Month: August 2020

ಅನುವಾದ ಸಂಗಾತಿ

ನದಿಯೊಳಗಿನ ಹರಿವು ಕನ್ನಡ ಮೂಲ: ಗೀತಾ ಡಿ.ಸಿ. ಇಂಗ್ಲೀಷಿಗೆ: ನಾಗರೇಖಾ ಗಾಂವಕರ್ ಇರುತ್ತದೆನದಿತನ್ನಷ್ಟಕ್ಕೆತಾನೆಂಬಂತೆಸದಾ..ತನ್ನೊಳಗಿನಪಸೆಯಾರದಂತೆಬೆಚ್ಚಗಿನಒರತೆಬತ್ತದಂತೆತನ್ನಪಾತ್ರದರಿವುಹರಿವಿನಜೀವಂತಸೆಲೆಯನುಸಂಯಮದಿಕಾಯ್ದುಕೊಳ್ಳುತ್ತದೆದಿವ್ಯಮೌನದಧ್ಯಾನದಲಿಸದಾ..ಅಂದುಕೊಳ್ಳುತ್ತಾರೆಜನಇಲ್ಲಸಲ್ಲದ್ದನ್ನು..ಬತ್ತಿದಂತಿರುವನದಿಯಕಂಡುಮರುಕಪಡುತ್ತಾರೆ.ಕರುಣೆಯುಕ್ಕಿಸಿಲೊಚಗುಡುತ್ತಾರೆ.ಉಕ್ಕಿಹರಿವಂತೆಸುಖಾಸುಮ್ಮನೆಪ್ರಾರ್ಥಿಸುತ್ತಾರೆ!ಮೊರೆಯದುನದಿಮೊಳೆಯದುಬೀಜಅದರಷ್ಟಕ್ಕೆಅದು..ಇಲ್ಲ. ಇಲ್ಲ..ನದಿತಾನಾಗಿಯೇಎಂದೂಬತ್ತುವುದಿಲ್ಲ.ಕಾಯುತ್ತದೆಜೀವಚೈತನ್ಯದರಸವುಕ್ಕುವಗಳಿಗೆಗಳಿಗಾಗಿ..ಇದ್ದಕ್ಕಿದ್ದಂತೆಮೋಡಗಟ್ಟಿಹನಿಯುದುರಿದ್ದೇತಡಭೋರ್ಗರೆಯುತ್ತದೆ.ಸಂಭ್ರಮಿಸುತ್ತದೆಸೋಂಕುವಗಾಳಿಗೆರವಿಕಿರಣದತೆಕ್ಕೆಯೊಳಗಿನಬೆಚ್ಚಗಿನಭಾವಕ್ಕೆಮೊಳೆವಬೀಜದರಿವಿಗೆಉದುರಿದಹನಿಮಣ್ಣಿಗೆಬಿದ್ದಬೀಜಕಾಯ್ದಿಟ್ಟನೀರತೇವಮುಪ್ಪುರಿಗೊಂಡುಮೊಳೆವಜೀವತನ್ನೊಳಗೇಸಕಲವನುಕಾಯ್ದುಪೊರೆವಜೀವಜಲಧುಮ್ಮಿಕ್ಕಿಹರಿಯುತ್ತದೆ..ತಡೆಯಿಲ್ಲದೆಹರಿವರಭಸಕ್ಕೆಉರುಳುರುಳಿಕೊಚ್ಚಿಹೋಗುತ್ತವೆಪ್ರಾರ್ಥನೆಗೂಉಳಿಯದಗುಡಿಗೋಪುರಗಳು..ಉಕ್ಕುಕ್ಕಿಹರಿವನದಿ.. ಭಯ, ವಿಸ್ಮಯದನಡುವೆಯೂಆಡಿಕೊಳ್ಳುತ್ತಾರೆಅರಿವಿರದಜನ..ಸುಮ್ಮನಿರುತ್ತದೆನದಿತನ್ನಷ್ಟಕ್ಕೆತಾನೆಂಬಂತೆಜೀವಂತಹರಿಯುತ್ತಾತನ್ನೊಳಗನ್ನುಬೆಚ್ಚಗೆಕಾಯ್ದುಕೊಳ್ಳುತ್ತಾಸದಾ…————- The flow of the river River is beingAs it isBy itselfAlways.Never allows todry up its inner wetnessAnd warm wellspringWith patiencedefendsthyselfthe flow and lifespringIn the meditation of devine silenceAlwaysBut they thinkAbsurd…the people!By looking at itsDrynessFeel pityMurmer atwith mercyful sightPrays for itsQuick outflowNever the […]

