ಏಕಾಂತದಿಂದ ಲೋಕಾಂತಕ್ಕೆ

ಏಕಾಂತದಿಂದ ಲೋಕಾಂತಕ್ಕೆ

ಲೇಖಿಕಾ ಸಾಹಿತ್ಯ ವೇದಿಕೆ ಪುಸ್ತಕ ಪರಿಚಯ ಸಾರ್ಥ್ಯಕ್ಯ

ಡಿ.ಯಶೋದಾ

ವಿಶ್ವಕ್ಕೇ ಕೊರೋನ   ಕಾರ್ಮೋಡ ಕವಿದಿರುವ ಇಂತಹ ಕಾಲದಲ್ಲಿ ಎಲ್ಲರೂ ಒಟ್ಟಿಗೆ ಸೇರಿ ತಾಂತ್ರಿಕತೆಯ ಮೂಲಕ ಒಂದು ಗೂಡುವು ದು ವಿಶೇಷ. ಏಕಾಂತದಿಂದ ಲೋಕಾಂತಕ್ಕೆ ಎಂಬಂತೆ ತಂತ್ರ ಜ್ಞಾನದ ಮೂಲಕ ಸಂವಹನ ಮಾಡುವುದು ಇಂದಿಗೆ ಅತಿ ಮುಖ್ಯ ಎಂಬುದು ಹಿರಿಯ ಪತ್ರಕರ್ತೆ ಡಾ. ಆರ್. ಪೂರ್ಣಿಮಾ ಅಭಿಮತ.ಲೇಖಿಕಾ ಸಾಹಿತ್ಯ ವೇದಿಕೆ ಯ ನನ್ನ ಮೆಚ್ಚಿನ ಪುಸ್ತಕ ಪರಿಚಯದ ಫೇಸ್‌ಬುಕ್ ಲೈವ್ ಸರಣಿ ಕಾರ್ಯಕ್ರಮದ ಅವಲೋಕನದಲ್ಲಿ ಮಾತನಾಡಿದ ಅವರು, ಮಹಿಳೆ ತನ್ನ ಚಿಂತನೆ, ಅನಿಸಿಕೆಯನ್ನು ಹಂಚಿಕೊ ಳ್ಳುವುದಕ್ಕೆ ಇದಕ್ಕಿಂತ ಉತ್ತಮ ಸಾಧನ ಬೇರೆ ಏನಿದೆ ಎಂದು ಪ್ರಶ್ನಿಸಿದರೆ.

ಕೊರೋನಾ ಕಾರಣವಾಗಿ ಬಹಳಷ್ಟು ಮಂದಿ ಮನೆಯಲ್ಲಿ ಬಂಧಿ. ಆದರೆ ಮನಸ್ಸನ್ನು ಬಂಧಿಸಲು ಸಾಧ್ಯವೇ? ನಮ್ಮ ಕಲ್ಪನೆ, ಕನಸು,ಕ್ರಿಯಾಶೀಲತೆಯನ್ನು ಎಂದೂ ಬಂಧಿಸಲು ಸಾಧ್ಯವಿಲ್ಲ.ಕೊರೋನಾದಿಂದ ಒಂದು ರೀತಿಯಲ್ಲಿ ನಮಗೆ ನಿರ್ಬಂಧ ಉಂಟಾಗಿದ್ದರೂ ನಮ್ಮ ಹಲವಾರು ಚಟುವಟಿ ಕೆಗಳು ಸಮೃದ್ಧಿಗೊಳ್ಳುತ್ತಿವೆ. ಯಾರನ್ನೂ ಭೇಟಿಯಾಗದೆ, ಸಭೆ, ಸಮಾರಂಭಗಳು ನಡೆಯದೆ ಇರುವಂತಹ ಈ ಕಾಲದಲ್ಲಿ,ತಂತ್ರಜ್ಞಾನದ ಮೂಲಕ ಮನೆಯಲ್ಲಿಯೇ ಕೂತು ಜಗತ್ತನ್ನೇ ಸಂಚರಿಸುವ, ವೈವಿಧ್ಯಮಯ ಜನರನ್ನು ಭೇಟಿಯಾಗುವ, ವಿವಿಧ ವಿಚಾರಗಳನ್ನು ತಿಳಿದುಕೊಳ್ಳುವ ಸದಾವಕಾಶ ನಮ್ಮದು.

