ಗಝಲ್
ರತ್ನರಾಯ ಮಲ್ಲ
ಅಸಹಾಯಕತೆಯ ಬೇರಿಗೆ ನೀರೆರೆಯಬೇಡಿ
ಮನಸ್ಸಿನ ಆತ್ಮವಿಶ್ವಾಸವನ್ನು ಚಿವುಟಬೇಡಿ
ಕರುಣೆ-ಕನಿಕರದಿಂದ ಒಡಲ ಹಸಿವು ನೀಗದು
ಸಹಾನುಭೂತಿಯ ಜಾಲದಲ್ಲಿ ಸಿಲುಕಬೇಡಿ
ಪಾಪ ಎಂದು ಪಾಪಿ ಎನ್ನುವರು ಜಗದೊಳಗೆ
ಸಾಧನೆಯ ಶಿಖರದಿಂದ ಜಾರಿ ಬೀಳಬೇಡಿ
ಕಾರಣಗಳು ಇತಿಹಾಸವನ್ನು ನಿರ್ಮಿಸುವುದಿಲ್ಲ
ನೋವನ್ನು ಪ್ರದರ್ಶನದ ವಸ್ತು ಮಾಡಬೇಡಿ
‘ಮಲ್ಲಿ’ ಮಲ್ಲಿಗೆಯ ಮೊಗ್ಗನ್ನು ಪ್ರೀತಿಸುವರೆಲ್ಲರು
ಅನ್ಯರ ಕೈಯಲ್ಲಿ ಆಡುವ ಗೊಂಬೆ ಆಗಬೇಡಿ
***************************************