ಪ್ರತಿಮೆಗಳ ಭಾರಕ್ಕೆ ಹೊಯ್ದಾಡುವ ರೂಪ(ಕ)ಗಳು

ಪ್ರತಿಮೆಗಳ ಭಾರಕ್ಕೆ ಹೊಯ್ದಾಡುವ ರೂಪ(ಕ)ಗಳು 80ರ ದಶಕದ ಆಚೀಚಿನ ವರ್ಷಗಳಲ್ಲಿ ಕನ್ನಡ ಸಾಹಿತ್ಯದಲ್ಲಿ ಫಿಲಾಸಫಿಗಳ ಗುಂಗು ಶುರುವಾಯಿತು. ಇದ್ದಕ್ಕಿದ್ದ ಹಾಗೆ ರಜನೀಶ್, ಬುದ್ಧ, ಜಿಡ್ಡು ಕೃಷ್ಣಮೂರ್ತಿ, ಯೂಜಿ ಮುಂತಾದವರು ಪ್ರಚಾರಕ್ಕೆ ಬಂದರು. ಇವರೆಲ್ಲ ಹೇಳಿದ್ದನ್ನು ಕತೆಗಳಲ್ಲೂ ಕವನಗಳಲ್ಲೂ ಲೇಖನಗಳಲ್ಲೂ ತಂದು ಕೊನೆಗೆ ಆ ಹೆಸರುಗಳನ್ನು ಕೇಳಿದರೆ ಕಿರಿಕಿರಿಯಾಗುವಂತೆ ಮಾಡುವಲ್ಲಿ ನಮ್ಮ ಲೇಖಕರೂ ಸಾಹಿತಿಗಳೂ ಯಶಸ್ವಿಯಾದರು.ಈಗಲೂ ಕೆಲವರು ಲೋಹಿಯಾವಾದವನ್ನು ಮತ್ತೆ ಕೆಲವರು ಅಂಬೇಡ್ಕರರನ್ನೂ ಕೆಲವರು ಗಾಂಧಿಯನ್ನೂ ಹೀಗೇ ಬಳಸುತ್ತ, ಬೆದಕುತ್ತ ತಮ್ಮ ಬರವಣಿಗೆಗೆ ಬಳಸುತ್ತ ಆ ಅಂಥವರ ಹೆಸರನ್ನೇ […]