ಕತೆ, ಕವನ, ವಚನಗಳ ಗೋಷ್ಠಿಗಳು, ವಿವಿಧ ವಿಚಾರಗಳ ಮಂಡನೆ, ಸ್ತ್ರೀ ವಾದಿ ಚಿಂತನೆಗಳ ಚರ್ಚೆಗಳು,ಪುಸ್ತಕ ಗಳ ಪರಿಚಯ, ಹಾಡು, ನೃತ್ಯ… ಒಂದೇ ಎರಡೇ ಸಾಹಿತ್ಯ, ಸಾಂಸ್ಕೃತಿಕ ಕಲೆಗಳಿಗೆ ಸಂಬಂಧಿಸಿದಂತೆ ಹಲವಾರು ಕಾರ್ಯಕ್ರಮಗಳು ಫೇಸ್‌ಬುಕ್ ಲೈವ್‌ನಲ್ಲಿ ನಡೆಯುತ್ತಿವೆ. ನಮ್ಮ ನಮ್ಮ ವಿಷಯ ಮಂಡನೆಗಳಿಗೆ, ನಮ್ಮ ಪ್ರತಿಭಾ ಪ್ರದರ್ಶನಕ್ಕೆ ದೊಡ್ಡ ದೊಡ್ಡ ಸಮಾರಂಭಗಳೇ ಆಗಬೇಕೆಂ ದೇನಿಲ್ಲ,ನೂರಾರು ಜನರು ಸೇರಬೇಕು ಎಂದೂ ಇಲ್ಲ. ಫೇಸ್‌ಬುಕ್ ವೇದಿಕೆಯಲ್ಲಿ, ನಮ್ಮ ಚೌಕಟ್ಟಿನಲ್ಲಿ ಅಚ್ಚು ಕಟ್ಟಾಗಿ ಮನಮುಟ್ಟುವಂತಹ ಕಾರ್ಯಕ್ರಮಗಳು ಜರುಗು ತ್ತಿರುವುದು ಜಗಮೆಚ್ಚುಗೆಗೆ ಕಾರಣವಾಗಿದೆ.ಇಂದಿನ ಪರಿ ಸ್ಥಿತಿಯನ್ನು ಅನುಕೂಲಕರವಾಗಿ ಮಾಡಿಕೊಂಡು ಬೆಂಗ ಳೂರಿನ ಲೇಖಿಕಾ ಸಾಹಿತ್ಯ ವೇದಿಕೆಯು ಲೇಖಕಿಯರ ಮೂಲಕ ವಿವಿಧ ಪುಸ್ತಕಗಳನ್ನು ಪರಿಚಯಿಸುವ ಕಾರ್ಯ ಕ್ರಮ ಮಾಡಿದ್ದು ಸ್ಫೂರ್ತಿದಾಯಕವಾಗಿದೆ.

