ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ನನ್ನ ಇಷ್ಟದ ಕವಿತೆ

ಮುಂಬೈ ಜಾತಕ ರಚನೆ —– ಜಿ.ಎಸ್.ಶಿವರುದ್ರಪ್ಪ ಹುಟ್ಟಿದ್ದು: ಆಸ್ಪತ್ರೆಯಲ್ಲಿ ಬೆಳೆದದ್ದು: ಬಸ್ಸು ಟ್ರಾಂ ಕಾರು ಟ್ಯಾಕ್ಸಿ ಎಲೆಕ್ಟ್ರಿಕ್ ಟ್ರೇನುಗಳಲ್ಲಿ ಕುಡಿದದ್ದು: ಕಾಣದೆಮ್ಮೆಯ ಕೆಚ್ಚಲು ಕರೆದು ಕಳುಹಿಸಿದ ಬಾಟ್ಲಿ ಹಾಲು, ಗ್ರೈಪ್ ಸಿರಪ್ ಹಾರ್ಲಿಕ್ಸ್ ಇತ್ಯಾದಿ ಕಂಡಿದ್ದು :ಬೆಳಗಿನಿಂದ ಸಂಜೆಯ ತನಕ ಲಕ್ಷ ಚಕ್ರದ ಉರುಳು ಅವಸರದ ಹೆಜ್ಜೆ ಯ ಮೇಲೆ ಸರಿವ ನೂರಾರು ಕೊರಳು ಕಲಿತದ್ದು: ಕ್ಯೂ ನಿಲ್ಲು:ಪುಟ್ಪಾತಿನಲ್ಲೇ ಸಂಚರಿಸು; ರಸ್ತೆವದಾಟುವಾಗೆಚ್ಚರಿಕೆ; ಓಡು, ಎಲ್ಲಿಯೂ ನಿಲ್ಲದಿರು; ಹೇಗೋ ಅವರಿವರ ತಳ್ಳಿ ಮುನ್ನುಗ್ಗು; ಎಲ್ಲಾದರೂ ಸರಿಯೆ, ಬೇರೂರು,ಹೀರು. ತಾಯಿ:  ಸಾವಿರ ಗಾಲಿ ಉರುಳಿ ಹೊರಳುವ ರಸ್ತೆ ಯಂಚಿನಲ್ಲೇ ಕೈಹಿಡಿದು ನಡೆಸಿದವಳು. ಇರುವ ಒಂದಿಂಚು ಕೋಣೆಯಲ್ಲೇ ಹೊರಲೋಕವನು ಪರಿಚಯಿಸಿ ಎಚ್ಚರಿಕೆ ಕೊಟ್ಟವಳು. ತಂದೆ: ಬೆಳಗಿನಿಂದ ಸಂಜೆಯ ತನಕ ಕಣ್ಮರೆಯಾಗಿ ರಜಾ ದಿನಗಳಲ್ಲಿ ಕಣ್ಣಿಗೆ ಕಂಡು ಕುಳಿತು ಕೆಮ್ಮುವ ಪ್ರಾಣಿ. ವಿದ್ಯೆ: ಶಾಲೆ ಕಾಲೇಜುಗಳುವಕಲಿಸಿದ್ದು; ದಾರಿ ಬದಿ ನೂರಾರು ಜಾಹೀರಾತು ತಲೆಗೆ ತುರುಕಿದ್ದು, ರೇಡಿಯೋ ಸಿಲೋನ್ ವ್ಯಾಪಾರ ವಿಭಾಗ ಶಿಫಾರಸ್ಸು ಮಾಡಿದ್ದು.  ನೀನಾಗಿ ಕಲಿತದ್ದು ಬಲು ಕಡಿಮೆ, ಬಸ್ ಸ್ಟಾಪಿನಲ್ಲಿ ನಿಂತ ಬಣ್ಣಗಳ ಕಡೆಗೆ ಕಣ್ಣಾಡಿಸುವುದೊಂದನ್ನು ಹೊರತು. ಜೀವನ:  ಈ ಲಕ್ಷ ದಾರಿಗಳ ಚದುರಂಗದಾಟದಲಿ, ನೂರು ಬೆಳಕಿನ ಕೆಳಗೆ ಯಾರದೋ ಕೈಗೊಂಬೆಯಾಗಿ ಮುಂದುವರಿಯುವುದು.  ಏಳುವುದು, ಬಟ್ಟೆಯಲ್ಲಿ ಮೈ ತುರುಕಿ ಓಡುವುದು; ರೈಲನ್ನೊ ಬಸ್ಸನೋ ಹಿಡಿಯುವುದು, ಸಾಯಂಕಾಲ ಸೋತು  ಸುಸ್ತಾಗಿ ರೆಪ್ಪೆಯ  ಮೇಲೆ ಹತ್ತು ಮಣ ಆಯಾಸವನ್ನು ಹೊತ್ತು ಹನ್ನೊಂದು ಘಂಟೆ ಹೊಡೆವಾಗ ಮನೆಯಲ್ಲಿ ಕಾದೂ ಕಾದೂ ತೂಕಡಿಸಿ ಮಂಕಾದ ಮಡದಿಯನು ಎಚ್ಚರಿಸುವುದು. ತಣ್ಣಗೆ ಕೊರೆವ ಕೂಳುಂಡು ಬಾಡಿಗೆ ಮನೆಯ ನೆರಳಿನ ಕೆಳಗೆ, ಮತ್ತೆ  ಸಾವಿರ ಗಾಲಿಗಳ್ಳುಜ್ಜುವ ಕನಸು ಬಂಡಿಯ ಕೆಳಗೆ ಹಾಸುಗಂಬಿಯ ಹಾಗೆ ತತ್ತರಿಸುತ್ತ ಮಲಗುವುದು.                          _________  ನಾನು ನನ್ನ ಕನ್ನಡ ತರಗತಿಗಳಲ್ಲಿ   ವಿದ್ಯಾರ್ಥಿಗಳಿಗೆ ಆಗಾಗ ಓದಿಹೇಳುವ ಮತ್ತುನನಗಿಷ್ಟವಾದ ಕೆಲವೊಂದು ಕವಿತೆಗಳ ಸಾಲಿನಲ್ಲಿ ನವೋದಯ ಸಾಹಿತ್ಯದ,  ರಾಷ್ಟ್ರ ಕವಿ     ಜಿ. ಎಸ್. ಶಿವರುದ್ರಪ್ಪನವರು ಬರೆದಿರುವ  ‘ಮುಂಬೈ ಜಾತಕ’ವೂ ಸೇರಿಕೊಳ್ಳುತ್ತದೆ. ಇದಕ್ಕೆ ಕಾರಣವೇನೆಂದು ಯೋಚಿಸಿದರೆ ನನಗೆ ಹೊಳೆದದ್ದು, ಇದೊಂದು ವಿಚಿತ್ರ ಶೈಲಿಯ, ಎಲ್ಲಾಾ ಕಾಲಕ್ಕೂ ಸರಿಹೊಂದುವ ಕವನ.   ಏಕೆಂದರೆ ಕವನಗಳ ಪ್ರಮುಖ ಲಕ್ಷಣವಾದ  ಗೇಯತೆ ಮತ್ತು ಪ್ರಾಸಗಳೆರಡನ್ನೂ ಗಾಳಿಗೆ ತೂರಿ ರಚಿಸಲಾದ ಈ ಕವಿತೆ ಸರ್ವಕಾಲಿಕ ಸತ್ಯವನ್ನು ಸಾರುತ್ತದೆ. ಆದ್ದರಿಂದಲೇ  ಅಂದು, ಇಂದು ಮತ್ತು ಎಂದೆಂದಿಗೂ ಜೀವಂತವಾಗಿ ಉಳಿಯಬಲ್ಲ ಶಕ್ತಿ ಈ ಕವನಕ್ಕಿದೆ.  