ಪುಸ್ತಕ ದಿನ

Books

ಇವತ್ತು ಪುಸ್ತಕ ದಿನ

ಶಿವಲೀಲಾ ಹುಣಸಗಿ

“One Best Book is equal to

Hundred Good Friends

one Good Friend is

equal to library”

                           -APJ Abdul kalam.

ಇಂದು ವಿಶ್ವ ಪುಸ್ತಕ ದಿನವಾಗಿ ಇಡೀ ವಿಶ್ವವ್ಯಾಪಿ ಪ್ರಜ್ಞಾವಂತ ಪುಸ್ತಕಪ್ರೇಮಿಗಳು ಆಚರಿಸುತ್ತಿರುವುದು. ಅನೇಕ ಗ್ರಂಥಾಲಯಗಳಲ್ಲಿ ಉಚಿತ ಪುಸ್ತಕ ನೀಡಿ  ಓದಲು ಮುಕ್ತ ಅವಕಾಶ ಕಲ್ಪಿಸುತ್ತಿರುವುದು.ಒಂದು ಓದಿನ ಪರಂಪರೆಗೆ ಹೊಸ ಅಧ್ಯಾಯ ತೆರೆದಂತೆ.ಯ್ಯಾರು ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಂಡಿರುವರೋ ಅವರಿಗೆ ಮಾತ್ರ ಓದಿನ ರುಚಿ ಗೊತ್ತಿರುತ್ತದೆ.ಓದು ಮನುಷ್ಯನ್ನು ಮನುಷ್ಯನಾಗಿ ನೋಡುವುದನ್ನು ಕಲಿಸುತ್ತದೆ ಎಂಬುದನ್ನು ಓದಿದ ನೆನಪು.ಆದರೆ ಓದುವ ಮನಸ್ಸು ಬರುವುದು ಯಾರಲ್ಲಿ? ಎಂದು ಪ್ರಶ್ನಿಸಿದರೇ ಬಹುತೇಕವಾಗಿ ನಿರ್ಮೊಹಿಗಳು..! ಅಂದರೆ ಅಲ್ಪಸ್ವಲ್ಪ ಆಸಕ್ತಿಯನ್ನು ಉಳಿಸಿಕೊಂಡ ಮಹನೀಯರು..! ಪರೀಕ್ಷೆಯ ಪುಸ್ತಕಗಳನ್ನು ಮುಗಿಸುವುದೇ ಯಕ್ಷ ಪ್ರಶ್ನೆಯಾದಾಗ..? ಪೂರಕವಾಗಿ ಓದಲು ಸಮಯವೆಲ್ಲಿ? ಎಲ್ಲವೂ ಅಂಕಗಳಿಗೆ ಸೀಮಿತವಾದಾಗ.ಪಠ್ಯವಲ್ಲದ ಪುಸ್ತಕಗಳನ್ನು ಅಷ್ಟು ಅರ್ಥಗರ್ಭಿತವಾಗಿ ವ್ಯಾಖ್ಯಾನಿಸಲು ಸಾಧ್ಯವಿಲ್ಲ.!

“ಪುಸ್ತಕ ಜ್ಞಾನದ ಕಿಟಕಿ

ಅರಿವಿನ ಗುರಿಗೆ ಪುಸ್ತಕವೇ ಗುರು”..

ಹಾಗದರೆ ಈ ಪುಸ್ತಕ ದಿನ ಹೇಗೆ ಜಾರಿಗೆ ಬಂತು? ಎಂದು ಅವಲೋಕಿಸಿದರೆ.ಮೊದಲಿಗೆ ವೆಲೆನ್ಸಿಯಾದ ಬರಹಗಾರ *ವಿಸೆಂಟ್ ಕ್ಲವಲ್ ಆಂಡ್ರೋ*ಅವರು ಸುಪ್ರಸಿದ್ಧ ಬರಹಗಾರರು.ಅವರ ಜನ್ಮ ದಿನ ಅಕ್ಟೋಬರ್ ೭ ರಂದು  ದಿನವಾಗಿ ಆಚರಿಸುತ್ತಾ ಬಂದ ಕಾಲ.. ಅವರು ಮರಣ ಹೊಂದಿದ ತಿಂಗಳು ಎಪ್ರಿಲ್ ೨೩.ವೆಲೆನ್ಸಿಯಾದ ಜನತೆ ವಿಸೆಂಟ್ನ ನೆನಪಿಗಾಗಿ ಎಪ್ರಿಲ್ ೨೩ ನ್ನು ವಿಶ್ವ ಪುಸ್ತಕ ದಿನವನ್ನಾಗಿ ಘೋಷಿಸಿತು. ೧೯೯೫ ರಲ್ಲಿ ಯುನೆಸ್ಕೋ ಈ ದಿನವನ್ನು ವಿಶ್ವಖ್ಯಾತ ವಿಲಿಯಂ ಷೇಕ್ಸ್‌ಪಿಯರ್ ಹಾಗೂ ಇಕಾಗಾಸಿಸ್ಕೋಡೆಲಾವೆಗಾ ಮರಣ ಹೊಂದಿದನ್ನು ಹಾಗೂ ಅನೇಕ ಬರಹಗಾರ ಜನ್ಮದಿನವನ್ನು ವಿಶ್ವ ಪುಸ್ತಕ ದಿನ ಮತ್ತು ಕೃತಿ ಸ್ವಾಮ್ಯ ದಿನವನ್ನಾಗಿ ಘೋಷಿಸಿತು.

