ಕಾವ್ಯಯಾನ
ಗಝಲ್ ಸುಜಾತ ಲಕ್ಷ್ಮೀಪುರ ಮಾತು ಮಾತಿಗೆ ಕಿಡಿ ತಾಗಿಸಿ ಸುಡುವುದು ಸಹಜ ಧರ್ಮವಲ್ಲಸುಮ್ಮನೇ ಮೌನದ ಅಗಾಧ ಕೂಪಕೆ ದೂಡುವುದು ಸರಿಯಲ್ಲ. ಮೌನವೂ ಮಣಭಾರವಾಗಿ ಕಾಡುವುದಿಲ್ಲವೆ ಏಕಾಂತದಿಕಣ್ಣಿನಲ್ಲೇ ಒಲವನು ಸೂಸಬಹುದು ಕೊಲ್ಲುವುದು ತರವಲ್ಲ ತಪ್ಪು ಮಾಡಿ ಕ್ಷಮೆ ಕೇಳುವುದೇ ದೊಡ್ಡ ವಿಚಾರವಲ್ಲಾಪ್ರೀತಿಗೆ ಶರಣಾಗಲು ಅಹಂಕಾರ ಸರಿಸುವುದು ಸೋಲಲ್ಲ ಬೆಳಕು ಮೂಡಲು ತಮವು ಅಳಿದೂ ಜಗವೆಲ್ಲಾ ಬೆಳಗುತ್ತದೆಮೈಮನವೆಲ್ಲ ಆವರಿಸಲು ಒಲವಲ್ಲದೆ ಬೇರೆ ಪಥವಿಲ್ಲ ಶಿವೆ,ಕಾಡುವ ಬಳ್ಳಿ ಬಿಡಿಸಿಕೊಳ್ಳುವುದು ಸಾಧ್ಯವೆ ನಿನ್ನಂತೆಎರಡಳಿದು ಒಂದಾಗಲು ಸವಿ ಪ್ರೇಮವಲ್ಲದೆ ಜಗವಿಲ್ಲ *******************************.
ಕಾವ್ಯಯಾನ
ನಿನ್ನ ಸೇರೋ ತವಕ ಪ್ಯಾರಿಸುತ ನಿನ್ನೂರು ದಾರಿಯು ಸವಿದಷ್ಟುದೂರಹವೆ ತುಂಬಿದ ಗಾಲಿಗಳು ಉರುಳಿದಷ್ಟುಮತ್ತಷ್ಟು ದೂರಉರುಳಿ ಹೊರಟ ಗಾಲಿಯಲ್ಲಿ ಹವೆಯಿತ್ತುನಿನ್ನ ನೆನೆದು ಬರುತ್ತಿರುವ ನನ್ನಲ್ಲಿ ಚಲವಿತ್ತುಪ್ರಯಾಸಗೊಂಡೆ,ಅನಾಯಾಸಗೊಂಡೆಕತ್ತಲು ಆವರಿಸಿದ ಕಪ್ಪು ಹೊಲದ ನಟ್ಟ ನಡುವೆಬೆಳೆದಿದ್ದ ಒಂಟಿ ಬೇವಿನಮರದಬುಡದಲ್ಲಿ ಮಗ್ಗಲು ಭುವಿಗೆ ಹೊಂದಿಸಿಮಲಗಿಕೊಂಡುನಿನ್ನ ಸೇರೋ ಕನಸು ಕಾಣುತ್ತಿದ್ದೆಕನಸನ್ನು ಭಗ್ನ ಮಾಡಿ,ಮತ್ತೆನಿನ್ನೂರು ದಾರಿ ಹಿಡಿಯಲುಪ್ರೇರೇಪಿಸಿದ್ದು ಅದೇ ಸೊಳ್ಳೆಅದು ನೀನೋ ಅಥವಾ ನಿಜವಾಗಿಯೂ ಸೊಳ್ಳೆಯೂತರ್ಕಕ್ಕೆ ಇಳಿಯುದಿಲ್ಲಅದು ಕಚ್ಚಿ ಹೋದ ಜಾಗದಲ್ಲಿ ನೀ ಕಚ್ಚಿದ ಹೋಲಿಕೆಯಿದೆದಾರಿಯುದ್ದಕ್ಕೂ ಮೈಲುಗಲ್ಲಿನ ಮೇಲೂ ನಿನ್ನದೇಸ್ವಾಗತಗೀತೆ,ಅದೆಷ್ಟು ಚಂದ ಅನ್ನುತ್ತಿಯಾ…?ನೋಡುತ್ತಾ,ಕೇಳುತ್ತಾ ಅಲ್ಲೇ ನಿಂತುಬಿಡಬೇಕುಇಲ್ಲ,ನಿನ್ನ […]
