ಕಸಾಪಗೆ ಮಹಿಳಾ ಅದ್ಯಕ್ಷೆ ಬೇಕು
ಚರ್ಚೆ ಅಬ್ಬಾ! ಏನಿದು ವಿಪರ್ಯಾಸ,ಸರಾಸರಿ ನೂರು ವರ್ಷಗಳು ಉರುಳಿದರೂ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೀಯ ಸ್ಥಾನವನ್ನು ಮಹಿಳೆಯರು ಅಲಂಕರಿಸಲಿಲ್ಲವೇಕೆ? ಎನ್ನುವುದು ತಿಳಿದ ತಕ್ಷಣ ನನಗೆ ಕಾಡುತ್ತಿರುವ ಒಂದು ಬಹುದೊಡ್ಡ ಪ್ರಶ್ನೆಯೇ ಅದು. ಮಹಿಳೆಯರೇ ತಮಗೆ ಆ ಪದವಿ ಬೇಡವೆಂದು ಸುಮ್ಮನುಳಿದಿದ್ದಾರೋ? ಅಥವಾ ಆ ಸ್ಥಾನಕ್ಕೆ ಹೋಗಲು ಅವರಿಗೆ ಅವಕಾಶವನ್ನೇ ನೀಡಲಿಲ್ಲವೋ? ನಾನರಿಯೆ. ಆದರೆ ಇಲ್ಲಿಯವರೆಗೂ ಅಧ್ಯಕ್ಷೀಯ ಪೀಠವನ್ನು ಹತ್ತಲಿಲ್ಲ ಎಂಬ ಸಂಗತಿಯನ್ನಂತು ತಿಳಿದುಕೊಂಡೆ. ಪುರುಷನ ಜೀವನದ ಪ್ರತಿಯೊಂದು ಹಂತದಲ್ಲೂ ಹೆಣ್ಣಿನ ಪಾತ್ರ ಬಹುಮುಖ್ಯವಾದುದು. ಜನ್ಮಕೊಟ್ಟು ಸಾಕಿ ಸಲಹುವ […]
ಕಾವ್ಯಯಾನ
ಕವಿತೆ ಮಿಲನ ವೀಣಾ ರಮೇಶ್ ಮದುವನದ ಅಂಗಳದಲಿಮಧುರ ಮೌನ ಹಾಸಿದೆಮಧು ಮನಸುಗಳು ಬೆಸೆದಿರೆ,ಮಧು ಅರಸುವ ದುಂಬಿಗಳುಮಧುವಿಹಾರದ ಹಿಗ್ಗಿನಲಿ ಹಸಿರ ಹಂದರದೊಳಗೆಗಂಧರ್ವರೆ ಧರೆಗಿಳಿದಂತೆಮುದ ನೀಡಿ ಮತ್ತೇರಿಸಿದಆಲಾಪದ ದುಂಬಿಗಳುಮಧು ಹನಿಯೊಂದುಜಾರಿದೆ,ಕೆನ್ನೆ ಮಾತಾಡಿದೆತುಸು ಬಣ್ಣದಲಿ,ಅದರುತಿದೆ ಅಧರಗಳು ಭಾವಗಳ ಅರಮನೆಯಲಿಮಧುಮಂಚದ ಉಯ್ಯಾಲೆಪ್ರೇಮರಾಗದಿ ತೂಗುತಿರೆಸವಿಗನಸುಗಳು ಬಿಗಿದಪ್ಪಿನನ್ನೊಡಲಲಿ ಕೂತಿರೇ ಮಧುಚಂದಿರನು ಕರೆದಿರೆಮೆಲ್ಲನೆತನುಮನಗಳು ಹೆಣೆದಿದೆಪ್ರೇಮದ ಚಿಲುಮೆಅಧರ ಸುಖದೊಳಗಿನಮದಿರೆ,ಯ ಬೆಚ್ಚನೆಯಹಿತದೊಳಗೆ ಮಧುಮಿಲನದ ಅರಸಿಗೆಚೈತ್ರವಸಂತನ ಆಗಮನದ ಸಂತಸಮತ್ತದೇ ಪ್ರತಿಪದೆಗೆಸಂಭ್ರಮದ ಮಧುಮಾಸ *********************
