ಹಾವು ತುಳಿದೇನೇ?
ರಾಜ್ಯಮಟ್ಟದ ಪತ್ರಿಕೆಗಳ ಜಿಲ್ಲಾ ಆವೃತ್ತಿಯ ತುದಿಮೂಲೆಯಲ್ಲಿ ಮುದ್ರಿತವಾಗುವ ಒಂದು ಕಾಲಂ ನನ್ನನ್ನು ಸದಾ ಕಾಡುತ್ತದೆ. ಅದೆಂದರೆ `ಅಪರಾಧ ಸುದ್ದಿ’. ಕೆಲವು ಪತ್ರಿಕೆಗಳು ಈ ಶೀರ್ಷಿಕೆಯನ್ನು ಕೆಂಪಕ್ಷರಗಳಲ್ಲಿಟ್ಟು ಅದರ ಕೆಳಗೆ ವರದಿ ಪ್ರಕಟಿಸುತ್ತವೆ. ಈ ರಕ್ತವರ್ಣವು ಅಪಾಯ ಮತ್ತು ಸಾವನ್ನು ಸಂಕೇತಿಸಲಿ ಎಂಬುದು ಅವುಗಳ ಇರಾದೆಯಿರಬೇಕು. ಅಲ್ಲಿ ಎರಡು ಮಾದರಿಯ ಸುದ್ದಿಗಳಿರುತ್ತವೆ. ಮೊದಲನೆಯವು-ಬೈಕುಗಳ್ಳರ ಬಂಧನ, ಸರಗಳ್ಳತನ, ಮನೆಯ ದರೋಡೆ, ಭೀಕರಕೊಲೆ, ಪ್ರಿಯಕರನೊಂದಿಗೆ ವಿವಾಹಿತ ಸ್ತ್ರೀ ಪರಾರಿ, ಮಣ್ಣುಕುಸಿದು ಕೂಲಿಗಾರನ ಜೀವಂತ ಸಮಾಧಿ, ಜಾತ್ರೆಯಲ್ಲಿ ಗುಂಪು ಘರ್ಷಣೆ, ಬಣವೆ ದಹನ, […]
ಪಟ್ಟಣಕ್ಕೆ ಬುದ್ಧ ಬರಬೇಕಿತ್ತು
ಕವಿತೆ ಪ್ಯಾರಿಸುತ ಅದು ಒಂದು ದಾರಿಬುದ್ಧ ಹೋಗುತ್ತಿದ್ದ ದಾರಿಯದುಅವನು ಎದ್ದು ಹೋದ ಸಮಯಕ್ಕೆನಾನೂ ಎದ್ದು ಯಾರಿಗೂ ಹೇಳದೆಹೋಗಿಬಿಟ್ಟೆ;ಅವನಿಗೆ ಕಂಡಂತೆ ನನಗೆ ಯಾವಹೆಣವಾಗಲಿ,ಮುದಿಯನಾಗಲಿಯಾರೂ ಒಬ್ಬರೂ ಸಿಗಲೇ ಇಲ್ಲಅಥವಾನನ್ನ ಕಣ್ಣೇ ಕಾಣಲಿಲ್ಲವೋ ಗೊತ್ತಿಲ್ಲನಾನು ಮಾತ್ರ ಅವನು ಸಿಗುವಭರವಸೆಯ ಭರದಲ್ಲಿ ಹೆಜ್ಜೆಗಳನ್ನುಹಾಕುತ್ತಲೇ ಹೋಗುತ್ತಿದ್ದೆನನ್ನ ಚಪ್ಪಲಿಗಳೂ ಅದೇ ಭರವಸೆಯನ್ನುಹುಟ್ಟು ಹಾಕಿದ್ದವುಒಳಗೊಳಗೆ ಬುದ್ಧನಾಗುವ ಜಂಬಕಾರಂಜಿಯಂತೆ ರಂಜಿಸುತ್ತಿತ್ತುನಾನು ರಾಜನ ಮಗನಲ್ಲದಕ್ಕೋ,ಗುಡಿಸಲು ಹೊರತು ಬೇರೇನೂಇಲ್ಲದಕ್ಕೋತಿಳಿಯಲಿಲ್ಲ ಮತ್ತೆ ಮುಂದೆ ಹೆಜ್ಜೆ ಹಾಕಿದೆಕಾಡೆಲ್ಲ ಅಲೆದರೂ ಯಾವ ಪಾಪಪ್ರಜ್ಞೆಯುಕಾಡದಿರುವದುನನ್ನಲ್ಲೂ ಆಶ್ಚರ್ಯ ಉಂಟು ಮಾಡಿತ್ತುಅಲ್ಲಿಂದ ನೇರವಾಗಿ ಪಟ್ಟಣದ ಎದೆಯ ಮೇಲೆನಡೆಯುತ್ತಿದ್ದೆಗುಡಿಯ ಪಕ್ಕ ಹಸಿವಿಗಾಗಿ […]
ಕರೆ ಮಾಡಬೇಡಿ…ಪ್ಲೀಸ್
ಕವಿತೆ ಸುಜಾತ ಲಕ್ಷ್ಮೀಪುರ. ಒಂದೇ ಸಮನೆ ಎಡಬಿಡದೆಝಣಗುಟ್ಟುವ ಪೋನುಕೋಪ ನೆತ್ತಿಗೇರಿಸಿ ಸಿಟ್ಟು ಮತ್ತು ಅಳುಒತ್ತರಿಸಿಕೊಂಡು ಬಂದುಕಣ್ಣೀರಾಗಿ ಹರಿದರೂಬಿಕ್ಕಳಿಕೆ ಹಾಗೇ ಉಳಿದಿದೆ. ದಯವಿಟ್ಟು ಕರೆ ಮಾಡಬೇಡಿನಾನು ಎಷ್ಟು ಬಾರಿ ಹೇಳಲಿಹೌದು ನಾನು ಕರೋನಾ ಸೋಂಕಿತಳು.ಸೋಂಕಿತಳೆ. ಮತ್ತೆ ಮತ್ತೆ ವಿಳಾಸ ಖಾತರಿಆಗಬೇಕೇಕೆ!??ಹೊರಟಿಲ್ಲಾ ಇನ್ನೂ ವಿಳಾಸವಿಲ್ಲದ ಊರಿಗೆ. ದೇಹದ ನೋವಿಗೇನೋಗುಳಿಗೆಗಳಿವೆ…ಯಾರಾದರೂ ಕಳಿಸಿಕೊಡಿವಿಳಾಸ ತಿಳಿಸುವೆಸೋಂಕಿತಳೆಂಬ ಹೆಸರು ಕಿತ್ತಾಕುವ ಗುಳಿಗೆ. ಹಾಲು,ತರಕಾರಿ,ದಿನಸಿತಂದು ಕೊಡುವವರಿಲ್ಲದೆಕಿಟಕಿ ಸರಳುಗಳ ಆಚೆ ಸತ್ತ ಮನಸ್ಸಿನ ಮಂದಿ ನೋಡುತ್ತಾ ಕಾಲದೂಡುತ್ತಿದ್ದೇನೆ. ನಾನೀಗ ವೈರಾಣುವಿನ ವಿರುದ್ದಗಟ್ಟಿಯಾಗಿ ನಿಂತಿದ್ದೇನೆ.ಪದೇ ಪದೇ ಕರೆಮಾಡಿಪ್ರಶ್ನಿಸಬೇಡಿ ನಿರುಮ್ಮಳವಾಗಿರಲು ಬಿಟ್ಟುಬಿಡಿ. […]
ಯಕ್ಷಿಣಿ ಗಾನ
ಮೊದಲ ಕವಿತೆಯ ರೋಮಾಂಚನ-ಸರಣಿಯ ಕೊನೆಯ ಬರಹ ಪೂರ್ಣಿಮಾ ಸುರೇಶ್ ಬಾಲ್ಯ, ಚಂದಮಾಮ ಪುಸ್ತಕಗಳ ಪುಟಗಳೊಳಗೆ, ಅವಿತು ಚಿತ್ರಗಳಿಗೆ ಬಣ್ಣ ತುಂಬುತ್ತಿತ್ತು. ಭೂತದ ಭೂತ, ಭವಿಷ್ಯ-ಪಿಷಾಚಿ! ಯಾವುದರ ಕಾಟವೂ ಇರದ ಮುಕ್ತವಾಗಿ ಅರಳಿದ ಸುರುಳಿ ಮೊಗ್ಗು