ಇಲ್ಲಿ ಎಲ್ಲವೂ ಬದಲಾಗುತ್ತದೆ
ಅರ್ಪಣಾ ಮೂರ್ತಿ
ದಿನಕ್ಕೊಂದು ಬಣ್ಣ ಬದಲಿಸುವ
ಇದೇ ಇಳಿಸಂಜೆಗಳಲ್ಲಿ
ನಾ ಬದಲಾಗದ ನೆನಪ ಹರವಿದ್ದೇನೆ,
ಬರಡು ಬಯಲಿನ
ಮನಸುಗಳ ನಡುವೆ
ನಾ
ಕೊನರಿದ ಕೊರಡಿನ ಹಸಿರನ್ನಷ್ಟೇ ಮನಕ್ಕಿಳಿಸಿಕೊಂಡಿದ್ದೇನೆ,
ದಿಕ್ಕು ತಪ್ಪಿದ ನದಿಗಳು
ಅಲ್ಲೆಲ್ಲೋ ಸಂಗಮಿಸುವಾಗ
ನಾನಿಲ್ಲಿ ಅಲೆದಾಡಿ ನದಿಯ ಕಾಯುವ ಕಡಲಾಗಿದ್ದೇನೆ.,
ಹೌದು ಇಲ್ಲಿ ಎಲ್ಲವೂ ಬದಲಾಗಿದೆ,
ನಾನು?
ಊಹೂ,
ನಾನೀಗಲೂ
ಬಾರದ ಅಮವಾಸ್ಯೆಯ ಚಂದಿರನ ಬೆಳಕ
ಚುಕ್ಕಿಯಲಿ ಹುಡುಕುವ
ಕಾತರದ ಕಣ್ಣಾಗಿದ್ದೇನೆ….
************************
ಬದಲಾವಣೆ ಜಗದ ನಿಯಮ ಮೇಡಂ.