ಪ್ರಬಂಧ

ಮಠದ ಆನೆ

ರೇಶ್ಮಾ ಗುಳೇದಗುಡ್ಡಾಕರ್

ಆನೆ ಎಂದರೆ ಸಂಭ್ರಮ, ಸಡಗರ  ದೈವೀಕತೆ ಆಶ್ಚರ್ಯ ಹತ್ತು ಹಲವು ಉದ್ಗಾರ. ಊರಿನಲ್ಲಿ ಕಂಡರೆ .ಅದೆ ಆನೆ ಅಚಾನಕ್ ಅಗಿ ನಾವು ಹೋಗುವ ದಾರಿಯಲ್ಲಿ ,ಕಾಡಿನಲ್ಲಿ ಊರ ಬಯಲಿನಲ್ಲಿ ಕಂಡರೆ !!!! ಹೃದಯ ವೇ ಬಾಯಿಗೆ ಬಂದಂತಾಗುತ್ತದೆ .  ಅಲ್ಲವೇ ಅದನ್ನು ದೈರ್ಯ ವಾಗಿ ಸ್ವಾಗತಿಸುವರು ಸ್ವಲ್ಪ ಕಡಿಮೆಯೇ .

    ಆನೆ ಎಂದರೆ ನೆನಪಾಗುವದು ಅದರ  ಗಾತ್ರ  ಗತ್ತು ರಾಜಗಾಂಭಿರ್ಯ ನಡಿಗೆ ಅದರ ತೊಕದಷ್ಟೇ ಇರುವ ಸಂಮಯಮ .ಆನೆ ಒಂದು ಅದರೆ ಅದು ತಿಳಿಸುವ ನೀತಿ ಪಾಠ ಹಲವು ತಿಳಿದರೆ!ಇಂತಹ ಆನೆ ನಮ್ಮೊರಿಗೊ ಬರುತ್ತದೆ ವರ್ಷಕ್ಕೆ ೨ ಬಾರಿ ಅದು ಮಠದಿಂದ  ಅದೇ ರಾಜಗಾಂಭೀರ್ಯ ಗತ್ತು  ಅದೇ
ಸಂಮಯಮದಿಂದ ಮಾವುತನನ್ನು ತನ್ನ ಮೇಲೆ ಹೊತ್ತುಕೊಂಡು ತನ್ನ ಬಹುಗಾತ್ರ ದೇಹವನ್ನು ಲೆಕ್ಕಿಸದೆ ಅವನ ಆಣತಿಗೆ ತಲೆಬಾಗುತ್ತಾ!


  ಆಗ ಊರಲ್ಲಿರುವ ಶ್ವಾನ ಬಳಗವೇ ಅದನ್ನು ಮೊದಲು ಸ್ವಾಗತಿಸುವದು!  ತಮ್ಮ ಅಸಹನೆಯನ್ನು ಹೊಳಿಡುವದರ ಮೂಲಕ ಹೊರಹಾಕುತ್ತಾ .ಆ ಗಜರಾಜನನ್ನು ಕಂಡರೆ ಈ ಶ್ವಾನ ಪಡೆಗೆ ಎಕೆ ಅಂತಹ ಕೋಪವೋ ನಾ ಅರಿಯೆ ಮಾರುದೊರದಲ್ಲಿ ನಿಂತು ಒಂದೇ ಉಸಿರಿನಲ್ಲಿ ಹೊಳಿಡುತ್ತವೆ !?
ಇದ್ಯಾವುದನ್ನೊ ಗಜರಾಜ ಗಮನಿಸುವದಿಲ್ಲ ತನ್ನ ಶಕ್ತಿಯನ್ನೊ  ಆ ತೃಣಮಾತ್ರಗಳ ಮೇಲೆ ಪ್ರಯೋಗಿಸುವ ಗೋಜಿಗೊ ಹೊಗುವದಿಲ್ಲ     ಗಜರಾಜ ಬೀದಿಯಲ್ಲಿ ಬರುತ್ತಿದ್ದರೆ ಅದನ್ನು ನೋಡುವದೇ ಒಂದು ಸೊಬಗು . ಎಂದಿನಂತೆ ನಿಧಾನವಾಗಿ ಸಾಗುತ್ತದೆ ಅವನ ನಡಿಗೆಗೆ ಅವನ ಕೊರಳಲ್ಲಿ ರುವ ಗಂಟೆಯ ನಾದವೋ ಜೊತೆಯಾಗಿರುತ್ತದೆ ತಲೆ ಬಾಗಿದವರಿಗೆ ಆಶಿರ್ವದಿಸುತ್ತಾ.ಹಣ್ಣು ,ಬೆಲ್ಲ ನೀಡಿದರೆ ವಿನಮ್ರವಾಗಿ ಸ್ವೀಕರಿಸುತ್ತಾ  ಹಣ ನೀಡಿದರೆ ತನ್ನ ಒಡೆಯನಿಗೆ ಕೊಡುತ್ತಾ !