ಇದರ ಉದ್ದೇಶ “ವಿಶ್ವಪುಸ್ತಕದಿನದಂದು ದಿಟ್ಟ ನಿರ್ಧಾರ” ವೆಂದರೆ ತಪ್ಪಾಗದು..

ಪ್ರತಿಯೊಬ್ಬರಲ್ಲೂ ಓದುವ ಹವ್ಯಾಸದ ಜಾಗೃತಿ ಮೂಡಿಸುವುದು.ಅಭಿರುಚಿ ಹೆಚ್ಚಿಸುವುದು.ಜ್ಞಾನ ವ್ಯಕ್ತಿತ್ವವನ್ನು ಬೆಳಗಿಸಲು ಪುಸ್ತಕ ಸಹಕಾರಿಯೆಂದು ಮನದಟ್ಟು ಮಾಡುವುದು.ಅವಶ್ಯವಾಗಿತ್ತು.

ಅಂದಿನಿಂದ ಈ ದಿನವನ್ನು ರಾಷ್ಟ್ರೀಯ ಹಬ್ಬವಾಗಿ

 ರಾಷ್ಟಗಳು ಆಚರಿಸುತ್ತಿವೆ.ಮಕ್ಕಳಿಗೆ ವಿವಿಧ ರೀತಿಯ ಸ್ಪರ್ಧೆಗಳನ್ನು ಹಮ್ಮಿಕೊಂಡು ವಿಜೇತರಾದವರಿಗೆ ಪುಸ್ತಕ ಬಹುಮಾನವಾಗಿ ನೀಡಿ ಪ್ರೋತ್ಸಾಹ ನೀಡುತ್ತಿರುವುದನ್ನು ಮೆಚ್ಚಲೇಬೇಕು..

*ಕೃತಿ ಸ್ವಾಮ್ಯ ವೆಂದರೆ…*

ಒಂದು ಕೃತಿ ಮೊದಲ ಬಾರಿಗೆ ಪ್ರಕಟವಾದ ಮೇಲೆ ಅದನ್ನು ಮರುಪ್ರಕಟಿಸಲು ಪ್ರತಿಗಳನ್ನು ಮಾಡಿ ಮಾರಲು,ರೂಪಾಂತರಗೊಳಿಸಲು,ಮಾರ್ಪಡಿಸಲು, ಪ್ರದರ್ಶಿಸಲು,ಅಥವಾ ನಿರೂಪಿಸಲು ಕಾನುನು ನೀಡುವ ಅನನ್ಯ ಅಧಿಕಾರ.ಹಾಗೂ ಕಾನೂನು ಮನ್ನಿತ ಸಾಹಿತ್ಯ ಸ್ವಾಮ್ಯಾಧಿಕಾರ..ಇದರಿಂದ ಪುಸ್ತಕಗಳು ಮುದ್ರಿತಗೊಳ್ಳುವಲ್ಲಿ,ಮಾರುವಲ್ಲಿ,ಓದುಗರ ಮನ ಮುಟ್ಟುವಲ್ಲಿ ಕಾರ್ಯ ಸುಲಭ.ಪುಸ್ತಕಗಳಿಂದ ಜೀವನ ಬೆಳಕು..ಓದಿದವರೆಂದೂ ಹಾಳಾದ ಉದಾಹರಣೆಯಿಲ್ಲ.

ಇಂದು ನಾವೆಲ್ಲ ಆತ್ಮಸಾಕ್ಷಿಯಾಗಿ ಎಷ್ಟು ಓದುತ್ತೇವೆ ಎಂಬುದನ್ನು ಅವಲೋಕಿಸಬೇಕಿದೆ.ನೂರಾರು ಜಂಜಾಟಗಳ ನಡುವೆ ಸಮಾಧಾನಗೊಂಡು ಪುಸ್ತಕ ಅಪ್ಪಿ ಮುದ್ದಾಡುವ ಸಮಯದ ಅಭಾವ. ಅಂಬೇಡ್ಕರ್ ರಂತಹ ಮಹಾನ್ ನಾಯಕ್ ತನ್ನ ಜೀವನವನ್ನು ಪುಸ್ತಕಗಳೊಂದಿಗೆ ಕಳೆದಿದ್ದು.ಯುವ ಪಿಳಿಗೆಗೆ ಮಾದರಿ.

ದೇಶದ ಮೊದಲ ಶಿಕ್ಷಕಿ ಶ್ರೀ ಮತಿ ಸಾವಿತ್ರಿಬಾಯಿಪುಲೆ..ಶಿಕ್ಷಣಕ್ಕೆ ಆದ್ಯತೆ ನೀಡಿದವರು.ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಶಿಕ್ಷಕರಾಗಿ ಯುವಜನಾಂಗಕ್ಕೆ ತೋರಿದ ಮಾರ್ಗ ಮರೆಯಲಾದಿತೇ?

ಭಗತ್ ಸಿಂಗ್, ಸಂಗೊಳ್ಳಿ ರಾಯಣ್ಣ, ಚಂದ್ರಶೇಖರ ಆಜಾದ್,ಕಿತ್ತೂರು ಚನ್ನಮ್ಮ,ಹೀಗೆ ಹತ್ತು ಹಲವಾರು ಸಂಗತಿಗಳು ರಿತ್ರೆಗಳಅರಿತುಬೆಳೆಯುವುದುಯ್ಯಾವಾಗ??

“ಜೀವನವನ್ನು ಸಾರ್ಥಕವಾಗಿ ಬದುಕಲು ಪುಸ್ತಕದ ಆಸರೆ”

ಬಯಸಿದಾಗೆಲ್ಲ ನೆಮ್ಮದಿ ಒಳಸುಳಿಯಿವುದಂತು ದಿಟ.!

“ಮೌಲ್ಯ ಬಿತ್ತುವಲ್ಲಿ ಪುಸ್ತಕಗಳ ಪಾತ್ರ ಮಹತ್ವದ್ದು.”

ಒಮ್ಮೆ ಅವಲೋಕಿಸಿ …ಇಂದಿನ ಸರಕಾರಿ ಶಾಲೆಗಳಲ್ಲಿ *ಓದುವ ಮೂಲೆ* ತಗೆ ಪುಸ್ತಕ ಹೊರಗೆ* ಶೃದ್ಧಾ ವಾಚನಾಲಯ* ಕಾರ್ಯಕ್ರಮಗಳು.ಸರಕಾರ ಶಾಲೆಗಳಿಗೆ ಅನುದಾನ ನೀಡಿ ಗ್ರಂಥಾಲಯಕ್ಕೆ ಅವಶ್ಯಕ ಮಕ್ಕಳ ಬುದ್ದಿ ಮಟ್ಟಕ್ಕೆ ಅನುಗುಣವಾಗಿ ಹಾಗೂ ಸ್ಥಳಿಯ ಬರಹಗಾರರ ಪುಸ್ತಕ ಖರೀದಿಸುವುದರೊಂದಿಗೆ ಬರಹಗಾರರ ಮನೋಬಲವನ್ನು ಹೆಚ್ಚಿಸುವತ್ತ ದಿಟ್ಟ ನೆಡ ಹೊಂದಿ.ಎನ್ ಸಿ.ಎಪ್.೨೦೦೫ ಆಶಯದಂತೆ

ವಿಷಯಗಳ ಮೇರೆಗಳನ್ನು ಮೀರಿ ಅವುಗಳಿಗೆ ಸಮಗ್ರ ದೃಷ್ಟಿಯ ಚಿಂತನೆ ಹಾಗೂ ಶಾಲೆಯ ಹೊರಗಿನ ಬದುಕಿಗೆ ಜ್ಞಾನವನ್ನು ಸಂಯೋಜಿಸುವುದು.ಮಕ್ಕಳಿಂದಲೇ ಜ್ಞಾನವನ್ನು ಅಭಿವೃದ್ಧಿ ಪಡಿಸುವುದು.ಕಾರಣವಿಷ್ಟೇ.. *ಪುಸ್ತಕದಲ್ಲಿರುವಜ್ಞಾನಮಸ್ತಕಕ್ಕೆವರ್ಗಾವಣೆಯಾಗಬೇಕು

ಅಲ್ಲಿ ಶಿಕ್ಷಕರ ಪಾತ್ರ,ಹಾಗೂ ಮನೆಯಲ್ಲಿ ಪಾಲಕ/ಪೋಷಕರ ಪಾತ್ರ ಅತೀ ಮಹತ್ವದ್ದು.

