Month: August 2020

ಅನುವಾದ ಸಂಗಾತಿ

ಸರಳವೇ ಸುಂದರ ಇಂಗ್ಲೀಷ್ ಮೂಲ:ಮ್ಯಾಥಿವ್ ಪಿ ಥಾಮಸ್ ಕನ್ನಡಕ್ಕೆ:ಚೈತ್ರಾ ಶಿವಯೋಗಿಮಠ ಪುಟ್ಟ ವೃಕ್ಷಮಾತೆಯೊಬ್ಬಳು ಕೈಚಾಚಿ ಕರೆದಳು,ತನ್ನ ಪ್ರೀತಿಯ ತೆಕ್ಕೆಯಲ್ಲಿ ನನ್ನ ಎತ್ತಿ ಮೇಲಕ್ಕೆಸೆದು ಆಡಿಸಿದಳುಅಲ್ಲಿ ಮೇಲೆ, ಸಣ್ಣ ಬಿಳಿ ಹತ್ತಿಯಂತಹ ಮೋಡಗಳು ತೇಲುವುದ ಕಂಡೆಬಾಳಿನ ಅವ್ಯಕ್ತ ಚಿತ್ರಗಳನು ತಿಳಿ ನೀಲಿ ಬಾನ ಪಟದ ಮೇಲೆ ಬಿಡಿಸಿದಂತೆ. ಅವಳು ತನ್ನ ನೆಮ್ಮದಿಯ ನೆಳಲಿನ ಮಡಿಲಲಿ ನನ್ನ ಮಲಗಿಸಿದಳು.ದೂರದೂರುಗಳ, ಹಚ್ಚ ಹಸಿರು ಬಯಲುಗಳ ಕನಸ ಕಂಡೆಅಲ್ಲಿ, ಉಕ್ಕಿ ಹರಿಯುವ ನದಿಗಳು ಪ್ರತಿ ಕಲ್ಲುಗಳನ್ನು ನುಣುಪಾಗಿಸುವುವುಅಲ್ಲಿ, ನವಿಲು ತನ್ನ ನಲ್ಲೆಯ ಹೃದಯದ […]

ಇತರೆ

ಎಚ್ ಎನ್ ರವರ ಸರಳತೆ ಮತ್ತು ಸಾಮಾಜಿಕ ಚಿಂತನೆ. ನಾಡು ಕಂಡ ಅಪರೂಪದ ಧೀಮಂತ ಸಜ್ಜನ ವ್ಯಕ್ತಿ,ಅಧ್ಯಾಪಕ, ಆಡಳಿತಗಾರ, ಸ್ನೇಹಮಯ ಮಾನವತಾವಾದಿ, ಪ್ರಗತಿಪರವಿಚಾರವಾದಿ, ಹಾಸ್ಯ ಪ್ರಜ್ಞೆಯ ವ್ಯಕ್ತಿತ್ವ,ರಾಷ್ಟ್ರೀಯವಾದಿ,ಖಾದಿ ಬಟ್ಟೆಯನ್ನೇ ಕೊನೆಯವರೆಗೂ ಧರಿಸುತ್ತಿದ ಮೇಧಾವಿ,ಬದುಕಿನೂದ್ದಕ್ಕೂ ಸರಳತೆ ಜೀವನಸಾಗಿಸಿದ ಸಾಧಕ. ಕಡು ಬಡತನದ ನಡುವೆಯೂ ಬದುಕನ್ನು ತಮ್ಮ ಇಷ್ಟದಂತೆ ಕಟ್ಟಿಕೊಂಡು ಬೆಳೆದಕರುಣಾಮೂರ್ತಿ ಡಾ.ಎಚ್.ನರಸಿಂಹಯ್ಯನವರು. ದಟ್ಟ ದಾರಿದ್ರ್ಯದ ಮಧ್ಯೆಯೂ ತನ್ನಲ್ಲಿ ಅಂತರ್ಗತವಾಗಿದ್ದ ಪ್ರತಿಭೆಯ ಮೂಲಕ ವ್ಯಕ್ತಿಯೋರ್ವ ಎಂಥ ಎತ್ತರಕ್ಕೆ ಬೆಳೆದು ನಿಲ್ಲಬಹುದೆನ್ನುವುದನ್ನು ಜಾಗತಿಕ ಪ್ರಪಂಚಕ್ಕೆ ತೋರಿಸಿಕೊಟ್ಟ ಮಾಹಾಪುರುಷ.ಹಾಗಾಗಿಶಿಸ್ತು ಮತ್ತು ಸರಳತೆಗೆ ಎಚ್ಚೆನ್ […]

