ಗಜಲ್
ಅರುಣಾ ನರೇಂದ್ರ
ಅವನು ನನ್ನದೆಯಲ್ಲಿ ದೀಪ ಹಚ್ಚಿಟ್ಟಿದ್ದಾನೆ ಸಖಿ
ಮುಚ್ಚಿದ ಕದ ತೆರೆದು ಕತ್ತಲೆ ಬಚ್ಚಿಟ್ಟಿದ್ದಾನೆ ಸಖಿ
ನಮ್ಮಿಬ್ಬರ ಪ್ರೀತಿಯನು ಮುಗಿಲೆತ್ತರಕ್ಕೆ ಹಿಡಿದಿದ್ದಾನೆ
ತುಟಿದೆರೆಯದೆ ಒಲವಿನ ಮಾತುಗಳ ಬಿಚ್ಚಿಟ್ಟಿದ್ದಾನೆ ಸಖಿ
ಮೊಗ್ಗುಗಳಿಗೆ ನಗುವ ಕಲಿಸುವ ಖಯಾಲಿ ಅವನದು
ಒಡಲ ಹೊದರಿನಲಿ ನೋವುಗಳ ಮುಚ್ಚಿಟ್ಟಿದ್ದಾನೆ ಸಖಿ
ಅಂಗಳದ ಹಣತೆಗಳಿಗೆ ಅವನದೇ ಕಣ್ಣ ಹೊಳಪು
ಚುಚ್ಚುವ ಮುಳ್ಳುಗಳ ಲೆಕ್ಕಿಸದೆ ಹೂವ ಮುತ್ತಿಟ್ಡಿದ್ದಾನೆ ಸಖಿ
ಬೆಳ್ಳಗಿರುವ ಬೆಳಕಿಗೂ ಬಣ್ಣ ಬಳಿಯುತ್ತಾರಲ್ಲ ಅರುಣಾ
ಬರುವ ಬೇಸರಿಕೆಗಳನು ತಡೆದು ಅಲ್ಲಲ್ಲೇ ಹತ್ತಿಟ್ಟಿದ್ದಾನೆ ಸಖಿ
**************************
ಮೇಡಂ, ಗಜಲ್ ಓದಿದರೆ ಮನಸು ಮುದ ಗೊಳ್ಳುತ್ತದೆ.ನನ್ನೆದೆಯಲಿ ದೀಪ ಹಚ್ಚಿಟ್ಟಿದ್ದಾನೆ
ಮುಚ್ಚಿದ ಕದ ತೆರೆದು ಕತ್ತಲೆ ಬಚ್ಚಿಟ್ಟಿದ್ದಾನೆ ಎನ್ನುವ ಮಕ್ತಾದ ಸಾಲುಗಳೇ ಜೀವ ಚೈತನ್ಯ ವಾಗಿವೆ.
ಲೌಕಿಕ ಅಲೌಕಿಕವಾಗಿಯೂ ಪರಿ ಭಾವಿಸಿ ಕೊಳ್ಳಬಹುದು
ಶುಭಾಶಯಗಳು ಇಂತಹ ಶಕ್ತಿಶಾಲಿ ಗಜಲ್ ತೊರೆ ಹರಿದು ಬರಲಿ
ಎ ಎಸ್ ಮಕಾನದಾರ
Nice….gazal….tangemma
ಮೇಡಂ ಗಜಲ್ ಮನ ಮುಟ್ಟುತ್ತದೆ.ಮೊಗ್ಗುಗಳಿಗೆ ನಗುವ ಕಲಿಸುವ ಖಯಾಲಿ ಅವನದು ಸಾಲುಗಳಂತೂ ಸೂಪರ್