕೆಗೆ ಬರಲು ಸಾಕಷ್ಟು ಪುರುಷರು ಸಹ ಆಸಕ್ತಿ ತೋರಿಸಿದ್ದಾರೆ, ಆದರೆ ಇದು ಮಹಿಳೆಯರಿಗಾಗಿ ಮಾತ್ರ ಎಂಬುದನ್ನು ಶೈಲಜಾ ಅವರು ಸ್ಪಷ್ಟಪಡಿಸಿದ್ದಾರೆ.ಈ ಕಾರ್ಯಕ್ರಮದಲ್ಲಿ ಭಾಗವ ಹಿಸಿದ ಪ್ರತಿಯೊಬ್ಬ ಲೇಖಕಿಗೂ ಚಿಕ್ಕಮಗಳೂರಿನಎಂ.ಜೆ. ನಾಗಲಕ್ಷ್ಮಿ ಅವರು ಪ್ರಶಂಸನಾ ಪತ್ರವನ್ನು ಮಾಡಿ ಕೊಟ್ಟಿ ದ್ದಾರೆ. ಇದರ ವಿಶೇಷ ಎಂದರೆ ಪ್ರತಿಯೊಬ್ಬರ ಹೆಸರಿನ ಒಂದೊಂದು ಅಕ್ಷ ರಗಳಿಗೂ ಒಂದೊಂದು ವಾಕ್ಯದ ಅರ್ಥ ವನ್ನು ಬರೆದಿರುವುದು. ತಿಂಗಳಿಗೊಬ್ಬ ಲೇಖಕಿ ಲೇಖಿಕಾ ಸಾಹಿತ್ಯ ವೇದಿಕೆಯ ಒಂದೊಂದು ತಿಂಗಳು ಒಬ್ಬೊಬ್ಬ ಲೇಖಕಿಯನ್ನು ಪರಿಚ ಯಿಸುವ ನನ್ನ ಮೆಚ್ಚಿನ ಲೇಖಕಿ ಎಂಬ ಮತ್ತೊಂದು ಸರಣಿ ಕಾರ್ಯಕ್ರಮ ಈಗಾಗಲೇ ಶುರುವಾಗಿದ್ದು, ಈ ಮೂಲಕ ಆಗಸ್ಟ್ ತಿಂಗಳಲ್ಲಿ ಅನುಪಮಾ ನಿರಂಜನ,ಸೆಪ್ಟೆಂಬರ್‌ನಲ್ಲಿ ತ್ರಿವೇಣಿ, ಅಕ್ಟೋಬರ್‌ನಲ್ಲಿ ಎಂ.ಕೆ. ಇಂದಿರಾ, ನವೆಂಬರ್‌ ನಲ್ಲಿ ವಾಣಿ… ಹೀಗೆ ತಿಂಗಳಿಗೊಬ್ಬ ಲೇಖಕಿಯ ಬದುಕು- ಬರಹವನ್ನು ವಿವಿಧ ಲೇಖಕಿಯರಿಂದ ಪರಿಚಯಿಸಲಾಗು ವುದು. ವಾರಕ್ಕೊಂದು ಕತೆ ಶೈಲಜಾ ಸುರೇಶ್ ಜೊತೆ ಇದರ ಜೊತೆ ಗೆ ಶೈಲಜಾ ಸುರೇಶ್ ಅವರು  ವಾರಕ್ಕೊಂದು ಕತೆ ಶೈಲಜಾ ಸುರೇಶ್ ಜೊತೆ ಎಂಬ ಮತ್ತೊಂದು ಕಾರ್ಯಕ್ರಮವನ್ನೂ ನಡೆಸುತ್ತಿದ್ದಾರೆ. ಇದರಲ್ಲಿ ಈಗಾಗಲೇ ಸ್ನೇಹಲತಾ ದಿವಾ‌ ಕರ್, ರೂಪಾ ಜೋಷಿ ತಮ್ಮ ಕತೆಗಳನ್ನು ಓದಿದ್ದಾರೆ.ಆಸ ಕ್ತಿ ಇರುವವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹು ದು **********************************************. ಡಿ.ಯಶೋದಾ

ಏಕಾಂತದಿಂದ ಲೋಕಾಂತಕ್ಕೆ Read Post »

ಕಾವ್ಯಯಾನ

ಕುದಿವೆಸರ ಅಗುಳಾಗಬೇಕು

ಕವಿತೆ ಪ್ರೇಮಾ ಟಿ ಎಮ್ ಆರ್ ತನ್ನ ಹೀಗಿಟ್ಟವರನ್ನೆಲ್ಲಶಾಪ ಹಾಕಬೇಕೆಂದುಕೊಂಡಿದ್ದುಅದೆಷ್ಟುಬಾರಿಯೋತನಗಿಷ್ಟಬಂದಂತೆಇರಬಹುದಾಗಿದ್ದರೂಅವರಿಟ್ಟ ಪಾತ್ರೆಯೊಳಗೇತುಂಬಿಕೊಂಡಂತೆಬದುಕಿದ್ದು ತನ್ನದೂತಪ್ಪಲ್ಲವಾ?ಮತ್ತೆ ಈ ಮನೆಅಪ್ಪ ಅಮ್ಮ ಅತ್ತೆಮಾವಈ ಮಗಳ ಅಪ್ಪಎಲ್ಲರೂ ತನ್ನವರಲ್ಲವೇಎಂದುಕೊಳ್ಳುತ್ತಲೇಅವಳು ಅವಳಂತಿರದೇಅಮ್ಮನಂತೆ ಅಕ್ಕನಂತೆಬದುಕ ಬದುಕುತ್ತಲೇಇದ್ದಾಳೆ ಎಗರಿಬೀಳಬೇಕಾದಲ್ಲೆಲ್ಲತಣ್ಣೆ ಅಂಬಲಿಯಂತೆಹಳ್ಳೆಣ್ಣೆಯಂತೆಹಂದಾಡುತ್ತಾಳೆ ಮಂದಮಂದವಾಗಿಮನೆಮುಂದೆ ಬಿದ್ದುಕೊಂಡಪೆದ್ದಮುಂಡೆಯಂಥಕಾಲ್ದಾರಿಯೇ ತಾನೆಂದುಕೊಂಡಿದ್ದುಅದೆಷ್ಟು ಬಾರಿಯೋಉಗುಳಿ ಉಚ್ಚೆ ಹೊಯ್ದರೂಹೊದ್ದು ಮಲಗಿಕೊಂಡ ಬೀದಿ ತಡೆಯಲಾರದೇ ಗುಡಗುಡಿಸಿದ್ದೂಇದೆಯಾದರೂ ಮತ್ತೆಪಶ್ಚಾತ್ತಾಪದ ಉರಿಯೂಅವಳ ಉಡಿಗೇಕುದಿವೆಸರೊಳಗಿನ ಅಗುಳಾಗಿಮುಚ್ಚಳ ಕೊಡವಿ ಉಕ್ಕಬೇಕುಸಿಡಿಯಬೇಕು ಬಿಡಿಯಾಗಿ ಹಿಡಿಯಾಗಿಒಟ್ಟಿದ ಒಲೆ ಆರುವ ತನಕಹುದುಗದೇ ಬುದುಗಬೇಕುಒಮ್ಮೆಗಾದರೂ ಅಂದುಕೊಳ್ಳುತ್ತಾಳೆ

ಕುದಿವೆಸರ ಅಗುಳಾಗಬೇಕು Read Post »

ಕವಿತೆ ಕಾರ್ನರ್

ರಣ ಹಸಿವಿನಿಂದ!