ಏಕೆಂದರೆ ಆಗಿನ ಕಾಲದಲ್ಲಿ ಮುಂಬೈಗಷ್ಟೇ ಸೀಮಿತವಾಗಿದ್ದ   ಬಿಡುವುಲ್ಲದ, ಯಾಂತ್ರಿಕ ಜೀವನ ಶೈಲಿ,  ಈಗ ಭಾರತದ ಎಲ್ಲಾ  ಪ್ರಮುಖ ನಗರ ವಾಸಿಗಳ    ಜೀವನದಲ್ಲಿ ಹಾಸುಹೊಕ್ಕಾಗಿದೆ. ಕವಿ ಜಿ. ಎಸ್. ಎಸ್  ಬಯೋಡ್ಯಾಟದಲ್ಲಿ  ಕವನವನ್ನು ಹೇಳಿದ್ದಾರೋ   ಅಥವಾ ಕವನದಲ್ಲಿ ಬಯೋಡ್ಯಾಟವನ್ನು ಹೇಳಿದ್ದಾರೋ ಎನ್ನುವಷ್ಷರ ಮಟ್ಟಿಗೆ  ತಮ್ಮ  ಕವಿತೆಯಲ್ಲಿ  ನೈಜತೆ ಹಾಗೂ ಸರಳತೆಯನ್ನು ಪ್ರತಿಬಿಂಬಿಸಿದ್ದಾರೆ.  ನಗರ ಪ್ರದೇಶಗಳಲ್ಲಿ ಬೆಳೆಯುವ, ಬದುಕನ್ನು ಕಟ್ಟಿಕೊಳ್ಳುವ ಲಕ್ಷಾಂತರ ಮಧ್ಯಮ ವರ್ಗದ    ಮಕ್ಕಳ ಬದುಕಿನ ಚಿತ್ರಣವನ್ನು  ಕಣ್ಣಮುಂದೆ ಕಟ್ಟಿದ ಹಾಗೆ ಇಲ್ಲಿ ಬಿಚ್ಚಿಡಲಾಗಿದೆ. “ಹುಟ್ಟಿದ್ದು ಬೆಳೆದದ್ದು, ಕುಡಿದದ್ದು, ಕಂಡದ್ದು, ಕಲಿತದ್ದು …………”  ಹೀಗೆ ಕವಿತೆ  ನೀಡುವ ಆಮೂಲಾಗ್ರ  ವಿವರಣೆಗಳ ಹಿಂದಿರುವ ವ್ಯಂಗ್ಯ  ಓದುಗರ ಮುಂದೆ ಎಳೆಎಳೆಯಾಗಿ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ.   ತಂದೆ, ತಾಯಿಯರ ಬಗೆಗಿರುವ ವಿವರಣೆಯಂತೂ  ನಮ್ಮ  ಮನಸ್ಸಿನ ಮೇಲೆ ಗಾಢವಾದ ಪ್ರಭಾವವನ್ನು ಬೀರುವಂತದ್ದು..  “ಇರುವ ಒಂದಿಂಚು ಕೋಣೆಯಲ್ಲೇ”  ಹೊರಲೋಕವನ್ನು ಪತಿಚಯಿಸುವ ತಾಯಿಯೊಂದು ಕಡೆಯಾದರೆ,  ಬೆಳಗಿನಿಂದ ರಾತ್ರಿಯವರೆಗೆ ಸಂಸಾರಕ್ಕಾಗಿ ದುಡಿಯುವುದರಲ್ಲೇ ಜೀವ ಸವೆಸುತ್ತಿರುವ  ತಂದೆ, ಮಕ್ಕಳ ಆಟ ಪಾಟಗಳಿಂದ ಸ್ವತಃ ವಂಚಿತ.  “ಜೀವನಕ್ಕಾಗಿ ದುಡಿಮೆಯೇ ಹೊರತು, ದುಡಿಮೆಗಾಗಿ  ಜೀವನವಲ್ಲ!  ಅಲ್ಲವೇ?”.  ದುಡಿಮೆ ನಿಜವಾದ ಅರ್ಥ ಕಳೆದುಕೊಳ್ಳುವುದು ಇಲ್ಲೇ. ಕವಿತೆ ಮುಂದುವರೆದು  ವಿದ್ಯೆಯ ಬಗ್ಗೆ ಹೇಳುತ್ತಾ, “ನೀನಾಗಿ ಕಲಿತದ್ದು ಬಲು ಕಡಿಮೆ….”.   ಎಂಬಲ್ಲಿ “ಬಸ್ ಸ್ಟಾಪಿನಲ್ಲಿ ನಿಂತ ಬಣ್ಣಗಳ ಕಡೆ ಕಣ್ಣಾಡಿಸುವುದೊಂದನ್ನು ಹೊರತು” ಎಂದು ಹೇಳುವ ಮೂಲಕ  ಕವಿ ತಮ್ಮ ಕವನಕ್ಕೆ ಹಾಸ್ಯ ಲೇಪನವನ್ನೂ ಸಹ ಮಾಡಿದ್ದಾರೆ. ಬಣ್ಣಗಳ ಕಡೆಗೆ ಕಣ್ಣಾಡಿಸುವುದನ್ನು  ಕಲಿಸಲು ಯಾವ ಶಾಲೆ, ಕಾಲೇಜುಗಳೂ ಬೇಕಿಲ್ಲವಷ್ಟೆ!    ಇಷ್ಟೆಲ್ಲಾ ಆದ ಮೇಲೆ, ಆ ಮಗುವೂ ಬೆಳೆದು ದೊಡ್ಡವನಾದಂತೆ  ತಾನೂ ಸಹ ತನ್ನ ತಂದೆಯಂತೆಯೇ  “ಏಳುವುದು, ಬಟ್ಟೆಯಲ್ಲಿ ಮೈ ತುರುಕಿ ಓಡುವುದು……”‘ ಇಂತಹದ್ದೇ  ಜೀವನ ಪದ್ಧತಿಯನ್ನು ಅಳವಡಿಸಿಕೊಳ್ಳುವುದು ವಿಪರ್ಯಾಸ.   ಈಗ ತಾನೂ ತನ್ನ ತಂದೆಯಂತೆ  “ರಜಾ ದಿನಗಳಲ್ಲಿ ಕಣ್ಣಿಗೆ ಕಂಡು ಕುಳಿತು ಕೆಮ್ಮುವ ಪ್ರಾಣಿ!”  ಇದಂತೂ  ಜೀವನದ ಕಟು ಸತ್ಯವನ್ನು ಓದುಗರಿಗೆ  ಬಿಚ್ಚಿ ತೋರಿಸುತ್ತದೆ.  ತನಗಾಗಿ ಒಂದಿಷ್ಟೂ ಸಮಯವಿಲ್ಲದೆ ಜೀವನವೆಲ್ಲಾ  ದುಡಿದು ದುಡಿದೂ ಸೊರಗಿ, ಕೊನೆಗೊಮ್ಮೆ ಕಣ್ಮುಚ್ಚುವ  ಪಟ್ಟಣಿಗರ ಬದುಕಿನಲ್ಲಿ  ನಿಜವಾದ ಬದುಕೆಲ್ಲಿದೆ?  ಯಾವ ಪಟ್ಟಣಿಗನು ಈ ಕವನವನ್ನು ಓದಿದರೂ ಇದು ತನ್ನದೇ ಬಯೋಡಾಟಾ ಎಂದು ಭಾವಿಸದಿರನೇ?  ಇಂದಿನ ಜೀವನ ಶೈಲಿಯನ್ನು , ಪಟ್ಟಣಿಗರ ಪಾಡನ್ನು ಸರಳವಾಗಿ, ಸುಂದರವಾಗಿ    ಅನಾವರಣಗೊಳಿಸಿರುವ  ಜಿ ಎಸ್ ಎಸ್ ರವರ ಈ ಕವಿತೆ ನನ್ನ ಫೇವರೇಟ್. **************************** ಅರುಣಾ ರಾವ್

