ಕವಿತೆ.

ಕವಿತೆ

ವಾಯ್.ಜೆ.ಮಹಿಬೂಬ

ನೀ ಬರುವಾ ಹಾದಿಯೊಳಗೆ
ಗಿರಿಮಲ್ಲೆ ಹಾಸಲೇನ ?
ನಾ ನೆರಳಾಗಿ ನಿಲ್ಲಲೇನ !?

ನೀ ಹಾಡೋ ರಾಗದಲ್ಲಿ
ಧ್ವನಿಯಾಗಿ ಕೇಳಲೇನ ?
ನಾ ರಸವಾಗಿ ಸುರಿಯಲೇನ ?

ನೀ ಕುಡಿವ ಪ್ರಾಣ ಹನಿಗೂ
ಮದುವಾಗಿ ಬೆರೆಯಲೇನ ?
ನಾ ತತ್ರಾಣಿಯಾಗಲೇನ ?

ನಿನ್ನ ನವಿಲುಗರಿಕೆ ಜಡೆಗೆ
ಪಚ್ಚೆ ಮಲ್ಲೆ ತೊಡಿಸಲೇನ-?
ದಳ ಕಮಲ ಹೊದಿಸಲೇನ-?

ಕರುನಾಡ ಕಣ್ಣ ಹೆಣ್ಣೆ
ಮಗುವಾಗಿ ಪಡೆಯಲೇನ
ನಾ ಗುರುವಾಗಿ ಕರೆಯಲೇನ ?

*****************************

Leave a Reply

Back To Top