ಕವಿತೆ ಮೊನ್ನೆ ಇವರೂಹಲವು ಯುದ್ದಗಳ ಗೆದ್ದಿದ್ದರುಗೆದ್ದ ರಾಜ್ಯದ ಹೆಣ್ನುಗಳಬೇಟೆಯಾಡಿದ್ದರುಇದೀಗ ಸಾಂತ್ವಾನ ಕೇಂದ್ರಗಳತೆರೆದು ಕೂತಿದ್ದಾರೆ! ಮೊನ್ನೆ ಇವರೂಊರೂರುಗಳಿಗೆ ಬೆಂಕಿಹಚ್ಚಿದ್ದರುಉರಿದ ಮನೆಗಳಲ್ಲಿ ಹೆಂಗಸರುಮಕ್ಕಳೆನ್ನದೆ ತಲೆ ತರೆದಿದ್ದರುಇದೀಗ ಆನಾಥಾಶ್ರಮಗಳತೆರೆದು ಕೂತಿದ್ದಾರೆ! ಮೊನ್ನೆ ಇವರೂಕೋವಿ ಖಡ್ಘಗಳ ಹಿಡಿದಿದ್ದರುಇದೀಗ ಧರ್ಮಗ್ರಂಥಗಳಪಾರಾಯಣ ಮಾಡುತ್ತಿದ್ದಾರೆ! ಮೊನ್ನೆಮೊನ್ನೆಯವರೆಗೂ ನಡೆದಅಕಾರಣ ಯುದ್ದಗಳಿಗೀಗಸಕಾರಣಗಳ ಪಟ್ಟಿಮಾಡುತ್ತ ಕೂತಿದ್ದಾರೆ ತರಿದ ತಲೆಗಳಭೋಗಿಸಿದ ಯೋನಿಗಳಕಚ್ಚಿದ ಮೊಲೆಗಳಕಲಸಿಹಾಕಿದ ಭ್ರೂಣಗಳನಿಖರ ಅಂಕಿಅಂಶಗಳಿಗಾಗಿತಲೆ ಕೆರೆದುಕೊಳ್ಳುತ್ತಿದ್ದಾರೆ ಪ್ರತಿ ಮನುಷ್ಯನಿಗೂ ಇರಬಹುದಾದಮೃಗದ ಮುಖವಾಡವಕಳಚಲೆತ್ನಿಸಿದಷ್ಟೂಗೊಂದಲವಾಗುವುದು ಖಚಿತ ನೋಡು ಬರೆಯುವಾಗಲೂ ಇದನುಕೆಕ್ಕರಿಸಿ ನೋಡುತಿದೆ ಮೃಗವೊಂದುರಣಹಸಿವಿನಿಂದ!————————————– ಕು.ಸ.ಮದುಸೂದನ ರಂಗೇನಹಳ್ಳಿ(ದುರಿತಕಾಲದ ದನಿ)

ರಣ ಹಸಿವಿನಿಂದ! Read Post »

