Day: August 13, 2020

ಏಕಾಂತವೆಂಬ ಹಿತ

ಕವಿತೆ ಏಕಾಂತವೆಂಬ ಹಿತ ಶ್ರೀದೇವಿ ಕೆರೆಮನೆ ಇಷ್ಟಿಷ್ಟೇ ದೂರವಾಗುವನಿನ್ನ ನೋಡಿಯೂ ನೋಡಲಾಗದಂತೆಒಳಗೊಳಗೇ ನವೆಯುತ್ತಿದ್ದೇನೆಹೇಳಿಯೂ ಹೇಳಲಾಗದಒಂಟಿತನವೆಂಬ ಕೀವಾದ ಗಾಯಕ್ಕೀಗಮಾಯಲಾಗದ ಕಾಲಮುಲಾಮು ಸವರಲು ನಿರಾಕರಿಸುತ್ತಿದೆಅಸಹಾಯಕಳಾಗಿ ನೋಡುತ್ತಿದ್ದೇನೆನಮ್ಮಿಬ್ಬರ ನಡುವೆಕ್ಷಣ ಕ್ಷಣಕ್ಕೂ ಹೆಚ್ಚುತ್ತಿರುವ ಅಂತರವನ್ನು ಎಂದೋ ಆಡುವ ಎರಡೇ ಎರಡುಮಾತಿನ ನಡುವೆಯೇಒತ್ತರಿಸಿ ಬರುವ ಯಾವುದೋ ರಾಜಕಾರ್ಯಮಾತು ಹಠಾತ್ತನೆ ನಿಂತುಒಂದು ನಿಮಿಷ ಎಂದು ಹೊರಟ ನಿನಗೆಕಾಲ ಗಳಿಗೆಗಳ ಹಂಗಿಲ್ಲಕಾದು ಕುಳಿತ ನನಗೆ ಮಾತ್ರಪ್ರತಿ ಕ್ಷಣವೂ ವರುಷವಾಗುತ್ತಿರ ಭಯ ಮತ್ತೆ ಮಾತನಾಡುವ ಸಮಯಕ್ಕಾಗಿನಾನು ಜಾತಕಪಕ್ಷಿಯಾಗಿ ಕಾಯುತ್ತಿದ್ದರೆಎಂದೂ ಮುಗಿಯದ ನಿನ್ನ ಕೆಲಸಗಳುಈ ಜನ್ಮದಲ್ಲಿ ಮಾತನಾಡಲು ಬಿಡದಂತೆಸದಾ ಸತಾಯಿಸುತ್ತವೆ […]

ಷರತ್ತು

ಕವಿತೆ ಷರತ್ತು ಮಾಂತೇಶ ಬಂಜೇನಹಳ್ಳಿ ಈಗ ಮಳೆ ಬಿಟ್ಟಿದೆ.ಅವಳ ನೆನಪುಗಳ ಹದವಾಗಿ,ಎದೆಯ ಬಾಣಲೆಯೊಳಗೆ,ಕಮ್ಮಗೆ ಹುರಿಯುವ ಸಮಯ.. ಚಿಟಪಟವೆಂದು ಒಂದಷ್ಟು,ಜೋಳದ ಕಾಳುಗಳಂತೆನೆನಪ ಬಿಸಿಗೆ ಸಿಡಿದಾವು.ಸಾವಧಾನಕ್ಕಾಗಿ ನೆನೆವ ಉರಿ ತಗ್ಗಿಸುವುದು,ಹೃದ್ಯೋಧರ್ಮ.. ನಿಗವಿಡುತ್ತೇನೆ. ಮಳೆಗೂ ಗೊತ್ತು ಧೋ!!ಎಂದುಒಂದೇ ಸಮನೆ ಸುರಿದರೆ,ಒಬ್ಬ ಪ್ರೇಮಿ ಅವಳಿಗಾಗಿ ಪರಿತಪಿಸುವುದಿಲ್ಲವೆಂದೂ,ನೆನಪಿಸುವುದಕ್ಕೆ ನೆಲ ರಾಚುವಹನಿಗಳ ಕರತಾಡನ ಸುಖಾ ಸುಮ್ಮನೆ ಅಡ್ಡಿಯಾದೀತೆಂದು. ಗರಕ್ಕನೆ ನಿಂತು ಬಿಟ್ಟರೆ ಅಬ್ಬಬ್ಬಾ!ಹುಬ್ಬೆ ಮಳೆ ಸುರಿದು ಸಮ ರಾತ್ರಿಗೆ,ಮಲಗಿದ ಬೆಳಗಿಗೆ ಮೃದು ನೆಲದಲ್ಲಿ,ಮನೋಸೆಳೆವ ಅಣಬೆಗಳಂತೆ ಉಬ್ಬುವಆಕೆಯ ನೆನಪುಗಳು ದಾಂಗುಡಿಯಾಗುತ್ತವೆ. ಮುಂದಿನದ್ದು ನಿರತ ಅನುಭವಿಸುವ,ನಾನು ಮಾತ್ರ ನನ್ನೊಳಗೆ,ಆಕೆಯ […]