ನನ್ನ ಇಷ್ಟದ ಕವಿತೆ Read Post »

ಕಾವ್ಯಯಾನ

ವಿಧಾಯ ಹೇಳುತ್ತಿದ್ದೇವೆ

ಕವಿತೆ ದೇವು ಮಾಕೊಂಡ ಮಧುರ ಸ್ಪರ್ಷವಿತ್ತನೆನಪುಗಳು ಮುಳುಗುತ್ತಿವೆಕಣ್ಣುಗಳ ಮುಂದೆ ಹಾದು ಹೋಗುತ್ತಿವೆದಿನ ದಿನ ಕಳೆದ ಘಟನೆಗಳುಭಯವಿದೆ ನನಗೀಗನೂರಾರು ವರುಷಗಳಿಂದ ಪಕ್ಕೆಲುಬುಗಳಲಿಬಚ್ಚಿಟ್ಟಿದ್ದ ನೆನಪುಗಳು ಅಭದ್ರಗೊಳ್ಳುತ್ತಿವೆ ಎಂದುಹೇರಳವಾಗಿರುವ ಸಿಡಿಲು ಮಳೆ ಹನಿಗಳಿಂದ ನಾನು ಏಕಾಂಗಿಯಾಗಿದ್ದೇನೆಸ್ವರ್ಗದ ಹಾದೀಲಿದುಃಖಗಳ ಗುರುತ್ವಾಕರ್ಷಣೆಯ ತುದಿಗೆ ಒರಗಿಕೊಂಡು ನಾನೀಗಕಳೆದು ಹೋದ ಜೋತಿರ್ವರ್ಷಗಳಮೆಲಕು ಹಾಕುತ್ತ ನಿಂತಿರುವೆಲಿಖಿತ ಡೈರಿಗಳುಶೀರ್ಷಿಕೆ ರಹಿತ ಪದ್ಯಗಳುರಾತ್ರಿ ಮಂಡಿಸಿದ ಕನಸುಗಳು ಕಳೆದುಕೊಂಡುಬರಿಅರೆಬರೆ ತಿದ್ದಿದ ನಂಬಿಕೆ ಹದೀಸ್ ಪುರಾಣಗಳನಡುವೆ ನಿಂತಿದ್ದೇನೆ ನೋಡಿವರ್ಷಕ್ಕೊಂದೆರಡು ಸಲತ್ರಿವರ್ಣದ ಧ್ವಜದ ಕೆಳಗೆಮಸುಕಾದ ಹೆಜ್ಜೆಗುರುತುಗಳುಉಸಿರು ಕಟ್ಟಿದ ಗಂಟಲಿಂದ ಬರುವಶುಭಾಶಯ ಸಹಾನುಭೂತಿಗಳುಮಿನುಗುತ್ತಿವೆಮರುದಿನ ಮತ್ತೆಅಸಮ ಉಸಿರುಎದೆಬಡಿತ ! ಬನ್ನಿನೋಡಬನ್ನಿನಾವು ಎಷ್ಟೊಂದು ನಿಧಾನವಾಗಿಎಷ್ಟೊಂದು ಅಭಾರವಾಗಿ ಸಾಯುತ್ತಿದ್ದೇವೆಗಲ್ಲಿಯಲಿ ಕನಸು ಕಂಡ ಆತ್ಮಗಳುಷಹರನಲಿ ಅಳಿಯುತ್ತಿವೆಭಯ ಬೆನ್ನುಮೂಳೆ ಸುತ್ತುವಾಗಖುಷಿಯನ್ನು ರಕ್ತನಾಳ ಸುಡುತ್ತಿದೆಹೀಗೆ…ದಿನೇ ದಿನೆ ವಿಧಾಯ ಹೇಳುತ್ತಿದ್ದೇವೆ ನಾವುನೋಡಬನ್ನಿ ನೀವು***************************

ವಿಧಾಯ ಹೇಳುತ್ತಿದ್ದೇವೆ Read Post »

ಕಾವ್ಯಯಾನ

ಅನುವಾದಿತ ಕವಿತೆ

ರಾಹತ್ ಇಂದೋರಿ ಕನ್ನಡಕ್ಕೆ:ರುಕ್ಮಿಣಿ ನಾಗಣ್ಣವರ ವಿರೋಧವಿದ್ದರೆ ಇರಲಿ ಅದು ಪ್ರಾಣ ಅಲ್ಲವಲ್ಲಇದೆಲ್ಲವೂ ಮುಸುಕು ಹೊಗೆ ಆಕಾಶ ಅಲ್ಲವಲ್ಲ ಬೆಂಕಿ ಹೊತ್ತಿದರೆ ಆಹುತಿ ಆಗುವವು ಬಹಳ ಮನೆಇಲ್ಲಿರುವುದು ಕೇವಲ‌ ನನ್ನ ಮನೆ ಮಾತ್ರ ಅಲ್ಲವಲ್ಲ ನಾನು ಹೇಳಿರುವುದೇ ಇಲ್ಲಿ ಅಂತಿಮಬಾಯೊಳಗೆ ಇರುವುದು ನಿನ್ನ ನಾಲಗೆ ಅಲ್ಲವಲ್ಲ ನನಗೆ ಗೊತ್ತಿದೆ ಅಸಂಖ್ಯ ವೈರಿಗಳು ಇರುವರುನನ್ನ ಹಾಗೆ ಜೀವ ಕೈಯಲ್ಲಿ ಹಿಡಿದವರು ಅಲ್ಲವಲ್ಲ ಇಂದಿನ ಈ ಪಾಳೆಗಾರಿಕೆ ನಾಳೆ ಇರುವುದಿಲ್ಲಅವರು ಬಾಡಿಗೆದಾರರು, ಸ್ವಂತದ ಮನೆ ಅಲ್ಲವಲ್ಲ ಇಲ್ಲಿನ ಮಣ್ಣಲ್ಲಿ ಎಲ್ಲರ ನೆತ್ತರ ಹನಿಯೂ ಸೇರಿದೆಈ ಹಿಂದೂಸ್ತಾನ್ ಯಾರ ಅಪ್ಪನದೂ ಅಲ್ಲವಲ್ಲ ******************************

ಅನುವಾದಿತ ಕವಿತೆ Read Post »