ಲೇಖಿಕಾ ಸಾಹಿತ್ಯ ವೇದಿಕೆಯ ನನ್ನ ಮೆಚ್ಚಿನ ಪುಸ್ತಕ ಪರಿಚ ಯ ಸರಣಿ ಕಾರ್ಯಕ್ರಮ ಫೇಸ್‌ಬುಕ್ ಲೈವ್‌ನಲ್ಲಿ ಒಂ ದೂವರೆ ತಿಂಗಳ ಕಾಲ ಮೂಡಿ ಬಂದು ಜನಪ್ರಿಯಗೊಂ ಡಿದೆ. ಇದರ ಯಶಸ್ಸು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ದ ಎಲ್ಲ ಲೇಖಕಿಯರಿಗೆ ಸಲ್ಲುತ್ತದೆ. ಇಂತಹ ವಿನೂತನ ಕಾರ್ಯಕ್ರಮದ ರೂವಾರಿ ಲೇಖಿಕಾ ಸಾಹಿತ್ಯ ವೇದಿಕೆಯ ಸಂಚಾಲಕರಾದ ಲೇಖಕಿ ಶೈಲಜಾ ಸುರೇಶ್ ಅವರು ವಿಶೇ ಷವಾಗಿ ಅಭಿನಂದನಾರ್ಹರು.ಈ ಕಾರ್ಯಕ್ರಮದ ಒಂದು ಗಮನಾರ್ಹ ಅಂಶವೆಂದರೆ ಈ ಫೇಸ್‌ಬುಕ್ ತಂತ್ರಜ್ಞಾನದ ಅರಿವಿಲ್ಲದವರು, ಅದಕ್ಕೆ  ತೊಡಗಿಕೊಳ್ಳದವರೂ ಸಹ ಇದರಲ್ಲಿ ಭಾಗವಹಿಸಿ ಸೈ ಎನಿಸಿಕೊಂಡದ್ದು. ಫೇಸ್‌ಬಕ್ ಲೈವ್‌ನಲ್ಲಿ ಕೆಲವೊಮ್ಮೆ ಗೊಂದಲವಿದ್ದದ್ದು ನಿಜ, ಆದರೆ ಮಹಿಳೆಯರು ಗಲಿಬಿಲಿಯಾಗಲಿಲ್ಲ.

೨೫ ಲೇಖಕಿಯರು ೨೫ ಕೃತಿಗಳು,ಕಾರ್ಯಕ್ರಮದಲ್ಲಿ ೨೫ ಲೇಖಕಿಯರು ೨೫ ಕೃತಿಗಳು ಮತ್ತು ೨೫ ಕೃತಿಕಾರರನ್ನು ಪರಿಚಯಿಸಿದರು. ಭೈರಪ್ಪನವರ ಪರ್ವ ಕಾದಂಬರಿಯಿಂ ದ ಶುರುವಾಗಿ ನುಗ್ಗೇಹಳ್ಳಿ ಪಂಕಜಾ ಅವರ ಮದುವೆ ಗೊ ತ್ತಾದಾಗ ಕೃತಿಯೊಂದಿಗೆ ಪುಸ್ತಕ ಪರಿಚಯ ಕಾರ್ಯಕ್ರಮ ಮುಕ್ತಾಯವಾಗುತ್ತದೆ.ಜೂನ್ ೧೯ರಂದು ಡಾ. ಜಯಂತಿ ಮನೋಹರ್  ಅವರು ಡಾ. ಎಸ್.ಎಲ್. ಭೈರಪ್ಪ ಅವರ ಪರ್ವ ಕಾದಂಬರಿಯನ್ನು  ಪರಿಚಯಿಸುವ ಮೂಲಕ ಲೇ ಖಿಕಾ ಸಾಹಿತ್ಯ ವೇದಿಕೆಯ ‘ನನ್ನ ಮೆಚ್ಚಿನ ಪುಸ್ತಕ ಪರಿಚ ಯ’ಸರಣಿ ಕಾರ್ಯಕ್ರಮದ ಪರ್ವವನ್ನು ಶುರುಮಾಡಿದ ರು.