ಕಾವ್ಯಯಾನ

ಒಂದು ವೈರಸ್ ಮುಂದಿಟ್ಟು ಕೊಂಡು ನಾಗರಾಜ ಹರಪನಹಳ್ಳಿ ಅಬ್ಬಾ ಮೊನ್ನೆ ಸ್ವಾತಂತ್ರ್ಯ ಆಚರಸಿದೆವುಅದೆಷ್ಟು ಬಿಗಿ, ಅದೆಷ್ಟು ಭಯಗಳನ್ನಿಟ್ಟುಕೊಂಡುಎಲ್ಲಿಯ ಗಾಂಧೀ, ಎಲ್ಲಿಯ ಬ್ರಿಟಿಷರು, ಎಲ್ಲಿಯ ಸುಭಾಷ್ ಚಂದ್ರ …ಯಾರ ಹಂಗು ಇರಲಿಲ್ಲಒಂದು ವೈರಸ್ ಕಾರಣವಾಗಿ ನಗುವಿಲ್ಲ ಮೊಗವಿಲ್ಲ, ಮಕ್ಕಳಿಲ್ಲ, ಘೋಷಣೆಯಿಲ್ಲ, ಪೋಷಣೆಯಿಲ್ಲಎಲ್ಲವೂ ಕಳೆದುಕೊಂಡ ಭೂಮಿಮಕ್ಕಳನು ಕಳೆದು ಕೊಂಡ ತಾಯಿಏನೂ ಉಸಿರೆತ್ತುವಂತಿಲ್ಲವೈರಸ್ ಕಾರಣವಾಗಿ ಏನಿತ್ತು ಅಲ್ಲಿ , ಭಯ ಬಿಟ್ಟುಮುಖ ಗುರುತು ಸಿಗದಂತೆ ಹಾಕಿದ ಬಾಯಿಪಟ್ಟಿಉಸಿರೆತ್ತದಂತೆ ಕಾಡಿದ ವೈರಸ್ಕಾರಣವಾಗಿ ಹೌದು, ಈಗೀಗ ಎಲ್ಲೆಲ್ಲೂ ಫತ್ವಾಗಳ ಹೊರಡಿಸುವುದೇ ಆಗಿದೆ;ಮನುಷ್ಯನಿಂದ ಮನುಷ್ಯನ ಇಬ್ಬಾಗವಾದರೂಕಸಿದ […]

ಗಝಲ್

ಗಝಲ್ ಅಕ್ಷತಾ ಕೃಷ್ಣಮೂರ್ತಿ. ನಿನ್ನ ಮುಂಗೈ ಮೇಲೆ ನನ್ನ ಹೆಸರು ಹೇಗೆ ಬರೆಯಲಿ ನೀನೇ ಹೇಳುನಿನ್ನ ಗಲ್ಲ ಕುಕ್ಕುವ ಮುಂಗುರುಳು ಹೇಗೆ ಮುಟ್ಟಲಿ ನೀನೇ ಹೇಳು. ಆ ಒಂದು ದಿನದ ಸವಿ ನೆನಪು ಕಣ್ಣ ತುಂಬ ಹಾಗೆಯೇ ಉಳಿದಿದೆನಿನ್ನ ಕನಸಿನ ಬಾಗಿಲು ತೆರೆದೆ ಇದೆ ಹೇಗೆ ಮುಚ್ಚಲಿ ನೀನೇ ಹೇಳು. ಮನದ ಅಂಗಳದಲ್ಲಿ ನಿನ್ನ ಹೆಸರಿನ ರಂಗೋಲಿ ಹೂ ನಗುವಿನಂತೆನಿನ್ನ ಮೌನ ಧ್ಯಾನ ಇನ್ನು ಇದೆ ಹೇಗೆ ಎಬ್ಬಿಸಲಿ ನೀನೇ ಹೇಳು. ನೆರಳಿನೊಳಗಿನ ನೆರವಾಗಬೇಕು ನೆನಪಲಿ ನಾನು […]