ಕಾವ್ಯಯಾನ

ಭೂಕ೦ಪವಾದ ಮೇಲೆ ಮೇಗರವಳ್ಳಿ ರಮೇಶ್ ಭೂಕ೦ಪವೊ೦ದು ಸ೦ಭವಿಸಿಊರಿಗೆ ಊರೇ ಅವಶೇಷ ವಾದಾಗಹಾಗೇ ಬಿಡಲಾಗುತ್ತದೆಯೆ?ಅಣಿಗೊಳಿಸಲೇ ಬೇಕು ಮತ್ತೆ. ಯದ್ವಾ ತದ್ವಾ ಬಿದ್ದಿರುವಇಟ್ಟಿಗೆ. ಕಬ್ಬಿಣದ ರಾಡುಗಳು, ಗರ್ಡರ್ ಗಳುಛಾವಣಿಯ ಸ್ಲ್ಯಾಬ್,ಮುರಿದ ಫ಼ರ್ನಿಚರ್ಗಳುಒಡೆದ ಕನ್ನಡಿಯ ಚೂರು, ಟೀವಿಪಾತ್ರೆ ಪಡಗ, ನುಜ್ಜುಗುಜ್ಜಾದ ಟ್ರ೦ಕು,ಹರಿದ ಮಣ್ಣಾದ ಬಟ್ಟೆ ಬರೆ,ಚೆಲ್ಲಿದ ಅನ್ನ, ರೊಟ್ಟಿ, ಬ್ರೆಡ್ಡುದೇವರ ಪಟಇವುಗಳ ಮಧ್ಯ ದಾರಿ ಮಾಡಿಕೊಳ್ಳುತ್ತಾಅವಶೇಷಗಳಡಿಯಲ್ಲಿ ಆಕ್ರ೦ದಿಸುತ್ತಿರುವವರನ್ನುನಿಧಾನಎತ್ತಿ ಹತ್ತಿರದ ಆಸ್ಪತ್ರೆಗೆ ಸೇರಿಸ ಬೇಕುಹೆಣಗಳನ್ನೆತ್ತಿ ಸ೦ಸ್ಕಾರ ಮಾಡ ಬೇಕು ಬೃಹತ್ ಯ೦ತ್ರಗಳನ್ನು ತ೦ದುಅವಶೇಷಗಳನ್ನೆಲ್ಲ ಎತ್ತಿಅಣಿಗೊಳಿಸ ಬೇಕು ಮತ್ತೆಹೊಸದಾಗಿ ಊರು ಕಟ್ಟಲು. ವಿನಾಶದ ಒಡಲಿ೦ದ […]

ಕಾವ್ಯಯಾನ

ನುಡಿ ನಾಗರ ಅರುಣಾ ರಾವ್ ಮನುಜನ ಮುಖದಲ್ಲಿನಗೆಯ ಮುಖವಾಡಮರೆಮಾಚುವುದುದುಗುಡ, ದುಮ್ಮಾನಅಷ್ಟೇಕೆ ?ಅಸೂಯೆ ಅನುಮಾನ! ಮುಖವಾಡದ ಹಿಂದಿನ ಮನಅರಿಯದೇ ನಿಜವನ್ನ?ಕಣ್ಣು ಹೇಳದಿದ್ದೀತೇಎದೆಯ ಮಾತನ್ನ?ನಂಬಬಹುದೇ ನಿನ್ನನ್ನಓ ನಾಲಿಗೆಯೇ?ನುಡಿವೆ ನೀ ಏನನ್ನ?ನೀ ಸುಮ್ಮನಿದ್ದರೇನೆ ಚೆನ್ನ! ನಿನ್ನಿಂದ ನೋವುಂಡ ಮನನಯನದಲ್ಲಿ ತೋರೀತುತನ್ನ ನೋವನ್ನ|ಎಲುಬಿಲ್ಲದ ಜಿಹ್ವೆ ನೀನುಡಿದ ನುಡಿಯದುಗಾಯಪಡಿಸೀತು ಎನ್ನ! ಬಿಗಿತುಟಿಯ ದುಡಿವಂದುನೋವಪಡುವಂದು, ಎಂದೆಂದಮಾತಿನಲಿ ಹುಡುಗಿಹುದು ಸತ್ಯಬಿಗಿದ ತುಟಿ ತರಬಲ್ಲದು ಹಾಸಕಟು ಮಾತಿಗಾತಿಗದೆರಾಮಬಾಣ! *********************************

