ಗಜಲ್
ವತ್ಸಲಾ ಶ್ರೀಶ ಕೊಡಗು
ಕಲೆಯ ನೆಲೆಗೆ ಒಲವ ಬಳಸಿ ಸೆಳೆದೆಯಲ್ಲ ಗೆಳೆಯ
ಹಲವು ಮಾತು ಗುನುಗಿ ದೂರ ನಿಂತೆಯಲ್ಲ ಗೆಳೆಯ
ಕಿವಿಯ ಜುಮುಕಿ ಮುತ್ತಿನಲ್ಲಿ ಹೆಸರ ಬರೆದೆ ಗುಟ್ಟಲಿ
ತುಂಟತನದಿ ಕೆನ್ನೆ ಮುಟ್ಟಿ ಮತ್ತೇರಿದೆಯಲ್ಲ ಗೆಳೆಯ
ದೂರದಲ್ಲಿ ಹಾಡನೊಂದು ಕೇಳೆ ಮನವು ಪುಳಕವಿಲ್ಲಿ
ಹಣೆಯ ಮುತ್ತ ನೆನಪು ನೀಡಿ ಕಾಡಿದೆಯಲ್ಲ ಗೆಳೆಯ
ಬೆರಳಿಗೊಂದು ಬೆರಳು ಸೇರಿಸಿ ನಾಲ್ಕು ಹೆಜ್ಜೆ ಇರಿಸಿದೆ
ನೂರು ಜನ್ಮ ಜೊತೆಯ ಬೇಡಿ ನಿಂತೆಯಲ್ಲ ಗೆಳೆಯ
ಬಿಸಿಯುಸಿರು ಕೊರಳ ತಾಗಿ ಪ್ರೀತಿ ಕವನ ಗೀಚಿದೆ
ಕಣ್ಣಿನಲ್ಲಿ ಪ್ರೇಮ ಬಿಂಬ ಪ್ರತಿಷ್ಠೆಯಾಗಿದೆಯಲ್ಲ ಗೆಳೆಯ
ಕದಪುಗಳ ರಂಗು ನುಡಿಯುತಿದೆ ಕೇಳದ ಕತೆಯೊಂದನು
ಭೂಮಿ ಬಾನು ಸಂಜೆ ಪ್ರಣಯ ಗುಲ್ಲಾಗಿದೆಯಲ್ಲ ಗೆಳೆಯ
ಒಲವಿಗೆ ತೆರಿಗೆ ಪಾವತಿಸಿ ಬಂದು ನಿಂತಂತೆ ನಿಲ್ಲುವೆ
ತಪಸ್ಯಾಳ ಗೆಲ್ಲಲು ಹೊಸ ವರಸೆಯಂತಿದೆಯಲ್ಲ ಗೆಳೆಯ
***********************************
**************
ಗಜಲ್…ಚೆನ್ನಾಗಿದೆ, ಮೊದಲ ಸಾಲಿನಲ್ಲಿ ಗೆಳೆಯ ಪದ ಬರಬೇಕು ಗಮನಿಸಿ…