ಕಾವ್ಯಯಾನ

ಅವನು.. ಸುಜಾತ ಲಕ್ಷ್ಮೀಪುರ. ಅವನು ಸುಳಿಯುತ್ತಿಲ್ಲ.ಈ ನೀರವ ಸಂಜೆಯಲಿ..ಬರೀ ಮಂಕು ಮಗ್ಗುಲಾಗುತ್ತಿದೆಕತ್ತಲಾವರಿಸಿ ಆಗಸವೂ ಬಿಕ್ಕುತ್ತಿದೆ . ಚಿಕ್ಕಿ ಚಂದ್ರಮರೂ ನಾಪತ್ತೆಪಯಣ ಬೆಳೆಸಿರಬೇಕುಅವನ ಊರಿನ ಕಡೆಗೇ..ಕಿಟಕಿಯಾಚೆ‌ ಮಳೆಮೋಡವೂಕಣ್ಣಂಚಲಿ‌ ತೊಟ್ಟಿಕ್ಕಲುಹವಣಿಸುತಿದೆ ಅರೆಗಳಿಗೆ ಅತ್ತುಬಿಡಲು ಅವಸರಿಸಿವೆ ನಯನಗಳುತಂಗಾಳಿಯೂ ತಂಪೀಯದೆಸುಟ್ಟು ಬೂದಿಯೂ ಆಗಿಸದೆಕಿಡಿ ತಾಗಿಸಿ ಮರೆಯಲಿ ಇಣುಕಿದೆ. ನಿಟ್ಟುಸಿರ ಮೈದಡವಿಮುದ್ದು ಮಾತುಗಳಲಿ ಒಲಿಸಿಜೇನು ಸುರಿಸುವ ಕಣ್ಣಂಚಿನ ಪಿಸುಮಾತೂ ಕಾಣೆಯಾಗಿದೆ ಬರಿದೆ ಹಂಬಲಿಕೆ‌ ಚಡಪಡಿಕೆಮುಗಿಯದಾ ಕಾಲದ ಸಂಚುಸುಕ್ಕಾಗುತ್ತಿದೆ ನಿರೀಕ್ಷೆ.ಅವನು ಸುಳಿಯುತ್ತಿಲ್ಲಾ..ಬೆಳಗು ಬೈಗು ನೆನಪಿನ ಗಾಯಒಳಗೊಳಗೇ ಹಸಿರಾಡುತ್ತಿದೆ. ಬೇಸರದಿ ಆಸರೆಗೆಕತ್ತಲಲ್ಲಿ ಕೈಚಾಚಿದ್ದೇನೆಏಕಾಂತವೆಲ್ಲಾ‌ ಲೋಕಾಂತಆಗಿಸುವ ಬಯಕೆ ಅವನುಮಾಯವಾಗಿದ್ದಾನೆ […]

ಅನುವಾದ ಸಂಗಾತಿ

ಶೂರ್ಪನಖಾಯಣ ಮಲಯಾಳಂ ಮೂಲ:ರವೀಂದ್ರನ್ ಪಾಡಿ ಕನ್ನಡಕ್ಕೆ:ಚೇತನಾ ಕುಂಬ್ಳೆ ರಾತ್ರಿ ಕಂಡ ಕನಸಿನಲ್ಲಿನನ್ನ ಮುಂದಿದ್ದಳು ಶೂರ್ಪನಖಿಎಲ್ಲಿಯೂ ಸೀತೆಯನ್ನು ಕಾಣಲಿಲ್ಲಬಳಿಯಲ್ಲಿ ರಾಮನೂ ಇರಲಿಲ್ಲ ಹಲವು ದಿನಗಳಿಂದ ಆಲೋಚನೆಗಳಲ್ಲಿರಾಮ ರಾವಣ ಯುದ್ಧವೇ ತುಂಬಿತ್ತುಯಾರ ಪಕ್ಷ ಸೇರಲಿ?ಮಾನ್ಯರಲ್ಲ ಇಬ್ಬರೂ ಸೀತೆಯೊಂದಿಗೆ ನಿಂತುರಾಮನನ್ನು ದೂಷಿಸಬಹುದೇ?ವಾಲಿಯನ್ನು ವಧಿಸದೆರಾಮನ ವಿರುದ್ಧ ನಿಲ್ಲಬಹುದು ತಾಟಕಿ, ಶಂಬೂಕರುನಮ್ಮ ಪಕ್ಷ ಸೇರುವರುರಾವಣನನುಜ ವಿಭೀಷಣನನ್ನು ಅಂಕೆಯಲ್ಲಿರಿಸಬಹುದು ಹನುಮಂತನನ್ನು ಸೋಲಿಸಲುವಾಲಿಯೊಬ್ಬನೇ ಸಾಕಲ್ಲವೇಪ್ರಜೆಗಳು ಹೇಗಾದರೂ ಇರಲಿಅಮ್ಮನಿಗೆ ಕೈಯೆತ್ತುವರು ಅವರ ಮಾತನಾಲಿಸಿನಾಡಿನಲ್ಲಿ ಬದುಕಲು ಸಾಧ್ಯವೇ?ಗಾಳಿಸುದ್ದಿಯನ್ನೇ ಹಬ್ಬಿಸುವರೆಲ್ಲರೂಬೇರೇನೂ ಕೆಲಸವಿಲ್ಲವಲ್ಲ ವಾಲ್ಮೀಕಿ ಬರೆಯಲಿಅವರು ಕವಿಯಲ್ಲವೇಕವಿತೆಗಳೆಲ್ಲವೂ ಕಥೆಗಳಲ್ಲಕಥೆಗಳೆಲ್ಲವೂ ನಿಜವಲ್ಲ ರಾಮನಿಗೆ ಸೀತೆ […]