     ಎಂತಹ ಗುಣ ಮನುಜರು ಕಲಿಯಬೇಕು ಎನಿಸುತ್ತದೆ ಇರಲಿ  ಮಠದ ಆನೆ ಬಂತೆದರೆ ನನ್ನ ಪುತ್ರನಿಗೊ ಎಲ್ಲಿಲ್ಲದ ಹರ್ಷ .ಪಟಪಟನೆ ಓಡಿಹೊಗಿ ನನ್ನ ಪುಟಾಣಿ ಅದರ ಮುಂದೆ ನಿಲ್ಲುತ್ತಾನೆ ನನ್ನೊ ಕೆರೆದ್ಯೊಯಿದು “ಮಮ್ಮಿ ಬಾಹುಬಲಿ ,ಮಮ್ಮಿ ಬಾ ಬಾಹುಬಲಿ ” ಎನ್ನುತ್ತಾ   ಬಾಹುಬಲಿ ೨ ಚಿತ್ರದಲ್ಲಿ ನಾಯಕ ಆನೆಯನ್ನು  ಅದರ ಸೊಂಡಿಲಿನ ಮೂಲಕ ಎರುತ್ತಾನೆ ಇದು ಪ್ರತಿ ಬಾರಿ ಆನೆ ಬಂದಾಗಲೂ ಅವನು ಅದರ ಸೊಂಡಿಲನ್ನು ಗಮನಿಸುತ್ತಾ ನಿಲ್ಲುತ್ತಾನೆ …!!ನನ್ನ ಬಾಹುಬಲಿ ಆನೆಯನ್ನು ಮುಟ್ಟಲು ,ಅವನಿಗೆ ಕುತೊಹಲ ನನಗೊ ಅಷ್ಟು ದೈತ್ಯಾಕಾವನ್ನು ಹತ್ತಿರದಿಂದ ನೋಡಿ ತಳಮಳ ಟಿ.ವಿ ಯಲ್ಲಿ ನೋಡುವದು ಬೇರೆ  ಈಗ real zoom ಅಲ್ಲಿ ನೋಡುವದೇ ಬೇರೆ.


             ಗಜರಾಜ ಮಾತ್ರ ಯಾವುದನ್ನು ಗಮನಿಸದೆ  ವಿನಮ್ರತೆಯಿಂದ ನಿಂತಿರುತ್ತಾನೆ  ಹಣ್ಣನ್ನು ಸ್ವೀಕರಿಸಿ, ಆಶೀರ್ವದಿಸುತ್ತಾನೆ  ಅವನಿಗಾಗಿ ಕಾಯುತ್ತಿರುವವರ ಬಳಿಸಾಗುತ್ತಾನೆ    ಭಕ್ತಗಣ ಎಷ್ಟೇ ದೊಡ್ಡ ದಿದ್ದರೂ ಎಂತಹ ವಾದ್ಯಗಳ ಘೋಷ ಮೊಳಗಿದ್ದರೊ ,ತನ್ನ ಆಗಾಧ ಶಕ್ತಿಯನ್ನು ಮರೆತು,ಮೃಗತ್ವ ತೊರೆದು , ಜನಮಾನಸದಲ್ಲಿ ಬೇರೆಯುತ್ತಾನೆ..‌!!