ಅಂಕಣ ಸಂಗಾತಿ, ದಿಕ್ಸೂಚಿ

ಅಂಕಣ

ಆಗದು ಎಂದು ಹೇಳಲು ಕಲಿಯಿರಿ ಕಲಿಸಿರಿ ಎಲ್ಲದಕ್ಕೂ ಹೂಂ ಎನ್ನುವ ಸ್ವಭಾವ ಬಹಳ ಜನರಲ್ಲಿ ಬೇ ರೂರಿದೆ. ಹೀಗಾಗಿ ಅವರೆಲ್ಲ ಹೌದಪ್ಪಗಳಾಗಿದ್ದಾರೆ.ಪ್ರತಿ ಯೊಂದು ಕೆಲಸಕ್ಕೂ ಹೂಂ ಎಂದು ಒತ್ತಡ ಆತಂಕವನ್ನು ಅನಾಯಾಸವಾಗಿ ತಾವೇ ಮೈ ಮೇಲೆ ಎಳೆದು ಕೊಳ್ಳುತ್ತಾ ರೆ.ಯಾವುದಕ್ಕೂ ಇಲ್ಲ ಎಂದು ಹೇಳಿ ರೂಢಿಯೇ ಇಲ್ಲ. ಇಲ್ಲ ಎಂದು ಹೇಳುವುದು ಅಗೌರವ ಎಂದೇ ಭಾವಿಸಿದ್ದೇ ವೆ.ನನಗೀಗ ತಾವು ಹೇಳಿದ ಕೆಲಸ ಮಾಡಲಾಗುವುದಿಲ್ಲ. ನಾನು ಬೇರೊಂದು ಕಾರ್ಯದಲ್ಲಿ ಮಗ್ನನಾಗಿದ್ದೇನೆ ಎಂದು ಎದುರಿಗಿನವರು ನಮ್ಮನ್ನು ತಪ್ಪಾಗಿ ತಿಳಿಯುತ್ತಾರೆಂದು ನಾವೇ ತಪ್ಪಾಗಿ ಅರ್ಥೈಸಿಕೊಂಡು ಬಿಡುತ್ತೇವೆ. ಹೂಂ  ಎಂದು ಎಲ್ಲ ಕಾರ್ಯಗಳನ್ನು ಒಪ್ಪಿಕೊಳ್ಳುವುದು ಸೌಜನ್ಯತೆಯ ಲಕ್ಷಣ. ಆಂಗ್ಲ ನುಡಿಯಂತೆ ಸೌಜನ್ಯವು ಶತ್ರುವನ್ನು ಗೆಲ್ಲುತ್ತದೆ ಎಂಬುದೇನೋ ನಿಜ.ಮ್ಯಾಂಟಿಗೋ ಹೇಳುವಂತೆ ಸೌಜನ್ಯಕ್ಕೆ ವೆಚ್ಚವೇನೂ ಹಿಡಿಯುವುದಿಲ್ಲ, ಆದರೆ ಸೌಜನ್ಯವು ಎಲ್ಲವನ್ನೂ ಕೊಂಡುಕೊಳ್ಳುತ್ತದೆಂಬ ಮಾತು ಅಷ್ಟೇ ದಿಟ. ಅಪಮಾನಕರ ಸಂಗತಿ ಅಲ್ಲ.ಒಲ್ಲೆ ಬೇಡ ಎಂದು ಹೇಳುವುದು ಅಪಮಾನಕರ ಎಂಬ ಹುರು ಳಿಲ್ಲದ ನಂಬಿಕೆಯಲ್ಲಿ ಬಿದ್ದು ನರಳುವವರನ್ನು ನೋಡುತ್ತೇ ವೆ ಅವರಿಂದ ಪಾಠ ಕಲಿಯದೇ ನಾವೂ ಅದೇ ಬಲೆಯಲ್ಲಿ ಬೀಳಲು ಹವಣಿಸುತ್ತೇವೆ.ದಾಕ್ಷಿಣ್ಯಕ್ಕೆ ಬಿದ್ದು ಬೇಡ ಒಲ್ಲೆ ಎನ್ನದೇ ಒಪ್ಪಿಕೊಂಡ ಸಂಗತಿಗಳು ನುಂಗಲಾರದ ತುತ್ತಾಗಿ ಪರಿಣಮಿಸುತ್ತವೆ.ಎಂಬುದು ಅನುಭವಿಸಿದವರಿಗೆ ಗೊತ್ತು ಬಲವಂತಕ್ಕೆ ಬಲಿಪಶುಗಳಾಗುವುದಕ್ಕಿಂತ ನಿರ್ದಾಕ್ಷಿಣ್ಯದಿಂ ದ ಮಾತನಾಡುವುದು ಒಳಿತು. ದಾಕ್ಷಿಣ್ಯಕ್ಕೆ ಒತ್ತು ಕೊಟ್ಟರೆ ಬಲಿಯಾಗುವಿರಿ. ಆಲಿವರ್ ಗೋಲ್ಡ್ ಸ್ಮಿತ್ ಹೇಳಿದಂತೆ ಸಹೃದಯತೆ ಕರುಣೆ ಹೊಂದಿದ ವ್ಯಕ್ತಿಯನ್ನು ಸಮಾಜ ಸದಾ ಗುರುತಿಸುತ್ತದೆ. ಹೀಗಾಗಿ ಸಹೃದಯತೆಯನ್ನು ಮೆರೆಯಿರಿ ಹೊರತು ದಾಕ್ಷಿ ಣ್ಯದ ಹೊರೆ ಹೊತ್ತು ಬೇಸರಿಸಿಕೊಂಡು,ನಿಮ್ಮ ಮನದ ಪ್ರಶಾಂತತೆಯನ್ನು ಕಳೆದುಕೊಳ್ಳದಿರಿ.ಹೌದಪ್ಪಗಳಾಗಬೇಡಿ  ಪ್ರತಿಯೊಂದಕ್ಕೂ ಹೂಂ ಎನ್ನುವ ಹೌದು ಎಂದು ಗೋಣು ಅಲ್ಲಾಡಿಸಿ ಹೌದಪ್ಪ (ಎಸ್ ಮ್ಯಾನ್)ಗಳಾಗಲು ಕಾರಣಗ ಳು ಅನೇಕ.ಅವುಗಳಲ್ಲಿ ಧೈರ್ಯವಿಲ್ಲದಿರುವುದೂ ಒಂದು ನಮಗ್ಯಾಕೆ ಉಸಾಬರಿ? ಹೂಂ ಎಂದರೆ ಬೀಸೋ ದೊಣ್ಣೆ ಯಿಂದ ತಪ್ಪಿಸಿಕೊಂಡಂತೆ ಎಂಬ ಜಾಯಮಾನ. ಒಲ್ಲೆ ಇಲ್ಲ ಬೇಡ ಎಂದರೆ ಗುಂಪಿನಿಂದ ಹೊರ ಹೋಗಬೇಕಾಗು ತ್ತೆ. ಎಲ್ಲರೊಂದಿಗೆ ಗೋವಿಂದ ಅಂದರೆ ಮುಗಿದು ಹೋ ಯಿತು. ಅತಿ ಮುಖ್ಯ ಕಾರಣವೆಂದರೆ ಎಲ್ಲರಲ್ಲಿಯೂ ತಾ ನು ವಿಭಿನ್ನ ವಿಶಿಷ್ಟ ಎಂದು ಗುರುತಿಸಿಕೊಳ್ಳಲು ಹೇಳುವ ಎಲ್ಲ ಕೆಲಸಗಳನ್ನು ಒಪ್ಪಿಕೊಳ್ಳುವುದು.