ನನ್ನಿಷ್ಟದ ಕವಿತೆ

ನನ್ನಿಷ್ಟದ ಕವಿತೆ

ಮೀನಕಣ್ಣಿನ ಸೀರೆ

ಲಲಿತಾ ಸಿದ್ಧಬಸವಯ್ಯಾ.

             

 ಮೀನಕಣ್ಣಿನ ಸೀರೆ

ಈ ಅಪರೂಪ ಸುಂದರಿಗೆ

ಸೀರೆಯ ಬಗ್ಗೆ ಎಂಥ ಮುತುವರ್ಜಿ

ಎಷ್ಟೇ ಆಗಲಿ ರಾಜಕುಮಾರಿ

ಅವಳು ಒಮ್ಮೆ ಹಾಗೆ ಸುತ್ತಿಕೊಂಡು

ಮೈಕಾಂತಿಗೆ ಸೋಕಿಸಿ ಬಿಸಾಡಿದ ಹೊಚ್ಚ ಹೊಸ ಸೀರೆಗಳನ್ನೇ

ಉಟ್ಟು ಬೆಳೆದ ನೂರಾರು ದಾಸಿಯರ ನಡುವೆ

ಒಡ್ಡೋಲಗ ನಡೆಸಿದವಳು

ಸ್ವಯಂವರಕ್ಕೆ ಬರುವ ಮೊದಲು

ಸೀರೆಗಳ ಆಯ್ದಾದು

ಅದುಬೇಡಇದುಬೇಡ ಬೇಡದ ಗುಪ್ಪೆಗಳ ಬೆಟ್ಟವೇತಯಾರು

ಕೊನೆಗೆ ಹತ್ತುಮಗ್ಗಗಳ ನಿಂತನಿಲುವಲ್ಲೇ ಹೂಡಿಸಿ

ಅವಳ ಕಣ್ಣೆದುರಲ್ಲೇ ಅಂಚು ಸೆರಗುಗಳ ಸಂಯೋಜಿಸಿ

ರಾತ್ರೋರಾತ್ರಿ ನೆಯ್ಯಿಸಿದ

ಮೀನು ಕಿವುರಿಗಿಂತಲೂ ನವುರಾದ ರೇಸಿಮೆಗೆ

ಮೀನ ಕಣ್ಣಂತಕುಸುರಿ ಕೆಲಸ

ಉಟ್ಟು ಬಂದಳೋ ಬಂದಳೋ

ಇಡೀ ಗಂಡಸಕುಲವೇ ತಿರುಗಿ ನೋಡುವಂತೆ

ನಿಂದಳೋ ನಿಂದಳೋ

ನಡುಬಳಕನ್ನು ಗತ್ತಲ್ಲೇ ಸ್ಥಿರಗೊಳಿಸಿ ಏಕಾಗ್ನಿಯಂತೆ

ಅಂದೇ ತೀರ್ಮಾನಿಸಿಬಿಟ್ಟ ಅವನು

ಇಂಥವಳನ್ನಾಳುವದು ನನ್ನಯೋಗ್ಯತೆಗೆ ಮೀರಿದ್ದು

ಏನಿದ್ದರೂ ಕಾಲುಗಳ ಬಳಿ ಕುಳಿತು ಬೇಡಬಹುದಷ್ಟೇ

ಅವಳಪ್ಪಣೆಯ ಅವಳೊಳು ಹೋಗಲು

ಅಷ್ಟಕ್ಕೂ ಆಸ್ಪದದಕ್ಕಲಿಲ್ಲ ಅವನಿಗೆ, ಬೇಡಹೋಗಲಿ

ವೀರಾಧಿ ವೀರಅವರಣ್ಣನಿಗೂ

ಪಿಶಾಚನೀಚನ ನೈಚ್ಯಾನುಸಂಧಾನ

ಕೊನೆಗೂ ಆಸೆ ತೀರಿಸಿಕೊಂಡಿದ್ದು

ಸಭೆಯಲ್ಲಿ ಸೆರಗೆಳೆದು