    
      ಗಜರಾಜ ಹಲವು ಮಾತುಗಳನ್ನು ತನ್ನ ಮೌನದಿಂದಲೇ ಹೇಳುತ್ತಾನೆ ಅನಿಸುತ್ತದೆ  ನನಗೆ .ನಮ್ಮಲ್ಲಿ ಒಂದು ಮಾತು ಇದೆ “ಆನೆ ಹೊಗುತ್ತಿರುತ್ತದೆ,ಶ್ವಾನ ಬೊಗಳುತ್ತಿರುತ್ತದೆ” ಅಂತ ಇದು ಬಹಳ ಅರ್ಥ ಗರ್ಭಿತ ಮಾತು ಅಲ್ಲವೆ? .ಲೋಕದಲ್ಲಿ    ಟೀಕೆ-ಹೊಗಳಿಕೆ, ವಿಮರ್ಶೆ ,ನಿಂದನೆ , ಸಹಜ ಅದಕ್ಕೆ ನಮ್ಮ ಗುರಿಯನ್ನು ಬಿಟ್ಟು ಶಕ್ತಿ ,ಅಥವಾ ಯುಕ್ತಿ ಪ್ರದರ್ಶನ ಎಕೆ ಮಾಡಬೇಕು ? ನಿಂದಿಸುವರು ,ತೆಗಳುವರು ಇರಲಿ ನಾವು ನಮ್ಮ ಗಮನ ನಮ್ಮ ಸಾಧನೆತ್ತ  ಹಾಗೊ ನಮ್ಮ ಕೆಲಸದತ್ತ ಇರಬೇಕು .  

       
     ಆನೆ ಅಷ್ಟು ಶಕ್ತಿ ಶಾಲಿಯಾದರೂ ಶ್ವಾನಗಳ ವಿರುದ್ದ ನಿಲ್ಲುವದಿಲ್ಲ .ಮಾವುತನ ಆಣತಿ ಮೀರುವದಿಲ್ಲ ….ಅದರ ತಾಳ್ಮೆ ಕೆಟ್ಟಿತೆಂದರೆ ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ …!! ಇದು ನಮ್ಮೆಲ್ಲರಿಗೊ ಗೊತ್ತು ಅಂತಹ ಗಜರಾಜ ಶಾಂತ ಮೂರ್ತಿ ಯಾಗಿ ನಮ್ಮೆದರು ನಿಂತಾಗ ….. ಆ ದೈವವೇ ಬಂದತೆ ಭಾಸವಾಗುತ್ತದೆ .ಪ್ರಾಣಿ ಯಾದರೊ ಹೃದಯದ  ಭಾಷೆ ಅರಿಯುತ್ತದೆ ….!!! ಅದರೆ ನಾವು ಒಮ್ಮೊಮ್ಮೆ  ಮನುಷ್ಯತ್ವ ಮರೆತು ಬದುಕುತ್ತೆವೆ ….!!?? ನಮ್ಮವರ ಮರೆಯುತ್ತೆವೆ …ಜವಾಬ್ದಾರಿ ಯಿಂದ ನುಣುಚಿಕೊಳ್ಳುತ್ತೆವೆ …