ಯಾವ ಕೆಲಸವನ್ನು ಪೂರ್ಣಗೊಳಿಸದೇ ಒದ್ದಾಡುವುದು.ಒಂದು ಸಂಗತಿ ನೆನ ಪಿರಲಿ ಎಲ್ಲವನ್ನೂ ಮಾಡಲು ಹೋದರೆ ಯಾವುದನ್ನೂ ಪೂರ್ಣ ಮಾಡಲಾಗುವುದಿಲ್ಲ. ಯಶಸ್ವಿ ವ್ಯಕ್ತಿ ಎಂದು ಕರೆಸಿಕೊಳ್ಳಲು ಪ್ರಯತ್ನಿಸಿ ಅಪ ಮಾನಕ್ಕೀಡಾಗುವ ಪ್ರಸಂಗಗಳೇ ಹೆಚ್ಚಾಗುವವು.ಇಂಥವ ರನ್ನು ಕಂಡೇ “ಯಶಸ್ವಿಯಾಗಲು ಪ್ರಯತ್ನಿಸಬೇಡಿ, ಅದಕ್ಕೆ ಬದಲು ಮೌಲ್ಯವುಳ್ಳ ಘನತೆ ವ್ಯಕ್ತಿಯಾಗಲು ಪ್ರಯತ್ನಿಸಿ.” ಎಂದು ಅಲ್ಬರ್ಟ್  ಐನ್ ಸ್ಟೀನ್ ಹೇಳಿರಬಹುದು.ನಯ ವಾಗಿ ನಿರಾಕರಿಸಿ.ನೀವು ನಿಗದಿತ ಸಮಯದಲ್ಲಿ ಮಾಡ ಲೇಬೇಕಾದ ಕಾರ್ಯದಲ್ಲಿ ಮಗ್ನರಾದಾಗ ಬೇರೆಯವರು ತಮ್ಮ ಯಾವುದೇ ಕೆಲಸ ಹೇಳಿದರೆ ನನ್ನಿಂದ ಈಗ ತಾವು ಹೇಳಿದ ಕೆಲಸ ಮಾಡಲು ಸಾಧ್ಯವಾಗುವುದಿಲ್ಲವೆಂದು ನಯವಾಗಿ ನಿರಾಕರಿಸಿ. ಊಟ ತಿಂಡಿ ವಿಷಯಗಳಲ್ಲೂ ನಿಮಗೆ ಬಲವಂತ ಮಾಡಿ ಬಡಿಸುವಾಗ, ಮತ್ತಷ್ಟು ತಿನ್ನುವಂತೆ ಒತ್ತಾಯಿಸಿದಾಗ, ಹೊಟ್ಟೆ ತುಂಬಿದೆ ಸಾಕು ಎಂದು ನಿರಾಕರಿಸಿ.ಪಾರ್ಟಿಗಳಲ್ಲಿ ನಿಮ್ಮ ಗೆಳೆಯ/ತಿಯರು ನಿಮ್ಮ ಅಭಿರುಚಿಗೆ ಹೊಂದದ ಆಹಾರಗಳನ್ನು ಪೇಯಗಳನ್ನು ತಿನ್ನಲು ಆಗ್ರಹ ಪಡಿಸಿದರೆ ನಿರ್ಭಿಡೆಯಿಂದ ನಾನು ಒಲ್ಲೆ ಎಂದು ಹೇಳಿ.ನಿಮ್ಮತನವ ನ್ನು ಕಾಪಾಡಿಕೊಳ್ಳಿ.ಯಾರದೋ ಇಷ್ಟಕ್ಕೆ ನಿಮ್ಮ ಇಷ್ಟದ ವಿರುದ್ಧ ನಡೆದುಕೊಳ್ಳಬೇಡಿ.ನಿರ್ದಾಕ್ಷಿಣ್ಯವಾಗಿ ವರ್ತಿಸಿ. ನೇರ ಮಾತುಗಾರರಿಗೆ ಗೆಳೆಯರು ಕಡಿಮೆ. ನೇರವಾಗಿ ಮುಚ್ಚು ಮರೆಯಿಲ್ಲದೇ ಮಾತನಾಡುವವರಿಂದ ಬಹಳ ಜನ ದೂರವಿರಲು ಬಯಸುತ್ತಾರೆ.ಅವರೊಂದಿಗೆ ಇರುವು ದರಿಂದ ಯಾವಾಗ ಮಾನ ಹರಾಜು ಹಾಕುತ್ತಾರೋ ಎನ್ನುವ ಭಯ ಕಾಡುತ್ತದೆ. ಕಡ್ಡಿ ತುಂಡು ಮಾಡಿದಂತೆ ಮಾತನಾಡುವವರೊಂದಿಗೆ ಸ್ನೇಹದ ಹಸ್ತ ಚಾಚುವುದು ವಿರಳ.ನಿದಾಕ್ಷಿಣ್ಯವಾಗಿ ಮಾತ ನಾಡಿಯೂ ಸ್ನೇಹಿತರನ್ನು ಉಳಿಸಿಕೊಳ್ಳಬಹುದು ಗಳಿಸಿ ಕೊಳ್ಳಬಹುದು. ಅದು ನೀವು ಉಪಯೋಗಿಸುವ ಪದಗ ಳು ಮಾತನಾಡುವ ದಾಟಿ ಮತ್ತು  ತೋರುವ ಕಾಳಜಿಯ ಮೇಲೆ ಅವಲಂಬಿತವಾಗಿರುತ್ತದೆ.ಇಲ್ಲಿ ಬಹಳ ಮುಖ್ಯವಾ ದ ವ್ಯತ್ಯಾಸವೆಂದರೆ ಭಾವನಾತ್ಮಕ ವ್ಯತ್ಯಾಸ. ವರ್ಚಸ್ಸು ಹೆಚ್ಚಿಸಿಕೊಳ್ಳಿ.ಬಂಧು ಬಾಂಧವರಲ್ಲಿ ಸಮಾಜದಲ್ಲಿ ನನ್ನ ವರ್ಚಸ್ಸು ತುಂಬಾ ಚೆನ್ನಾಗಿದೆ. ಯಾರೂ ಯಾವುದೂ ಸಹಾಯ ಕೇಳಿದರೂ ಇಲ್ಲ, ಆಗದು ಎಂದು ಹೇಳಿದರೆ ನನ್ನ ವರ್ಚಸ್ಸಿಗೆ ದಕ್ಕೆ ಬರುತ್ತದೆ. ಇಲ್ಲ ಎಂದು ಹೇಳಿದರೆ ಅವರಿಗೆಲ್ಲ ಅತೃಪ್ತಿಯಾಗುತ್ತದೆ. ಆಗಲ್ಲ ಎಂದರೆ ಅವರಿಗೆ ಕೋಪ ಬರುತ್ತದೆ ಎಂದೆಲ್ಲ ನೀವೇ ಭಾವಿಸಿ ನನ್ನಿಂದಾಗದು ಇಲ್ಲ ಎಂದು ಮನಸ್ಸು ಕೂಗಿ ಹೇಳಿದರೂ ಅದರ ಮಾತಿಗೆ ಸೊಪ್ಪು ಹಾಕದೇ ಸಂಕೋಚ ಪಟ್ಟು ಕೊಂಡು ಕೋಲೆತ್ತಿನ ತರಹ ಗೋಣು ಹಾಕಿ ಬಿಡುತ್ತೀರಿ. ನಂತರ ನಿನ್ನಿಂದ  ಅವ ರಿಗೆಲ್ಲ ಸಂಪೂರ್ಣ ನೆರವು ಪೂರೈಸಲಾಗದೇ ಗೋಳಾಡು ವ ಪ್ರಸಂಗ ಎದುರಾಗುತ್ತದೆ. ಸಹಾಯ ನಿರೀಕ್ಷಿಸಿದವರಿಗೆ ನಿರಾಸೆ ಉಂಟಾಗಿ ನಿಮ್ಮನ್ನು ಹಾಡಿ ಹರಿಸುತ್ತಾರೆ. ಇದೆಲ್ಲ ಕ್ಕಿಂತ ಇಲ್ಲ- ಆಗದು- ನಾನು ಒಲ್ಲೆ ಎಂದು ನೇರವಾಗಿ ಹೇ ಳಿದರೆ ನಿಮ್ಮ ವ್ಯಕ್ತಿತ್ವದ ವರ್ಚಸ್ಸು ಇನ್ನಷ್ಟು ಹೆಚ್ಚಾಗುತ್ತದೆ. ನಿಸ್ಸಂಕೋಚವಾಗಿ ತಿಳಿಸಿ ಹತ್ತು ಜನರೊಂದಿಗಿದ್ದಾಗ ಅವ ರ ಹಾಗೆ ನಡೆದುಕೊಳ್ಳದಿದ್ದರೆ ಸಾಮರಸ್ಯತೆ ಇಲ್ಲ ಸಮನ್ವತೆ ಕೊರತೆ ಇದೆ ಎಂದುಕೊಳ್ಳುತ್ತಾರೆ ಎಂದು ಅವರ ಮುಲಾ ಜಿಗೆ ಒಳಗಾಗಿ ಕುಡಿಯುವುದು ತಿನ್ನುವುದು ಸೇದುವುದಕ್ಕೆ ಹೂಂ ಎನ್ನದಿರಿ. ಕೂಡಿ ನಡೆಯುವಾಗ ಬಾಳುವಾಗ ಸಾ ಮರಸ್ಯತೆ ಸಮನ್ವತೆ ಮುಖ್ಯ ನಿಜ. ಹಾಗಂತ ನಿಮ್ಮ ವ್ಯಕ್ತಿ ತ್ವಕ್ಕೆ ದಕ್ಕೆ ತರುವಂಥ ದುಷ್ಕೃತ್ಯಗಳಿಗೆ ಗಟ್ಟಿಯಾಗಿ ಒಲ್ಲೆ ಎಂದು ಹೇಳಿ. ಇಂಥ ಜನರಿಗೆ ತಪ್ಪು ಅಭಿಪ್ರಾಯಗಳಿಗೆ ಎಡೆ ಮಾಡಿಕೊಡದಂತೆ ಸ್ಪಷ್ಟವಾಗಿ ನಿಸ್ಸಂಕೋಚವಾಗಿ ತಿ ಳಿಸಿ ಬಿಡಿ. ಇದರಿಂದ ಬೇರೆಯವರೂ ತಮ್ಮ ತಪ್ಪನ್ನು ತಿದ್ದಿ ಕೊಳ್ಳುವ ಸಾಧ್ಯತೆ ಇದೆ.ಇತರರೊಂದಿಗೆ ಕೆಲಸ ಮಾಡುವಾ ಗ ಸ್ನೇಹ ಸ್ಪೂರ್ತಿ ಸಮನ್ವತೆಗಳಿಂದ ಸೇರಿಕೊಳ್ಳಿ.ನೀವು ಸ್ನೇಹಪರ ಭಾವನೆಗಳನ್ನು ವ್ಯಕ್ತ ಪಡಿಸುವ ರೀತಿಯಲ್ಲಿ ಎದುರಿಗಿನವರು ಅರ್ಥ ಮಾಡಿಕೊಳ್ಳುತ್ತಾರೆ. ಮನೆಯಲ್ಲಿ ನಿಮ್ಮ ಸಹೋದರ/ರಿಗೆ ಚಿಕ್ಕ ಮಕ್ಕಳಿಗೂ ಖಚಿತವಾಗಿ ನಿರ್ಧಿಷ್ಟವಾಗಿ ನಿರ್ದಾಕ್ಷಿಣ್ಯವಾಗಿ ಬೇಡ ಎಂದು ಹೇಳಲು ಕಲಿಸಿ ಮಾರ್ಗದರ್ಶನ ನೀಡಿ. ಹೀಗೆ ಕಲಿಸಿಕೊಡುವುದರಿಂ ದ ಮುಂದಾಗುವ ನೋವುಗಳು ತಪ್ಪುತ್ತವೆ.  ಇಲ್ಲ ಆಗದು ನಾನು ಒಲ್ಲೆ ಎಂದು ಹೇಳದಿರುವುದು ಸಣ್ಣ ತಪ್ಪು ಎಂದು ನಿರ್ಲಕ್ಷಿಸಬೇಡಿ. ದೊಡ್ಡ ಹಡಗನ್ನು ಸಣ್ಣ ರಂಧ್ರವೇ ಮುಳುಗಿಸುತ್ತದೆ. ಬುದ್ಧಿವಂತಿಕೆಯಿದ್ದರೆ ಅಂದುಕೊಂಡದ್ದನ್ನು ಸಾಧಿಸಲು ಸಾಧ್ಯ.ಇತರರು ನಿನಗೆ ಇಲ್ಲ-ಆಗದು ಎಂದು ಹೇಳಿದಾಗಲೂ ಒಪ್ಪಿಕೊಳ್ಳುವ ಗುಣ ಬೆಳೆಸಿಕೊಳ್ಳಿ. ಎಲ್ಲದಕ್ಕೂ ಇಲ್ಲ ಆಗದು ಎಂಬುದನ್ನು ಕಲಿಯಬೇಡಿ.ಇಲ್ಲ ಎಂದು ಹೇಳುವುದು ಮತ್ತು ನಕಾರಾತ್ಮಕವಾಗಿ ಸ್ಪಂದಿಸುವುದು ಎರಡೂ ಒಂದೇ ಅಲ್ಲ ಎಂಬುದು ನೆನಪಿನಲ್ಲಿರಲಿ.ಅಗತ್ಯತೆ ಬಿದ್ದಾಗ ಇತರರ ನೆರವಿಗೆ ಧಾವಿಸಿ. ಸಂಕಷ್ಟದಲ್ಲಿರುವವರ ಮೊರೆಗೆ ಕಿವಿಗೊಡುವುದನ್ನು ಮರೆಯದಿರಿ. ******************************** ಲೇಖಕರ ಬಗ್ಗೆ ಲೇಖಕಿ ಜಯಶ್ರೀ ಜೆ ಅಬ್ಬಿಗೇರಿ ಸರಕಾರಿ ಪದವಿ ಪೂರ‍್ವ ಕಾಲೇಜಿನಲ್ಲಿ ಆಂಗ್ಲ ಭಾಷಾ ಉಪನ್ಯಾಸಕಿ . ಇವರ ಹನ್ನೆರಡು ಪುಸ್ತಕಗಳು ಪ್ರಕಟಗೊಂಡಿವೆ. ಓದು ಮತ್ತು ಬರಹ ಹಾಡುಗಾರಿಕೆ ಮಾತುಗಾರಿಕೆ ಇವರ ಹವ್ಯಾಸಗಳು