ಮಕ್ಕಳಿಗೆ ಬೇಗ ಆಕರ್ಷಿಸುವ ಮಾಧ್ಯಮವೆಂದರೆ ಒಂದು ಟಿವಿ ಇನ್ನೊಂದು ಮೊಬೈಲ್.. ಬಹತೇಕ ಪಾಲಕರ ಅಸ್ತ್ರ ಮಕ್ಕಳನ್ನು ಸುಮ್ಮನೀರಿಸಲು ಬಳಸುವ ಏಕೈಕ ಸಾಧನ ಮೊಬೈಲ್…ಅದೇ ಮಗುವಿಗೆ ಬಣ್ಣಬಣ್ಣದ ಚಿತ್ರಕಥೆಗಳಿರುವ ಪುಸ್ತಕ ನೀಡಿದರೇ ಮಗು ಸಂತಸ ಪಡದು….ಮಹಾನ್ ವ್ಯಕ್ತಿಗಳ ಜೀವನ ಚರಿತ್ರೆ ಓದಿ ಹೇಳುವ ವೇದಿಕೆಗಳು ಮನೆಯಿಂದಲೇ ಪ್ರಾರಂಭವಾಗಬೇಕಿದೆ..

*ಒಂದು ಆಶ್ಚರ್ಯವೆಂದರೆ ಬಹುತೇಕರು ಪುಸ್ತಕಗಳನ್ನು ಖರೀದಿಸುವುದಿಲ್ಲ.

*ಖರೀದಿಸಿ ತಂದ ಪುಸ್ತಕಗಳನ್ನು ಓದುವುದಿಲ್ಲ.

*ಮನೆಯಲ್ಲಿ ಬಹತೇಕರು ಟಿವಿ ಧಾರಾವಾಹಿಗಳನ್ನು ಚಾಚು ತಪ್ಪದೇ ನೋಡುವವರು.

*ಭೌತಿಕವಾಗಿ ಪುಸ್ತಕವನ್ನು ಜನರ ಆಕಷರ್ಣೆಗೆ ತರುವುದು ಕಷ್ಟ ‌.

*ಪುಕ್ಕಟೇ ಓದಲು ಹಾತೋರೆವರು.ಖರೀದಿಸಲು ಹಿಂದೇಟು..!

ನಾವೆಲ್ಲ ಗ್ರಹಿಸುವುದು ಓದುವವರು ಇದ್ದಾರೆ. ಪುಸ್ತಕಗಳನ್ನು ಬರೆಯುವವರು,ಮುದ್ರಿಸುವವರು, ಆದರೆ ಕೋಟ್ಯಾಂತರ ಮಂದಿಯಲ್ಲಿ ಲಕ್ಷಾಂತರ ಮಂದಿ ಪುಸ್ತಕಗಳನ್ನು ಸಮರ್ಥವಾಗಿ ಓದಬಲ್ಲ ವಿದ್ಯಾವಂತರಿದ್ದರೂ,ಸಾವಿರ ಪ್ರತಿಗಳು ಮಾರಾಟವಾಗುವುದು ಕಷ್ಟ. ಎಲ್ಲರೂಎಲ್ಲರ ಪುಸ್ತಕ ಕೊಳ್ಳುವುದಿಲ್ಲ.ಕೊಳ್ಳಬೇಕಾಗಿಲ್ಲ,ಓದಬೇಕಿಲ್ಲ ಆದರೆ ಆಸಕ್ತಿ ವಿಷಯಕ್ಕನುಕೂಲವಾಗಿ ಸಾವಿರ ಪುಸ್ತಕಗಳು ಮಾರಾಟವಾಗಬೇಕಿತ್ತು.ಆಗುತ್ತಿಲ್ಲ.ಕೆಲವು ಕಡೆಗಳಲಂತೂ ತಮ್ಮ ಸೈದ್ದಾಂತಿಕ ಬದ್ದತೆ ಮತ್ತು ನೈತಿಕ ಕರ್ತವ್ಯವೆಂಬಂತೆ

ಪುಸ್ತಕ ಖರೀದಿಯಾಗುತ್ತಿದೆ.ಕನ್ನಡ ಓದುಗರೊಗಿಂತ ಆಂಗ್ಲಭಾಷೆಯ ಓದುಗರು ಹೆಚ್ಚಾಗುತ್ತಿರುವರು.ಓದುವುದಕ್ಕೆ ಬಂಧನವಾಗಲಿ,ನಿಬಂಧವಾಗಲಿ ಇಲ್ಲ.