ಪ್ರಾಣಿ ಪಕ್ಷಿ ಗಳಲ್ಲಿ ಇರುವ ಪ್ರೀತಿ ಬಾಂಧವ್ಯ ನಮ್ಮಲ್ಲಿ    ನೇಪಥ್ಯಕ್ಕೆ ಸರಿಯುತ್ತಿದೆ ದಿನ ಕಳೆದಂತೆ  ಹಣ ಅಧಿಕಾರ ದಿಂದ ಸ್ನೇಹ ,ಸಂಬಂಧ ಅಳೆಯುತ್ತೆವೆ ,ನಮ್ಮ ನಮ್ಮಲ್ಲೆ ಕೋಟೆ ಕಟ್ಟಿಕೊಳ್ಳುತ್ತೇವೆ ಮಾನವೀಯತೆ ತೊರೆದು ಜೀವಿಸುತ್ತಿದ್ದೆವೆ ಕ್ಷುಲ್ಲಕ ಕಾರಣಗಳಿಗಾಗಿ ಆತ್ಮಹತ್ಯೆ ಮಾಡಿಕೊಳ್ಳತ್ತೆವೆ …..ನಮಗೆ ಬದುಕಲು ಹಲವು ಅಯಾಮಗಳಿವೆ ಪ್ರಣಿಗಳಿಗೆ ನಮ್ಮಂತೆ ಯಾವ ಸೌಲಭ್ಯ ಇಲ್ಲ ಹಣ ,ಆಸ್ತಿ, ಮೊಬೈಲ್, ಸಾಮಾಜಿಕ ಜಾಲತಾಣ , ಯಾವುದೊ ಇಲ್ಲ …!! ಅದರೊ ಅವು ಬದುಕುತ್ತವೆ ನಾವು ಸಾಯುತ್ತೆವೆ ಇಲ್ಲ ಸೋಲುತ್ತೇವೆ .ಸೋಲು ಗೆಲುವಿನ ಮೆಟ್ಟಿಲು ಎಂಬು ಅರಿಯಲು ವಿಫಲವಾಗುತ್ತೇವೆ


    
     “ಇದು ಮಾನವ ಜನ್ಮ ಹಾಳುಮಾಡಿಕೊಳ್ಳ ಬೇಡಿ ಹುಚ್ಚಪ್ಪಗಳಿರಾ ” ಎಂಬ ದಾಸರ ನಾಣ್ಣುಡಿಯನ್ನು
ಗಜರಾಜ ನಮಗೆ ಹೇಳಿಹೋದಂತೆ  ಅನಿಸುತ್ತದೆ. ಪ್ರಾಣಿ ಗಳಿಂದ ಜನರಿಗೆ ಅಗಾಗ , ತೊಂದರೆ ಅದರೆ ಅದರೆ ನಮ್ಮಲ್ಲೆ ಬೇಕಾದಷ್ಟೊ ನಿತ್ಯ ನಡೆಯುತ್ತವೆ ಹಲವು ರೊಪದಲ್ಲಿ ….!!ಯಾವ ಪ್ರಾಣಿ ಪಕ್ಷಿ ಯನ್ನು ಅನ್ಯಥಾ  ಕೆಣಕುವದು ತಪ್ಪು ಅವಕ್ಕೊ ನಮ್ಮಂತೆ ಬದುಕಲು ಹಕ್ಕಿದೆ ಈ ಜೀವ ಜಗತ್ತಲ್ಲಿ ಅದರದ್ದೇ ಆದ ನಿರ್ದಿಷ್ಟ ಜವಾಬ್ದಾರಿ ಇದೆ .ಎಂಬುದನ್ನು ನಾವು ಮನದಟ್ಟು ಮಾಡಿ ಕೊಳ್ಳಬೇಕು .   

       
          ಗಜರಾಜನ  ಆಗಮನ ಕ್ಕಾಗಿ ಅವನ ಘಂಟೆಯ ನಾದವನ್ನು ನನ್ನ ಪೋರ ಮತ್ತೆ  ಕಾಯುತ್ತಿರುತ್ತಾನೆ .ನನಗೆ ಗಜರಾಜನ ಮಾತುಗಳು ಅವನು ಹೊದ ದಾರಿಯಲ್ಲೆಲ್ಲಾ ಮಾರ್ದನಿಸುತ್ತಿದೆ ಎನಿಸುತ್ತದೆ

*******
                
                         

2 thoughts on “ಪ್ರಬಂಧ

  1. ಲೇಖನ ಕೂಡ ಗಜ ಗಾಂಭೀರ್ಯದ ನಡೆಯಲ್ಲಿ ಸಾಗಿ ಓದುಗರನ್ನು ಹಿಡಿದಿಟ್ಟಿದೆ, ಅಭಿನಂದನೆಗಳು ರೇಶ್ಮಾ ಅವರಿಗೆ…‌

Leave a Reply

Back To Top