ಇತರೆ

ಆಕಾಶಯಾನವೂ ಆಧ್ಯಾತ್ಮಿಕ ಚಿಂತನೆಯೂ

ಲೇಖನ ಚಂದಕಚರ್ಲ ರಮೇಶ ಬಾಬು ತಲೆಬರಹ ನೋಡಿಯೇ ಇದೇನಪ್ಪ ಇವನು ಯಾವುದನ್ನ ಯಾವುದಕ್ಕೋ ಜೋಡಿಸ ತೊಡಗಿದ್ದಾನೆ ಎನ್ನುತ್ತೀರಾ ! ಕರ್ಮಸಿದ್ಧಾಂತಕ್ಕೂ ನಾವು ಕೈಗೊಳ್ಳುವ ವಿಮಾನಯಾನಕ್ಕೂ ಎಲ್ಲಿಯ ಸಾಪತ್ಯ ವೆನ್ನುತ್ತೀರಾ !. ಏನೋ ಹೇಳಲು ಹೋಗಿ ಏನೋ ಹೇಳ್ತಿದೀನಿ ಅಂತ ಅನ್ನಿಸ್ತಿದೆಯಾ ? ಅದೇನೂ ಅಲ್ಲ. ನಾನು ನಿಮಗೆ ಅನುಭವಗಳ ದೃಷ್ಟಾಂತಗಳನ್ನು ಕೊಡುತ್ತಾ ಹೋದಾಗ ನೀವೇ ಒಪ್ತೀರಾ ! ಆದ್ರೆ ಒಂದು. ಇದು ಹೊಂದೋದು ವಿದೇಶೀ ವಿಮಾನಯಾನಕ್ಕೆ ಮಾತ್ರ.  ಈಗ ನಾವು ಇದರ ಚರ್ಚೆಗೆ ಬರೋಣ. ನೀವು ನಮ್ಮ ದೇಶದ ಯಾವುದೋ ವಿಮಾನ ನಿಲ್ದಾಣದಿಂದ ವಿದೇಶೀಯಾನಕ್ಕೆ ತಯಾರಾಗಿದ್ದೀರಿ. ನಿಮ್ಮನ್ನ ಬೀಳ್ಕೊಡಲು ನಿಮ್ಮವರೆಲ್ಲಾ ಬಂದಿದ್ದಾರೆ. ನಿಮ್ಮನ್ನ ಅಪ್ಪಿಕೊಂಡು ಕನ್ನಡದಲ್ಲೋ ಇಂಗ್ಲೀಷಿನಲ್ಲೋ ಶುಭಯಾತ್ರೆ ಹೇಳುತ್ತಾರೆ. ನೀವು ಒಳಗಡೆಗೆ ಸಾಗುತ್ತೀರಿ ಕೈಬೀಸುತ್ತಾ. ಅವರು ಅಲ್ಲೇನಿಲ್ಲುತ್ತಾರೆ. ಕ್ರಮೇಣ ಅವರು ಕಣ್ಮರೆಯಾಗುತ್ತಾರೆ. ಅಲ್ಲಿಂದ ಮೊದಲಾಗುತ್ತದೆ ನಿಮ್ಮ ಕರ್ಮಕಾಂಡ. ಇಲ್ಲಿಂದ ಹಿಡಿದು ನೀವು ಅದ್ಯಾವುದೋ ದೇಶದ ವಿಮಾನ ನಿಲ್ದಾಣದಲ್ಲಿ ಇಳಿದು ಹೊರಬರುವ ವರೆಗೂ ನಿಮಗಾಗುವ ಅನುಭವ ನಿಮಗೊಂದು ಹೊಸ ಜನ್ಮ ತಾಳಿ ಬಂದಂತೆ ಎಂದು ನನ್ನ ಅನಿಸಿಕೆ. ಈ ಪ್ರಯಾಣದಲ್ಲಿ ನಿಮಗೆ ಸಿಗುವ ಅನುಭವಗಳು ನೀವು ಮಾಡಿದ ಪಾಪ ಪುಣ್ಯಗಳ ಮೇಲೆ ಅಂದರೇ ಕರ್ಮ ಸಿದ್ಧಾಂತದ ಮೇಲೆ ಅವಲಂಬಿಸಿರುತ್ತವೆ ಎಂದು ನನ್ನ ಭಾವನೆ. ಮುಂಚೆ ನಾವೆಲ್ಲಾ ವಿಮಾನಯಾತ್ರೆ ಮಾಡುತ್ತೇವೆಂದು ಎಣಿಸಿದವರಲ್ಲ. ನಮ್ಮ ಚಿಕ್ಕಂದಿನ ದಿನಗಳಲ್ಲಿ ( ನಾನೀಗ ೬೬ ವರ್ಷದವ ) ಮೇಲೆ ಹಾರುತ್ತಿದ್ದ ವಿಮಾನವನ್ನು ತಲೆ ಎತ್ತಿ  ನೋಡುತ್ತಾ ಕೈ ಬೀಸುವುದೊಂದೇ ನಮಗೆ ಗೊತ್ತಿತ್ತು. ನಾವು ಬೀಸುವ ಆ ಕೈ ಅಲ್ಲಿಯವರಿಗೆ ಕಾಣುವುದಿಲ್ಲ ಅಂತ ಸಹ ನಮಗೆ ಆಗ ತಿಳಿದಿರಲಿಲ್ಲ. ಕೆಲಸಕ್ಕೆ ಸೇರಿ ಪದವಿಗಳಲ್ಲಿ ಮೇಲೇರಿ ಒಂದು ಹಂತ ತಲುಪಿದಾಗ ಕಚೇರಿಯ ವತಿಯಿಂದ ವಿಮಾನಯಾನದ ಸವಲತ್ತು ದೊರೆಯಿತು. ಎಷ್ಟೋ ಸರ್ತಿ ನಾನಿರುವ ಹೈದರಾಬಾದಿನಿಂದ  ಬೆಂಗಳೂರು, ಚೆನ್ನೈ, ಮುಂಬೈ, ಕಲಕತ್ತಾ, ಭುವನೇಶ್ವರ್, ದಿಲ್ಲಿ ಮುಂತಾದ ಊರುಗಳಿಗೆ ವಿಮಾನಗಳಲ್ಲಿ ಹೋದದ್ದು ಇದೆ. ಅಲ್ಲೂ ಸಹ ಮೊದಲ ಸಲ ಪ್ರಯಾಣ ಮಾಡುವಾಗ ಕೆಲ ಅನುಭವಗಳಾಗಿದ್ದರೂ ಅವ್ಯಾವೂ ಮೆಲಕು ಹಾಕುವಂಥವುಗಳಾಗಿರಲಿಲ್ಲ. ಮತ್ತೂ ಈ ಥರದ ವೇದಂತ ಧೋರಣಿಯನ್ನು ಅವಲಂಬಿಸುವಷ್ಟು ತೀಕ್ಷ್ಣವಾಗಿರಲಿಲ್ಲ. ನನ್ನ ಮಗಳ ಮದುವೆ ಅಮೆರಿಕಾ ಹುಡುಗನೊಂದಿಗೆ ಆದಾಗ ಮಾತ್ರ ನಮ್ಮ ಅಮೆರಿಕಾ ಪ್ರವಾಸ ಕರಾರು ಆದಂತಿತ್ತು.  ಹೊರಡಬೇಕೆಂದು ನಿರ್ಧಾರವಾದಾಗ ವೀಸಾ ಅನುಮತಿ ಪಡೆಯಲು ಮಾಡಬೇಕಾದ ಪದ್ಧತಿಗಳ ಬಗ್ಗೆ ನನ್ನ ಮಗಳು ಮತ್ತು ಅಳಿಯ ತುಂಬಾ ಶ್ರದ್ಧೆ ವಹಿಸಿ ಅದಕ್ಕೆ ಬೇಕಾದ ಕ್ರಮದ ಬಗ್ಗೆ ನಮಗೆ ತಿಳಿಸಿ ಹೇಳಿದರು.  