ಕಾವ್ಯಯಾನ

ಸಾಹಿತ್ಯದ ಒಳಸುಳಿಗಳ ಜೊತೆ ಒಂದು ಸುತ್ತು!! ಸುಜಾತಾ ಲಕ್ಮನೆ ಅರೆಚಣವೂಅತ್ತಿತ್ತ ಅಲುಗದೇಮಗ್ಗುಲಲ್ಲೇ ಕೂತು ಕಚಗುಳಿಯಿಟ್ಟು ನಗಿಸುವಮನದನ್ನೆಯಂತೆ ಇದು –“ಸಾಮಾಜಿಕ ಜಾಲತಾಣ” !ನಾವೂ ನೀವೂ ಎಲ್ಲರೂ ಜಾಲಿಯಾಗಿ ಜಾಲಾಡಿಈಜಾಡುವ ಸುಂದರ ತಾಣ!ಮೆರೆಸಬಹುದಿಲ್ಲಿಸ್ವ-ಪ್ರತಿಷ್ಠೆ, ಸ್ವ-ಪ್ರಶಂಸೆ, ಬೊಗಳೆ ಒಂದಷ್ಟು, ವೈಯಕ್ತಿಕ ಬಿನ್ನಾಣ..!ಅಷ್ಟಷ್ಟು ಸಾಧನೆ ಸನ್ಮಾನಗಳ ಲಿಸ್ಟಿನ ಅನಾವರಣ!ಹಾಗೋ ಹೀಗೋ ಗೀಚಿ, ಬೀಗಿ,, ಎದೆ ಸೆಟೆಸಿಮೈ ಮನ ಮ(ಮೆ)ರೆಯಲು ಇದೊಂದು ಚಂದದ ನಿಲ್ದಾಣ!ಬರೆದದು ಜೊಳ್ಳೋ, ಸುಳ್ಳೋ, ಕಾವ್ಯವೋ, ವಾಚ್ಯವೋ,ನಿಯಮಬದ್ಧ ಗಜ಼ಲ್ಲೋ, ಅಪಭ್ರಂಶವೋ,ಸ್ವಂತವೋ, ಸಂಗತವೋ, ಅನೂಹ್ಯವೋಒಟ್ಟಾರೆ–ದೊಪ್ಪೆಂದು ರಾಶಿ ರಾಶಿ ಸುರುವಿಸಾಕಷ್ಟು ಲೈಕ್ ಗಿಟ್ಟಿಸಿದರೆಅಲ್ಲಿಗೆ ಸಾರ್ಥಕ್ಯ […]

ಕಥಾಯಾನ

ಕನ್ನಡದ ಇಲಿ ವಸುಂಧರಾ ಕದಲೂರು ಅಮ್ಮನ ಕೈ ಹಿಡಿದು ಹಾಲಿನ ಬೂತಿನ ಬಳಿ ನಿಂತಿದ್ದ ಕಿಶೋರನಿಗೆ ಪಕ್ಕದ ಮೋರಿಯಿಂದ ಏನೋ ಚಲಿಸುತ್ತಿರುವುದು ಕಂಡಿತು.          ಅಮ್ಮನ ಕೈಯನ್ನು ಗಟ್ಟಿಯಾಗಿ ಹಿಡಿದವನೇ ಪುನಃ ಆ ಕಡೆಗೇ ನೋಡತೊಡಗಿದ. ಪುಳುಪುಳನೆ ಪುಳಕ್ಕೆಂದು ಬಿಲದಿಂದ ಹೊರಬಂದ ಇಲಿಯೊಂದು ಕಸದ ಡಬ್ಬದ  ಹೊರಗೆ ಚೆಲ್ಲಿದ್ದ ಹಾಲಿನ ಕವರ್ ಅನ್ನು ಸ್ವಲ್ಪ ಎಳೆಯಿತು.       ಬರೀ ಟಾಮ್ ಅಂಡ್ ಜರ್ರಿ ಕಾರ್ಟೂನಿನಲ್ಲಿ ಇಲಿ ನೋಡಿ ಗೊತ್ತಿದ್ದ ಕಿಶೋರ ನಿಜವಾದ […]