ನಂತರ ಮಾಲತಿ ಮುದಕವಿ ಅವರು ಶಂಕರ ಮೊಕಾ ಶಿ ಪುಣೇಕರ ಅವರ ಗಂಗವ್ವ ಗಂಗಾಮಾಯಿ, ಶೈಲಜಾ ಸುರೇಶ್ ಅವರು  ಡಾ. ಎಸ್.ಎಲ್. ಭೈರಪ್ಪ ಅವರ ಗೃಹ ಭಂಗ, ಪ್ರಜ್ಞಾ ಮತ್ತಿಹಳ್ಳಿ ಅವರು ಜಯಂತ್ ಕಾಯ್ಕಿಣಿ ಅವರ ಚಾರ್‌ಮಿನರ್, ಡಿ.ಎನ್.ಗೀತಾ ಅವರು ಗಿರಿಮನೆ ಶ್ಯಾಮರಾವ್ ಅವರ ಒಂದು ಆನೆಯ ಸುತ್ತಾ, ವಿಜಯಾ ಗುರುರಾಜ್ ಅವರು ಭಾಗ್ಯಲಕ್ಷ್ಮೀ ಅವರ ತರಗು, ಸಹನಾ ಪ್ರಸಾದ್ ಅವರು ಬಿ.ಯು. ಗೀತಾ ಅವರ ಕೈಹಿಡಿದು ನಡೆಸೆನ್ನನು,  ಎ. ಎಸ್. ವಸುಂಧರಾ ಅವರು ಯು.ಆರ್. ಅನಂತಮೂರ್ತಿ ಅವರ ಸಂಸ್ಕಾರ, ಮಧುರಾ ಕರ್ಣಮ್ ಅವರು  ಶ್ರೀನಿವಾಸ ವೈದ್ಯ ಅವರ ಹಳ್ಳ ಬಂತು ಹಳ್ಳ,  ಕೃಷ್ಣಬಾಯಿ ಹಾಗಲವಾಡಿ ಅವರು ಕಮಲಾ ಹಂಪನಾ ಅವರ ಬಲಾಕ, ಡಿ. ಯಶೋದಾ ಅವರು ಬೇಬಿ ಹಾಲ್ದಾರ್ ಅವರ  ನೋವು ತುಂಬಿದ ಬದುಕು, ಸುಮಾ ವೀಣಾ ಅವರು ಡಿವಿಜಿ ಅವರ ಅಂತಃಪುರ ಗೀತೆಗಳು, ವಿಭಾ ಪುರೋಹಿತ್ ಅವರು ಕೆಎಸ್ ನರಸಿಂಹಸ್ವಾಮಿ ಅವರ ತೆರೆದ ಬಾಗಿಲು,  ಶಾಂತಲಾ ಸುರೇಶ್ ಅವರು ಸೋನು ಅವರ ಸಂಶಯದ ಬಲೆ, ಎಂ. ವಾಣಿ ಅವರು ಸುರೇಶ್ ಸೋಮಪುರ ಅವರ ಅಘೋರಿಗಳ ನಡುವೆ, ರತ್ನಾ ನಾಗರಾಜ್  ಅವರು ಮಾಣಿಕ್ ಬಂಡೋಪಾಧ್ಯಯ ಅವರ ಪ್ರಿಮಿವಾಲ್ ಮತ್ತು ಇತರ ಕತೆಗಳು, ಅರುಣಾ ಉದಯ ಭಾಸ್ಕರ್ ಅವರು ಗುರುರಾಜ ಕರ್ಜಗಿ ಅವರ ಕರುಣಾಳು ಬಾ ಬೆಳಕೆ,  ಶೈಲಜಾ ಪ್ರಸಾದ್ ಅವರು ನೇಮಿಚಂದ್ರ ಅವರ ಸಾವೇ ಬರುವುದಿದ್ದರೆ ನಾಳೆ ಬಾ,  ಲೇಖಿಕಾ ವೇದಿಕೆಯ ಹಿರಿಯ ಲೇಖಕಿ ಸತ್ಯವತಿ ರಾಮನಾ ಥ್ ಅವರು ಶ್ರೀ ಸಚ್ಚಿದಾನಂದ ಸರಸ್ವತಿ.