ನಮಗೆ ಆ ಪ್ರಶ್ನೋತ್ತರದ ತರಬೇತಿ ನೋಡಿಯೇ ಒಂಥರಾ ಕಳವಳ ಪ್ರಾರಂಭವಾಗಿತ್ತು. ಒಳ್ಳೆ ಪರೀಕ್ಷೆಗೆ ತಯಾರಿ ನಡೆಸಿದ ಹಾಗೆ ನಡೆದಿತ್ತು. ನಡುವಿನಲ್ಲಿ ನನ್ನ ಮಗಳ ಅಣಕು ಸಂದರ್ಶನ ಸಹ ನಡೆದಿತ್ತು.   ವೀಸಾ ಕಚೇರಿಯಲ್ಲಿ ನಡೆದ ಸಂದರ್ಶನದಲ್ಲಿ ಅಲ್ಲಲಿ ಸ್ವಲ್ಪ ತಡವರಿಸಿದರೂ ಮೊದಲನೇ ಸಂದರ್ಶನದಲ್ಲೇ ವೀಸಾ  ಪಡೆಯಲು ಯಶಸ್ವಿಯಾದೆವು. ಅಲ್ಲಿಂದ ಪ್ರಾರಂಭವಾಯಿತು ನಮ್ಮ ಪ್ರಯಾಣದ ಸಿದ್ದತೆ. ನಾವು ಕೊಂಡೊಯ್ಯಬೇಕಾದ ನಾಲ್ಕು ಪೆಟ್ಟಿಗೆಗಳ ಸರಿಯಾದ ಅಳತೆ, ಅವುಗಳ ಒಂದೊಂದರ ಭಾರ, ತೆಗೆದುಕೊಂಡು ಹೋಗಬೇಕಾದ ವಸ್ತುಗಳ ಪಟ್ಟಿ, ಮತ್ತೆ ಅಮೆರಿಕಾಗೆ ತರಬಾರದ ವಸ್ತುಗಳ ಬಗ್ಗೆ ನಮಗೆ ತಿಳಿಹೇಳುತ್ತಾ ಮಗಳು ಅಳಿಯ ನಮಗೆ  ಮನದಟ್ಟು ಮಾಡಿಸಿದರು. ನಾವು ಸಹ ಅಂತರ್ಜಾಲದಲ್ಲಿ ಹುಡುಕಿ, ನಿಷಿದ್ಧವಾದ ವಸ್ತುಗಳನ್ನ ಬಿಟ್ಟು ಉಳಿದದ್ದನ್ನೇ ಕಟ್ಟಿಕೊಂಡೆವು, ಅಥವಾ ಹಾಗೆ ಅಂದುಕೊಂಡೆವು. ಎರಡೆರಡು ಸರ್ತಿ ಸರಿ ನೋಡಿಕೊಂಡು ಸಿದ್ದರಾದೆವು. ಅವರ ಮಾರ್ಗದರ್ಶನದಲ್ಲಿ ಏನೂ ಸಮಸ್ಯೆ ಬರಲಿಕ್ಕಿಲ್ಲ ಎಂದು ಮುಂದುವರೆಸಿದೆವು. ನಾವು ಹೈದರಾಬಾದಿನಿಂದ ಹೊರಟು ದುಬೈನಲ್ಲಿ ವಿಮಾನ ಬದಲಿಸಬೇಕಿತ್ತು.  ಹೈದರಾಬಾದ್ ನಲ್ಲಿ ಮತ್ತೆ ದುಬೈನಲ್ಲಿ ಯಾವುದೇ ತರದ ಅಡಚಣೆಯಾಗಲಿಲ್ಲ. ದುಬೈನಲ್ಲಿ ನಮ್ಮ ಗೇಟ್ ಹುಡುಕಲು ತುಂಬಾ ತಡವಾಗಿ ಏನೂ ತಿನ್ನದೇ ವಿಮಾನದೊಳಗೆ ಹಸಗೊಂಡು ಕೂತು ಅವರು ಯಾವಾಗ ತಿನ್ನಲು ಕೊಡುತ್ತಾರೋ ಎಂದು ಕಾದದ್ದು ಬಿಟ್ಟರೇ ಮತ್ಯಾವ ತೊಂದರೆಯೂ ಆಗಿರಲಿಲ್ಲ. ಸಾನ್ ಫ್ರಾನ್ಸಿಸ್ಕೋ ವಿಮಾನ ನಿಲ್ದಾಣದಲ್ಲಿ ಇಳಿದು  ಅಲ್ಲಿಯ ವಲಸೆ ಬರುವವರನ್ನು ಪ್ರಶ್ನಿಸುವ ಕಿಡಿಕಿಯಲ್ಲಿ ಮತ್ತೆ ಸ್ವಲ್ಪ ತಡವರಸಿ ಉತ್ತರಕೊಟ್ಟು ಕಿಡಿಕಿಯ ಹಿಂದಿನ ಅಧಿಕಾರಿಯ ಕೊಂಕು ನಗೆಯನ್ನು ಸಹಿಸಿ  ನಮ್ಮ ನಾಲ್ಕು ಪೆಟ್ಟಿಗೆಗಳನ್ನ ಟ್ರಾಲಿ ಮೇಲೆ ಕಷ್ಟಪಟ್ಟು ಸೇರಿಸಿ ಅವರು ಹೋಗು ಎಂದ ಕಡೆಗೆ  ಹೊರಟೆವು. ಎಲ್ಲವೂ ಸಲೀಸಾಗಿ ಸಾಗುತ್ತಿದೆ ಎನಿಸಿತ್ತು. ಅದು ಬರೀ ಭ್ರಮೆ ಎಂದು ತಿಳಿಯಲು ಹೆಚ್ಚು ಸಮಯ ಬೇಕಾಗಲಿಲ್ಲ. ನಮ್ಮ ಪೆಟ್ಟಿಗೆಗಳು ಕ್ಷಕಿರಣದ ಪರೀಕ್ಷೆಗೆ ಒಳಪಡಬೇಕೆಂದು ಬರೆಯಲಾಗಿತ್ತು. ಮೊದಲನೆ ಸಲ ಅಮೆರಿಕಾಗೆ ಬಂದ ನಮ್ಮಂತ ಹಿರಿಯರ ಪೆಟ್ಟಿಗೆಗಳು ಕಡ್ಡಾಯವಾಗಿ ತಪಾಸನೆಗೊಳಗಾಗುತ್ತವೆ ಅಂತ ನಂತರ ನನ್ನ ಮಗಳು ಹೇಳಿದಳು. ಅಮೆರಿಕದವರಿಗೆ ಭಾರತೀಯರ ಕೌಟುಂಬಿಕ ಒಲವಿನ ಬಗ್ಗೆ ತುಂಬಾ ಗುಮಾನಿಯಂತೆ. ಅದರಲ್ಲೂ ಇಲ್ಲಿಯ ತಿಂಡಿಗಳನ್ನು ತಮ್ಮ ಮಕ್ಕಳ ಸಲುವಾಗಿ ತಂದೇ ತರುತ್ತಾರೆ ಅಂತ ಅವರಿಗೆ ಖಾತರಿಯಂತೆ. ಹಾಗಾಗಿ ತಪಾಸನಾ ಮಶೀನಿಗೆ ಪೆಟ್ಟಿಗೆಗಳನ್ನ ಕಷ್ಟದಿಂದ ಟ್ರಾಲಿಯಿಂದ ಹಾಕಿ ಈಚೆ ಬಂದು ನಿಂತೆವು. ಒಂದೊದೇ ಪೆಟ್ಟಿಗೆಯನ್ನ  ತೆಗೆಯಲು ಹೇಳಿ ಅವುಗಳಳೊಗಿನ ಪದಾರ್ಥಗಳನ್ನು