ಗಜಲ್
ಗಜಲ್ ಅರುಣಾ ನರೇಂದ್ರ ಅವನು ನನ್ನದೆಯಲ್ಲಿ ದೀಪ ಹಚ್ಚಿಟ್ಟಿದ್ದಾನೆ ಸಖಿಮುಚ್ಚಿದ ಕದ ತೆರೆದು ಕತ್ತಲೆ ಬಚ್ಚಿಟ್ಟಿದ್ದಾನೆ ಸಖಿ ನಮ್ಮಿಬ್ಬರ ಪ್ರೀತಿಯನು ಮುಗಿಲೆತ್ತರಕ್ಕೆ ಹಿಡಿದಿದ್ದಾನೆತುಟಿದೆರೆಯದೆ ಒಲವಿನ ಮಾತುಗಳ ಬಿಚ್ಚಿಟ್ಟಿದ್ದಾನೆ ಸಖಿ ಮೊಗ್ಗುಗಳಿಗೆ ನಗುವ ಕಲಿಸುವ ಖಯಾಲಿ ಅವನದುಒಡಲ ಹೊದರಿನಲಿ ನೋವುಗಳ ಮುಚ್ಚಿಟ್ಟಿದ್ದಾನೆ ಸಖಿ ಅಂಗಳದ ಹಣತೆಗಳಿಗೆ ಅವನದೇ ಕಣ್ಣ ಹೊಳಪುಚುಚ್ಚುವ ಮುಳ್ಳುಗಳ ಲೆಕ್ಕಿಸದೆ ಹೂವ ಮುತ್ತಿಟ್ಡಿದ್ದಾನೆ ಸಖಿ ಬೆಳ್ಳಗಿರುವ ಬೆಳಕಿಗೂ ಬಣ್ಣ ಬಳಿಯುತ್ತಾರಲ್ಲ ಅರುಣಾಬರುವ ಬೇಸರಿಕೆಗಳನು ತಡೆದು ಅಲ್ಲಲ್ಲೇ ಹತ್ತಿಟ್ಟಿದ್ದಾನೆ ಸಖಿ **************************
ಗಜಲ್
ಗಜಲ್ ವಿ.ಹುಸೇನಿ ವಲ್ಲೂರು ಜಿಂದಗಿ ತುಂಬಾ ಬರಿ ಇರುಳ ತುಂಬಿದೆ ನಿನ್ನ ಬಿಟ್ಟು ಹೇಗೆ ಇರಲಿ ಸಖಿ!ಮೊಹಬತ್ತಿನ ತುಂಬಾ ಅರಳಿದ ಇರಳು ಓಡಿಸಬೇಕು ಇಲಾಲು ಹಿಡಿದು ಬಾ ಸಖಿ!! ಹಗಲು ನಾಚಿತು ಮೈ ಬಾಚಿತು ಸೆರಗ ತುಂಬ ಗಂಟು ಕಟ್ಟಿಕೊಂಡು!ಜೀವದೊಳಗ ಜೀವ ನೀನು ಹುಡುಕುತ್ತಿದೆ ಮನಸು ಸನಿಹಕ್ಕೆ ಬಾ ಸಖಿ!! ತುಟಿ ಕಚ್ಚಿ ಹೇಳಬೇಕೆಂದ ಒಂದು ಮಾತು ನನ್ನ ಮನಸಲ್ಲೇ ಉಳಿಯಿತು!ನಾ ಹೋದರು ಮಸಣದ ಗೋರಿ ಮೇಲಿನ ಮರಕ್ಕೊಂದು ಹಾಡು ಕಲಿಸು ಬಾ ಸಖಿ!! ಎಷ್ಟೊಂದು ಆಶೆಗಳು […]
ಗಜಲ್