ಕಾವ್ಯಯಾನ
ಕವಿತೆ ನಾಲ್ಕು ಹೆಜ್ಜೆ ನಡೆಯಬಹುದಿತ್ತು ಪ್ಯಾರಿಸುತ ನಾಲ್ಕು ಹೆಜ್ಜೆ ನಡೆಯಬಹುದಿತ್ತು ನೀನುಒಂದೇ ಒಂದು ಹೆಜ್ಜೆ ಮುಂದೆ ಹಾಕಲಿಲ್ಲಕೈಕೈ ಹಿಡಿದು,ಭುಜಕೆ ಭುಜವ ರಕ್ಷಿಸಿಮೆಚ್ಚಿಕೊಂಡಿದ್ದೆ ನಾನುಹಿಡಿದ ಕೈ ಕೊಸರಿಕೊಂಡು ಅಲ್ಲೇ ನಿಂತೆ ನೀನುನಾನು ನೀನು ಮತ್ತು ಭವಿಷತ್ತಿನ ನಮ್ಮೆರಡುಮುದ್ದು ಮಕ್ಕಳಿಗೆ ನೀತಿಯನ್ನುನೀಡಬಹುದಿತ್ತು ನಾವು…ಇಬ್ಬರಲ್ಲಿ ಯಾರೋ ಒಬ್ಬರು ನೀತಿಗೆಟ್ಟಿದ್ದೇವೆಪುಟ ಹಿಮ್ಮುಖವಾಗಿ ಹಾರಿದಂತೆಲ್ಲಇಬ್ಬರು ಸ್ವಚ್ಛಂದ ಪ್ರೇಮಿಗಳು ಅನ್ನುವಅದೆಷ್ಟು ಪುರಾವೆಗಳು ಉಲ್ಲೇಖಿತವಾಗಿವೆಕೆಲವು ಪುಟಗಳು ಮಾಸಿ ಹರಿದು ಹೋಗಿವೆಅದರಲ್ಲೇನಾದರೂ ದಾಖಲಿಸಿದ್ದುಉಳಿದಿರಬಹುದೇನೋ…?! ನಾಲ್ಕು ಹೆಜ್ಜೆ ಮುಂದೆ ಹೋಗಿ,ತಿರುಗಿ ನೋಡಿದೆ ನಾನುನನ್ನ ಹೆಜ್ಜೆ ಅಳಿಸಿ,ಗುರುತು ಸಿಗದೆ ಹಲ್ಲು ತೋರಿದೆ […]
ಕಾವ್ಯಯಾನ
ಲೀನವಾಗುವೆ ಕವಿತೆ ಸರಿತಾ ಮಧು ದಟ್ಟ ಕಾನನದ ನಡುವೆದಿಟ್ಟ ಹೆಜ್ಜೆಯನಿಟ್ಟು ನಡೆವೆಸುತ್ತಲೂ ಜೀಂಗುಡುವ ಸದ್ದುಕತ್ತನೆತ್ತಲು ಕಾರ್ಮೋಡಗಳ ಕತ್ತಲುಅಡಿಇಡಲು ಕಲ್ಲು ಮುಳ್ಳಿನ ಹಾದಿಅಲ್ಲೇ ನಿಂತರೆ ಕ್ರೂರಮೃಗಗಳ ಭೀತಿ ಮುಗಿಲೆತ್ತರದ ಮರಗಳಿಗೆ ಒರಗಲೇ ಸ್ವಲ್ಪಮುಗಿದ ಹಾದಿಗೊಮ್ಮೆ ತಿರುಗಲೇ ಸ್ವಲ್ಪ ಭಯ , ಹಾ ! ಭಯದಣಿವ ಲೆಕ್ಕಿಸದೇ ಓಡಿದೆ ಮತ್ತೆನಾ ಕಳೆದುಕೊಂಡ ನನ್ನ ಸಾಮ್ರಾಜ್ಯಕ್ಕೆಅದು ಮಾತ್ರ ಎಂದಿಗೂ ನನ್ನದೇನಾನಲ್ಲಿ , ನಾನು ನನಗಾಗಿ ಮಾತ್ರಏಕಾಂತತೆಯ ಮೌನದೊಳಗೆಲೀನವಾಗುವುದೆನ್ನ ಮನ.. ******************************