ತಪಾಶಿಸುತ್ತಿದ್ದರು. ನಾವು ಇಲ್ಲಿಂದ ಹೊತ್ತ ಚಟ್ನಿಪುಡಿ, ಉಪ್ಪಿನಕಾಯಿ, ಹಪ್ಪಳ, ಸಿಹಿತಿಂಡಿ ಇವುಗಳೆಲ್ಲಾ ಅವರ ಪರೀಕ್ಷೆಗೆ ಒಳಗಾದವು. ನಮಗೆ ನಮ್ಮ ಮೇಲೆ ಭರವಸೆ. ಅಂಥದ್ದೇನೂ ತಂದಿಲ್ಲವಾದ್ದರಿಂದ ಬೇಗ ಮುಗಿಯಬಹುದೆಂದು. ಕೊನೆಯಲ್ಲಿ ಒಂದು ಪ್ಲಾಸ್ಟಿಕ್ ಚೀಲವನ್ನು ಹಿಡಿದು ಬೆಕ್ಕಿನ ಮರಿಯನ್ನು ಎತ್ತುವ ಹಾಗೆ ಎತ್ತಿ, ನಮಗೆ ತೋರಿಸುತ್ತಾ “ಇದೇನಿದು “ ಎಂದರು ಇಂಗ್ಲೀಷ್ ನಲ್ಲಿ. ಅವರ ಮುಖಚರ್ಯೆ ನೋಡಿದರೇ ನಮ್ಮ ಭಾರತದವರೇ ಎನಿಸಿತು. ನಮ್ಮವರೇ ಆದಕಾರಣ ಅವರನ್ನು ಸಮಜಾಯಿಸಬಹುದು ಎಂದುಕೊಳ್ಳುತ್ತಾ “ ಇದು ಬದರೀನಾರಾಯಣನ ಪ್ರಸಾದ ಮೇಡಮ್ “ ಎಂದೆವು. ಅವರು ಇನ್ನೇನು ನಮ್ಮ ಈ ಸಮಜಾಯಿಷಿಗೆ ಒಪ್ಪೇ ಬಿಡುತ್ತಾರೆ ಎನ್ನುವ ಭರವಸೆ ನಮ್ಮದು. ಆದರೇ ಹಾಗೆ ಆಗಲಿಲ್ಲ. ಅವರು ತಮ್ಮ ಮುಖಭಾವವನ್ನ ಒಂಚೂರೂ ಬದಲಿಸದೇ “ ಸೋ ಆದರೇನಂತೆ . ಇದರಲ್ಲಿರುವುದು ಅಕ್ಕಿ ಮತ್ತು ಕಡಲೇಬೇಳೆ ತಾನೇ ? ಇದು ಅಮೆರಿಕಾಕ್ಕೆ ತರಬಾರದು ಅಂತ ನಿಮಗೆ ಗೊತ್ತಿಲ್ವಾ ?  ಹೀಗೆ ತಂದವರಿಗೆ ಮುನ್ನೂರು ಡಾಲರ್ ಜುರ್ಮಾನೆ ಬೀಳುತ್ತೆ. ಗೊತ್ತಾ ? “ ಎಂದರು. ನಾನು ಸ್ವಲ್ಪ ಅಧಿಕ ಪ್ರಸಂಗತನ ಮಾಡುತ್ತಾ “ ಮ್ಯಾಡಮ್ ! ಬೀಜಗಳು ತರಬಾರದು ಅಂತ ಬರೆದಿದ್ದಾರೆ. ಇವುಗಳು ಬೀಜ ಅಲ್ಲವಲ್ಲ. ಇವುಗಳನ್ನ ಬಿತ್ತಿದರೇ ಮೊಳಕೆ ಬರುವುದಿಲ್ಲ “ ಎಂದೆ. ಅದಕ್ಕವರು ಕೂಲಾಗಿ “ ಇಲ್ಲಿಯ ಸರಕಾರದಲ್ಲಿ ಕೆಲಸ ಮಾಡುವವರು ನೀವೋ ನಾನೋ ? ಇಲ್ಲಿಗೆ ಯಾವುದು ತರಬೇಕು ಯಾವುದು ಬೇಡ ಅಂತ ನಾನು ನಿಮ್ಮಿಂದ ತಿಳಿಯಬೇಕಿಲ್ಲ. ದಿಸೀಜ್ ನಾಟ್ ಅಲೋಡ್ “ ಎನ್ನುತ್ತಾ ಆ ಚೀಲವನ್ನ ಕಸದ ಬುಟ್ಟಿಗೆ ಹಾಕಿದರು. ನನ್ನ ಹೆಂಡತಿ “ ಅಯ್ಯೋ” ಎಂದಳು . “ಪಾಪೀ” ಎನ್ನುವ ಕೂಗು ಅವಳ ಕೊರಳಲ್ಲೇ ಹೂತುಹೋಗಿತ್ತು..  ಅವಳ ಕೈ ಅಮುಕುತ್ತಾ ಅಲ್ಲಲ್ಲಿ ಹರಡಿದ ಉಳಿದ ಸಾಮಾನನ್ನು ಮತ್ತೆ ಪೆಟ್ಟಿಗೆಗಳೊಳಗೆ ಜೋಡಿಸಿ ನಾವು ಹೊರಬಂದೆವು. ನನ್ನ ಹೆಂಡತಿಯಂತೂ  ಪ್ರಸಾದ ಕಸದ ಬುಟ್ಟಿಗೆ ಬಿದ್ದ ಶಾಕಿನಿಂದ ಹೊರಬಂದಿರಲಿಲ್ಲ. ಹೊರಗೆ ಸಿಕ್ಕ ನನ್ನ ಮಗಳು ಮತ್ತು ಅಳಿಯಂದಿರೊಡನೆ “ ನಿಮ್ಮ ಅಮೆರಿಕಾ ಏನ್ ಚೆನ್ನಾಗಿಲ್ಲ. ಅವಳ್ಯಾರೋ ನಮ್ಮದೇಶದವಳೇ ಆದ್ರೂ ಪ್ರಸಾದ ಅಂತ ಹೇಳ್ತಿದ್ರೂ ಕಸದ ಬುಟ್ಟಿಗೆ ಹಾಕಿದ್ಲು. “ ಅಂತ ಹಾರಾಡಿದ್ಲು. ಈಗ ಹೇಳಿ. ಎಲ್ಲಾ ತರ ನಾವು ತರಬೇತಿ ಪಡೆದರೂ ಸಹ ನಮಗೀ ಅನುಭವ ಬೇಕಿತ್ತೇ ? ಅದಕ್ಕೇ ನಾನು ಹೇಳಿದ್ದು. ವಿಮಾನಾಶ್ರಯದ ಒಳಗೆ ಹೊಕ್ಕಾಗಿನಿಂದ ಮತ್ತೆ ಹೊರಗೆ ಬರುವವರೆಗೆನ  ಪ್ರಯಾಣ ನಮ್ಮ ಮಾನವ ಜನ್ಮದ ತರಾ. ಮನುಷ್ಯರಾಗಿ ನಾವು ಏನೆಲ್ಲಾ ಕಷ್ಟ ಸುಖ ಅನುಭವಿಸಿರುತ್ತೇವೋ ಇಲ್ಲಿ ಸಹ ಹಾಗೇನೇ. ಏನೇನು ಅನುಭವ ಕಾದಿರುತ್ತಾವೋ ಗೊತ್ತಾಗುವುದಿಲ್ಲ. ಒಟ್ಟಾರೆ ನಮ್ಮಪುಣ್ಯ. ಅಥವಾ ಪಾಪ  ಅಂತಿಟ್ಕೊಳ್ಳಿ. ಒಂದು ಅನುಭವಕ್ಕೇ ನಾನಿಷ್ಟು