ಮೂಡಿದಾಗ, ‘ ಇಂದು’ ವಿಗೆ ಲಂಗದಾವಣಿ. ಯಾರ ಮನೆಯಲ್ಲಿ, ಯಾವ ಅಂಗಡಿಗಳಲ್ಲಿ ಹಳೆಯ ಕಥೆ ಪುಸ್ತಕ ಸಿಗಬಹುದು. ರಾತ್ರಿ ಹತ್ತಿರದಲ್ಲಿ ಬಯಲಾಟ ಇರಬಹುದೇ?.. ಅಮ್ಮನ ಕಣ್ಣು ಬೆದರಿಸಬಹುದೇ?.ಅಜ್ಜಿಯನ್ನು ಹೇಗೆ ಒಪ್ಪಿಸಬೇಕು..ಇವಿಷ್ಟು ಬದುಕಿನ ಬಗ್ಗೆ ಮೂಡಿಕೊಳ್ಳುತ್ತಿದ್ದ ಪ್ರಶ್ನೆ ಮೊಗ್ಗುಗಳು. ರಾತ್ರಿ ನೋಡಿದ […]
ಸಂವಿಧಾನ ಶಿಲ್ಪಿಗೆ
ಅನುವಾದ ಕನ್ನಡ ಮೂಲ: ಪೂರ್ಣಿಮಾ ಸುರೇಶ್ ಇಂಗ್ಲೀಷಿಗೆ: ನಾಗರೇಖಾ ಗಾಂವಕರ್ ಗಂಡು ಹುಡುಗ ಆಗಬಾರದಿತ್ತೇ!ಆ ನಿಡುಸುಯ್ಲುಹರಿತ ಚೂರಿಯಾಗಿಮರ್ಮವನ್ನು ಇರಿಯುತ್ತಿತ್ತು.ಪಾದದ ಕೆಳಗಿನ ಮಣ್ಣಜಾರದಂತೆ ಒತ್ತಿಟ್ಟುಕೊಳ್ಳಬೇಕು.ನೆಟ್ಟ ನೋಟದಿಂದ ನೋಡುತ್ತಿದ್ದೆ. ನೀವು ನೆನಪಾಗುವಿರಿ. ನಿನ್ನ ಮಗಳು ದೊಡ್ಡವಳಾದಳೇ!ಒಳಕೋಣೆಗೆ ಸರಿಸಿಡು ಒಳಗೇ ಇರಲಿನೋವು ಎದೆಯಾಳಕೆ ಬಸಿದುಒಡಲನುರಿಸಿ ಸಾಗುತ್ತಿದೆಲಾವಾರಸ ಬಸಿದಿಟ್ಟು ಕೊಳ್ಳಬೇಕುಹರಿದ ದೃಷ್ಟಿಯಿಂದ ಕಾಣುತ್ತಿದ್ದೆ ನೀವು ನೆನಪಾಗುತ್ತೀರಿ ನೀನೀಗ ಅವನ ಹೆಂಡತಿ ನೆನಪಿರಲಿ!ಅವನ ಹೆಜ್ಜೆಯ ಹಣೆಗೊತ್ತಿ ನಡೆಸರ್ರನೆ ಜಾರಿ ಬಿದ್ದಿದ್ದೆನನ್ನೊಳಗಿನಾಕೆಗೆ ಆತ್ಮಶಕ್ತಿ ತುಂಬಬೇಕುಇರಿವ ಕಣ್ಣಿಂದ ಕಂಡೆ ನೀವು ನೆನಪಾಗುವಿರಿ. ಅವಮಾನದ ಗಾಯತಿರಸ್ಕೃತರಾಗುವ ನೋವುನೀವು ಉಂಡು,ಸೆಟೆದು […]
ಜಂಜಾಟದ ಬದುಕು
