ಪ್ರಸ್ತುತ
ಮತ್ತೆ ಕಾಣಬಲ್ಲೆವೇ ಆ ದಿನಗಳನು..? ಮಲ್ಲಿಕಾರ್ಜುನ ಕಡಕೋಳ ದುರಿತಕಾಲ ಎಂಬ ಪದ ನಾವೆಲ್ಲ ಬರಹಗಳಲ್ಲಿ ಸೂಕ್ಷ್ಮತೆಯಿಂದ ಬಳಕೆ ಮಾಡಿದ ಪರಿಚಯವಿತ್ತು. ಪ್ರಸ್ತುತ ನಾವು ಅನುಭವಿಸುತ್ತಿರುವ ಖರೇ, ಖರೇ ದುರಿತಕಾಲದ ಈ ದಿನಗಳಿಗೆ ಕೊನೆಯೆಂಬುದು ಯಾವಾಗ ಎಂಬ ದುಗುಡ ನಮ್ಮನ್ನೀಗ ಘೋರವಾಗಿ ಬಾಧಿಸುತ್ತಿದೆ. ಅಷ್ಟಕ್ಕೂ ಕೊರೊನಾದ ಈ ಕಾಲಘಟ್ಟಕ್ಕೆ ಕೊನೆಯೆಂಬುದು ಇದೆಯೋ, ಇಲ್ಲವೋ ಎಂಬ ಕ್ರೂರ ಆತಂಕ. ಹಗಲು ರಾತ್ರಿಗಳೆನ್ನದೇ ಕಿವಿ, ಕಣ್ಣು, ಬಾಯಿ, ಮೂಗು, ಮನಗಳ ತುಂಬೆಲ್ಲ ಸೋಂಕಿತರು, ಶಂಕಿತರು, ರೆಡ್ ಝೋನ್, ಎಲ್ಲೋ ಝೋನ್, ಪೋಲಿಸರು, […]
ಪ್ರಸ್ತುತ
ವಾಟ್ಸ್ಯಾಪ್ ಮತ್ತು ಫೇಸ್ ಬುಕ್ ಗುಂಪುಗಳು ಗಂಗಾಧರ ಬಿ ಎಲ್ ನಿಟ್ಟೂರ್ ವಾಟ್ಸ್ಯಾಪ್ ಮತ್ತು ಫೇಸ್ ಬುಕ್ ಗುಂಪುಗಳು ಅವಲೋಕಿಸಲೇಬೇಕಾದ ಕೆಲ ಅಂಶಗಳು // ಪರಸ್ಪರ ಪರಿಚಯ, ವಿಚಾರ ವಿನಿಮಯ, ಆರೋಗ್ಯಕರ ಚರ್ಚೆ, ಪ್ರತಿಭೆಯ ಅನಾವರಣ ಹಾಗೂ ಹೊಸ ಕಲಿಕೆಯ ಮೂಲ ಉದ್ದೇಶದಿಂದ ಇಂದು ಎಲ್ಲ ಕ್ಷೇತ್ರದಲ್ಲೂ ಸಾಮಾಜಿಕ ಜಾಲತಾಣವನ್ನು ಮಾಧ್ಯಮವನ್ನಾಗಿಸಿಕೊಂಡು ಒಂದಲ್ಲ ಒಂದು ವಾಟ್ಸಾಪ್ ಅಥವಾ ಫೇಸ್‌ಬುಕ್ ಗುಂಪು ರಚನೆಯಾಗಿರುವುದು ಸರ್ವರಿಗೂ ತಿಳಿದ ಸಾಮಾನ್ಯ ಸಂಗತಿ. ಯಾರು ಯಾರಿಗೆ ಯಾವ ಕ್ಷೇತ್ರದಲ್ಲಿ ಆಸಕ್ತಿ, ಅಭಿರುಚಿ […]
ಪ್ರಸ್ತುತ
ಸಂವಾದ ಜ್ಯೋತಿ ಡಿ.ಬೊಮ್ಮಾ. ಹೌದು ಪಾಶ್ಚಾತ್ಯ ಸಂಸ್ಕೃತಿಯೆ ಚನ್ನ ಒತ್ತಾಯದ ಬದುಕು ಅವರಾರು ಬದುಕರು ಹೊಂದಾಣಿಕೆಯ ಪ್ರಯತ್ನವೇ ಮಾಡರವರು ನಮ್ಮಂತಲ್ಲ ಒಳಗೊಂದು ಹೊರಗೊಂದು ಇಷ್ಟವಿಲ್ಲದವನ/ಳೊಂದಿಗೆ ಏಗುವ ರಗಳೆ ಕುಡಿದು ಪೀಡಿಸುವ ಗಂಡನೊಡನೆ ಸಹಬಾಳ್ವೆ ಇಲ್ಲಿ ಮಕ್ಕಳಾಗದಿದ್ದರು ತಾನೆ ತಪಿತಸ್ಥಳು ಲೋಕಕ್ಕೆ ಅವನು ಗಂಡಸು..ಅವನಲ್ಲೆನು ಕೊರತೆ..! ಮಕ್ಕಳಾದ ಮೇಲೆ ಇನ್ನೆನಿದೆ. ಅನುಸರಿಸಿಕೊಂಡು ಹೋಗುವದೊಂದೆ. ಅವರಾದರೂ ಎಲ್ಲಿರುತ್ತಾರೆ ಕೊನೆವರೆಗೆ ನಮ್ಮವರಾಗಿ..! ಬಿಟ್ಟು ಬಿಡುವದೊಳಿತು ಮನಸ್ಸಿಗೊಪ್ಪದು ಸುಮ್ಮನಿರು ,ಮಾತು ಬೇರೆ ಆತ್ಮ ಬೇರೆ ಎರಡು ಒಂದಾಗಬೇಕಾದರೆ ತೆರೆ ಸರಿಸಿ ಬದುಕಬೇಕು. ಬಯಸಿ […]
ಪ್ರಸ್ತುತ
ಮಕ್ಕಳ ಆಯ್ಕೆಯಲ್ಲಿ ನಂಬಿಕೆ ಏಕಿಲ್ಲ….? ಅನಿತ.ಕೆ.ಬಿ. ವಿವಾಹವೆಂಬುದು ನಮ್ಮ ಸಮಾಜದಲ್ಲಿ ಕಂಡುಬರುವಂತಹ ಒಂದು ಸಂಸ್ಥೆ. ಗಂಡಿಗೆ ಹೆಣ್ಣು,ಹೆಣ್ಣಿಗೆ ಗಂಡು ಆಸರೆಯಾಗಿರುತ್ತಾರೆಂಬ ನಂಬಿಕೆಯಿಂದ ವಿವಾಹ ಅವಶ್ಶಕ ಹಾಗೂ ಅನಿವಾರ್ಯ. ಮದುವೆಯನ್ನು ಪುರಾಣಗಳ ಕಾಲದಲ್ಲಿ ಸ್ವಯಂವರ ರೀತಿ ನಡೆಸಲಾಗಿದೆ. ಹಾಗದರೆ ಮದುವೆ ಎಂದರೇನು…? ಎಂಬ ಪ್ರಶ್ನೆಗೆ ಸಮಾಜಶಾಸ್ತ್ರಜ್ಞರಲ್ಲಿ ಒಬ್ಬರಾದ ಮ್ಶಾಲಿನೊಸ್ಕಿರವರು “ಸ್ತ್ರೀ-ಪುರುಷರ ನಡುವೆ ಲೈಂಗಿಕ ಹಾಗೂ ಮಾನಸಿಕ ಸಂಬಂಧವನ್ನ ದೃಢಪಡಿಸುವ ಮತ್ತು ಸಂತಾನೋತ್ಪತ್ತಿಗಾಗಿ ಉದ್ದೇಶಪೂರ್ವಕವಾಗಿ ಏರ್ಪಡಿಸುವ ಒಪ್ಪಂದ” ಎಂದಿದ್ದಾರೆ. ಮದುವೆ ಇಲ್ಲದೆ ಜೀವನ ನಡೆಸಲು ಸಾಧ್ಶವಿಲ್ಲವೇ? […]
ಚಿಂತನೆ
ಅರಿಷಡ್ಬರ್ಗಗಳನು ದಾಟಿ….. ಅಶ್ವಥ್ ಕಳೆದ ವಾರ ಗೆಳೆಯನೊಬ್ಬನಿಗೆ ಏನೋ ಗೊಂದಲವಾಗಿ ಕೆಲವು ಪ್ರಶ್ನೆಗಳನ್ನು ಒಂದಕ್ಕೊಂದು ಪೋಣಿಸಿ ಪ್ರಶ್ನೆಗಳ ಒಂದು ಮಾಲೆಯನ್ನೇ ಮಾಡಿಟ್ಟುಕೊಂಡಿದ್ದ. ನಾವು ಕತೆ ಕೇಳ್ತೇವೆ, ಇತಿಹಾಸ ಅಧ್ಯಯನ ಮಾಡ್ತೇವೆ, ಪುರಾಣ ಪುಣ್ಯಕತೆಗಳನ್ನು ಓದುವುದು