Day: August 25, 2020

ಕಾವ್ಯಯಾನ

ಸ್ವಾತಿ ಹನಿ ಅನಿತಾ ಕೃಷ್ಣಮೂರ್ತಿ ಕಂಡಿಲ್ಲ ನೇರವಾಗಿ ನಾನೆಂದು ನಿನ್ನಕಂಡಿದ್ದು ಆ ಬಾನಿನ ಮೇಘಗಳಲಿ.ಈ ತಂಪೆರೆವ ತಂಗಾಳಿಯಲಿನಗುತಿರುವ ಗುಲಾಬಿಯ ಪಕಳೆಯಲಿ. ಕಂಡಿಲ್ಲ ನೇರವಾಗಿ ನಾನೆಂದು ನಿನ್ಜಕಂಡಿದ್ದು ಇಬ್ಬನಿಯ ಪಾರದರ್ಶಕತೆಯ ನುಣುಪಿನಲಿ,ಆ ಆಗಸದ ಬಾನಾಡಿಯ ಹಾರಾಟದಲಿಕಪ್ಪೆಚಿಪ್ಪಲಿ ಅಡಗಿ ಸ್ವಾತಿಹನಿಯ ಮುತ್ತಿನಲಿ. ಕಂಡಿಲ್ಲ ನೇರವಾಗಿ ನಾನೆಂದು ನಿನ್ನಕಂಡಿದ್ದು ನಾ ಬರೆವ ಪದಗಳ ಭಾವದಲಿ,ಮಿಂಚಾಗಿ ಮಿಂಚಿ, ಸಂಚನು ತರುವ ಆಲೋಚನೆಯಲಿ,ಎದೆಯ ಏರಿಳಿತದ ಬಡಿತದಲಿ. ************************

ಪುಸ್ತಕ ಸಂಗಾತಿ

ಚರಿತ್ರೆಯ ಪುಟಗಳ ಕಟ್ಟ ಹೊತ್ತ ಪರಿಸರದ ಕಥಾ ಮಾಲೆ. ಮಧ್ಯಘಟ್ಟ – ಕಾದಂಬರಿಶಿವಾನಂದ ಕಳವೆಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ. ಪರಿಸರದ ಬಗೆಗಿನ ಕಾಳಜಿ ಮತ್ತು ಜ್ಞಾನ, ಅಪಾರ ತಿರುಗಾಟ, ಗ್ರಾಮೀಣರ ಒಡನಾಟ ಮತ್ತು ಅಧ್ಯಯನಪೂರ್ಣ ಬರಹಗಳ ಮೂಲಕ ಹೆಸರಾದವರು ಪತ್ರಕರ್ತ ಶಿವಾನಂದ ಕಳವೆ. ಶಿರಸಿಯ ಬಳಿಯ ಕಳವೆಯಲ್ಲಿ ಅವರ ನೇತೃತ್ವದ ಮಾಧ್ಯಮ ಸಂಸ್ಕೃತಿ ಅಭಿವೃದ್ಧಿ ಕೇಂದ್ರ, ಕಾನ್ಮನೆ – ಪರಿಸರಾಸಕ್ತರ, ಪತ್ರಿಕೋದ್ಯಮ ವಿದ್ಯಾರ್ಥಿಗಳ ಆಸಕ್ತಿಯ ಕೇಂದ್ರವಾಗಿದೆ. ಅವರು ಈ ಹೊತ್ತಿಗೆಯಲ್ಲಿ ಮತ್ತಿಘಟ್ಟ ಎಂಬ ಕಾನನದ ನಡುವಿನ ಪ್ರದೇಶದ ಕಥನವನ್ನು […]