ಕವಿತೆ ಪೂಜಾ ನಾರಾಯಣ ನಾಯಕ ಬೆಳಗೆದ್ದು ಎತ್ತೆತ್ತ ನೋಡಿದರೂ ಕಾಣದಾ ದಿಕ್ಕುಕಂಡರೇನಂತೆ, ಅತ್ತ ಪೋದರೆ ಸಿಗದಾ ಹಕ್ಕುಕಡಿವಾಣವಿಲ್ಲದೇ ಕಡಲಂತೆ ಬೋರ್ಗರೆವ ಆಸೆಗಳ ಈಡೇರಿಕೆಗೋಸುಗನಿತ್ಯವೂ ದಿನಪೂರ್ತಿ ಜಂಜಾಟಮತ್ತದೇ ವಿಫಲ ಯತ್ನ. ತಲೆಪೂರ್ತಿ ತುಂಬಿದಾ ನಿಬಿಡ ಹಗಲುಗನಸುಗಳುನಿಬ್ಬಣದಂತೆ ಸಾಗುತಿವೆಕಂಡೆಲ್ಲ ಕನಸುಗಳು ದೀಪ ನಂದಿದಂತೆ ನಂದಿಹೋಗುತಿವೆಸಹಿಸಲಾಗದ ಸಂಕಟಎತ್ತೆತ್ತಲಿಂದಲೋ ಕುಠಾರದ ಮೊನಚಂತೆ,ಕುಹಕ ಮಾತುಗಳೇಳುತಿವೆಸುಡುತಿಹುದು ನನ್ನೆದೆಯ ವಾರಿಧಿಯು ಬೆಂಕಿಯಾಜ್ವಾಲೆಯಂತೆ.ತಪ್ತ ಹೃದಯಕೆ ತಿರಸ್ಕಾರಎಲ್ಲೆಲ್ಲೂ, ಮತ್ತೆಲ್ಲ ಯತ್ನ ನೆಲಕಚ್ಚಿಹೋದಾಗ ಕೊನೆಗೇಗೋ ಹೋಗುವುದು ಮುಂದಕ್ಕೆ ಬದುಕು ಹುರುಪು-ಗಿರುಪುಗಳಿಲ್ಲ ಬದುಕಲ್ಲಿನಶ್ವರವೇ ಕೊನೆಗೂ ಎಂಬ ಸಾರಕ್ಕೆ ಶಿರಬಾಗಿದಿಕ್ಕು-ಹಕ್ಕುಗಳಿಲ್ಲದೇಕಡಿವಾಣ-ಗಿಡಿವಾಣಗಳಿಲ್ಲದೇ ಬೋರ್ಗರೆವ ಆಸೆಗಳ ಈಡೇರಿಕೆಗೆನಿತ್ಯವೂ […]
ಅನುವಾದ ಸಂಗಾತಿ
ಕವಿತೆ ಕನ್ನಡ ಮೂಲ: ಪೂರ್ಣಿಮಾ ಸುರೇಶ್ ಇಂಗ್ಲೀಷಿಗೆ: ನಾಗರೇಖಾ ಗಾಂವಕರ್ ಸಂವಿಧಾನ ಶಿಲ್ಪಿಗೆ ಗಂಡು ಹುಡುಗ ಆಗಬಾರದಿತ್ತೇ!ಆ ನಿಡುಸುಯ್ಲುಹರಿತ ಚೂರಿಯಾಗಿಮರ್ಮವನ್ನು ಇರಿಯುತ್ತಿತ್ತು.ಪಾದದ ಕೆಳಗಿನ ಮಣ್ಣಜಾರದಂತೆ ಒತ್ತಿಟ್ಟುಕೊಳ್ಳಬೇಕು.ನೆಟ್ಟ ನೋಟದಿಂದ ನೋಡುತ್ತಿದ್ದೆ ನೀವು ನೆನಪಾಗುವಿರಿ. ನಿನ್ನ ಮಗಳು ದೊಡ್ಡವಳಾದಳೇ!ಒಳಕೋಣೆಗೆ ಸರಿಸಿಡು ಒಳಗೇ ಇರಲಿನೋವು ಎದೆಯಾಳಕೆ ಬಸಿದುಒಡಲನುರಿಸಿ ಸಾಗುತ್ತಿದೆಲಾವಾರಸ ಬಸಿದಿಟ್ಟು ಕೊಳ್ಳಬೇಕುಹರಿದ ದೃಷ್ಟಿಯಿಂದ ಕಾಣುತ್ತಿದ್ದೆ ನೀವು ನೆನಪಾಗುತ್ತೀರಿ ನೀನೀಗ ಅವನ ಹೆಂಡತಿ ನೆನಪಿರಲಿ!ಅವನ ಹೆಜ್ಜೆಯ ಹಣೆಗೊತ್ತಿ ನಡೆಸರ್ರನೆ ಜಾರಿ ಬಿದ್ದಿದ್ದೆನನ್ನೊಳಗಿನಾಕೆಗೆ ಆತ್ಮಶಕ್ತಿ ತುಂಬಬೇಕುಇರಿವ ಕಣ್ಣಿಂದ ಕಂಡೆ ನೀವು ನೆನಪಾಗುವಿರಿ. ಅವಮಾನದ ಗಾಯತಿರಸ್ಕೃತರಾಗುವ […]