ಗಜಲ್ ಅಲ್ಲಾಗಿರಿರಾಜ್ ಕನಕಗಿರಿ. ನೀವು ಒಂದು ದಿನ ನನಗೆ ಒಪ್ಪಿಗೆ ಕೊಟ್ಟರೆ ನನ್ನ ಕಬ್ರ್ ನಾನೇ ತೋಡಿಕೊಳ್ಳುತ್ತೇನೆ.ನನ್ನ ಗೋರಿ ಕಟ್ಟಲು ತಂದ ಈ ಬಂಡೆಗಲ್ಲಿನ ಮೇಲೆ ನಾ ಹಿಂದೂಸ್ತಾನಿ ಎಂದು ನಾನೇ ಕೆತ್ತಿಕೊಳ್ಳುತ್ತೇನೆ. ನೀವು ಸುಮ್ಮನಿದ್ದರೆ ನನ್ನ ಮಸಣ ನಾನೇ ನಿರ್ಮಿಸಿಕೊಳ್ಳುತ್ತೇನೆ.ನಾಳೆ ನನ್ನ ಗಜಲ್ ಓದುವಾಗ ಯಾರೂ ಧರ್ಮ ಹುಡುಕಬಾರದೆಂದು ಬೇಡಿಕೊಳ್ಳುತ್ತೇನೆ. ನೀವು ದೂರವಿದ್ದರೆ ನನ್ನ ಗೋರಿ ಮೇಲೆ ಬಿಳಿ ಹೂ ಹುಟ್ಟಲು ಕೇಳಿಕೊಳ್ಳುತ್ತೇನೆ.ನನ್ನ ಗೋರಿ ಬಳಿ ಯಾವ ಧರ್ಮದ ಝಂಡಾ ಹಾರದಿರಲಿಯೆಂದು ವಿನಂತಿಸಿಕೊಳ್ಳುತ್ತೇನೆ. ನೀವು ಬರುವುದಾದರೆ […]
ಗಜಲ್
ಗಜಲ್ ವತ್ಸಲಾ ಶ್ರೀಶ ಕೊಡಗು ಕಲೆಯ ನೆಲೆಗೆ ಒಲವ ಬಳಸಿ ಸೆಳೆದೆಯಲ್ಲ ಗೆಳೆಯಹಲವು ಮಾತು ಗುನುಗಿ ದೂರ ನಿಂತೆಯಲ್ಲ ಗೆಳೆಯ ಕಿವಿಯ ಜುಮುಕಿ ಮುತ್ತಿನಲ್ಲಿ ಹೆಸರ ಬರೆದೆ ಗುಟ್ಟಲಿತುಂಟತನದಿ ಕೆನ್ನೆ ಮುಟ್ಟಿ ಮತ್ತೇರಿದೆಯಲ್ಲ ಗೆಳೆಯ ದೂರದಲ್ಲಿ ಹಾಡನೊಂದು ಕೇಳೆ ಮನವು ಪುಳಕವಿಲ್ಲಿಹಣೆಯ ಮುತ್ತ ನೆನಪು ನೀಡಿ ಕಾಡಿದೆಯಲ್ಲ ಗೆಳೆಯ ಬೆರಳಿಗೊಂದು ಬೆರಳು ಸೇರಿಸಿ ನಾಲ್ಕು ಹೆಜ್ಜೆ ಇರಿಸಿದೆನೂರು ಜನ್ಮ ಜೊತೆಯ ಬೇಡಿ ನಿಂತೆಯಲ್ಲ ಗೆಳೆಯ ಬಿಸಿಯುಸಿರು ಕೊರಳ ತಾಗಿ ಪ್ರೀತಿ ಕವನ ಗೀಚಿದೆಕಣ್ಣಿನಲ್ಲಿ ಪ್ರೇಮ ಬಿಂಬ ಪ್ರತಿಷ್ಠೆಯಾಗಿದೆಯಲ್ಲ […]
ಗಜಲ್
