ನಿಶೆಯನರಿಸಿ
ಶಾಲಿನಿ ಆರ್.
ನಿಶೆಯರಸಿ
ನೇಸರ ಹೊಂಟ್ಯಾನ
ನಿಶೆಯರಸಿ ಬಂದಾಳಾ
ಸಂತೆಯೊಳಗೆ ಸದ್ದಿಲ್ಲದಂತೆ
ಬದುಕ ಅಡವಿಯಿದು
ಬೆತ್ತಲಾಗಿಹುದಿಲ್ಲಿಮನದ
ಭಾವಗಳು ಗುಟ್ಟುರಟ್ಟಾಗಿ
ಹರಿದಿಹುದಿಲ್ಲಿ ಈ ಹೊತ್ತು
ಸರಸ ವಿರಸಗಳ ಸಮ ರಸ
ಸಮ್ಮಿಳಿತದ ಭಾವ ಆ ಸುಖದ
ನೋವ ಅನುಭವಿಸಿ ಅರಗಿಸಿ
ಕನವರಿಸಿ ಮಾನಿನಿ ಸರಸಿ
ಅಂಚಿಲ್ಲದ ಸೆರಗಿಲ್ಲದ
ಸವಿನೆನಪ ಪಾಚಿಯ ಹೊದ್ದು
ಅಂಟಿಯು ಅಂಟದಿಹ ಬಾಳ
ಗದ್ದುಗೆಯಲಿ ನೆಮ್ಮದಿಯ ನಿದಿರೆಗೆ ಮರುಳಾಗಿ ಮಲಗಿಹಳಿಲ್ಲಿ ಸುಖನಾಶಿನಿ…
******