ವೇದಾಂತಿಯಾಗಬೇಕಾಗಿಲ್ಲ ಅಂತ ನೀವನ್ನಬಹುದು. ಮುಂದೆ ಕೇಳಿ. ನಾವುಗಳು ಬಂದಮೇಲೆ ನಮ್ಮ ಬೀಗರು ಅಮೆರಿಕಾಕ್ಕೆ ಹೊರಟರು. ನಮ್ಮ ಅನುಭವವನ್ನೆಲ್ಲಾ ಅವರಿಗೆ ತಿಳಿಸಿ, ಅವರಿಗೆ ಟ್ರೈನಿಂಗ್ ಕೊಟ್ಟೆವು. ಅವರು ಇಂಥ ಅನುಭವಕ್ಕೆ ತಯಾರಾಗಿ ಹೋದರು. ಅವರಿಗಾದ ಅನುಭವವೇ ಬೇರೇ. ನಮಗೆ ಮೊಮ್ಮಗಳು ಹುಟ್ಟಿದ್ದರಿಂದ ಅವರು ಮಗುವಿಗೆ ಬೆಳ್ಳಿ ಗೆಜ್ಜೆ, ಕಾಲ್ಗಡಗ, ಉಡಿದಾರ, ಹಾಲುಡಿಗೆ, ಚಂದನದ ಬಟ್ಟಲು ಮೊದಲಾದವುಗಳನ್ನೆಲ್ಲಾ ಹೊತ್ತು ಸಾಗಿದ್ದರು. ನಮ್ಮ ತಪಾಸಣೆಯಲ್ಲಿ ಬಂಗಾರದ ಒಡವೆ ಮತ್ತು ಬೆಳ್ಳಿ ವಸ್ತುಗಳ ಮೇಲೆ ಅವರ ನಿಶಿತ ದೃಷ್ಟಿ ಬಿದ್ದಿರಲಿಲ್ಲ. ಆದರೇ ನಮ್ಮ ಬೀಗರ ಅನುಭವ ಬೇರೇ ಆಗಿತ್ತು. ಅಷ್ಟು ಬೆಳ್ಳಿ ಸಾಮಾನುಗಳನ್ನ ನೋಡಿ “ ನೀವು ಇಷ್ಟು ಸಾಮಾನು ಯಾತಕ್ಕೆ ತಂದಿದೀರಾ ? ಮಾರಾಟಕ್ಕಾ ? “ ಅಂತ ಕೇಳಿದರಂತೆ. ಇವರು ಕಂಗಾಲಾಗಿ ಇಲ್ಲ ಅಂತ ಎಷ್ಟು ಹೇಳಿದರೂ ಕೇಳದೇ ಅವರು ಹೇಳಿಕೆ ಪತ್ರದಲ್ಲಿ ಬರೆದುಕೊಟ್ಟಹಾಗೆ ಅವುಗಳ ತೂಕ ಸರಿಯಾಗಿ ಇದೆಯೋ ಇಲ್ಲವೋ ಎಂದು ಪರೀಕ್ಷಿಸಿದರಂತೆ. ಇದೆಲ್ಲಾ ಆಗಿ ಮುಗಿಯುವಾಗ ಒಂದು ಗಂಟೆ ತಡ. ಎಲ್ಲ ಸೂಟ್ ಕೇಸುಗಳು ಬಾಯಿತೆಗೆದು, ತಮ್ಮ ಮುಂದೆ. ಇಳಿಯುತ್ತಿದ್ದ ಬೆವರು. ಸುಸ್ತಾಗಿ ಹೋದೆವು ಅಂತ ನಮಗೆ ಹೇಳಿದರು. ಈಗ ಹೇಳಿ. ಯಾರ ಯಾರ ಅನುಭವ ಅವರದು. ಯಾರ ಯಾರ ಅನಾನುಕೂಲ ಅವರದು. ಅಲ್ಲವೇ ? ಜೀವನ ಸಹ ಅದೇ ರೀತಿ ಅಲ್ಲವೇ ? ಅವರವರ ಕಷ್ಟ ಸುಖ ಅವರವರು ಮಾಡಿದ ಪುಣ್ಯ ಪಾಪಗಳ ಮೇಲೆ ಆಧಾರಪಟ್ಟಿರುತ್ತೆ. ಅಂದರೇ ಅದೇ ಕರ್ಮ ಸಿದ್ಧಾಂತ. ಸರಿ. ಇವುಗಳಿಗೆ ಪುಷ್ಟಿಕೊಡುವ ಅನುಭವ ಮತ್ತೊಂದು ನನ್ನ ಮಗಳು ಹೇಳಿದ್ದು. ಅದೂ ತಿಳಿಸಿಬಿಡುತ್ತೇನೆ ನಿಮಗೆ. ಅವರ ಸ್ನೇಹಿತೆಯ ತಾಯಿ ಒಬ್ಬರೇ ಬಂದಿಳಿದರಂತೆ ಅಮೆರಿಕಾಗೆ. ಅವರ ಸಾಮಾನನ್ನು ತಪಾಸಿಸುವಾಗ ಆರು ಸುಲಿದ ತೆಂಗಿನಕಾಯಿ ಕಂಡುಬಂದವಂತೆ. ಅವುಗಳನ್ನು ಅವರು ಅಮೆರಿಕದೊಳಗೆ ಬಿಡಲೊಪ್ಪಲಿಲ್ಲವಂತೆ. ಅವರ ವಾದ ಅವುಗಳು ಕೊಳೆಯುವ ಪದಾರ್ಥಗಳು ನಾಟ್ ಅಲೋಡ್ ಎಂದು. ಇವರ ವಾದ ಒಂದೇ ಒಡೆದರೇ ಮಾತ್ರ ಅವುಗಳು ಹಾಳಾಗುತ್ತವೆ. ಅವುಗಳು ಇಡೀಯಾಗಿವೆಯಲ್ಲ. ಅವುಗಳು ಪೆರಿಷಬಲ್ ಅಲ್ಲ ಅಂತ. ಮತ್ತೆ ಅವರ ರಾಮಬಾಣ ವಾದ ಅದೇ “ನಿಮಗ್ಗೊತ್ತಾ ನನಗ್ಗೊತ್ತಾ”  ಅಂತ ಹೇಳಿ ಅವುಗಳನ್ನ ತಮ್ಮ ಪಕ್ಕದಲ್ಲಿದ್ದ ಕ.ಬು.ಗೆ ಹಾಕಿದರಂತೆ. ನಮ್ಮ ಆ ಹಿರಿಯ ಹೆಂಗಸಿನ ವಾದ ಸರಿಯೆನಿಸಿದರೂ ಅವರಿಗೆ ನ್ಯಾಯ ಸಿಕ್ಕಲಿಲ್ಲ. ಜೀವನದಲ್ಲೂ ಹಾಗೇ ಅಲ್ಲವೇ ? ನೀವು ಎಷ್ಟೇ ನಿಯತ್ತಿನಿಂದ ಇದ್ದರೂ ನಿಮಗೆ ಕಷ್ಟ ತಪ್ಪಲ್ಲ. ಆದಕಾರಣ ನಾನು ಹೇಳುವುದು ಎರಡು ವಿಮಾನಾಶ್ರಯಗಳ ನಡುವಿನ ಆ ಪ್ರಯಾಣ ಯಾವ ಜೀವನದ ಪ್ರಯಾಣಕ್ಕಿಂತ ಕಮ್ಮಿ ಏನಲ್ಲ ಅಂತ.                                                 ******************************