ಅನುವಾದ ಸಂಗಾತಿ
ಧಗೆ ಕನ್ನಡ ಮೂಲ; ಸುನೀತಾ ಕುಶಾಲನಗರ ಇಂಗ್ಲೀಷಿಗೆ:ಸಮತಾ ಆರ್ ಅದು ನಾಲ್ಕನೆಯ ಪಂಚಾಯತಿ ಬಾವಿ ಇನ್ನೂನೀರಿತ್ತೆನ್ನುವ ಕುರುಹೆಲ್ಲಿ ?ಹುಡುಕುವ ಕಣ್ಣೆವೆಗಳಿಗೆ ಯುದ್ಧಮುಂದೆ ಸಾಗಿ ಪ್ರಯೋಜನವಾದರೂ ಏನುಬಿಸಿಲ ಧಗೆಗೆ ರಿವರ್ಸ್‌ಗೇರ್ ಹಾಕಿದಭಯದ ಬೆವರ ಹನಿಕಣ್ಣುಗಳಿಗೆ ಬೀಗ ಜಡಿದುಕಂಡಿದ್ದ ಜಲರಾಶಿ ಮತ್ತೆ ಕಂಡೆಕಣ್ಣ ಹನಿ, ಬೆವರ ಹನಿಜೊತೆಗೂಡಿ ಬಿಟ್ಟ ಕಣ್ಣುಆಲಿಕಲ್ಲು ಅರಸಿಎಡವಿದ ಕಲ್ಲಿಗೆ ರಕ್ತದೋಕುಳಿಆಕಾಶದ ಹೃದಯ ಕಲ್ಲಾಗಿದೆಪಾದಪಗಳೂ ಚಲನ ಹೀನನದಿಯ ಬೆಸುಗೆಯಲ್ಲೂ ವಿರಸನರರ ವಿಲಾಸಿ ಜೀವನಈಗ ಸಣಕಲಾದ ಇಳೆಒಗಟು ಮಾತ್ರಬಾವಿಯ ಎಡಭಾಗದ ಮೂರನೆಯಒಣಗಿದ ಗದ್ದೆ ನಕ್ಕು ಹೇಳಿದೆ That is […]
ನನ್ನ ಇಷ್ಟದ ಕವಿತೆ
ಪೂಜಾ ನಾಯಕ್ ಬೆಳಗು ಜಾವ ರಚನೆ :ದ. ರಾ. ಬೇಂದ್ರೆ ಏಳು ಚಿನ್ನ, ಬೆಳಗಾಯ್ತು ಅಣ್ಣ, ಮೂಡಲವು ತೆರೆಯೆ ಕಣ್ಣ, ನಕ್ಷತ್ರ ಜಾರಿ, ತಮವೆಲ್ಲ ಸೋರಿ, ಮಿಗಿಲಹುದು ಬಾನ ಬಣ್ಣ ಜೇನ್ನೊಣದ ಹೆದೆಗೆ, ಹೂಬಾಣ ಹೂಡಿ, ಜುಮ್ಮೆಂದು ಬಿಟ್ಟ ಮಾರ ಗುಡಿಗೋಪುರಕ್ಕು, ಬಲೆ ಬೀಸಿ ಬಂದ, ಅಗೋ ಬೆಳಕು-ಬೇಟೆಗಾರ. ನಿಶೆಯಿಳಿದ ಉಷೆಯ, ಎಳನಗೆಯ ಬಗೆಗೆ, ಸೋತಿರಲು ಜಗವು ಸವಿಗೆ ಕಣ್ಣಿದಿರು ಒಂದು, ಕಟ್ಟಿತ್ತು ಕನಸು; ಕೂಗೊಂದು ಬಂತು ಕಿವಿಗೆ. ಮಕ್ಕಳಿರ ಕೇಳಿ, ರಸ ಕುಡಿಯಲೇಳಿ, ಹುಸಿನಿದ್ದೆಗಿದ್ದೆ ಸಾಕು […]