ಗಝಲ್

ಗಝಲ್

ಮುತ್ತು ಬಳ್ಳಾ ಕಮತಪುರ

Sunflower, Bud, Blossom, Go Up, Bloom

ಮಾತನಾಡುವದೇ ಬಿಟ್ಟಿರುವೆ ನುಡಿಗಳು ತಿರುಚಲಾಗುತ್ತಿದೆ |
ಕೇಳಿಸಿಕೊಳ್ಳುವುದೇ ಬಿಟ್ಟಿರುವೆ ಸುಳ್ಳುಗಳು, ವಿಜೃಂಭಿಸಲಾಗುತ್ತಿದೆ ||

ನೋಡುವುದೇ ಬಿಟ್ಟಿರುವೆ ಬೆಂಕಿ ಹಚ್ಚುವುದು ಚಿತ್ರಿಸಲಾಗುತ್ತಿದೆ |
ಪ್ರಶ್ನಿಸುವುದೇ ಬಿಟ್ಟಿರುವೆ ನಾಲಿಗೆಗೆ ಬೀಗ ಹಾಕಲಾಗುತ್ತಿದೆ ||

ಪುಸ್ತಕ ಓದುವದೇ ಬಿಟ್ಟಿರುವೆ ಕಂದಕ ಉಂಟು ಮಾಡುವುದೇ ಮುನ್ನೆಲೆಗೆ |
ತಿನ್ನುವದೇ ಆತಂಕ ಹೊಲಗಳಲ್ಲಿ ವಿಷವನ್ನು ಬಿತ್ತಿ ಬೆಳೆಯಲಾಗುತ್ತಿದೆ ||

ಕಲಾ ಲೋಕದಲ್ಲಿ ಬಣ್ಣದ,ಬಾಚಣಿಗೆಯ ಮಂದಿಯೇ ತುಂಬಿಕೊಂಡಿದ್ದಾರೆ |
ಎಲ್ಲಾ ಉಚಿತವಾಗಿ ವಿತರಣೆ ಮನುಜ ಪ್ರೀತಿ ಪೇಟೆಯಲಿ ಬಿಕರಿಯಾಗುತ್ತಿದೆ ||

ಜೀವನ ಪುಷ್ಪ ಮೊಗ್ಗಾಗಿ ಅರಳುವ ಕಾಲದಲಿ ಬಾಗಿಸಬಹುದು ಮುತ್ತು |
ಪ್ರೀತಿ ತುಂಬಿದ ಮಾರ್ಗದರ್ಶನ ಈಗೀಗ ಎಳೆಯ ಮನಸಿಗೆ ಮಿಥ್ಯವಾಗುತ್ತಿದೆ |

**********************************

One thought on “ಗಝಲ್

Leave a Reply

Back To Top