ಗಝಲ್
ಮರುಳಸಿದ್ದಪ್ಪ ದೊಡ್ಡಮನಿ
ನಿನ್ನ ಹೃದಯದ ನೋವು ಅರಿಯದಾಯಿತು ಗೆಳತಿ
ಪ್ರೀತಿಯ ಆಳಕಿಳಿದು ಕೇಳಿ ತಿಳಿಯದಾಯಿತುಗೆಳತಿ
ಮನವೆಲ್ಲ ಸೋತು ಮೆತ್ತಗಾಗಿ ಹೋದೆ ನಾನು
ಮೌನವೆ ಉಸಿರಾಗಿ ಮಾತು ಬಾರದಾಯಿತು ಗೆಳತಿ
ಒಲವನೆಲ್ಲ ತಂದು ಸುರಿದರೂ ನಿನಗೆ ತಿಳಿಯಲಿಲ್ಲ
ಗಾಯಗಳ ಬರೆಗೆ ಜೀವ ಮೇಲೇಳದಾಯಿತು ಗೆಳತಿ
ಜೀವ ಶವವಾಗಿ ನರಳುತಿದೆ ನಿನ್ನೆಡೆಗಿನ ಆಸೆಗೆ
ಬರುವಿಕೆಗೆ ಕಾದು ಜೀವ ಶವವಾಯಿತು ಗೆಳತಿ
ಕಂಡ ಕನಸುಗಳೆಲ್ಲ ನುಚ್ಚು ನೂರಾದವು ನಿನಗಾಗಿ
ಮರುಳನ ಕಣ್ಣಿರಧಾರೆ ನದಿಯಾಗಿ ಹರಿದೊಯಿತು ಗೆಳತಿ
*********************************