***********************

ಕವಿತೆಯ ಶೀರ್ಷಿಕೆಯೇ ಮೊದಲ ಸೆಳೆತ,ಲವ್ ಅಟ್ ಫಸ್ಟ ಸೈಟ್‌ಅನ್ನೋ ಹಾಗೆ. ಬಹುತೇಕಎಲ್ಲ ಹೆಣ್ಣುಮಕ್ಕಳ ಸಹಜಗುಣವೋ ಏನೋ “ಸೀರೆ”ಎಂದಾಕ್ಷಣ ಕಿವಿನಿಮಿರುವುದು,ಕಣ್ಣರಳುವದು.ಕಪಾಟಿನ ತುಂಬ ಸೀರೆಗಳಿದ್ದರೂ ಅದೇನೋ ಮೋಹ ಹೊಸ ಟ್ರೆಂಡ್ ಸೀರೆ ಬಂತೆಂದರೆ ಈ ಥರದ್ದು ನನ್ನಹತ್ರಇಲ್ಲ ,ಈ ಬಣ್ಣಕ್ಕೆ ಆ  ಬಣ್ಣದಅಂಚಿನ ಕಾಂಬಿನೇಷನ್‌ ಚೆಂದವಿದೆಯೆಂದು ಮತ್ತೆ ಕೊಂಡುಕೊಳ್ಳುತ್ತೇವೆ. ಹೀಗೆ ಅಂದುಕೊಳ್ಳುವದರಲ್ಲಿ ತಪ್ಪೇನಿಲ್ಲ ಅನಾದಿಕಾಲದಿಂದ ಇದು ನಡೆದುಬಂದಿದೆಎನ್ನುತ್ತಾರೆ ಹಿರಿಯ ಸಾಹಿತಿ ಲಲಿತಾ ಸಿದ್ಧಬಸವಯ್ಯಾ.  ಸದ್ಯ ಸೀರೆ ಆಯ್ಕೆಯಲ್ಲಾದರೂ ಇಚ್ಛೆಯಂತೆ ಆರಿಸಿಕೊಳ್ಳಬಹುದು !

ಕವಯತ್ರಿ ಲಲಿತಾ ಸಿದ್ಧಬಸವಯ್ಯಾಅವರು ಮೀನಕಣ್ಣಿನ ಸೀರೆಯ ಮೂಲಕ ಅದ್ಭುತವಾಗಿ ಸ್ತಿç ಸಂವೇದನೆಯನ್ನು ಹಿಡಿದಿಟ್ಟಿದ್ದಾರೆ. ಮೀನ ಕಣ್ಣುಅನ್ನುವ ಶಬ್ದ ತುಂಬ ವಿಶೇಷವಾಗಿ ಅರ್ಥೈಸುತ್ತದೆ. ಜೀವಶಾಸ್ತ್ರೀಯವಾಗಿ ಮನುಷ್ಯನಿಗಿಂತಲೂ ಮೀನು ಕೆಳಮಟ್ಟದ ಪ್ರಾಣಿ, ವಿಸ್ಮಯವೇನೆಂದರೆ ಮೀನಿನ ಕಣ್ಣು ಮನುಷ್ಯನಷ್ಟೇಅಥವಾ ಮನುಷ್ಯನಿಗಿಂತ ಹೆಚ್ಚು ಬೆಳವಣಿಗೆ ಹೊಂದಿದೆಯೆನ್ನಬಹುದು. ಮೀನು ಸದಾ ನೀರಿನಲ್ಲಿರುವ ಪ್ರಾಣಿ. ನಿರಂತರವಾಗಿಅದಕ್ಕೆಆಪತ್ತುತಪ್ಪಿದ್ದಲ್ಲ. ಸುತ್ತಲಿರುವ ವೈರಿಗಳಿಂದ ತನ್ನನ್ನುತಾನು ಕಾಪಾಡಿಕೊಳ್ಳಬೇಕಾಗುವದು ಎಂಬ ಮುನ್ಸೂಚನೆಯ ಸಂಕೇತವೂ ಕವಯಿತ್ರಿಯ ಮನದಲ್ಲಿರಬಹುದು. ಮೀನ ಕಣ್ಣಿನರಚನೆ ಅಕ್ಷರಶಃ ದೂರದರ್ಶಕಅಂದರೆ  ಬೈನಾಕ್ಯುಲರ್‌ತರಹವೇಇದೆ. ಇನ್ನೂ ಒಂದು ಅಡಕವಾಗಿದೆ. ವೈಜ್ಞಾನಿಕ ಮೂಲಗಳ ಪ್ರಕಾರ ಮೀನಕಣ್ಣಿನ ರೆಟಿನಾ ಭಾಗಕ್ಕೆಏನಾದರೂ ಆಘಾತವಾದರೆ ಅದುತನ್ನಷ್ಟಕ್ಕೆತಾನೆ ಗಾಯವನ್ನು ಸರಿಪಡಿಸಿಕೊಳ್ಳುವ ತಂತ್ರೌಷಧಗುಣವಿದೆ. ಈ ಒಳಮರ್ಮವನ್ನು ಯೋಚಿಸಿಯೇ ನಮ್ಮ ಕವಿಯಿತ್ರಿ  ಮೀನಕಣ್ಣನ್ನೇರೂಪಕವಾಗಿ ಬಳಸಿಕೊಂಡಿದ್ದಾರೆ ಎಂದೆಣಿಸಬಹುದು.