ಆಕಾಶಯಾನವೂ ಆಧ್ಯಾತ್ಮಿಕ ಚಿಂತನೆಯೂ Read Post »

ಕಾವ್ಯಯಾನ, ಗಝಲ್

ಗಝಲ್

ಗಝಲ್ ಮರುಳಸಿದ್ದಪ್ಪ ದೊಡ್ಡಮನಿ ನಿನ್ನ ಹೃದಯದ ನೋವು ಅರಿಯದಾಯಿತು ಗೆಳತಿಪ್ರೀತಿಯ ಆಳಕಿಳಿದು ಕೇಳಿ ತಿಳಿಯದಾಯಿತುಗೆಳತಿ ಮನವೆಲ್ಲ ಸೋತು ಮೆತ್ತಗಾಗಿ ಹೋದೆ ನಾನುಮೌನವೆ ಉಸಿರಾಗಿ ಮಾತು ಬಾರದಾಯಿತು ಗೆಳತಿ ಒಲವನೆಲ್ಲ ತಂದು ಸುರಿದರೂ ನಿನಗೆ ತಿಳಿಯಲಿಲ್ಲಗಾಯಗಳ ಬರೆಗೆ ಜೀವ ಮೇಲೇಳದಾಯಿತು ಗೆಳತಿ ಜೀವ ಶವವಾಗಿ ನರಳುತಿದೆ ನಿನ್ನೆಡೆಗಿನ ಆಸೆಗೆಬರುವಿಕೆಗೆ ಕಾದು ಜೀವ ಶವವಾಯಿತು ಗೆಳತಿ ಕಂಡ ಕನಸುಗಳೆಲ್ಲ ನುಚ್ಚು ನೂರಾದವು ನಿನಗಾಗಿಮರುಳನ ಕಣ್ಣಿರಧಾರೆ ನದಿಯಾಗಿ ಹರಿದೊಯಿತು ಗೆಳತಿ *********************************

ಗಝಲ್ Read Post »

ಕಾವ್ಯಯಾನ

ಕವಿತೆ.

ಕವಿತೆ ವಾಯ್.ಜೆ.ಮಹಿಬೂಬ ನೀ ಬರುವಾ ಹಾದಿಯೊಳಗೆಗಿರಿಮಲ್ಲೆ ಹಾಸಲೇನ ?ನಾ ನೆರಳಾಗಿ ನಿಲ್ಲಲೇನ !? ನೀ ಹಾಡೋ ರಾಗದಲ್ಲಿಧ್ವನಿಯಾಗಿ ಕೇಳಲೇನ ?ನಾ ರಸವಾಗಿ ಸುರಿಯಲೇನ ? ನೀ ಕುಡಿವ ಪ್ರಾಣ ಹನಿಗೂಮದುವಾಗಿ ಬೆರೆಯಲೇನ ?ನಾ ತತ್ರಾಣಿಯಾಗಲೇನ ? ನಿನ್ನ ನವಿಲುಗರಿಕೆ ಜಡೆಗೆಪಚ್ಚೆ ಮಲ್ಲೆ ತೊಡಿಸಲೇನ-?ದಳ ಕಮಲ ಹೊದಿಸಲೇನ-? ಕರುನಾಡ ಕಣ್ಣ ಹೆಣ್ಣೆಮಗುವಾಗಿ ಪಡೆಯಲೇನನಾ ಗುರುವಾಗಿ ಕರೆಯಲೇನ ? *****************************

ಕವಿತೆ. Read Post »

ಕಾವ್ಯಯಾನ

ಭಾವಗಳ ಹಕ್ಕಿ

ಕವಿತೆ ವಿದ್ಯಾ ಶ್ರೀ ಎಸ್ ಅಡೂರ್ ಭಾವಗಳ ಹಕ್ಕಿಗೆ ಹಾರುವುದೇ ಕೆಲಸಒಮ್ಮೆ ಆ ಮರ..ಒಮ್ಮೆ ಈ ಮರ..ಮಗದೊಮ್ಮೆ…..ಮತ್ತೊಂದು. ಗಮನಿಸಿದ್ದೇನೆ ನಾನು ಬಗೆ ಬಗೆ ಹಕ್ಕಿಗಳಸಂಜೆ ಹೊತ್ತು ನನ್ನ ಕೈತೋಟದಲ್ಲಿಭಿನ್ನ…ಭಿನ್ನ…ಒಂದೊಂದೂ. ಕೆಲವು ಗುಂಪು ಗುಂಪುಗಳವಾದರೆಕೆಲವದೋ….ಬರೀ ಗದ್ದಲ,ಇನ್ನು ಕೆಲವು ಮೌನವಾಗಿದ್ದರೆ..ಮತ್ತೂ ಕೆಲವು ಬರೀ…ಒಂಟಿ. ಬಣ್ಣ ಬಣ್ಣದ ರಂಗೋಲಿಯಂತೆ ಕೆಲವಾದರೆ,ಹಸಿರು ಮಧ್ಯೆ ಐಕ್ಯವಾದಂತೆ ಕೆಲವುನಾವಿರುವುದೇ ಹೀಗೆಂಬ ಮಾಸು ಬಣ್ಣದವು ಕೆಲವಾದರೆ,ಒಂಟಿಯಾಗಿರುವ ಕಪ್ಪು ಹಕ್ಕಿ ಮೇಲೇ….ನನಗೆ ಒಲವು. ತುಂಬೆ ಗಿಡದಲ್ಲೂ ಕೊಂಬೆ ಕೊಂಬೆಗೆ ಹಾರುವ ಪುಟ್ಟ ಹಕ್ಕಿ,ಒಂದು ಹೋದಲ್ಲೆಲ್ಲ ಇನ್ನೊಂದೂ ಹೋಗುವ ಜೋಡಿ ಹಕ್ಕಿ,ಕಾಳು ಕಂಡರೆ ತನ್ನವರ ಕರೆವ ಗುಂಪು ಹಕ್ಕಿ,ಗಾಜಿನ ಕಿಟಕಿಯ ತೂತು ಮಾಡಿಯೇ ಸಿದ್ಧ ಎಂಬಂತ ಹಠಮಾರಿ ಹಕ್ಕಿ , ಹೀಗೇ ..ಎಲ್ಲಾ ಹಕ್ಕಿಗಳಲ್ಲಿಯೂ ಕಾಣುವೆನು ನಾನು ನನ್ನನ್ನೇ..ನನ್ನದೇ ಭಾವ…ನನ್ನದೇ ನೋವು…ನಲಿವುಪ್ರಕೃತಿಯೇ ಹಾಗೆ…ನಮ್ಮ ನೋಟಕ್ಕೆ ತಕ್ಕಂತೆ ಅದರ ಅರ್ಥಆ ಅರ್ಥ ಹುಡುಕುವ ಏಕಾಂತದತ್ತವೇ…ನನ್ನ ಸೆಳವು. ********************************

