ಮಕ್ಕಳಿಗಾಗಿ
ಗಝಲ್
ಲಕ್ಷ್ಮೀದೇವಿ ಪತ್ತಾರ
![Children playing in a village street in Indonesia [800x550] Photo by Rarindra Prakarsa : HumanPorn](https://sangaati.com/wp-content/uploads/2020/11/image-5.jpeg)

ಜೇಡ ತುಂಬಿದ ನಿಮ್ಮ ಮನದ ಮನೆಯ ಜಾಡಿಸಿ ಶುಭ್ರವಾಗಿಸುವ ಜಾಡು ನಾನಾಗುವೆ ಮಕ್ಕಳೆ
ಪದೇಪದೇ ದೂಳು ತುಂಬಿದ ಜೀವನ ನಿಮ್ಮದಾಗಿಸಿ ಕೊಳ್ಳಬೇಡಿ ಮಕ್ಕಳೆ
ನಿಮ್ಮ ಮಬ್ಬಾದ ಬಾಳ ಬಾನಿನಲ್ಲಿ ಬಣ್ಣ ಬಣ್ಣದ ತಾರೆಗಳನ್ನು ಇರಿಸಿ ಬೆಳಗಿಸುವೆ ಮತ್ತೆ ಮತ್ತೆ ಕಾರ್ಮೋಡಗಳ ಮುಂದಿರಿಸಿ ಕತ್ತಲಲ್ಲಿ ಮೂಳಗಬೇಡಿ ಮಕ್ಕಳೇ
ನಿಂತ ನೀರಾಗಿ ಕೊಳೆಯುತ್ತಿರುವ ನಿಮ್ಮ ಬಾಳ ಹೊಳೆಗೆ ಮಳೆ ನಾನಾಗಿ ಚೈತನ್ಯ ಚಿಲುಮೆಯಾಗಿ ಹರಿವಂತೆ ಮಾಡುವೆ
ಮತ್ತೆ ಜಡತೆಯ ಬಂಡೆ ಅಡ್ಡವಿರಿಸಿ ನಿಸ್ತೇಜರಾಗಿ ಕೂಡಬೇಡ ಮಕ್ಕಳೆ
ಹಸಿರಾಡದ ಮರುಭೂಮಿಯಂತಾದ ನಿಮ್ಮ ಬದುಕಿಗೆ ಉದಕ ನಾನಾಗಿ ಹಚ್ಚಹಸಿರು ಸಸ್ಯರಾಶಿ ಚಿಗುರಿಸುವೆ
ಚಿಂತೆಯ ಕಸ ಬೆಳೆಸಿಕೊಂಡು ಮತ್ತೆ ಬರಡು ಭೂಮಿಯಾಗಬೇಡಿ
ಇದು ಲಕುಮಿ ಶಿಕ್ಷಕಿಯ ಕಳಕಳಿ ಬೇಡಿಕೆ ಮಕ್ಕಳೆ
***************************
ಮತ್ಲಾ ದಲ್ಲಿನ ಕಾಫೀಯಾ ಸರಿಯಾಗಿಲ್ಲ…ಕೆಳಗಿನ ಶೇರ್ ಗಳನ್ನು ಗಮನಿಸಿ