            ಮುಂದೆಕವನದ ಸಾಲುಗಳನ್ನು ಓದುತ್ತಾ,ಕವಯತ್ರಿಇಲ್ಲಿ ಉಪಯೋಗಿಸಿದ ಕೆಲವು ಶಬ್ದಗಳು ನಮ್ಮನ್ನುಆಕರ್ಷಿಸುತ್ತವೆ ಅವುಗಳೆಂದರೆ ಮುತುವರ್ಜಿ,ಒಡ್ಡೋಲಗ,ಏಕಾಗ್ನಿ….. ಮುಂತಾದವು. ಭೂಲೋಕದಅಪ್ರತಿಮ ಸುಂದರಿಯಂದೇ ಕರೆಯಲ್ಪಡುತ್ತಿದ್ದ ದ್ರೌಪದಿಯ ಸ್ವಯಂವರದ ಪೂರ್ವಸಿದ್ಧತೆಯನ್ನು ಅತ್ಯಂತ ಸೊಗಸಾಗಿ ಹಾಗೂ ರಾಜಕುಮಾರಿಯ ಅದೇ ಗತ್ತುಗಾಂಭೀರ‍್ಯ ಭಾಸವಾಗುವಂತೆ ಬಣ್ಣಿಸಿದ್ದಾರೆ.ಇಡೀ ಗಂಡಸುಕುಲವೇ ಮಾರುಹೋಗುವಂಥ ಸೃಷ್ಟಿಸೌಂದರ‍್ಯವೇ ಅವಳಲ್ಲಿತ್ತು ಎಂದು ಹೊಗಳುತ್ತಾ  ನಂತರದ ಸಾಲುಗಳಲ್ಲಿ ದುಶ್ಯಾಸನನ ಮನದ ಭಾವನೆಗಳೂ ಮಾತಾಡಿವೆ. ಸ್ವಯಂವರದಲ್ಲಿ ಇವಳ ರೂಪರಾಶಿಗೆ ಮನಸೋತ ದುಶ್ಯಾಸನ ತಾನು ದ್ರೌಪದಿಗೆ ತಕ್ಕವನಲ್ಲ, ಏನಿದ್ದರೂ ಅವಳ ಕಾಲಬಳಿಯೇ ತನ್ನಜಾಗಎನ್ನುತ್ತದೆ ಅವನ ಸ್ವಗತ. ಹೋಗಲಿ ತನ್ನಣ್ಣನಿಗೂ ದ್ರೌಪದಿ ದಕ್ಕುವದು ಅಸಾಧ್ಯವೆಂದೆನಿಸುತ್ತದೆ. ಮನದೊಳಗಣ ನೀಚ ತಮಸ್ಸು ಆ ಸೌಂದರ‍್ಯವನ್ನುಒಮ್ಮೆ ಮುಟ್ಟಬೇಕೆಂಬ ಉತ್ಕಟತೆಯೊಂದಿಗೆ ಉಳಿದುಬಿಟ್ಟಿರುತ್ತದೆ. ಹಾಗಾಗಿ ಕೊನೆಗೆ ಸಭೆಯಲ್ಲಿ ಸೆರಗಿಗೆ ಕೈಹಾಕುತ್ತಾನೆ ಎಂಬುದಾಗಿ ದುಶ್ಯಾಸನನ ಸ್ವಗತವನ್ನು ಚಿತ್ರಿಸಿದ್ದಾರೆ. ಇದಿಷ್ಟು ಕವಿತೆಯ ಹೊರಮೈಯೆಂದಾದರೆ ……..