ಗಜಲ್ (ಸಂಪೂರ್ಣ ಮತ್ಲಾ ಗಜಲ್) ಸಿದ್ಧರಾಮ ಹೊನ್ಕಲ್ ಮನಸ್ಸೇಕೋ ಮತ್ತೆ ನೊಂದು ಮೌನದಿ ಕಮರಿಹೋಗಿದೆಯಾಕೋ ಸುಮ್ಮನೇ ಮನಸಲ್ಲೆ ಬೆಂದು ಲೀನವಾಗಿದೆ ಯಾಕೆ ಏನು ಯಾರಿಗಾಗಿ ಇದೆಲ್ಲ ಒಂದು ತಿಳಿಯದಾಗಿದೆಕಾರಣವಿಲ್ಲದೇ ಸಂಕಟ ಆಗುವದೇಕೋ ಅರಿಯದಾಗಿದೆ ಕೈಗೆ ಬಂದ ತುತ್ತು ಬಾಯಿಗೆ ಬಾರದೆ ರುಚಿ ಸಿಗದಾಗಿದೆಭರಪುರ ಬೆಳೆದ ರೈತನ ಫಸಲು ಹೊಲವೇ ಕದ್ದಂತಾಗಿದೆ ಬಿತ್ತುವದು ಅವನ ಧರ್ಮ ಬೆಳೆ ಪಡೆವುದು ಕರ್ಮವಾಗಿದೆಉಂಡು ಕೊಂಡು ಹೋದ ಲಂಡರದೇ ಬಲು ಹಿತವಾಗಿದೆ ಕೊಚ್ಚೆಯಲ್ಲಿ ಬಿದ್ದ ಮಾಣಿಕ್ಯಕ್ಕೆ ತನ್ನ ಬೆಲೆ ತಿಳಿಯದಾಗಿದೆಹೊನ್ನಸಿರಿ’ ಇರಲಿ ನೋಯಬೇಡ […]
ಲಂಕೇಶ-೭೮
ಲಂಕೇಶ-೭೮ ಸಿದ್ಧರಾಮ ಹೊನ್ಕಲ್ ಯಾರಿಗೂ ಏನನ್ನೂ ಬೇಡಲಿಲ್ಲ,ಬಯಸಲಿಲ್ಲ ಈ ಲಂಕೇಶಎಲ್ಲರಿಗೂ ಪಾಪಪ್ರಜ್ಞೆಯಾಗಿ ಕಾಡದೇ ಬಿಡಲಿಲ್ಲ ಈ ಲಂಕೇಶ ತಾನು ನಡೆದದ್ದು ಬರೀ ದಾರಿಯಲ್ಲ ಈ ಲಂಕೇಶನಿಗೆಅದು ರಾಜಮಾರ್ಗವೆಂದು ತೋರಿದನಲ್ಲ ಈ ಲಂಕೇಶ ಕನ್ನಡದ ಮೇರು ಲೇಖಕ ಮೇಲಾಗಿ ನಿರ್ಭೀತ ಪತ್ರಕರ್ತಶತಮಾನದ ದೃಷ್ಟಿಕೋನ ಬದಲಿಸಿದನಲ್ಲ ಈ ಲಂಕೇಶ ಕಥೆ,ಕವಿತೆ,ಪತ್ರಿಕೆ,ಸಿನೆಮಾ ನಿರ್ದೇಶನ ಹೀಗೆ ನಡೆದಂತೆಲ್ಲಾ ದಾರಿಗಳುನಡೆದ ದಾರಿಯಗುಂಟ ಬರೀ ಮುಳ್ಳುಗಳೇ ಹಸನಾದವಲ್ಲ ಈ ಲಂಕೇಶ ಯಾರಿಗೂ ಅಂಜಲಿಲ್ಲ ಅಳುಕಲಿಲ್ಲ ಯಾರ ಬಿಢೆಗೂ ಬೀಳಲಿಲ್ಲ“ಹೊನ್ನಸಿರಿ”ಕರ್ನಾಟಕಕ್ಕೆ ಹೊಸ ಮನ್ವಂತರ ಸೃಷ್ಟಿಸಿದರಲ್ಲ ಈ ಲಂಕೇಶ […]
ಗಝಲ್