ಕಾವ್ಯಯಾನ

ಮೂಕವೇದನೆ ಶಿವಲೀಲಾ ಹುಣಸಗಿ ಮೌನಕ್ಕೆ ನೂರು ಭಾವಲೇಪನದ ನಂಟುಹಕ್ಕಿ ರೆಕ್ಕೆ ಬಿಚ್ಚಿ ಹಾರಲಾಗದೆ ತತ್ತರಿಸಿದೆಕಣ್ಣಂಚಲಿ ಕಂಬನಿಯ ಹನಿಗಳುತೊಟ್ಟಿಕ್ಕಿದಂತೆ ಸಂತೈಸದಾ ಮನವುಮೂಲೆಗುಂಪಾಗಿ ರೋಧಿಸುತ್ತಿದೆ.ಹೊದ್ದ ಕಂಬಳಿಯ ತುಂಬಾ ತೂತುಬಿತ್ತರಿಸಲಾದಿತೇ ಅಂತರಾಳದ ಹೊರತುಬರದ ಮೇಲೆ ಬರೆಯಳೆದಂತೆ ನೆನಪುಕರಗಬಹುದೇ ಬುಗಿಲೆದ್ದ ಆಕ್ರೋಶದ ಕಂಪುಕಾದಕಬ್ಬಿಣವು ಕುಲುಮೆಯಲಿ ಪಳಗಿದಂತೆನಿನ್ನಾರ್ಭಟಕೆ ಒಂದು ಕ್ಷಣ ಮೈ ಮರೆತಂತೆಹಾಯ್ದ ಹೊದ್ದ ಮನವರಿಕೆಗಳ ತೀಡಿದಾಂಗೆಹರಯವೊಂದೆ ಇಳೆಗೆ ಆಗಾಗಾ ಮೈತಳೆದಾಂಗೆಬರಿದಾದ ಒಡಲು ಬೆಸದು ಮಿಸುಕಿದಂತೆಕಣ್ಣು,ಮೂಗು ಕೈಕಾಲು ಮೂಡಿದ್ದಂತೆಯಾವ ಮೂರ್ತವೋ ಕೊನೆಗಾಲಕೆಕಡಲ ಸೇರದಾ ಮರ್ಮವನು ಬಲ್ಲವರಾರುತುಟಿ ಕಚ್ಚಿ ಕರಗಿಸಿದ ಪಿಂಡದಂತೆ ಎಲ್ಲವುಮೌನವೊಂದು ಉತ್ತರವಾದಿತೆ ಕಂಗಳಿಗೆನಿನ್ನ […]

ಕಾವ್ಯಯಾನ

ಮೌನ ರೇಷ್ಮಾ ಕಂದಕೂರ ಮೌನದ ಆಲಾಪಮಾತಿನ ಆರ್ಭಟ ಸರಿಸಿಶಾಂತ ಚಿತ್ತಕೆ ಆಹ್ವಾನ ದುಗುಡ ಅದುಮಿಡುತಸುಪ್ತ ಲೋಕದಿ ವಿಹಾರಜಂಜಡಗಳ ವಿರಮಿಸುವಿಕೆ ಸಮಸ್ಯಯ ಪಿರಾಮಿಡ್ಡಿಗೆಉಪಶಮನದ ಪರಿಸೂಕ್ಷ್ಮ ಅವಲೋಕನ ಪ್ರತಿಭಟಿಸುವ ಪ್ರತಿರೂಪನಿರ್ಣಯಗಳ ಸೂಚಿಕುಹಕತಗೆ ವಿಹಂಗಮ ನೋಟ ಗಟ್ಟಿತನದ ಪ್ರದರ್ಶನಹತೋಟಿಯ ಮನದೊಡಲುಮುಂದಿನ ಸವಾಲಿಗೆ ಅಣಿ ಚಿತ್ತದಲಿ ಅಚ್ಚೊತ್ತಿಮುತ್ತುವವರಿಗ ಎಚ್ಚರಿಕೆ ಘಂಟೆನಡುವೆ ಕೈ ಬಿಟ್ಟವರಿಗೆ ಸವಾಲು ನಿರಾಳತೆಯ ಸ್ವರೂಪವೇದನೆ ಸಹಿಸುವಿಕೆಅಂತರಾಳದ ಸತ್ವ. *******************