ಕೇಳುವುದು ನೋಡುವುದು ಇದ್ದೇ ಇದೆ. ಇಷ್ಟೇ ಅಲ್ಲದೇ ನಮ್ಮ ತಲೆಮಾರಿನವರಿಗೆ ಬಾಲ್ಯದಲ್ಲಿ ಪೌರಾಣಿಕ ನಾಟಕಗಳು, ಹರಿಕತೆಗಳು, ಬೀದಿನಾಟಕ, ಗೊಂಬೆನಾಟಕ ಹೀಗೆ ಹತ್ತು ಹಲವು ರೀತಿಯಲ್ಲಿ ನಮ್ಮ ಹೊರಗನ್ನು ತಿಳಿಯುವ ಸಾಮಾನ್ಯ ಸಾಧ್ಯತೆಗಳಿದ್ದವು. ಈಗ ಹಳೆಯ ಈ ಮಾಧ್ಯಮಗಳೆಲ್ಲ ಹಿನ್ನೆಲೆಗೆ ಸರಿದು, ಸಿನಿಮಾ, […]
ಅನುಭವ
ಮನೆ……. ಹಕ್ಕಿ ಮನೆ ಅನುಪಮಾ ರಾಘವೇಂದ್ರ ಮನೆ……. ಹಕ್ಕಿ ಮನೆ ಈ ಮರೆವು ಅನ್ನೋದು ಮನುಷ್ಯರಿಗೆ ಮಾತ್ರವೋ….? ಅಲ್ಲಾ ಪ್ರಾಣಿ ಪಕ್ಷಿಗಳಿಗೂ ಇರುತ್ತೋ…..? ನನಗೀ ಸಂಶಯ ಬರಲು ಕಾರಣವೇನೋ ಇದೆ. ಕೆಲವು ದಿನಗಳ ಹಿಂದಿನ ಘಟನೆ…… ಸಂಜೆ ವೇಳೆ ಹಟ್ಟಿ ಬಳಿಗೆ ಹೋದಾಗ ಹಟ್ಟಿಯ ಒಳಗಿನಿಂದ ಹಕ್ಕಿಯೊಂದು ಪುರ್ರನೆ ಹಾರಿ ಹೋಯ್ತು. ಮರುದಿನ ಬೆಳಗ್ಗೆಯೂ ಅದೇ ರೀತಿ ಹಕ್ಕಿ ಹಾರುವುದು ಕಂಡಿತು. ಹಕ್ಕಿಗಳ ಕಿಚ ಪಿಚ ಸುಮಧುರವಾದ ಸಂಗೀತ…… ನಾನು ಹೋದ […]
ಪ್ರಸ್ತುತ
ಕೊರೊನಾ ಕಾಲದ ರಂಗಸಂಸ್ಕೃತಿ ಚಿಂತನೆಗಳು ಮಲ್ಲಿಕಾರ್ಜುನ ಕಡಕೋಳ ಕೊರೊನಾ ಎಂಬ ಕರಾಳ ರಾಕ್ಷಸ ಹಾವಳಿಯಿಂದಾಗಿ ಮನುಷ್ಯರ ಬದುಕು ತೀವ್ರ ಸ್ವರೂಪದ ಆಘಾತವನ್ನು ಎದುರಿಸುವಂತಾಗಿದೆ. ಸಾಂಸ್ಕೃತಿಕ ಬದುಕಿಗೂ ತೀವ್ರವಾದ ಪೆಟ್ಟು ಬಿದ್ದಿದೆ. ನಿಸ್ಸಂದೇಹವಾಗಿ ಅದನ್ನು ಯಾರೂ ಅಲ್ಲಗಳೆಯಲಾರರು. ಹಾಗಂತ ಕೊರೊನಾ ಪೂರ್ವದಲ್ಲಿ ನಮ್ಮ ಸಾಹಿತ್ಯ, ಸಂಗೀತ, ನಾಟಕ ಹೀಗೆ ಎಲ್ಲಾ ಕಲೆಗಳಿಗೆ ಸಿಗುತ್ತಿದ್ದ ಪ್ರೋತ್ಸಾಹ, ಸಹಾಯ, ಸಹಕಾರ, ಅಭಿವ್ಯಕ್ತಿ ಸ್ವಾತಂತ್ರ್ಯ ಅಮೋಘವಾಗಿತ್ತು. ಅದರಿಂದಾಗಿ ಅತ್ಯಂತ ಸಮೃದ್ಧವಾದ ಸಾಂಸ್ಕೃತಿಕ ಬದುಕು ಮೈಮನ ತುಂಬಿ ಚೆಂಗುಲಾಬಿಯಂತೆ ಅರಳಿಕೊಂಡಿತ್ತೆಂದು ಭ್ರಮಿಸಬೇಕಿಲ್ಲ. ಈಗ ಕೊರೊನಾ […]