ಭಾವಗಳ ಹಕ್ಕಿ Read Post »

ಕಾವ್ಯಯಾನ, ಗಝಲ್

ಗಝಲ್

ಗಝಲ್ ರೇಷ್ಮಾ ಕಂದಕೂರ. ಹಸಿವಿನಿಂದ ಕಂಗೆಟ್ಟವರ ತೊಳಲಾಟ ನೋಡದಾಗಿದೆಕೃಶ ದೇಹದ ಅಧೋಗತಿಯ ಪರಿಸ್ಥಿತಿ ನೋಡದಾಗಿದೆ ಕಮರಿದೆ ಭರವಸೆಯ ಬೆಳಕು ಮಂದಾಗ್ನಿಯಲಿಹಣೆಬರಹದ ಕ್ರೂರತನ ಮದವೇರಿದನು ನೋಡದಾಗಿದೆ ತುತ್ತಿನ ಚೀಲ ತುಂಬಿಸಲು ಕಗ್ಗಂಟಾಗಿ ಹೋಗಿದೆಆ ದೇವನ ದೂಷಿಸತ ದಿನ ದೂಡುವದನು ನೋಡದಾಗಿದೆ ತಿಂದು ತೇಗಿ ಬಿಸಾಕುವ ಜನಕೆ ತಿಳಿಯಬಾರದೇಕೊಳ್ಳುಬಾಕ ಮನೋಭಾವದಿ ಮೆರೆಯುವವರ ನೋಡದಾಗಿದೆ ಪರಿಹಾರಕೆ ರೇಷಿಮೆಯ ಮನ ಮರುಗಿ ತಡಕಾಡಿದೆಪಿಷ್ಟ ಹೊತ್ತು ಕುಚೇಷ್ಟೆ ಮಾಡುವವರ ನೋಡದಾಗಿದೆ. ****************************

ಗಝಲ್ Read Post »

ಕಾವ್ಯಯಾನ

ಅವಳು ಮತ್ತು ಅಗ್ಗಿಷ್ಟಿಕೆಯು..!!

ಕವಿತೆ ವೀಣಾ ಪಿ. ಧೋ………. ಎಂದೆನುತೆ ಸುರಿಮಳೆಯ ದಾರ್ಢ್ಯತೆಯ ಗಡ-ಗಡನೆ ನಡುಗಿಸುವ ತಣ್ಣೀರ ಧಾವಂತಕೆ ತೊಯ್ದ ಕಾಯವ ಮುಚ್ಚಿಟ್ಟ ಸೀರೆಯ ಸೆರಗಿನಂಚನು ಹಿಂಡುತಲಿ ಗುಡುಗು-ಮಿಂಚಿನ ಸೆಡವಿಗೆ ಭಯಗೊಂಡ ಹುಲ್ಲೆಯಂತಾದ ಭಾವದಲಿ ಬರದೂರ ಬಯಲಿಂದ ಕಟ್ಟಿಗೆಯನಾಯಲು ಕಾನನಕೆ ಬಂದಾಕೆ ಸಂಜೆ ಮಳೆಗೆ ಸಿಲುಕಿರಲು ಕತ್ತಲಾವರಣದಂಜಿಕೆಗೆ ದೂರದಂಚಿನ ಬೆಳಕು ಅರಸುತ್ತಲೋಡುತ್ತ ಅದಾವುದೋ ಹಿತ್ತಲಿನ ಹೊಚ್ಚನೆಯ ತಾವತ್ತ ಹೊರಳಿಸಿರೆ ಅಂಜುತಲಿ ಜಿಂಕೆ ಕಣ್ಗಳನು ಬೆಳದಿಂಗಳಂತಿವಳ ಸೆಳೆದು ಕಾವು ಕೊಡುವೆನೆಂದೆಂಬ ಕಾಮದಲಿ ಅಗ್ಗಿಷ್ಟಿಕೆಯೊಂದು ಉರಿಜ್ವಾಲೆಯಾಡಂಬರ ತೋರುತಿರೆ.. ತಾ ತೋಯ್ದ ಗತಿ ಮರೆತು ಚಡಪಡಿಕೆ ಪುಟಿಸುತ್ತ ಹೊರಟೇ ಬಿಟ್ಟಳಾಕೆ ತನ್ನಿರುವಿಲ್ಲದೇ ತೊಟ್ಟಿಲಲಿ ಕನಲುತಿಹ ಕಂದನ ಕನವರಿಕೆಯಲಿ.. ಇತ್ತ ಅಗ್ಗಿಷ್ಟಿಕೆ ಬಳಿ ಸಾರದವಳನ್ನು ಹಳಿಯುತ್ತ ಕೆಂಡ ಕೆದರಿ ಮತ್ತೊಂದು ಹೊಸ ಜಿಂಕೆ ಬಂದೀತು ಬಳಿ ಸಾರಿ ಎಂಬಂತೆ ಧಗ-ಧಗನೆ ಉರಿಯುತ್ತಿತ್ತು..!! ***********************

ಅವಳು ಮತ್ತು ಅಗ್ಗಿಷ್ಟಿಕೆಯು..!! Read Post »

You cannot copy content of this page

Scroll to Top