ಸ್ವಾಮೀಜಿಯವರ  ಗೀತಾ ಶಾಸ್ತ್ರೋಪದೇಶ ಸೋಪಾನ ಪಂಕ್ತಿ, ಇಂದಿರಾ ಶರಣ್ ಜಮ್ಮಲದಿನ್ನಿ ಅವರು ವಿವೇಕ್ ಶಾನ್‌ಬಾಗ್ ಅವರ ಹುಲಿಸವಾರಿ,ಎಲ್.ಎಚ್.ಶಕುಂತಲಾ ಅವರು ಶಿವರಾಮ ಕಾರಂತರ ಅಳಿದ ಮೇಲೆ, ಸುಶೀಲಾ ಸೋಮಶೇಖರ್ ಅವರು ನರಹಳ್ಳಿ ಬಾಲಸುಬ್ರಹ್ಮಣ್ಯಂ ಅವರ ಕೆ.ಎಸ್. ನರಸಿಂಹಸ್ವಾಮಿ, ಪರಿಣಿತಾ ರವಿ ಅವರು ಎ.ಆರ್. ಮಣಿಕಾಂತ ಅವರ ಅಪ್ಪನೆಂಬ ಆಕಾಶ,ನಾಗರ ತ್ನಾ ಮೂರ್ತಿ ಅವರು ಶತಾವಧಾನಿ ಆರ್. ಗಣೇಶ್ ಅವರ ಧೂಮದೂತ,ವಿನುತಾ ಹಂಚಿನಮನೆ ಅವರು ನೇಮಿಚಂ ದ್ರ ಅವರ ಯಾದ್ ವ ಶೇಮ್,  ಸವಿತಾ ನಾಗೇಶ್ ಅವರು  ನುಗ್ಗೇಹಳ್ಳಿ ಪಂಕಜಾ ಅವರ ಮದುವೆ ಗೊತ್ತಾದಾಗ ಪುಸ್ತ ಕಗಳನ್ನು ಪರಿಚಯಿಸಿದರು.

ಹಿರಿಯ ಲೇಖಕಿಯರ ಅವಲೋಕನ ಐದು ವಾರದ ಈ ಕಾರ್ಯಕ್ರಮದ ಬಗ್ಗೆ ಮತ್ತೊಂದು ವಾರ ಐದು ಹಿರಿಯ ಲೇಖಕಿಯರಾದ ಬಿ.ಯು. ಗೀತಾ, ವನಮಾಲ ಸಂಪನ್ನ ಕುಮಾರ್, ಕಾನ್ಸೆಪ್ಟಾ ಫರ್ನಾಂಡಿಸ್, ಆರ್. ಪೂರ್ಣಿಮಾ ಹಾಗೂ ಶೈಲಜಾ ಸುರೇಶ್ ಅವರು ಅವಲೋಕನ ಮಾಡಿ ದ್ದು ವಿಶೇಷ. ಇದರ ಜೊತೆಗೆ ಪ್ರತಿ ಶುಕ್ರವಾರ ಪುಸ್ತಕ ಪರಿ ಚಯವಾದ ಮೇಲೆ ಒಂದು ವಾರದ ಪುಸ್ತಕ ಪರಿಚಯ ಕಾರ್ಯಕ್ರಮದ ಬಗ್ಗೆ ತಮ್ಮ ಅನಿಸಿಕೆಯನ್ನು ಶೈಲಜಾ ಸು ರೇಶ್ ಅವರು ವ್ಯಕ್ತಪಡಿಸುತ್ತಿದ್ದರು.

ಪುಸ್ತಕದ ಬಗ್ಗೆ ತಿಳಿಸುವಾಗ ಪುಸ್ತಕದ ಕತೆ ಹೇಳುವ ಅವ ಶ್ಯಕತೆ ಇಲ್ಲ, ಕೃತಿಕಾರರ ಶೈಲಿಯ ಬಗ್ಗೆ, ಕತೆಯನ್ನು ಬೆಳೆಸಿ ಕೊಂಡು ಹೋಗುವ ರೀತಿಯನ್ನು ಹೇಳಿದರೆ ಉತ್ತಮ ಎಂ ದು ಲೇಖಕಿ ಬಿ.ಯು. ಗೀತಾ ಅವರು ಸಲಹೆ ನೀಡಿದರು. ಓದು ನಾವು ಕಾಣದ ಪ್ರಪಂಚವನ್ನು ತೆರೆದಿಡುತ್ತದೆ ಹಾಗಾ ಗಿ ಹೆಚ್ಚು ಹೆಚ್ಚು  ಓದಬೇಕು ಎಂದೂ ಅವರು ಹೇಳಿದರು.

ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷರಾದ ವನಮಾ ಲ ಸಂಪನ್ನಕುಮಾರ್ ಅವರು ಪುಸ್ತಕಗಳನ್ನು ಓದುವುದ ರಿಂದ ನಮ್ಮಲ್ಲಿ ಒಂದು ಗಟ್ಟಿತನ ಮೂಡುತ್ತದೆ. ಓದುವು ದರಿಂದ ಬರೆಯುವ ಹಂಬಲವೂ ಉಂಟಾಗುತ್ತದೆ ಎಂದ ರು.

ಮಹಿಳಾ ವೇದಿಕೆಯಲ್ಲಿ ಮಹಿಳೆಯರ ಪುಸ್ತಕಗಳನ್ನೇ ಪರಿ ಚಯಿಸುವುದು ಸೂಕ್ತ ಎಂದು ಬೆಂಗಳೂರು ಆಕಾಶವಾಣಿ ಕೇಂದ್ರದ ಕಾನ್ಸೆಪ್ಟಾ ಫರ್ನಾಂಡಿಸ್ ಅವರು ಹೇಳಿದರು.  ಎಷ್ಟೋ ಸಂದರ್ಭಗಳಲ್ಲಿ ಮಹಿಳೆಯರ ಪುಸ್ತಕಗಳು ಪರಿಗಣನೆಗೇ ಬರುವುದಿಲ್ಲ, ಸಾಹಿತ್ಯ ಸಮ್ಮೇಳನಗಳಲ್ಲಿ ಕೆಲವರಿಗಷ್ಟೇ ಗೋಷ್ಟಿಗಳ ಅಧ್ಯಕ್ಷತೆ ಸಿಕ್ಕಿರುತ್ತದೆ. ಹಾಗಾಗಿ ನಮ್ಮದೇ ವೇದಿಕೆ ಇರುವಾಗ ನಾವು ನಮ್ಮದೇ ಪುಸ್ತಕಗಳನ್ನು ಪರಿಚಯಿಸುವ ಕೆಲಸ ಮಾಡಬಹುದು ಎಂದರು.ಒಂದು ಪುಸ್ತಕ ಓದಿದಾಗ ನಮಗೆ ಸಾಕಷ್ಟು ವಿಷಯ ತಿಳಿಯುತ್ತದೆ. ಆ ವಿಷಯಗಳನ್ನು ಬೇರೆಯ‌ವ ರೊಂದಿಗೆ ಹಂಚಿ ಕೊಂಡಾಗ ನಾವೂ ಕೂಡ ವಿಚಾರಗಳಲ್ಲಿ ಬೆಳೆಯುತ್ತವೆ, ಇನ್ನೊಬ್ಬರ ವಿಚಾರವೂ ತಿಳಿಯುತ್ತದೆ.