ಕಾವ್ಯಯಾನ

ನದಿ ಈಗ ದಿಕ್ಕು ಬದಲಿಸಿದೆ ಸ್ಮಿತಾ ಅಮೃತರಾಜ್.ಸಂಪಾಜೆ. ಜುಳು ಜುಳೆಂದು ಹರಿಯುವನನ್ನೂರಿನ ತಿಳಿನೀರಿನ ನದಿಈಗ ಕೆನ್ನೀರ ಕಡಲು. ತಪ್ಪನ್ನೆಲ್ಲಾ ಒಪ್ಪಿಕೊಂಡಂತೆತೆಪ್ಪಗೆ ಹರಿಯುತ್ತಿದ್ದ ನದಿ.. ಒಣಗಿದೆದೆಯ ಮೇಲೆ ಮೊಗೆದುತಣಿಯುವಷ್ಟು ತೇವವನ್ನುನಮಗಾಗಿಯೇ ಕಾಪಿಡುತ್ತಿದ್ದ ನದಿ.. ಅಂಗಳದ ತುದಿಯವರೆಗೂ ಬಂದುಗಲಗಲಿಸಿ ನಕ್ಕು ನೇವರಿಸಿ ಹರಿಯುತ್ತಿದ್ದ ನದಿ.. ಹೌದು! ಇದುವೇ ನದಿಮೊನ್ನೆ ಹುಚ್ಚೆದ್ದು ಕೆರಳಿದ್ದಕ್ಕೆನೆಲದ ಎದೆಯೊಡೆದು ಸೆಲೆ ಸಿಡಿದುಸಾವಿರ ನದಿಯಾಗಿ ಒಸರಿ ಹರಿದವುರಕ್ತ ಕಣ್ಣೀರ ಕೋಡಿ. ದಿಕ್ಕಾಗಿದ್ದ ನದಿ ತಾನೇದಿಕ್ಕು ಬದಲಿಸಿ ಕೆಂಪಗೆ ಹರಿಯುವಾಗನಾನೋ ದಿಕ್ಕು ಕಾಣದೆ ದಿಕ್ಕೆಟ್ಟುನದಿ ಹರಿಯುವ ದಿಕ್ಕಿಗೆ ಮುಖ […]

ನನ್ನಿಷ್ಟದ ಕವಿತೆ

ನನ್ನಿಷ್ಟದ ಕವಿತೆ ಮೀನಕಣ್ಣಿನ ಸೀರೆ ಲಲಿತಾ ಸಿದ್ಧಬಸವಯ್ಯಾ.               –  ಮೀನಕಣ್ಣಿನ ಸೀರೆ ಈ ಅಪರೂಪ ಸುಂದರಿಗೆ ಸೀರೆಯ ಬಗ್ಗೆ ಎಂಥ ಮುತುವರ್ಜಿ ಎಷ್ಟೇ ಆಗಲಿ ರಾಜಕುಮಾರಿ ಅವಳು ಒಮ್ಮೆ ಹಾಗೆ ಸುತ್ತಿಕೊಂಡು ಮೈಕಾಂತಿಗೆ ಸೋಕಿಸಿ ಬಿಸಾಡಿದ ಹೊಚ್ಚ ಹೊಸ ಸೀರೆಗಳನ್ನೇ ಉಟ್ಟು ಬೆಳೆದ ನೂರಾರು ದಾಸಿಯರ ನಡುವೆ ಒಡ್ಡೋಲಗ ನಡೆಸಿದವಳು ಸ್ವಯಂವರಕ್ಕೆ ಬರುವ ಮೊದಲು ಸೀರೆಗಳ ಆಯ್ದಾದು ಅದುಬೇಡಇದುಬೇಡ ಬೇಡದ ಗುಪ್ಪೆಗಳ ಬೆಟ್ಟವೇತಯಾರು ಕೊನೆಗೆ ಹತ್ತುಮಗ್ಗಗಳ ನಿಂತನಿಲುವಲ್ಲೇ ಹೂಡಿಸಿ ಅವಳ ಕಣ್ಣೆದುರಲ್ಲೇ ಅಂಚು ಸೆರಗುಗಳ […]

Back To Top