ಅನುವಾದ ಸಂಗಾತಿ

ಮಳೆ ಹನಿ

ಕನ್ನಡಮೂಲ: ಸ್ಮಿತಾ ಅಮೃತರಾಜ್.ಸಂಪಾಜೆ.

ಇಂಗ್ಲೀಷಿಗೆ: ಸಮತಾ ಆರ್.

ಮಳೆ ನಿಂತು
ಹೋದ ಮೇಲೂ
ಯಾರನ್ನೋ ಕಾಯುತ್ತಾ
ಒಂಟಿ ಹಗ್ಗದ ಮೇಲೆ
ಆತುಕೊಂಡ ಸಾಲು ಸಾಲು
ಮಳೆ ಮಣಿಗಳು
ಒಲ್ಲದ ಮನಸ್ಸಿನಿಂದ
ಧರೆಗುರುಳುತ್ತಿವೆ.

ಬೆಡಗು ಬಿನ್ನಾಣದಲಿ
ಒಂದೇ ಬಿಂದು ಹನಿ
ಹೂ ದಳದ ಮೇಲೆ
ಎತ್ತಿ ಬೊಗಸೆಯೊಳಗಿಟ್ಟು
ಜೋಪಾನ ಮಾಡ ಬೇಕೆನ್ನುವಷ್ಟರಲ್ಲಿ..
ಸಣ್ಣಗೊಂದು ನಕ್ಕು
ಹೂವಿನೆದೆಯೊಳಗೆ ಹುದುಗಿ ಹೋಯಿತು.

ಎಲೆಯ ತುದಿಯಲ್ಲಿ
ಕೊನೇ ಹನಿ
ಇನ್ನೇನು ಬೀಳಬೇಕು
ನನ್ನೊಳಗೆ ತೀರದ ಸಂಕಟ
ಮೆಲ್ಲಗೆ ಬೆರಳ ತುದಿಗೆ
ಇಳಿಬಿಟ್ಟು ಕಣ್ಣ ಪಾಪೆಯೊಳಗೆ
ಮುಚ್ಚಿಟ್ಟೆ.

ನನಗೂ ಮಳೆಗೂ ಈಗ
ತೀರದ ನಂಟು.

***********************

A Drop..
Even after the rain has stopped
As if waiting for someone
Drops lined on a lone rope
Are dripping down
With a heavy heart…

A lovely single drop
On a petal is gleaming and
When went to pick it
And protect in my hand
It escaped smiling and hid
In the bosom of the flower.

A last drop at the tip of a leaf
Was about to drop
Then unable to bear that pain
I held it on my finger tip
And hid it inside my eye.

Now I and rain are bonded forever…


10 thoughts on “ಅನುವಾದ ಸಂಗಾತಿ

  1. ವಾಹ್…. ತುಂಬಾ ಗಹನವಾಗಿದೆ ಮೇಡಂ…

    1. ಭಾವನಾತ್ಮಕ ವಾಗಿದೆ ಕವನ… ಅಭಿನಂದನೆಗಳು

  2. ಆಹಾ ಮಳೆ ಹುಡುಗಿಯೇ…. ಸ್ಮಿತಾ…!! ನಿಮ್ಮನ್ನು ಮಳೆ ಅದು ಹೇಗೆ ಆವರಿಸಿದೆಯೆಂದು ನನಗೆ ಅಚ್ಚರಿಯಾಗುತ್ತದೆ… bonded forever ಎಂದು ಚೆಂದಾಗಿ ಅನುವಾದಿಸಿದ ಸಮತಾಗೂ ಸೇರಿಸಿಕೊಂಡು ಅಭಿನಂದನೆಗಳು…

    1. ಅದ್ಭುತ ಕವಿತೆ ಸ್ಮಿತಾ..ಅನುವಾದವೂ ಅಷ್ಟೇ ಚೆಂದ ಸಮತಾ,ಇಬ್ಬರಿಗೂ ಅಭಿನಂದನೆಗಳು.

  3. ಸ್ಮಿತಾ ಅವರ ಕವನ ಮಳೆ ಹನಿಯಂತೆ ಮನತಣಿಸುತ್ತದೆ ಹಾಗೂ ಸಮತಾರವರ ಅನುವಾದ ಪೂರಕವಾಗಿ ಮೂಡಿ ಬಂದಿದೆ

Leave a Reply

Back To Top