ಇದು ಕೂಡ ಒಂದು ರೀತಿಯ ಓದು ಬರಹ ಎಂದು ಪುಸ್ತಕ ಪರಿಚಯ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ಸೂಚಿಸಿದವರು ಆರ್. ಪೂರ್ಣಿಮಾ‘ನಾನು ಕೇವಲ ಓದು ಬರಹ ಮಾಡಿ ಕೊಂಡು ಇರುತ್ತೇನೆ’ ಎಂದು ಯಾವ ಲೇಖಕಿಯೂ ಹೇಳ ಲಿಕ್ಕಾಗುವುದಿಲ್ಲ. ಯಾವುದೇ ಪುಸ್ತಕದಲ್ಲಿದ್ದರೂ ಅದು ಹೇಳಬೇಕಾದ ಸಾಮಾಜಿಕ ಸಂದೇಶ ಇರುತ್ತದೆ. ಅದನ್ನು ಗುರುತಿಸಿ, ಚರ್ಚಿಸಬೇಕು. ವಿವಿಧ ಆಯಾಮಗಳನ್ನು ಗಮನಿಸುವಂತಹ ಚರ್ಚಾ ಕಾರ್ಯಕ್ರಮಗಳು ಲೇಖಿಕಾ ಸಾಹಿತ್ಯ ವೇದಿಕೆ ವತಿಯಿಂದ ನಡೆಯಲಿ ಎಂಬ ಆಶಯ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಕೊನೆಯ ದಿನ ಶೈಲಜಾ ಸುರೇಶ್ ಇಡೀ ಕಾರ್ಯಕ್ರಮದ ಬಗ್ಗೆ ಮಾತನಾಡಿದರು. ನಾವು ಬೆಳೆಯು ವುದರ ಜೊತೆಗೆ ನಮ್ಮ ಜೊತೆ ಇನ್ನಷ್ಟು ಜನರನ್ನು ಬೆಳೆಸು ವ ಆಸೆಯೇ ಈ ಕಾರ್ಯಕ್ರಮಕ್ಕೆ ಕಾರಣ ಎಂದ ಅವರು,  ಅವಕಾಶಗಳನ್ನು ಯಾರೂ ಬಂಗಾರದ ಹರಿವಾಣದಲ್ಲಿಟ್ಟು ಕೊಡುವುದಿಲ್ಲ. ಮಹಿಳೆಯರಂತೂ ಒಂದೊಂದು ಅವಕಾ ಶವನ್ನು ಪಡೆದುಕೊಳ್ಳಲು ಹೋರಾಟ ಮಾಡಬೇಕು.ಹಾಗೆ ಯೇ ನಮ್ಮ ನಮ್ಮ ಅವಕಾಶಗಳನ್ನು ನಾವೇ ಸೃಷ್ಟಿ ಮಾಡಿ ಕೊಳ್ಳಬೇಕು ಎಂದರು.ಈ ಕಾರ್ಯಕ್ರಮದ ಆಧಾರದ ಮೇಲೆ ಬೆಂಗಳೂರು ಆಕಾಶವಾಣಿ ಸಹ ನನ್ನ ಮೆಚ್ಚಿನ ಪುಸ್ತಕ ಕಾರ್ಯಕ್ರಮವನ್ನು ಪ್ರಸಾರ ಮಾಡಿರುವುದಾಗಿ ಅವರು ಹೇಳಿದರು.

ಲೇಖಿಕಾ ವೇದಿಕೆಯ ಪುಸ್ತಕ ಪರಿಚಯ ಕಾರ್ಯಕ್ರಮದ ಜನಪ್ರಿಯತೆಯಿಂದ ಸಾಕಷ್ಟು ಲೇಖಕಿಯರು ಇದರ ಸದಸ್ಯತ್ವ ಪಡೆಯಲು ಬಯಸಿದರೆ. ಈ ವೇದಿಕೆಗೆ ಬರಲು ಸಾಕಷ್ಟು ಪುರುಷರು ಸಹ ಆಸಕ್ತಿ ತೋರಿಸಿದ್ದಾರೆ, ಆದರೆ ಇದು ಮಹಿಳೆಯರಿಗಾಗಿ ಮಾತ್ರ ಎಂಬುದನ್ನು ಶೈಲಜಾ ಅವರು ಸ್ಪಷ್ಟಪಡಿಸಿದ್ದಾರೆ.ಈ ಕಾರ್ಯಕ್ರಮದಲ್ಲಿ ಭಾಗವ ಹಿಸಿದ ಪ್ರತಿಯೊಬ್ಬ ಲೇಖಕಿಗೂ ಚಿಕ್ಕಮಗಳೂರಿನಎಂ.ಜೆ. ನಾಗಲಕ್ಷ್ಮಿ ಅವರು ಪ್ರಶಂಸನಾ ಪತ್ರವನ್ನು ಮಾಡಿ ಕೊಟ್ಟಿ ದ್ದಾರೆ. ಇದರ ವಿಶೇಷ ಎಂದರೆ ಪ್ರತಿಯೊಬ್ಬರ ಹೆಸರಿನ ಒಂದೊಂದು ಅಕ್ಷ ರಗಳಿಗೂ ಒಂದೊಂದು ವಾಕ್ಯದ ಅರ್ಥ ವನ್ನು ಬರೆದಿರುವುದು.

