ಗಜಲ್
ವಿ.ಹುಸೇನಿ ವಲ್ಲೂರು
ಜಿಂದಗಿ ತುಂಬಾ ಬರಿ ಇರುಳ ತುಂಬಿದೆ ನಿನ್ನ ಬಿಟ್ಟು ಹೇಗೆ ಇರಲಿ ಸಖಿ!
ಮೊಹಬತ್ತಿನ ತುಂಬಾ ಅರಳಿದ ಇರಳು ಓಡಿಸಬೇಕು ಇಲಾಲು ಹಿಡಿದು ಬಾ ಸಖಿ!!
ಹಗಲು ನಾಚಿತು ಮೈ ಬಾಚಿತು ಸೆರಗ ತುಂಬ ಗಂಟು ಕಟ್ಟಿಕೊಂಡು!
ಜೀವದೊಳಗ ಜೀವ ನೀನು ಹುಡುಕುತ್ತಿದೆ ಮನಸು ಸನಿಹಕ್ಕೆ ಬಾ ಸಖಿ!!
ತುಟಿ ಕಚ್ಚಿ ಹೇಳಬೇಕೆಂದ ಒಂದು ಮಾತು ನನ್ನ ಮನಸಲ್ಲೇ ಉಳಿಯಿತು!
ನಾ ಹೋದರು ಮಸಣದ ಗೋರಿ ಮೇಲಿನ ಮರಕ್ಕೊಂದು ಹಾಡು ಕಲಿಸು ಬಾ ಸಖಿ!!
ಎಷ್ಟೊಂದು ಆಶೆಗಳು ಹೆಪ್ಪುಗಟ್ಟಿವೆ ನಿನ್ನ ನೋಡದೆ ತಲಬಾಗಿಲ ಮುಂದೆ!
ಊರ ಅಂಗಳ ತುಂಬಾ ನಿನಗಾಗಿ ರಂಗೋಲಿ ಕಾಯುತ್ತಿದೆ ಬಾ ಸಖಿ!!
“ವೀರ” ಪ್ರೇಮಿಯ ಮುಂದೆ ಬತ್ತಿದ ಕೆರೆಯಂಗಳ ಆಗಬೇಡ ಸಖಿ!
ಎಷ್ಟು ಸಲ ಸೋತು ಸೋತು ಮಂಡಿ ಊರಿದ್ದೇನೆ ನಿನಗಾಗಿ ಬಾ ಸಖಿ!!
*************************************