ಹೊಸ ಶಿಕ್ಷಣ ನೀತಿ

ಅನುಷ್ಠಾನವಾದೀತೇ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦? ಗಣೇಶ್ ಭಟ್ ಶಿರಸಿ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ ಕ್ಕೆ ಕೇಂದ್ರ ಸರ್ಕಾರದ ಒಪ್ಪಿಗೆ ನೀಡಿದ ಬೆನ್ನಲ್ಲೇ ಈ ನೀತಿಯ ಪರ ಮತ್ತು ವಿರೋಧಿ ಹೇಳಿಕೆಗಳು, ಲೇಖನಗಳು ಪ್ರಕಟವಾಗುತ್ತಿವೆ. ಹೊಸ ಶಿಕ್ಷಣ ನೀತಿಯು ಇಂದಿನ ಶಿಕ್ಷಣ ವ್ಯವಸ್ಥೆಯನ್ನು ಬದಲಾಯಿಸುವುದರ ಜೊತೆಗೆ ಇಡೀ ರಾಷ್ಟ್ರವನ್ನು ಪರಿವರ್ತಿಸುವ ಸಾಮರ್ಥ್ಯವನ್ನು ಹೊಂದಿದೆಯೆಂದು ಕೇಂದ್ರ ಸರ್ಕಾರ ಹೇಳಿಕೊಳ್ಳುತ್ತಿದೆ.ಈ ಶಿಕ್ಷಣ ನೀತಿಯನ್ನು ಹೊಸ ಅವಿಷ್ಕಾರ, ಹೊಸ ಮನ್ವಂತರದ ಹರಿಕಾರ ನೀತಿ ಮುಂತಾಗಿ ಬಿಂಬಿಸಲಾಗುತ್ತಿದೆ. ಲಭ್ಯತೆ, ಸಮಾನತೆ, ಗುಣಮಟ್ಟ, […]

ಕೈ ಚೀಲ

ಕೈ ಚೀಲ ಬಿ.ಶ್ರೀನಿವಾಸ ಆ ಹುಡುಗನ ಹೆಸರಿಡಿದು ಯಾರೂ ಕರೆಯುವುದಿಲ್ಲ.ಎಲ್ಲರೂ ಕರೆಯುವುದೇ ‘ಕೈಚೀಲ’ ಎಂದೆ.ತನ್ನ ಕುಂಟುಗಾಲಿನಲಿ ಹೋಗುವಾಗ ಯಾರಾದರೂ “ಕೈ ಚೀಲಾ…”ಕೂಗಿದರೆ ಸಾಕು ತಕ್ಷಣ ನೋಡುತ್ತಾನೆ.ಅವನಿಗೆ ಬಹಳವೆಂದರೆ ಐದೋ ಆರೋ ವರುಷವಿದ್ದೀತು. ಅವ್ವನ ಬಿಟ್ಟರೆ ಅವನಿಗೆ ಬೇರೆ ಜಗತ್ತು ಇಲ್ಲ. ಬಣ್ಣದ ಸಂಜೆಗಳೆಂದರೆ ಅವನಿಗಿಷ್ಟ. ಯಾಕೆಂದರೆ ಅವನವ್ವ ಸಂಜೆಯಾದಂತೆಲ್ಲ ಸುಂದರವಾಗಿ ಕಾಣುವಂತೆ ಅಲಂಕರಿಸಿಕೊಳ್ಳುತ್ತಾಳೆ. ಆ ಪಾಂಡ್ಸ ಪೌಡರಿನ ಪರಿಮಳ ಸಂಜೆಗಳನ್ನು ಅರಳಿಸುತ್ತದೆ. ಸಲೀಸಾಗಿ ಅವ್ವನ ಕೈ ಹಿಡಿದು ನಡೆಯುತ್ತಾನೆ. ಅಷ್ಟರಲ್ಲಿ ಯಾರಾದರೂ ಕೈ..ಚೀ..ಲಾ..!ಪಿಸುಗುಟ್ಟಿದರೂ ಸಾಕು ಅವನು ಅಲ್ಲಿಗೆ […]