ಅಂಕಣ Read Post »

ಅಂಕಣ ಸಂಗಾತಿ, ಮುಖಾಮುಖಿ

ಮುಖಾಮುಖಿ

ಅಂಕಣ ಬರಹ ಮುಖಾಮುಖಿಯಲ್ಲಿ ರೇಖಾಭಟ್ ನಮ್ಮೊಳಗಿನ ಪ್ರೀತಿ, ಕರುಣೆ, ಮಮತೆಗಳೇ ದೇವರು ರೇಖಾ ಗಜಾನನ ಭಟ್ಟ ವಜ್ರಳ್ಳಿ ಹತ್ತಿರದ ಹೊನ್ನಗದ್ದೆಯವರು. ಯಲ್ಲಾಪುರದ ಕುಂದೂರು ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದಾರೆ. ಇವರ ಪತಿ ಹೈಸ್ಕೂಲ್ ಶಿಕ್ಷಕರು. ಗಾಯನ ಮತ್ತು ಬರವಣಿಗೆ ಇವರ ಹವ್ಯಾಸಗಳು. ಗಜಲ್ ಬರೆಯುವುದರ ಮೂಲಕ ಕನ್ನಡ ಸಾಹಿತ್ಯವನ್ನು ಪ್ರವೇಶಿಸಿದ್ದಾರೆ. ಇವರ ಚೊಚ್ಚಿಲ ಕೃತಿಯನ್ನು ಮಡಿಲ ನಕ್ಷತ್ರವನ್ನು ಅದಿತಿ ಪ್ರಕಾಶನ ಪ್ರಕಟಿಸಿದೆ. ಈ ಕೃತಿಯ ಪ್ರಕಟಣೆಗೆ ಕನ್ನಡ ಪುಸ್ತಕ ಪ್ರಾಧಿಕಾರ ಧನ ಸಹಾಯ ಮಾಡಿದೆ. ಕನ್ನಡದಲ್ಲಿ ಯುವ ಬರಹಗಾರರನ್ನು ಪ್ರೋತ್ಸಾಹಿಸುವ ಪರಂಪರೆ ಇದೆ. ಆ ಸಾಲಿನಲ್ಲಿ ಈ ವರ್ಷ ಉತ್ತರ ಕನ್ನಡದಿಂದ ಆಯ್ಕೆಯಾದವರು ರೇಖಾ ಭಟ್ಟ. ವಚನಗಳನ್ನು, ದಾಸ ಸಾಹಿತ್ಯವನ್ನು ಇಷ್ಟಪಟ್ಟು ಓದುವ ರೇಖಾ ಭಟ್ಟ ಕನ್ನಡದ ಬೇಂದ್ರೆ ಮತ್ತು ಎಚ್.ಎಸ್.ವೆಂಕಟೇಶ ಮೂರ್ತಿ ಅವರ ಕವಿತೆಗಳನ್ನು ಇಷ್ಟಪಡುತ್ತಾರೆ. ಸಾಹಿತ್ಯ ಕ್ಷೇತ್ರದಲ್ಲಿ ನಾನಿನ್ನು ಎಳಸು ಎಂಬ ವಿನಯ ಸಹ ಅವರಲ್ಲಿದೆ. ವೈಚಾರಿಕ ಸಾಹಿತ್ಯ ಮತ್ತು ಪ್ರಗತಿಪರ ಧೋರಣೆಗಳನ್ನು ಗ್ರಹಿಸುವ ಮನಸ್ಸು ಸಹ ಅವರಲ್ಲಿದೆ. `ನಿನ್ನ ಮಾತುಗಳ ಧ್ವನಿಸಲೆಂದು ನಾ ಮೌನವನ್ನು ತಬ್ಬಿಕೊಂಡೆ, ನಿನ್ನ ಕನಸುಗಳು ಅರಳಲೆಂದು ನನ್ನ ಬಯಕೆಗಳ ಬಸಿದು ಕೊಂಡೆ’ ಎನ್ನುವ ರೇಖಾ ಅವರ ಗಜಲ್ ಗಳಲ್ಲಿ ಹೊಸತನದ ಹುಟುಕಾಟವೂ ಇದೆ. ಬಿಡುಗಡೆಯ ಹಂಬಲವೂ ಇದೆ. `ನಿನ್ನ ನೆನಪುಗಳ ಹೊರತಾಗಿ ಬೇರೇನೂ ಉಳಿದಿಲ್ಲ ಗೆಳೆಯಾ ದಹಿಸುತಿರುವ ವಿರಹದುರಿಯು ಏನನ್ನೂ ಉಳಿಸಿಲ್ಲ ಗೆಳೆಯಾ ‘ ಹೂಬನದಲಿ ಬರೀ ಮುಳ್ಳುಗಳೇ ಕಣ್ಣುಗಳ ಇರಿಯುತಿವೆ ಯಾಕೆ ವಿಷಾದದಲಿ ಬೆಂದ ಮನದಂತೆ ನೆಟ್ಟ ನೋಟವೂ ನೆಟ್ಟಗಿಲ್ಲ ಗೆಳೆಯಾ ಗಜಲ್ ಪ್ರಕಾರ ವಿರಹವನ್ನು ಪ್ರೇಮದ ಉತ್ಕಟತೆಯನ್ನು ಹೇಳಲು ಸಮರ್ಥವಾದ ಅಭಿವ್ಯಕ್ತಿಯ ಒಂದು ಪ್ರಕಾರ. ಈಚೆಗೆ ಗಜಲ್‌ನಲ್ಲಿ ವಿರಹ ಮತ್ತು ಪ್ರೇಮವೈಫಲ್ಯವನ್ನು ಮೀರಿ ಬದುಕಿನ ನಾನಾ ಬವಣೆಗಳನ್ನು, ಖುಷಿಯನ್ನು ಸಹ ಹೇಳಲು ಬಳಕೆಯಾಗುತ್ತಿದೆ. ರೇಖಾ ಅವರ ಮಡಿಲ ನಕ್ಷತ್ರದಲ್ಲಿ ಗಜಲ್ ಪ್ರಕಾರ ಹಳೆಯ ನೆನಪುಗಳ ಜೊತೆಗೆ ಸಮಾಜದ ಅನೇಕ ಸಂಗತಿಗಳ ವಿಮರ್ಶೆಯ ಒಳನೋಟವೂ ಇದೆ. ನನ್ನ ಗೆಳೆಯರಾದ ಕೋಲಾರದ  ದೊಡ್ಡಕಲ್ಲಹಳ್ಳಿ ನಾರಾಯಣಪ್ಪ , ಶಿರಸಿ ತಾಲೂಕು ಹೊಸ್ಮನೆ ಗ್ರಾಮದ ಗಣೇಶ್ ಹೆಗಡೆ ಹೊಸ್ಮನೆ ಸಹ ಗಜಲ್ ಗಳನ್ನು ಬರೆಯುವಾಗ ಭಿನ್ನ ಧೋರಣೆ ತಾಳಿ ಅದ್ಭುತ ಪ್ರತಿಮೆಗಳನ್ನು ಗಜಲ್ ಪ್ರಕಾರದಲ್ಲಿ ತಂದರು ಎಂಬುದು ಇಲ್ಲಿ ಸ್ಮರಣೀಯ. ಚೊಚ್ಚಲ ಕೃತಿಯಲ್ಲಿ ರೇಖಾ ಅವರು ಒಂದು ಸರಳ ರೇಖೆ ಎಳೆದಿದ್ದಾರೆ. ಅವರ ಬರಹ ಚೆಂದದ ರಂಗೋಲಿಯಾಗಲಿ ಎಂದು ಹಾರೈಸೋಣ. ನ.೧೪ ರಂದು ಅವರ ಮಡಿಲ ನಕ್ಷತ್ರ ಬೆಂಗಳೂರಿನಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದಿಂದ ಬಿಡುಗಡೆ ಸಹ ಆಗಿದೆ. ಕನ್ನಡದ ೨೩ ಜನ ಯುವ ಬರಹಗಾರರ ಸಾಲಿನಲ್ಲಿ ನಮ್ಮ ಜಿಲ್ಲೆಯ ರೇಖಾ ಭಟ್ ಸಹ ಸೇರಿರುವುದು ನಮಗೆ ಸಂತೋಷ ತಂದಿದೆ. ………………………………………………………………………………………………………………………….. ಪ್ರಶ್ನೆ : ಕವಿತೆಗಳನ್ನು ಯಾಕೆ ಬರೆಯುತ್ತೀರಿ ? ಉತ್ತರ : ನನ್ನೊಳಗಿನ ನನ್ನ ಹಗುರಾಗಿಸಿಕೊಳ್ಳಲು ನಾ ಕವಿತೆ ಬರೆಯುತ್ತೇನೆ ಪ್ರಶ್ನೆ : ಕವಿತೆ ಹುಟ್ಟುವ ಕ್ಷಣ ಯಾವುದು ? ಉತ್ತರ : ಆ ಕ್ಷಣವನ್ನು ಕವಿಸಮಯ ಎಂದಿದ್ದಾರೆ ಹಿರಿಯರು ಪ್ರಶ್ನೆ : ನಿಮ್ಮ ಕವಿತೆಗಳ ವಸ್ತು ಯಾವುದು ,ಈ ವರೆಗೆ  ಬರೆದ ಕವಿತೆಗಳ ದೃಷ್ಟಿಯಿಂದ ?  