ಇನ್ನುಕವಿತೆಯಆಂತರ್ಯಕ್ಕೆಇಣುಕೋಣ,

            ಇಲ್ಲಿದ್ರೌಪದಿ ಇಡೀ ಸ್ತಿçಸಂಕುಲವನ್ನೇ ಪ್ರತಿನಿಧಿಸುತ್ತಾಳೆ. ಸಾಮಾನ್ಯವಾಗಿ ಹೆಣ್ಣಿನ ಅಳಲು,ನೋವು,ತೊಳಲಾಟದ ಕುರಿತಾಗಿ ಬರೆದಿರುತ್ತಾರೆ,ಆದರೆಇಲ್ಲಿ ಹೆಣ್ಣಿನ ಆಯ್ಕೆ ಕುರಿತಾಗಿ ಮಾತನಾಡಿದ್ದಾರೆ. ಸೀರೆ ಆಯ್ದುಕೊಳ್ಳುವ ಸ್ವಾತಂತ್ರವನ್ನು ಸಂಭ್ರಮಿಸುತ್ತಿರುವ ಚಿತ್ರಣವಿದೆ. ಇದರಲ್ಲಿನ ಧ್ವನಿ ವಿಶೇಷವೆನಿಸುತ್ತದೆ. ಕವಯಿತ್ರಿಯ ವಿಭಿನ್ನ ವಿಚಾರಲಹರಿಯು ಈ ಕವಿತೆಗೆ ವಿಶಿಷ್ಟತೆಯನ್ನು ತಂದುಕೊಟ್ಟಿದೆ. ಮುಂದೆ ಸ್ವಯಂವರದಲ್ಲಿಯೂ ಈ ಹಕ್ಕು ಅವಳಿಗಿದೆಯೆಂದು ಸೂಚನೆ ಕಾಣುತ್ತದೆ.  ಮೀನಕಣ್ಣುಎಂದಿದ್ದಾರೆ,ನವಿಲು,ನರಿ.ಕುದುರೆಅಥವಾ ಹಕ್ಕಿ,ಹುಲಿಗಳಕಣ್ಣು ಎನ್ನಬಹುದಿತ್ತು ಎಂಬ ಪ್ರಶ್ನೆಕಾಡುತ್ತದೆ, ಅಂತೇಯೇ ಮೀನಕಣ್ಣಿನ ವೈಜ್ಞಾನಿಕ ಸಂರಚನೆಯ ಸತ್ಯಾಸತ್ಯತೆಯು ಅವಳ ಬದುಕಿನಂತೆ ಬೆರಗುಗೊಳಿಸುವಂಥದ್ದು.ಮೀನ ಕಿವಿರುಗಳಿಗಿಂತ ನವಿರಾದರೇಷಿಮೆ ಎಂದು ವರ್ಣಿಸುವಾಗ ಸುಕೋಮಲೆ ಮೃದುಭಾವದ ಹೆಣ್ಣು ಭವಿಷ್ಯದಲ್ಲಿಎದುರಾಗಲಿರುವ ಭೀಕರ ಕಠೋರಗಳನ್ನೂ ದಾಟಬಲ್ಲಳು. ದ್ರೌಪದಿಯು ಮುಂದೆ ನಡೆಯಲಿರುವಯುದ್ಧಕ್ಕೆ ಸನ್ನದ್ಧಳಾಗುವ ದೂರದೃಷ್ಟಿ ಹೊಂದಿದವಳಾಗಿದ್ದಳೆಂದು ಸೂಚ್ಯವಾಗಿ ಹೇಳುತ್ತಿದ್ದಾರೆ ಲೇಖಕಿ. ಹೆಜ್ಜೆ ಹೆಜ್ಜೆಗೂ ಅವಳು ಸಂಕಟವನ್ನುಭವಿಸಲಿದ್ದಾಳೆ,ಆದ್ದರಿಂದ ಅವಳು ಮೈಯಲ್ಲಾಕಣ್ಣಾಗಿರಬೇಕೆಂಬುದರಉದ್ದೇಶವೂ ಬಿಂಬಿತವಾಗುತ್ತದೆ, ಅರ್ಥಾಥ ಮೀನಕಣ್ಣು ಬಹಿರಂಗವಾಗಿ ಸೀರೆ ಮೇಲಿನ ಆಕೃತಿ ಮಾತ್ರವಲ್ಲ, ಸದಾ ಅಂತರಂಗದ ಒಳಗಣ್ಣು ತೆರೆದು ಸುತ್ತಲು ನಡೆಯುತ್ತಿರುವದನ್ನು ಬಹು ಎಚ್ಚರದಿಂದ ಗಮನಿಸಬೇಕೆಂಬ ಮುನ್ಸೂಚನೆ ನೀಡುತ್ತದೆ.ದುಶ್ಯಾಸನನಂತ ನೀಚರು ಮನೆಯ ಒಳಗೂ ಮನೆಯ ಹೊರಗೂಎಲ್ಲಿಯೂಇರಬಹುದು.ಅದಕ್ಕಾಗಿ ಹೆಣ್ಣು ಸದಾಕಾಲ ಜಾಗೃತರಾಗಿರಬೇಕೆಂಬ ಸಂದೇಶವನ್ನೂಕೂಡಾ ಸಾರುವದರಿಂದ ಈ ಕವಿತೆ ಇಂದಿಗೂ ಪ್ರಸ್ತುತವೆನಿಸುತ್ತದೆ.