ಅಂಗಳದ ಚಿಗುರು

ಕವಿತೆ ಅಂಗಳದ ಚಿಗುರು ಬಿರುಕು ಬಿಟ್ಟ ಗೋಡೆಯ ಮೌನದಲಿಅಜ್ಞಾತ ಹಕ್ಕಿಯ ಗೂಡೊಂದು ಮುಗಿಲ ಕೂಗುತಿತ್ತು ಅಂಗಳ ತುಂಬಿದ ನೀರಿನ ದಡದಲಿಮರಿಗಳ ಹಿಂಡು ಕಣ್ಣಾಮುಚ್ಚಾಲೆ ಆಡುತಪೇಪರ ಬೋಟಿನ ಕಣ್ಣೊಳಗೆಅಲೆಗಳ ಲೆಕ್ಕದಲಿ ಮೈಮರೆತವು ಅವಳು ಬಿಡುಗಣ್ಣಲಿಪಾದಕ್ಕೆರಗಿದ ಗಾಯದ ಸಲಾಕೆ ಜಾಡಿಸುತ್ತಗೋಗರಿವ ಮುಳ್ಳುಗಳ ಹೃದಯದಲಿಕಸಿ ತುಂಬೊ ರಸದ ಮುಲಾಮಾದಳು ಬಿರುಕ ಗೋಡೆಗಳ ನಡುವೆಬೆಸುಗೆಯ ಚಿತ್ತ ಬೆನ್ನೊಳಗ ಬಿಗಿದುಕೊಂಡುಹರಿವ ತೊರೆಯಲಿ ತೇಲಿ ಬರೋ ನಾವೆಯಾದಳು ಉರಿವ ಒಲೆಗಳಲಿ ಗುಪ್ತ ಬೂದಿಯಾಗಿತೇದು ತೇಗಿ ನಕ್ಷತ್ರಗಳ ನೆಲಕ್ಕಿಳಿಸಿಗುಡಿಸಲು ಕಣ್ಣೊಳಗೆಸದಾ ಹುಣ್ಣಿಮೆಯ ಚಂದಿರ ಚಿತ್ರಿಸಿಬೆಳದಿಂಗಳ ನಕ್ಷೆಯಾದಳು ಅಂಗಳದ […]

ನನ್ನ ಇಷ್ಟದ ಕವಿತೆ

ನನ್ನ ಇಷ್ಟದ ಕವಿತೆ ಡಾ.ಎಂ.ಗೋಪಾಲಕೃಷ್ಣ ಅಡಿಗ ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನುಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು ಹೂವು ಹಾಸಿಗೆ ಚಂದ್ರ ಚಂದನ ಬಾಹುಬಂಧನ ಚುಂಬನಬಯಕೆ ತೋಟದ ಬೇಲಿಯೊಳಗೆ ಕರಣ ಗಣದೀ ರಿಂಗಣಒಲಿದ ಮಿದುವೆದೆ , ರಕ್ತ ಮಾಂಸದ ಬಿಸಿದು ಸೋಂಕಿನ ಪಂಜರಇಷ್ಟೇ ಸಾಕೆಂದಿದ್ದೆಯಲ್ಲೋ ? ಇಂದು ಏನಿದು ಬೇಸರ?ಸಪ್ತ ಸಾಗರದಾಚೆಯೆಲ್ಲೊಸುಪ್ತ ಸಾಗರ ಕಾದಿದೆಮೊಳೆಯದಲೆಗಳ ಮೂಕ ಮರ್ಮರ ಇಂದು ಇಲ್ಲಿಗೂ ಹಾಯಿತೇ?ಏನಿದೇನಿದು ಹೊರಳುಗಣ್ಣಿನ ತೇಲುನೋಟದ ಸೂಚನೆ?ಯಾವ ಸುಮಧುರ ಯಾತನೆ?ಯಾವ ದಿವ್ಯ ಯಾಚನೆ?ಮರದೊಳಡಗಿದ […]

“ಭವ”ದ ಬಂಧಗಳಲ್ಲೇ ಅರಳಿದ ಸಾರ್ಥಕ ಸಾಲುಗಳು

“ಭವ”ದ ಬಂಧಗಳಲ್ಲೇ ಅರಳಿದ ಸಾರ್ಥಕ ಸಾಲುಗಳು ಫೇಸ್ಬುಕ್ಕಿನ ತುಂಬ ಹರಡುವ ಪದ್ಯದ ಘಮಲಿಗೆ ತಮ್ಮ ದನಿಯನ್ನೂ ಸೇರಿಸಲು ಹಾತೊರೆಯುತ್ತಿರುವ ಅಸಂಖ್ಯ ಕವಿ ಮನಸ್ಸುಗಳ ನಡುವೆ ಕೊಟ್ರೇಶ್ ತಂಬ್ರಳ್ಳಿ ಅಮರಗೋಳಮಠ ಅವರದು ಗಮನಿಸಲೇಬೇಕಾದ ಹೆಸರು. ಸ್ವಲ್ಪ ಹದವೆನ್ನಿಸುವ ಯಾರದೇ ಕವಿತೆಗಳಿಗೆ ತಕ್ಷಣದ ಪ್ರತಿಕ್ರಿಯೆ ನೀಡುವ ಕೊಟ್ರೇಶ್ ಆಗೀಗ ತಮ್ಮ ರಚನೆಗಳನ್ನೂ ಈ ಸಾಮಾಜಿಕ ಜಾಲ ತಾಣದಲ್ಲಿ ಹರಿ ಬಿಟ್ಟು ಪ್ರತಿಕ್ರಿಯೆಗೆ ಕಾಯುತ್ತಾರೆ. ನಿಜಕ್ಕೂ ಚಂದ ಇರುವ ಅವರ ನಿಜದ ರಚನೆಗಳಿಗಿಂತ ತಕ್ಷಣಕ್ಕೆ ಕೋಪ ತರಿಸುವ, ಸ್ವಲ್ಪ ಒರಟೇ ಎನ್ನಿಸುವ […]

Back To Top