ನೆಲೆ ಸಂಭ್ರಮ – 2020

ನೆಲೆ ಸಂಭ್ರಮ – 2020 ಫೇಸ್ಬುಕ್ ನಲ್ಲಿ ಕಾವ್ಯ ಓದುವುದರ ಮೂಲಕ ಕತೆ ಕೇಳುತ್ತಲೇ ಚಿಂತನೆಗಳನ್ನು ಮೆಲುಕು ಹಾಕುವುದರ ಜೊತೆಗೆ ನೆಲೆ ಸಂಭ್ರಮವನ್ನು ಆಚರಿಸೋಣ ಬನ್ನಿ…… ಎನ್ನುತ್ತಲೇ ಆರಂಭವಾದ ಸಿಂದಗಿಯ ನೆಲೆ ಪ್ರಕಾಶನ ಸಂಸ್ಥೆಗೆ ಇದೀಗ ನಾಲ್ಕು ದಶಕಗಳನ್ನು ಪೂರೈಸುತ್ತಿದೆ. ಇದರ ಹುಟ್ಟಿಗೆ ಪ್ರಮುಖ ಕಾರಣರು ಇದರ ಜೋಡಿ ಸ್ಥoಭದಂತಿರುವ ಡಾ. ಎಂ ಎಂ ಪಡಶೆಟ್ಟಿ ಹಾಗೂ ಡಾ. ಚನ್ನಪ್ಪ ಕಟ್ಟಿಯವರು. ಹವ್ಯಾಸಕ್ಕಾಗಿ ಹುಟ್ಟಿಕೊಂಡ ಸಂಸ್ಥೆ ಸ್ಥಳೀಯ ಲೇಖಕರ ಹಾಗೂ ಮಹಿಳೆಯರ ಕೃತಿಗಳ ಪ್ರಕಟಣೆಗೆ ಆದ್ಯತೆ ನೀಡುವುದರ […]

ಅನುವಾದ ಸಂಗಾತಿ

ಚಿತ್ರಗಳು ಕನ್ನಡ ಮೂಲ: – ಡಾ.ಕಾತ್ಯಾಯಿನಿ ಕುಂಜಿಬೆಟ್ಟು ಇಂಗ್ಲೀಷಿಗೆ:ಪಂ. ರವಿಕಿರಣ್ ಮಣಿಪಾಲ ಚಿತ್ರಗಳು ನನ್ನ  ಮನದಲ್ಲೆಷ್ಟೋ ಚಿತ್ರಗಳಿವೆ ಬಿಡಿಸ ಹೋದರೆ ಅವು ಹಾಳೆಗಳಲ್ಲಿ ನಿರ್ಜೀವ ಹೆಣಗಳಂತೆ ಬೋರಲು ಬೀಳುತ್ತವೆ ಇನ್ನು ಕೆಲವು ಬೆನ್ನಡಿಯಾಗಿ ಬಿದ್ದ ಜಿರಳೆಗಳಂತೆ ಅಸಹಾಯಕವಾಗಿಕೈಕಾಲಾಡಿಸುತ್ತ ಕಪ್ಪು ಕಂಗಳಲ್ಲಿ ಚಂದ್ರನನ್ನೇ ನೋಡುತ್ತಿರುತ್ತವೆ. ನನ್ನ ಮನದ ಚಿತ್ರಗಳು ತಮ್ಮದಲ್ಲದ ಇನ್ನಾರದ್ದೋ ಬದುಕನ್ನು ಬದುಕುತ್ತ  ಕೆಂಪು ಕೆಂಪಾದ ಹಸಿಗಾಯದ ಮೇಲೆ ಯಾರ್ಯಾರೋ ಗೀರಿದಂತೆ ನೆತ್ತರಲ್ಲಿತೊಯ್ದಿರುತ್ತವೆ. ನನ್ನ ಮನದ ಚಿತ್ರಗಳು ಬದುಕಿನತಿಪ್ಪೆಯಲ್ಲಿ ಅವನು ಬಿಸಾಕಿದ ಎಂಜಲು ಅನ್ನಕ್ಕಾಗಿ ಕಚ್ಚಾಡುತ್ತಿರುತ್ತವೆ ಹಸಿವಲ್ಲಿ […]

Back To Top