ಅನುವಾದ ಸಂಗಾತಿ

ಮಳೆ ಹನಿ ಕನ್ನಡಮೂಲ: ಸ್ಮಿತಾ ಅಮೃತರಾಜ್.ಸಂಪಾಜೆ. ಇಂಗ್ಲೀಷಿಗೆ: ಸಮತಾ ಆರ್. ಮಳೆ ನಿಂತುಹೋದ ಮೇಲೂಯಾರನ್ನೋ ಕಾಯುತ್ತಾಒಂಟಿ ಹಗ್ಗದ ಮೇಲೆಆತುಕೊಂಡ ಸಾಲು ಸಾಲುಮಳೆ ಮಣಿಗಳುಒಲ್ಲದ ಮನಸ್ಸಿನಿಂದಧರೆಗುರುಳುತ್ತಿವೆ. ಬೆಡಗು ಬಿನ್ನಾಣದಲಿಒಂದೇ ಬಿಂದು ಹನಿಹೂ ದಳದ ಮೇಲೆಎತ್ತಿ ಬೊಗಸೆಯೊಳಗಿಟ್ಟುಜೋಪಾನ ಮಾಡ ಬೇಕೆನ್ನುವಷ್ಟರಲ್ಲಿ..ಸಣ್ಣಗೊಂದು ನಕ್ಕುಹೂವಿನೆದೆಯೊಳಗೆ ಹುದುಗಿ ಹೋಯಿತು. ಎಲೆಯ ತುದಿಯಲ್ಲಿಕೊನೇ ಹನಿಇನ್ನೇನು ಬೀಳಬೇಕುನನ್ನೊಳಗೆ ತೀರದ ಸಂಕಟಮೆಲ್ಲಗೆ ಬೆರಳ ತುದಿಗೆಇಳಿಬಿಟ್ಟು ಕಣ್ಣ ಪಾಪೆಯೊಳಗೆಮುಚ್ಚಿಟ್ಟೆ. ನನಗೂ ಮಳೆಗೂ ಈಗತೀರದ ನಂಟು. *********************** A Drop..Even after the rain has stoppedAs if waiting for […]

ಕಾವ್ಯಯಾನ

ಇಲ್ಲಿ ಎಲ್ಲವೂ ಬದಲಾಗುತ್ತದೆ ಅರ್ಪಣಾ ಮೂರ್ತಿ ದಿನಕ್ಕೊಂದು ಬಣ್ಣ ಬದಲಿಸುವಇದೇ ಇಳಿಸಂಜೆಗಳಲ್ಲಿನಾ ಬದಲಾಗದ ನೆನಪ ಹರವಿದ್ದೇನೆ, ಬರಡು ಬಯಲಿನಮನಸುಗಳ ನಡುವೆನಾಕೊನರಿದ ಕೊರಡಿನ ಹಸಿರನ್ನಷ್ಟೇ ಮನಕ್ಕಿಳಿಸಿಕೊಂಡಿದ್ದೇನೆ, ದಿಕ್ಕು ತಪ್ಪಿದ ನದಿಗಳುಅಲ್ಲೆಲ್ಲೋ ಸಂಗಮಿಸುವಾಗನಾನಿಲ್ಲಿ ಅಲೆದಾಡಿ ನದಿಯ ಕಾಯುವ ಕಡಲಾಗಿದ್ದೇನೆ., ಹೌದು ಇಲ್ಲಿ ಎಲ್ಲವೂ ಬದಲಾಗಿದೆ, ನಾನು?ಊಹೂ,ನಾನೀಗಲೂಬಾರದ ಅಮವಾಸ್ಯೆಯ ಚಂದಿರನ ಬೆಳಕಚುಕ್ಕಿಯಲಿ ಹುಡುಕುವಕಾತರದ ಕಣ್ಣಾಗಿದ್ದೇನೆ…. ************************

