ಗಝಲ್
ಅಕ್ಷತಾ ಕೃಷ್ಣಮೂರ್ತಿ.
ನಿನ್ನ ಮುಂಗೈ ಮೇಲೆ ನನ್ನ ಹೆಸರು ಹೇಗೆ ಬರೆಯಲಿ ನೀನೇ ಹೇಳು
ನಿನ್ನ ಗಲ್ಲ ಕುಕ್ಕುವ ಮುಂಗುರುಳು ಹೇಗೆ ಮುಟ್ಟಲಿ ನೀನೇ ಹೇಳು.
ಆ ಒಂದು ದಿನದ ಸವಿ ನೆನಪು ಕಣ್ಣ ತುಂಬ ಹಾಗೆಯೇ ಉಳಿದಿದೆ
ನಿನ್ನ ಕನಸಿನ ಬಾಗಿಲು ತೆರೆದೆ ಇದೆ ಹೇಗೆ ಮುಚ್ಚಲಿ ನೀನೇ ಹೇಳು.
ಮನದ ಅಂಗಳದಲ್ಲಿ ನಿನ್ನ ಹೆಸರಿನ ರಂಗೋಲಿ ಹೂ ನಗುವಿನಂತೆ
ನಿನ್ನ ಮೌನ ಧ್ಯಾನ ಇನ್ನು ಇದೆ ಹೇಗೆ ಎಬ್ಬಿಸಲಿ ನೀನೇ ಹೇಳು.
ನೆರಳಿನೊಳಗಿನ ನೆರವಾಗಬೇಕು ನೆನಪಲಿ ನಾನು ನೀನು ಕೈ ಕೈ ಹಿಡಿದು
ನಿನ್ನ ನಗುವಿನೊಳಗೆ ಇನ್ನೂ ಸಲುಗೆ ಇದೆ ಹೇಗೆ ಮರೆಯಲಿ ನೀನೇ ಹೇಳು.
ಉದುರಿದ ಎಲೆಯೊಂದು ನಗುತ ಸ್ವರ್ಗ ಸುಖ ಅನುಭವಿಸುತ್ತಿದೆ ಎನ್ನ ಮುಂದೆ
ನಿನ್ನ ನೆನಪಿನೊಳಗೆ ನೆನಪಾಗದೇ “ಅಕ್ಷತಾ” ಹೇಗೆ ಇರಲಿ ನೀನೇ ಹೇಳು.
**********************
ಗಜ಼ಲ್ ಬಹಳ ಚೆನ್ನಾಗಿದೆ..
ಅರ್ಥಗರ್ಭಿತವಾಗಿದೆ ಚೆನ್ನಾಗಿದೆ, ಶುಭಾಶಯಗಳು.
ಚೆನ್ನಾಗಿದೆ ಗಜಲ್ ಗೆಳತಿ