” ಪುಸ್ತಕಗಳು ಜಗತ್ತನ್ನಾಳುತ್ತವೆ” ಎಂಬ ಸತ್ಯ ಅರಿಯಬೇಕಿದೇ… ಕನ್ನಡ ಸಾರಸ್ವತ ಲೋಕದಲ್ಲಿ ೮ ಜ್ಞಾನಪೀಠ ಪ್ರಶಸ್ತಿ ಪಡೆದ ಮೇರು ಕಣಜಗಳು.ನಮ್ಮಮುಂದಿವೆ.ಹೊಸಹೊಸ ಪ್ರತಿಭೆಗಳಿಗೆ, ಅವರ ಸಾಹಿತ್ಯಕ್ಕೆ ಬರವಣಿಗೆಗೆ ಪುಸ್ತಕ ಕೊಂಡುಓದುವ ಹಾಗೂ ವಿಮರ್ಶಿಸುವ ಮನೋಭಾವದ ಕ್ರಾಂತಿಯು ಪ್ರತಿ ಮನೆಯಲ್ಲಿ ನಡೆಯವುದರಿಂದ ಮಕ್ಕಳ ಸಾಹಿತ್ಯ ದ ಅಭಿರುಚಿ ಹೆಚ್ಚಿಸಿದಂತಾಗುತ್ತದೆ.ಕೇವಲ ಇಂದು *ವಿಶ್ವ ಪುಸ್ತಕ ದಿನವೆಂದು ಹೆಸರಿಗೆ ಓದಿಬಿಟ್ಟರೆ

ಅದು ಸಾರ್ಥಕವಾಗಲಾರದು.ಬಿಡುವಿನ ವೇಳೆಯ ಸದುಪಯೋಗ ಪಡೆಯುವ ದಿಕ್ಕಿನಲ್ಲಿ ಯುವ ಪಿಳಿಗೆಯನ್ನು ಬೆಳೆಸಬೇಕಾಗಿರುವುದು ಹಿರಿಯರ ಆದ್ಯ ಕರ್ತವ್ಯ ವಾಗಿದೆ. ಮೊಬೈಲ್ ಬಳಕೆ ನಿಯಮಿತವಾಗಿದ್ದಷ್ಟು ಉತ್ತಮ..

“ಜನರು ಈಗಲೂ ಆಲೋಚಿಸುತ್ತಿದ್ದಾರೆ ಎನ್ನುವುದಕ್ಕೆ ಪುಸ್ತಕದ ಅಂಗಡಿಗಳೇ ಸಾಕ್ಷಿ”

                                —-ಚೆರ್ರಿ ಸೀನ್ ಫೆಲ್ಡ್.

ಪುಸ್ತಕದ ಅಂಗಡಿಗಳಿಗೆ ಮಕ್ಕಳೊಂದಿಗೆ ಬೇಟಿನೀಡಿ.ವಿವಿಧ ಪುಸ್ತಕಗಳನ್ನು ಗಮನಿಸುವ,ಸ್ಪರ್ಶಿಸುವ ಅವಕಾಶನೀಡಿ..ಮಕ್ಕಳು ಮೌಲ್ಯಾಧಾರಿತವಾಗಿ ಬೆಳೆಯಲು ವಿಸ್ಮಯ ಜಗತ್ತನ್ನು ತರೆದಿಟ್ಟಂತಾಗುತ್ತದೆ……..ನಿಮ್ಮ ಆಸುಪಾಸಿನ ಸಾಹಿತಿಗಳ ಸಾಹಿತ್ಯ ಓದಿ.ಹುರುದುಂಬಿಸಿ ಪುಸ್ತಕ ದಿನವನ್ನು ಅರ್ಥಗರ್ಭಿತವಾಗಿ ಹೊರಹೊಮ್ಮಲಿ…

ಪ್ರಪಂಚದಲ್ಲಿ ಮರಣವಿಲ್ಲದ ವರ ಪಡೆದಿರುವ         ವಸ್ತುವೆಂದರೆ.ಅದು. -ಪುಸ್ತಕ”..

*******

.

Leave a Reply

Back To Top