ಪ್ರಶ್ನಿಸು ಪ್ರಶ್ನಿಸುತ್ತಲೇ ಇರು
ಕವಿತೆ ನಾಗರಾಜ ಹರಪನಹಳ್ಳಿ ಮುಗ್ಧತೆ ಸೌಂದರ್ಯವಹಾಗೆಲ್ಲ ಬೀದಿಗಿಡಲಾಗದುಒಲವೇಬೀದಿಯಲ್ಲಿ ಉರಿವ ಕಣ್ಣುಗಳಿವೆ ಹಾದಿ ಬೀದಿಗಳಲ್ಲಿ ಕರೋನಾ ಭಯಅದನ್ನೂ ಮೀರಿದ ಖದೀಮರ ಸಂಚಿದೆಯಿಲ್ಲಿ ;ಸಮಾಜ ಇನ್ನೂ ಬದಲಾಗಿಲ್ಲಬದಲಿಸಲು ಯತ್ನಿಸಿದ ಬುದ್ಧ, ಬಸವ ,ಅಕ್ಕಅಲ್ಲಮ ಸೋತಿದ್ದಾರೆ….ಪುರೋಹಿತಶಾಹಿಯ ಕುತಂತ್ರಕೆ ಆನೆಕಾಲಿನ ಸಂಕೋಲೆಗೆ ಸಿಲುಕಿನೆಲಕೆ ಹತ್ತಿದ ರಕ್ತದ ಕಲೆ ಕಲ್ಯಾಣದ ಬೀದಿ ಬೀದಿಗಳಲಿಮತ್ತೆ ಅರಳಲಿ; ಅವೇ ಕಲ್ಯಾಣದ ಕ್ರಾಂತಿಯ ಹೂಚಿತ್ರಗಳಾಗಲಿ :ಅತ್ತ ಅತ್ತತ್ತ ಒಮ್ಮೆ ಹೊರಳಿ ನೋಡುಯಾವ ಹೆಸರುಗಳ ಇತಿಹಾಸದಲ್ಲಿ ಹೂಳಲಾಗಿದೆಯೋ ಅಲ್ಲಿಂದಲೇ ಕಸುವು ಪಡೆದುಕೊ ಗೆಳತಿ, ಆ ಕನಸುಗಳ ಹಂಚು ಕಲ್ಯಾಣದ ಬೀದಿಗಳಲಿ […]
ಬಾನ್ಸುರಿ ಮತ್ತು ರಾಧೆ
ಕಬ್ಬಿಗರ ಅಬ್ಬಿ – ಸಂಚಿಕೆ -6 ಭೂಪೇಶ್ವರೀ ರಾಗದ ಆಲಾಪದ ಮಂದ್ರಸ್ಥಾಯಿಯ ಸ್ವರಗಳು, ಸಾಯಂಕಾಲದ ಸಾಂದ್ರತೆಯನ್ನು ಜೇನಿನಂತಾಗಿಸಿ, ಧಾರೆಯೆಷ್ಟು ಎಳೆಯಾದರೂ ಕಡಿಯದಂತೆ, ವಾತಾವರಣವನ್ನು ಆರ್ದ್ರವಾಗಿಸಿತ್ತು. ಗಾಯಕನ ( ಒ ಎಸ್. ಅರುಣ್) ನಾಭಿಯಿಂದ ಹೊರಟ ಸ್ವರಕಂಪನದ ತರಂಗ, ಎದೆಯನ್ನು ಹೊಕ್ಕು, ಭಾವ ಹೀರಿ, ಕಂಠದಿಂದ ಹೊರಹರಿಯುವಾಗ, ಆಗಷ್ಟೇ ಸೋನೆ ಮಳೆ ನಿಂತು, ವಾತಾವರಣದ ತಂಪೊಳಗೂ ಆರ್ದ್ರ ಭಾವ. ಬಾನ್ಸುರಿಯ ದಪ್ಪ ಬಿದಿರಿನ ರಂಧ್ರಗಳಿಂದ ಸ್ವಾತಂತ್ರ್ಯ ಪಡೆದ ನಾದಸೆಲೆ ಅಂತರಂಗದ ಅಂತರ್ನಾದವೇ ಆಗಿತ್ತು. ತಬಲಾದ ಮೇಲೆ ಹೂಪಕಳೆಗಳು ತಡವಿದಂತೆ […]
ಮೂವರು ವೃತ್ತಿ ಕಲಾವಿದರ ಕಣ್ಮರೆ
ಲೇಖನ ಮಲ್ಲಿಕಾರ್ಜುನ ಕಡಕೋಳ ಅಂಜಲಿದೇವಿ ಅವರು ಎಂಟುಮಂದಿ ಅಕ್ಕತಂಗಿಯರು. ಎಂಟೂ ಮಂದಿಯು ವೃತ್ತಿರಂಗಭೂಮಿ ಅಭಿನೇತ್ರಿಯರು. ಆದವಾನಿ ಸುಭದ್ರಮ್ಮ, ಆದವಾನಿ ಸೀತಮ್ಮ, ಆದವಾನಿ ನಾಗರತ್ನಮ್ಮ… ಹೀಗೆ ಗದಗ ಪ್ರಾಂತ್ಯದ ಸಾಂಸ್ಕೃತಿಕ ಲೋಕದಲ್ಲಿ ಆಗ ಆದವಾನಿ ಸೋದರಿಯರದು ಬಲುದೊಡ್ಡ ಐಕಾನ್ ಹವಾ. ಮೊನ್ನೆಯಷ್ಟೇ ಗಂಗಾವತಿಯಲ್ಲಿ ನಿಧನರಾದ ಜಿ.ಎನ್.ಅಂಜಲಿದೇವಿ (೭೨ ) ಆದವಾನಿ ಸೋದರಿಯರ ಬಳಗದ ಕೊನೆಯ ಕೊಂಡಿ. ಇವರ ತಂದೆ ಆ ಕಾಲದ ಸಂಗೀತ ವಿದ್ವಾಂಸ. ಹೆಸರಾಂತ ಮೃದಂಗ ವಾದಕ. ತಂದೆಯಿಂದ ಬಳುವಳಿಯಾಗಿ ಬಂದುದು ಸಂಗೀತ ಮತ್ತು ರಂಗಭೂಮಿ ಅಭಿನಯ […]
ಶಾಮ
ಕವಿತೆ ಅರ್ಪಣಾ ಮೂರ್ತಿ ಮರೆತು ಮರೆತುನೆನಪಾಗುವನಿನ್ನ ನೆನಪುಗಳು ನೆನಪಾಗಲೆಂದೆಮರೆವು ಮರೆಸಿನೆನಪಿಸಿದೆ ಈಗ, ಗೋಕುಲದಸಂಜೆಗಳುಹೀಗೆ ನಿನ್ನನೆನಪಿನ ನೆಪದಿಂದಕೆಂಪೇರಿಹಗಲಮರೆಸಿದಾಗೆಲ್ಲನೀನಿಲ್ಲಿ ನನ್ನನೆನಪಿಗಿಳಿದಿರುತ್ತಿನೋಡು, ಬಿಗಿದ ಗಂಟಲಬಿಕ್ಕುನಿನ್ನ ನೆನಪಿಗೆ ನಾನಿಳಿದಿರುವೆನೆಂಬುದ ನೆನಪಿಸಿಬಿಡುವುದುಮರೆಯದಂತೆ, ನೀನೆಂದರೆ ಹೀಗೆನೆನಪಾಗದನೆನಪುಮರೆಯಲಾರದಮರೆವು. *******************************