ಗಝಲ್ ರತ್ನರಾಯ ಮಲ್ಲ ಅಸಹಾಯಕತೆಯ ಬೇರಿಗೆ ನೀರೆರೆಯಬೇಡಿಮನಸ್ಸಿನ ಆತ್ಮವಿಶ್ವಾಸವನ್ನು ಚಿವುಟಬೇಡಿ ಕರುಣೆ-ಕನಿಕರದಿಂದ ಒಡಲ ಹಸಿವು ನೀಗದುಸಹಾನುಭೂತಿಯ ಜಾಲದಲ್ಲಿ ಸಿಲುಕಬೇಡಿ ಪಾಪ ಎಂದು ಪಾಪಿ ಎನ್ನುವರು ಜಗದೊಳಗೆಸಾಧನೆಯ ಶಿಖರದಿಂದ ಜಾರಿ ಬೀಳಬೇಡಿ ಕಾರಣಗಳು ಇತಿಹಾಸವನ್ನು ನಿರ್ಮಿಸುವುದಿಲ್ಲನೋವನ್ನು ಪ್ರದರ್ಶನದ ವಸ್ತು ಮಾಡಬೇಡಿ ‘ಮಲ್ಲಿ’ ಮಲ್ಲಿಗೆಯ ಮೊಗ್ಗನ್ನು ಪ್ರೀತಿಸುವರೆಲ್ಲರುಅನ್ಯರ ಕೈಯಲ್ಲಿ ಆಡುವ ಗೊಂಬೆ ಆಗಬೇಡಿ ***************************************
ಗಝಲ್
ಗಝಲ್ ಮುತ್ತು ಬಳ್ಳಾ ಕಮತಪುರ ಮಾತನಾಡುವದೇ ಬಿಟ್ಟಿರುವೆ ನುಡಿಗಳು ತಿರುಚಲಾಗುತ್ತಿದೆ |ಕೇಳಿಸಿಕೊಳ್ಳುವುದೇ ಬಿಟ್ಟಿರುವೆ ಸುಳ್ಳುಗಳು, ವಿಜೃಂಭಿಸಲಾಗುತ್ತಿದೆ || ನೋಡುವುದೇ ಬಿಟ್ಟಿರುವೆ ಬೆಂಕಿ ಹಚ್ಚುವುದು ಚಿತ್ರಿಸಲಾಗುತ್ತಿದೆ |ಪ್ರಶ್ನಿಸುವುದೇ ಬಿಟ್ಟಿರುವೆ ನಾಲಿಗೆಗೆ ಬೀಗ ಹಾಕಲಾಗುತ್ತಿದೆ || ಪುಸ್ತಕ ಓದುವದೇ ಬಿಟ್ಟಿರುವೆ ಕಂದಕ ಉಂಟು ಮಾಡುವುದೇ ಮುನ್ನೆಲೆಗೆ |ತಿನ್ನುವದೇ ಆತಂಕ ಹೊಲಗಳಲ್ಲಿ ವಿಷವನ್ನು ಬಿತ್ತಿ ಬೆಳೆಯಲಾಗುತ್ತಿದೆ || ಕಲಾ ಲೋಕದಲ್ಲಿ ಬಣ್ಣದ,ಬಾಚಣಿಗೆಯ ಮಂದಿಯೇ ತುಂಬಿಕೊಂಡಿದ್ದಾರೆ |ಎಲ್ಲಾ ಉಚಿತವಾಗಿ ವಿತರಣೆ ಮನುಜ ಪ್ರೀತಿ ಪೇಟೆಯಲಿ ಬಿಕರಿಯಾಗುತ್ತಿದೆ || ಜೀವನ ಪುಷ್ಪ ಮೊಗ್ಗಾಗಿ ಅರಳುವ […]
ಗಝಲ್