ಬಸವಣ್ಣನಿಗೊಂದು ಪತ್ರ
ಲೇಖನ ನೂತನ ದೋಶೆಟ್ಟಿ ಶರಣು ಶರಣಾರ್ಥಿಗಳು.ದಿನವೂ ಬೆಳಿಗ್ಗೆಇವನಾರವ ಇವನಾರವ ಎನ್ನದಿರಯ್ಯ,ಇವ ನಮ್ಮವ ಇವ ನಮ್ಮವ ಎಂದೆನಿಸಯ್ಯಾ ಎಂಬ ನಿನ್ನ ವಚನವನ್ನು ಹೇಳಿಕೊಳ್ಳುವಾಗ ನಾಲಿಗೆ ತೊದಲುತ್ತದೆ. ಎಲ್ಲರನ್ನೂ ನನ್ನವರು ಎಂದು ಅಪ್ಪಿಕೊಂಡ ನಿನ್ನ ನಾಡಿನಲ್ಲೇ ಇವ ನಮ್ಮವನಲ್ಲ ; ನಾವೇ ಬೇರೆ ಅವನೇ ಬೇರೆ ಎಂದು ಪ್ರತಿಪಾದಿಸಲು, ತಮ್ಮ ಈ ಪ್ರತಿಪಾದನೆಯನ್ನು ಸ್ಥಾಪಿಸಲು ಜನ ಸಂಚು ಮಾಡುತ್ತಿದ್ದಾರೆ ! ನಿನ್ನ ಕಾಲದ ಇತಿಹಾಸ ಮರುಕಳಿಸಿಬಿಟ್ಟಿದೆ ಅಣ್ಣಾ.ಜಾತಿ ವಿಜಾತಿ ಎನಬೇಡ ಎಂದು ಕಳಕಳಿಸಿದ ನೀನು ಜಾತಿ ಆಧಾರದ ಮೇಲೆ ಒಡೆದು […]
ಮೊದಲ ಕವಿತೆ
ಮೊದಲ ಕವಿತೆಯ ರೋಮಾಂಚನ ನಾಗರೇಖಾ ಗಾಂವಕರ್ ಬರವಣಿಗೆ ಎಂಬುದು ಒಂದು ತುರ್ತಾಗಿ ಬದಲಾಗುವುದು ಯಾವಾಗ? ಎಂಬ ಪ್ರಶ್ನೆಗೆ ಉತ್ತರ ಸಿಗಬಹುದು ನನ್ನಲ್ಲಿ. ಆದರೆ ಮೊದಲ ಕವಿತೆ ಬರೆದ ಕ್ಷಣದ ಅನುಭವ ಹೇಗೇ ಹೇಳಲಿ? ಬಹುಶಃ ಇದಕ್ಕೆ ಅಭಿಪ್ರಾಯ ವ್ಯಕ್ತ ಪಡಿಸುವುದು ಕಷ್ಟದ ಕೆಲಸ. ಹೌದು ನಾನೂ ಕೂಡ ಆ ಕವಿತೆ ಬರೆದೆ. ಅದು ನನ್ನ ಜೀವನದ ಮೊದಲ ಕವಿತೆ. ಕವನದ ಶೀರ್ಷಿಕೆ ವಿಶ್ವಕರ್ತನ ಗುಡಿ. ನನ್ನ ಇಪ್ಪತ್ತೆರಡನೇ ವಯಸ್ಸಿಗೆ ಬರೆದ ಕವಿತೆ. ಅದಕ್ಕೂ ಮುಂಚೆ ನಾನೊಂದು ಓದುವ […]