ತಿಂಗಳಿಗೊಬ್ಬ ಲೇಖಕಿ ಲೇಖಿಕಾ ಸಾಹಿತ್ಯ ವೇದಿಕೆಯ ಒಂದೊಂದು ತಿಂಗಳು ಒಬ್ಬೊಬ್ಬ ಲೇಖಕಿಯನ್ನು ಪರಿಚ ಯಿಸುವ ನನ್ನ ಮೆಚ್ಚಿನ ಲೇಖಕಿ ಎಂಬ ಮತ್ತೊಂದು ಸರಣಿ ಕಾರ್ಯಕ್ರಮ ಈಗಾಗಲೇ ಶುರುವಾಗಿದ್ದು, ಈ ಮೂಲಕ ಆಗಸ್ಟ್ ತಿಂಗಳಲ್ಲಿ ಅನುಪಮಾ ನಿರಂಜನ,ಸೆಪ್ಟೆಂಬರ್‌ನಲ್ಲಿ ತ್ರಿವೇಣಿ, ಅಕ್ಟೋಬರ್‌ನಲ್ಲಿ ಎಂ.ಕೆ. ಇಂದಿರಾ, ನವೆಂಬರ್‌ ನಲ್ಲಿ ವಾಣಿ… ಹೀಗೆ ತಿಂಗಳಿಗೊಬ್ಬ ಲೇಖಕಿಯ ಬದುಕು- ಬರಹವನ್ನು ವಿವಿಧ ಲೇಖಕಿಯರಿಂದ ಪರಿಚಯಿಸಲಾಗು ವುದು.

ವಾರಕ್ಕೊಂದು ಕತೆ ಶೈಲಜಾ ಸುರೇಶ್ ಜೊತೆ ಇದರ ಜೊತೆ ಗೆ ಶೈಲಜಾ ಸುರೇಶ್ ಅವರು  ವಾರಕ್ಕೊಂದು ಕತೆ ಶೈಲಜಾ ಸುರೇಶ್ ಜೊತೆ ಎಂಬ ಮತ್ತೊಂದು ಕಾರ್ಯಕ್ರಮವನ್ನೂ ನಡೆಸುತ್ತಿದ್ದಾರೆ. ಇದರಲ್ಲಿ ಈಗಾಗಲೇ ಸ್ನೇಹಲತಾ ದಿವಾ‌ ಕರ್, ರೂಪಾ ಜೋಷಿ ತಮ್ಮ ಕತೆಗಳನ್ನು ಓದಿದ್ದಾರೆ.ಆಸ ಕ್ತಿ ಇರುವವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹು ದು

**********************************************.

ಡಿ.ಯಶೋದಾ

7 thoughts on “ಏಕಾಂತದಿಂದ ಲೋಕಾಂತಕ್ಕೆ

  1. Thank you . ಬಹಳ ಸೊಗಸಾಗಿ ಪತ್ರಿಕೆ ಬರುತ್ತಿದೆ. ಅಭಿನಂದನೆಗಳು. – ಶೈಲಜಾ ಸುರೇಶ್ ( ಲೇಖಕಿ)

    1. ದನ್ಯವಾದ ಮೇಡಂ-ತಮ್ಮಗಳ ಸಲಹೆ-ಸಹಕಾರಗಳಿರಲಿ-ಸಂಪಾದಕ

  2. ಏಕಾಂತ ದಿಂದ ಲೋಕಾಂತ ಕ್ಕೆ , ವಸ್ತು ನಿಷ್ಠ ವಾಗಿ ಮೂಡಿ ಬಂದಿದೆ.
    ಲೇಖನ ಸೊಗಸಾಗಿದೆ. ಅಭಿನಂದನೆಗಳು ಯಶೋಧಾ ಮೇಡಂ

  3. ಒಳ್ಳೆಯ ವಿಚಾರಧಾರೆ. ಇಷ್ಟವಾಯಿತು. ಅಭಿನಂದನೆಗಳು.

Leave a Reply

Back To Top