ನುಡಿ ನಾಗರ
ಅರುಣಾ ರಾವ್

ಮನುಜನ ಮುಖದಲ್ಲಿ
ನಗೆಯ ಮುಖವಾಡ
ಮರೆಮಾಚುವುದು
ದುಗುಡ, ದುಮ್ಮಾನ
ಅಷ್ಟೇಕೆ ?
ಅಸೂಯೆ ಅನುಮಾನ!
ಮುಖವಾಡದ ಹಿಂದಿನ ಮನ
ಅರಿಯದೇ ನಿಜವನ್ನ?
ಕಣ್ಣು ಹೇಳದಿದ್ದೀತೇ
ಎದೆಯ ಮಾತನ್ನ?
ನಂಬಬಹುದೇ ನಿನ್ನನ್ನ
ಓ ನಾಲಿಗೆಯೇ?
ನುಡಿವೆ ನೀ ಏನನ್ನ?
ನೀ ಸುಮ್ಮನಿದ್ದರೇನೆ ಚೆನ್ನ!
ನಿನ್ನಿಂದ ನೋವುಂಡ ಮನ
ನಯನದಲ್ಲಿ ತೋರೀತು
ತನ್ನ ನೋವನ್ನ|
ಎಲುಬಿಲ್ಲದ ಜಿಹ್ವೆ ನೀ
ನುಡಿದ ನುಡಿಯದು
ಗಾಯಪಡಿಸೀತು ಎನ್ನ!
ಬಿಗಿತುಟಿಯ ದುಡಿವಂದು
ನೋವಪಡುವಂದು, ಎಂದೆಂದ
ಮಾತಿನಲಿ ಹುಡುಗಿಹುದು ಸತ್ಯ
ಬಿಗಿದ ತುಟಿ ತರಬಲ್ಲದು ಹಾಸ
ಕಟು ಮಾತಿಗಾತಿಗದೆ
ರಾಮಬಾಣ!
*********************************
ಆಚಾರವಿಲ್ಲದ ನಾಲಿಗೆ ಗೆ ಅಂದೇ ಅಂದರೆ 15-16ನೇ ಶತಮಾನದಲ್ಲೇ ದಾಸ ಶ್ರೇಷ್ಠ ಪುರಂದರ ದಾಸರು ನೀಚ ಬುದ್ಧಿ ಬಿಡುವಂತೆ ಹಳಿದು, ಪೆಟ್ಟು ಕೊಟ್ಟಂತೆ ಜರಿದರು. ಆಧುನಿಕತೆ, ತಂತ್ರಜ್ಞಾನದ ಹೆಸರಿನಲ್ಲಿ ಶುದ್ಧಾಚಾರ, ನೈಜತೆ ನಶಿಸಿ ಹೋಗುತ್ತಿದ್ದರೂ ನಾಲಿಗೆ ಮಾತ್ರ ಅದರ ಚಾಳಿ ಬಿಡದೆ ಅವಮಾನ, ವೈಮನಸ್ಸು ಹುಟ್ಟುಹಾಕುವಲ್ಲಿ ಇಂದಿಗೂ ಮುಂಚೂಣಿಯಲ್ಲಿದೆ. ಅದರಿಂದ ಬೇಸತ್ತ ಹೃದಯ -ನೇತ್ರ -ಮನಸ್ಸಿನ ಭಾವನೆಯನ್ನು ಬಿಂಬಿಸುವ ಮೂಲಕ ನಾಲಿಗೆಗೆ ಮತ್ತೆ ಎಚ್ಚರ ಕೊಟ್ಟ ನುಡಿ ನಾಗರ ಬರಹಗಾರ್ತಿಗೆ ನಮನ
ನುಡಿದರೆ ಮುತ್ತಿನ ಹಾರದಂತಿರಬೇಕು ಎಂದು ನಿಮಗೇ ಹೇಳಿದಂತಿದೆ ಬಸವಣ್ಣನವರು