ಉತ್ತರ : ಅದಮ್ಯ ಸ್ಪೂರ್ತಿ, ನವಿರಾದ  ಪ್ರೀತಿ,  ಹೊರ ಭರವಸೆಗಳಿಂದ, ನೋವುಗಳ ಸರಿಸಿ , ನೆಮ್ಮದಿಯ ಅರಸಿ, ಹೊಸ ಆಶಯಗಳನ್ನು ಹೊತ್ತು, ಹೊಸಬೆಳಕಿನತ್ತ ಪಯಣ, ಪ್ರಶ್ನೆ : ಕವಿತೆಗಳಲ್ಲಿ ಬಾಲ್ಯ ಇಣುಕಿದೆಯೇ ? ಉತ್ತರ : ನಾನು ಬರೆದ ಗಜಲ್ ಗಳಲ್ಲಿ ಬಾಲ್ಯದ ಛಾಯೆ ಅಷ್ಟಾಗಿ ಇಣುಕಿಲ್ಲ. ಮಕ್ಕಳಿಗೆಂದೇ ಬರೆದ ಪದ್ಯಗಳಲ್ಲಿ ನನ್ನ ಬಾಲ್ಯದ ಅನುಭವಗಳನ್ನು ಬಿಂಬಿಸುವ ಯತ್ನ ಮಾಡಿದ್ದೇನೆ ಪ್ರಶ್ನೆ : ಕಾವ್ಯದ ಬಗ್ಗೆ ನಿಮ್ಮ ಕನಸುಗಳೇನು ? ಉತ್ತರ : ಕಾವ್ಯ ವ್ಯೆಯಕ್ತಿಕವಾಗಿ ಬಿಂಬಿಸಲ್ಪಟ್ಟು ಓದುಗನ ಮನಸ್ಸಿನಲ್ಲಿ ಬೇರೂರಿದರೂ , ಅದು ಸಮಾಜಮುಖಿಯಾಗಬೇಕು. ಕಾವ್ಯ  ಓದುಗನಲ್ಲಿ  ಹೊಸ ಚಿಂತನೆಯ ಬೀಜವನ್ನು ಬಿತ್ತಬೇಕು ಪ್ರಶ್ನೆ :  ಪ್ರಸ್ತುತ ರಾಜಕೀಯ ಸನ್ನಿವೇಶದ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು ? ಉತ್ತರ : ರಾಜಕೀಯದಲ್ಲಿ ದಕ್ಷ ನಾಯಕರು ಇರುತ್ತಾರೆ. ಅಸಮರ್ಥ ನಾಯಕರು ಇರುತ್ತಾರೆ .. ಜನನಾಯಕರು ಜನರಿಗಾಗಿ, ರಾಜ್ಯಕ್ಕಾಗಿ,ದೇಶಕ್ಕಾಗಿ ಶ್ರಮಿಸಬೇಕೆ ವಿನಹ ಸ್ವಲಾಭಕ್ಕಾಗಿ ರಾಜಕಾರಣ ಮಾಡಬಾರದು. ಪ್ರಶ್ನೆ :  ಧರ್ಮ ,ದೇವರು ವಿಷಯದಲ್ಲಿ ನಿಮ್ಮ ನಿಲುವೇನು ? ಉತ್ತರ : ಮಾನವೀಯತೆಯೇ ಧರ್ಮ.. ನಮ್ಮೊಳಗಿನ ಪ್ರೀತಿ, ಕರುಣೆ, ಮಮತೆಗಳೇ ದೇವರು.. ಪ್ರಶ್ನೆ :  ಪ್ರಸ್ತುತ ಸಾಂಸ್ಕೃತಿಕ ವಾತಾವರಣದ ಬಗ್ಗೆ ನಿಮಗೆ ಏನನ್ನಿಸುತ್ತಿದೆ ? ಉತ್ತರ : ಸಾಂಸ್ಕೃತಿಕವಾಗಿ ಬೆಳೆಯಲು ಬೆರೆಯಲು ಈಗ ಸಾಕಷ್ಟು ವಿಪುಲ ಅವಕಾಶಗಳಿವೆ. ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಸ್ಕೃತಿಯನ್ನು ಎತ್ತಿ ಹಿಡಿದು ನಮ್ಮ ಮೂಲ ಪರಂಪರೆಗಳನ್ನು ಮುನ್ನೆಡಸಬೇಕು… ಪ್ರಶ್ನೆ :  ಸಾಹಿತ್ಯ ವಲಯದ ರಾಜಕಾರಣದ ಬಗ್ಗೆ ನೀವು ಹೇಗೆ ಪ್ರತಿಕ್ರಿಯಿಸುವಿರಿ? . ಉತ್ತರ : ನಾನಿನ್ನು ಸಾಹಿತ್ಯ ಕ್ಷೇತ್ರದಲ್ಲಿ ಎಳಸು ಎಂಬ ಭಾವ ನನ್ನದು. ಬರೆಹ ನನಗೆ ಮತ್ತು ಓದುಗರಿಗೆ ಸಮಾಧಾನ ನೀಡಿದರೆ ಸಾಕಲ್ಲವೇ…  ಹಿರಿಯರ ಬರೆಹಗಳನ್ನು ಆಸಕ್ತಿಯಿಂದ ಓದುತ್ತೇನೆ. ಗೌರವಿಸುತ್ತೇನೆ.  ಇಲ್ಲಿನ ರಾಜಕೀಯದಿಂದ ದೂರವೇ ಉಳಿದಿದ್ದೇನೆ..ಈಗ ತ.ರಾ.ಸು. ಅವರ ದುರ್ಗಾಸ್ತಮಾನ ಓದುತ್ತಿದ್ದೆನೆ. ಕುವೆಂಪು ಅವರ ಮಲೆಗಳಲ್ಲಿ ಮದುಮಗಳು, ಕಾನೂರು ಸುಬ್ಬಮ್ಮ ಹೆಗ್ಗಡತಿ ನನ್ನ ಮುಂದಿನ ಓದು. ಪ್ರಶ್ನೆ :  ಈ ದೇಶದ ಚಲನೆಯ ಬಗ್ಗೆ ನಿಮ್ಮ ಮನಸು ಏನು ಹೇಳುತ್ತಿದೆ? ಉತ್ತರ : ಕಾಲಕ್ಕೆ ತಕ್ಕಂತೆ ಬದಲಾಗುವುದು ಜಗದ ನಿಯಮ. ಅಂತೆಯೇ ನಮ್ಮ ದೇಶವು ಪ್ರಗತಿಯತ್ತ ಮುನ್ನೆಡೆಯುತ್ತಿದೆ. ಸಾಕಷ್ಟು ಅಭಿವೃದ್ಧಿಗಳಾಗುತ್ತಿವೆ. ಈ ಜಾತ್ಯಾತೀತ ರಾಷ್ಟ್ರದ ಒಳಬಾಂಧವ್ಯ ಇನ್ನಷ್ಟು ಗಟ್ಟಿ ಮಾಡುವ ಕೆಲಸಗಳು ಈಗಿನ ಬರೆಹಗಾರದಿಂದಲೂ ಆಗುತ್ತಿದೆ ಹಾಗೂ ಆಗಬೇಕಾಗಿದೆ.  ಪ್ರಶ್ನೆ :  ಸಾಹಿತ್ಯದ  ಬಗ್ಗೆ ನಿಮ್ಮ ಕನಸುಗಳೇನು ? ಉತ್ತರ : ನಾನೂ ಮೊದಲು ಸಾಕಷ್ಟು ಓದಬೇಕಿದೆ .. ಸಾಹಿತ್ಯವೆಂಬ ಸಾಗರದ ಗುಟುಕು ಕುಡಿದು, ನಂತರ ಹೊಸಹೊಸ ಬೀಜಗಳನ್ನು ಬಿತ್ತನೆ ಮಾಡಿ, ಸಾಹಿತ್ಯ ಕೃಷಿಯನ್ನು ಶ್ರೀಮಂತಗೊಳಿಸುವ ಕನಸು ನನ್ನದು.. ನನ್ನ ಶಾಲೆಯ ಮಕ್ಕಳಲ್ಲೂ ಸಾಹಿತ್ಯ ಪ್ರೀತಿ ಹೆಚ್ಚಿಸಿ, ಕನ್ನಡ ಸಾಹಿತ್ಯದೆಡೆಗೆ ಅವರಲ್ಲಿ ಒಲವು ಮೂಡಿಸುವ ಹಂಬಲವಿದೆ. ಪ್ರಶ್ನೆ : ಕನ್ನಡ ಸಾಹಿತ್ಯದಲ್ಲಿ ನಿಮ್ಮ ಇಷ್ಟದ ಹಾಗೂ ಕಾಡಿದ ಕವಿ ಯಾರು ? ಉತ್ತರ : ದ.ರಾ. ಬೇಂದ್ರೆ. ಹಾಗೂ ಎಚ್ ಎಸ್,ವೆಂಕಟೇಶ ಮೂರ್ತಿಯವರ ಭಾವಗೀತೆಗಳು. ………

ಮುಖಾಮುಖಿ Read Post »

You cannot copy content of this page

Scroll to Top