*************************

ವಿಭಾ ಪುರೋಹಿತ್

15 thoughts on “ನನ್ನಿಷ್ಟದ ಕವಿತೆ

  1. ವಾವ್ಹ್…..ಅದ್ಭುತ ಕವಿತೆ.‌ಅದ್ಭುತ ಧ್ವನಿ…
    ಚೆಂದ ಆಯ್ಕೆ…

  2. ತುಂಬಾ ಅರ್ಥಗರ್ಭಿತ ಕವಿತೆ. ನಿಮ್ಮ ವ್ಯಾಖ್ಯಾನ ವಾಚ್ಯವೂ ಅಷ್ಟೇ ಸಮರ್ಥನೀಯವಾಗಿದೆ. ಇಷ್ಟೊಳ್ಳೆಯ ಕವಿತೆ ಹೇಗೆ ಇಷ್ಟು ದಿನ ಓದದೇ ಉಳಿಯಿತು?! ಎಂದು ನನಗೆ ಆಶ್ಚರ್ಯವಾಗುತ್ತಿದೆ.

  3. ಒಳ್ಳೆಯ ಕವಿತೆ ಮತ್ತು ಅಷ್ಟೇ ಸಮರ್ಥವಾದ ವಿಶ್ಲೇಷಣೆ..ತಾಕುವ ವಿವರಣೆಯ ಮೂಲಕ ಕವಿತೆ ಮತ್ತಷ್ಟು ಎದೆಗಿಳಿಯಿತು.

    1. ಸುಂದರ ಕವಿತೆ. ಹೆಣ್ಣಿನ ಅಂತರಂಗವನ್ನು ತಾಕುವ ವಿಶ್ಲೇಷಣೆ.

  4. ಅರ್ಥಪೂರ್ಣ ಹಾಗೂ ಧ್ವನಿ ಪೂರ್ಣ ವಾದ ಕವನ…
    ಒಳಾರ್ಥ ಮತ್ತು ಕವಿತೆ ಯ‌ ಆಶಯದ ಬಗ್ಗೆ ಮೌಲ್ಯ ಯುತವಾದ ವ್ಯಾಖ್ಯೆ.
    ಲಲಿತಾ ಸಿದ್ದಬಸವಯ್ಯ ಹಾಗೂ ವಿಭಾ ಪುರೋಹಿತ್ ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು
    ಶೈಲಜಾ ಪ್ರಸಾದ್

    1. ಪ್ರೇರಕ ನುಡಿಗಳಿಗಾಗಿ ಧನ್ಯವಾದಗಳು ಶೈಲಜಾ ಮೇಡಂ

  5. ಕವಿತೆ ಚಂದ ಇದೆ ಹಾಗೇ ವಿಭಾ ಅವರೇ ನಿಮ್ಮ ವ್ಯಾಖ್ಯಾನವೂ ಚೆನ್ನಾಗಿದೆ.

    1. ಚೆನ್ನಾಗಿದೆ ಅಭಿನಂದನೆಗಳು ಸುಮಾವೀಣಾ

  6. ಚೆನ್ನಾಗಿದೆ ಕವಿತೆ ಮತ್ತು ಅದರ ಆಶಯವನ್ನು ಅಷ್ಟೇ ಚನ್ನಾಗಿ ವಿಶ್ಲೇಷಿಸಿದ ವಿಮರ್ಶೆ ದುರ್ಯೋಧನ ದುಶ್ಯಾಸನ ನಂತವರು ಮನೆಯ ಒಳಗೂ ಹೊರಗೂ ಇದ್ದೆ ಇದ್ದಾರೆ ಮೀನ ಕಣ್ಣು ಅರ್ಥಾತ್ ಅತ್ಯಂತ ಜಾಗ್ರತ ಕಣ್ಣು ಇರಲೇಬೇಕು ಇಬ್ಬರಿಗೂ ಧನ್ಯವಾದಗಳು

Leave a Reply

Back To Top