ಅನುವಾದ ಸಂಗಾತಿ

ಗೋಲಿಗಳು ಹಿಂದಿಮೂಲ:- ಮರಹೂಮ್ ಇಮ್ತಿಯಾಜ. ಕನ್ನಡಕ್ಕೆ:-ಡಿ.ಎಮ್. ನದಾಫ್ ನನ್ನ ಬಾಲ್ಯದ ಮೊದಲಗಳಿಕೆ ಅದ ನಾನು ಕಡು ಶ್ರಮದಿ ಗಳಿಸಿದೆ,ಹಗಲೆನ್ನಲಿಲ್ಲ,ರಾತ್ರಿಯನಲಿಲ್ಲಹಸಿವೆನಲಿಲ್ಲ,ನೀರಕಾಣಲಿಲ್ಲ,ಬರೀ ಗಳಿಕೆಯೋ ಗಳಿಕೆ. ಹಲ ಹಲವು ಬಣ್ಣ-ಬಣ್ಣದವುಕೆಲ-ಕೆಲವು  ಒಡಕು ತಡುಕುವಿಧ-ವಿಧದ ಹೊಂಬಣ್ಣದವುಕೆಲವು ನನ್ನಂತೆ ಅಮೂಲ್ಯಹಲವಲ್ಲಿ ಗೋವ ಕಂಗಳ ನೈರ್ಮಲ್ಯ ಕಿಸೆಯ ಕೊನೆ ಮೂಲೆ ಹರಿದಿತ್ತುಆದರೂ ಅದು ಗೋಟಿಗಳಿಂದ ತುಂಬಿತ್ತು.ವೇಗವಾಗಿ ಓಡಿದಾಗಲೆಲ್ಲಇವುಗಳ ಕಿಂಕಿಣಿ ಕಿವಿ ತುಂಬುತಿತ್ತು. ನಾನು ನನಗಿಂತ ಅವುಗಳನ್ನೇಹೆಚ್ಚು ಸಂಭಾಳಿಸಿದ್ದೆ’ಹಿಟ್ಟಿನ ಬುಟ್ಟಿಯಲ್ಲಿ ಬಚ್ಚಿಟ್ಟಿದ್ದೆ,ಗೊತ್ತಾಗುತ್ತಿಲ್ಲ ಗೆಳೆಯ ನನ್ನ ಗೋಟಿಗಳು ಎಲ್ಲಿ ಕಳೆದು ಹೋದವು?ತುಂಬಿ ಹರಿಯುವ  ನದಿಯಂತೆ ನನ್ನ ಯೌವನದ ಸೆಳೆವಿನಲ್ಲಿ […]

ಲಲಿತ ಪ್ರಬಂಧ

ನೆನಪಿಗೆ ಬರುತ್ತಿಲ್ಲ ಶೀಲಾ ಭಂಡಾರ್ಕರ್ ತಂಗಿ ಫೋನ್ ಮಾಡಿ..” ಅಕ್ಕಾ.. ಈ ಸಲ ದಸರಾ ರಜದಲ್ಲಿ ಊರಿಗೆ ಬಂದಾಗ ಸಾಲೆತ್ತೂರಿಗೆ ಹೋಗಿ ಬರೋಣ್ವಾ? ” ಅಂದಾಗ ನಾನು ಖುಷಿಯಿಂದ “ಹೇಯ್ ನಾನೂ ಅದನ್ನೇ ಯೋಚಿಸ್ತಿದ್ದೆ.. ಖಂಡಿತ ಹೋಗೋಣ” ಅಂದೆ. ಅದಕ್ಕವಳು “ಎಷ್ಟೋ ದಿನದಿಂದ ನನಗೆ ತುಂಬಾ ಆಸೆ ಆಗ್ತಿದೆ ನಾವು ಕಲಿತ ಸ್ಕೂಲು, ಅಪ್ಪನ ಬ್ಯಾಂಕು, ನಾವಿದ್ದ ಮನೆ, ಶೇಷಪ್ಪನ ಅಂಗಡಿ” … ಅನ್ನುವಾಗ ನಾನು ಪಟಕ್ಕನೆ., “ರತ್ನಾಕರ. ನಾನು ರತ್ನಾಕರನನ್ನು ನೋಡಬೇಕು” ಅನ್ನುವುದರೊಳಗೆ ನಮ್ಮವರು ಮನೆಯೊಳಗೆ […]

Back To Top