ಗಝಲ್ ಪ್ರತಿಮಾ ಕೋಮಾರ ನೆನಪುಗಳನ್ನೆಲ್ಲ ಕಣ್ರೆಪ್ಪೆಯಲಿ ಸೆರೆಯಾಗಿಸಿದ್ದೇನೆ ಕುಕ್ಕಬೇಡ ನೋಡುನಿರೀಕ್ಷೆಗಳನ್ನೆಲ್ಲ ಅಟ್ಟ ಏರಿಸಿದ್ದೇನೆ ಇಳಿಸಬೇಡ ನೋಡು ಒಳಗುದಿಯ ಒಳಗೇ ಇಟ್ಟು ಕುದಿಯುವುದೇಕೆ? ಹೇಳಿಬಿಡುಕೇಳಲೆಂದೆ ಎದೆಗಿವಿಯನ್ನು ತೆರೆದಿದ್ದೇನೆ ಮುಚ್ಚಿಡಬೇಡ ನೋಡು ಎನ್ನೆಲ್ಲ ಭಾವಗಳ ಚಿತ್ರ ಶಾಲೆಗೆ ಚಿತ್ತಾರಿಗನಾದವನು ನೀನುನಿನ್ನಾಸರೆಯಲಿ ನಲಿವ ರಾಶಿ ಹಾಕಿದ್ದೇನೆ ತೂರಬೇಡ ನೋಡು ತಪ್ಪನ್ನು ಕ್ಷಮಿಸಿ ಮುಂದಡಿ ಇಟ್ಟಾಗಲೇ ಸಾಗುವುದು ಪಯಣಘಾತದ ಭೂತವನ್ನೆಲ್ಲ ಮರೆತು ಬಿಟ್ಟಿದ್ದೇನೆ ಕೆದಕಬೇಡ ನೋಡು “ಪ್ರತಿ” ಯ ನಿಗ೯೦ಧ ಬಾಳು ಬಂಜರು ಭೂಮಿಗೆ ಸಮಾನಕನಸಗನ್ನಡಿಯ ಜೋಪಾನ ಮಾಡಿದ್ದೇನೆ ಒಡೆಯಬೇಡ ನೋಡು ********************************
ಗಝಲ್
ಮಕ್ಕಳಿಗಾಗಿ ಗಝಲ್ ಲಕ್ಷ್ಮೀದೇವಿ ಪತ್ತಾರ ಜೇಡ ತುಂಬಿದ ನಿಮ್ಮ ಮನದ ಮನೆಯ ಜಾಡಿಸಿ ಶುಭ್ರವಾಗಿಸುವ ಜಾಡು ನಾನಾಗುವೆ ಮಕ್ಕಳೆಪದೇಪದೇ ದೂಳು ತುಂಬಿದ ಜೀವನ ನಿಮ್ಮದಾಗಿಸಿ ಕೊಳ್ಳಬೇಡಿ ಮಕ್ಕಳೆ ನಿಮ್ಮ ಮಬ್ಬಾದ ಬಾಳ ಬಾನಿನಲ್ಲಿ ಬಣ್ಣ ಬಣ್ಣದ ತಾರೆಗಳನ್ನು ಇರಿಸಿ ಬೆಳಗಿಸುವೆ ಮತ್ತೆ ಮತ್ತೆ ಕಾರ್ಮೋಡಗಳ ಮುಂದಿರಿಸಿ ಕತ್ತಲಲ್ಲಿ ಮೂಳಗಬೇಡಿ ಮಕ್ಕಳೇ ನಿಂತ ನೀರಾಗಿ ಕೊಳೆಯುತ್ತಿರುವ ನಿಮ್ಮ ಬಾಳ ಹೊಳೆಗೆ ಮಳೆ ನಾನಾಗಿ ಚೈತನ್ಯ ಚಿಲುಮೆಯಾಗಿ ಹರಿವಂತೆ ಮಾಡುವೆಮತ್ತೆ ಜಡತೆಯ ಬಂಡೆ ಅಡ್ಡವಿರಿಸಿ ನಿಸ್ತೇಜರಾಗಿ ಕೂಡಬೇಡ ಮಕ್ಕಳೆ ಹಸಿರಾಡದ […]