ಗೋಲಿಗಳು
ಹಿಂದಿಮೂಲ:- ಮರಹೂಮ್ ಇಮ್ತಿಯಾಜ.
ಕನ್ನಡಕ್ಕೆ:-ಡಿ.ಎಮ್. ನದಾಫ್

ನನ್ನ ಬಾಲ್ಯದ ಮೊದಲಗಳಿಕೆ ಅದ ನಾನು ಕಡು ಶ್ರಮದಿ ಗಳಿಸಿದೆ,
ಹಗಲೆನ್ನಲಿಲ್ಲ,ರಾತ್ರಿಯನಲಿಲ್ಲ
ಹಸಿವೆನಲಿಲ್ಲ,ನೀರಕಾಣಲಿಲ್ಲ,
ಬರೀ ಗಳಿಕೆಯೋ ಗಳಿಕೆ.
ಹಲ ಹಲವು ಬಣ್ಣ-ಬಣ್ಣದವು
ಕೆಲ-ಕೆಲವು ಒಡಕು ತಡುಕು
ವಿಧ-ವಿಧದ ಹೊಂಬಣ್ಣದವು
ಕೆಲವು ನನ್ನಂತೆ ಅಮೂಲ್ಯ
ಹಲವಲ್ಲಿ ಗೋವ ಕಂಗಳ ನೈರ್ಮಲ್ಯ
ಕಿಸೆಯ ಕೊನೆ ಮೂಲೆ ಹರಿದಿತ್ತು
ಆದರೂ ಅದು ಗೋಟಿಗಳಿಂದ ತುಂಬಿತ್ತು.
ವೇಗವಾಗಿ ಓಡಿದಾಗಲೆಲ್ಲ
ಇವುಗಳ ಕಿಂಕಿಣಿ ಕಿವಿ ತುಂಬುತಿತ್ತು.
ನಾನು ನನಗಿಂತ ಅವುಗಳನ್ನೇ
ಹೆಚ್ಚು ಸಂಭಾಳಿಸಿದ್ದೆ’
ಹಿಟ್ಟಿನ ಬುಟ್ಟಿಯಲ್ಲಿ ಬಚ್ಚಿಟ್ಟಿದ್ದೆ,
ಗೊತ್ತಾಗುತ್ತಿಲ್ಲ ಗೆಳೆಯ ನನ್ನ ಗೋಟಿಗಳು ಎಲ್ಲಿ ಕಳೆದು ಹೋದವು?
ತುಂಬಿ ಹರಿಯುವ ನದಿಯಂತೆ ನನ್ನ ಯೌವನದ ಸೆಳೆವಿನಲ್ಲಿ ಎಲ್ಲಿ ತೇಲಿ ಹೋದವು.
*********************************
ಸರ್
ಕವನ ಪ್ರಕಟಣೆಗೆ ಕೃತಜ್ಞತೆ ಗಳು
ಬಾಲ್ಯ ಕಳೆದ ವಿಷಾದ ಗೋಲಿಗಳು ಮೂಲಕ…
ಚೆನ್ನಾಗಿದೆ