ಪ್ರಸ್ತುತ
ಅಪ್ಪ ರಾಘವೇಂದ್ರ ಈ ಹೊರಬೈಲು “ಮಾತೃದೇವೋಭವ ಪಿತೃದೇವೋಭವ ಆಚಾರ್ಯ ದೇವೋಭವ” ಭೂಮಿಯ ಮೇಲೆ ಕಣ್ಣಿಗೆ ಕಾಣುವ, ಜೊತೆಯಲ್ಲಿಯೇ ಇರುವ, ಕಷ್ಟವೆಂದಾಗ ಮರುಗುವ, ದಾರಿಗೆಡದಂತೆ ಮಾರ್ಗದರ್ಶನ ಮಾಡುವ ಮೂರು ದೈವಗಳೆಂದರೆ ತಂದೆ, ತಾಯಿ ಮತ್ತು ಗುರು. ಇಡೀ ಭೂಮಂಡಲದ ಪ್ರತಿಯೊಬ್ಬರಿಗೂ ಇವರೇ ನಿಜವಾದ ತ್ರಿಮೂರ್ತಿಗಳು. ಮಗುವನ್ನು ಸದ್ಗತಿಗೆ ತರುವಲ್ಲಿ ಮೂವರ ಪಾತ್ರವೂ ಬಹುಮುಖ್ಯವಾದುದು. ತಾಯಿಯಾದವಳು ಕರುಣಾಮಯಿಯಾಗಿ, ಮುದ್ದು ಮಾಡುತ್ತಾ, ಸದಾ ಮಗುವಿನ ಹಿತಕ್ಕಾಗಿಯೇ ಬದುಕುವವಳು. ಗುರುವಾದವನು ಮಗುವು ದಾರಿ ತಪ್ಪದಂತೆ ಮಾರ್ಗದರ್ಶನ ನೀಡಿ, ಜಗತ್ತಿನ ಪರಿಚಯ ಮಾಡಿಕೊಡುವವನು. ಆದರೆ […]
ಪ್ರಸ್ತುತ
ಶಿಕ್ಷಣದ ಬದಲಾವಣೆ ಅನಿವಾರ್ಯ ರೇಷ್ಮಾ ಕಂದಕೂರ ಶಿಕ್ಷಣದ ಬದಲಾವಣೆ ಅನಿವಾರ್ಯ ಶಾಲೆ ಎಂಬುದು ಗಾರೆ ತುಂಬಿದ ಕಟ್ಟಡವಲ್ಲ ಜೀವಕೆ ಜೀವನ ನೀಡುವ ಸಂಗ್ರಹಾಗಾರ .ಕಾಲ ಘಟ್ಟದೊಂದಿಗೆ ಸದಾ ಹರಿವ ನೀರಿನಂತೆ ಬದಲಾಗುವ ರೀತಿಯ ಅರಿತು ಮಕ್ಕಳ ಮನವ ಅರಿತು ಬದಲಾಗುವ ಶೈಲಿಯ ರೂಢಿಸಿಕೊಂಡು ಮುಗ್ಧ ಮನಸುಗಳ ವಿಕಾಸಕ್ಕೆ ದಾರಿ ದೀಪವಾಗ ಬೇಕೆ ವಿನಃ ಕಟ್ಟುಪಾಡುಗಳಿಂದ ಚೌಕಟ್ಟಿನಲಿ ಜೋತು ಬೀಳಬಾರದು. ಅಂಕ ಶ್ರೇಣಿಯ ಹೊರತಾಗಿಯೂ ಬದುಕುವ ಜೀವನ ಶೈಲಿಗೆ ಹೊಂದಿಕೊಳ್ಳುವ ರೀತಿಯಲ್ಲಿ ಸಾಗಬೇಕು. ಮಾನವ ಜನಾಂಗದ ಪ್ರಗತಿಗೆ […]
ಹರಟೆ
ಮರೆವು ಅನುಪಮಾ ರಾಘವೇಂದ್ರ ಅರಿತೋ…ಮರೆತೋ…ಒಂದೊಮ್ಮೆ ದಾರಿ ತಪ್ಪಿದರೂ ಕೂಡ ಮತ್ತೆ ಎಚ್ಚರಗೊಂಡು ಮೈಕೊಡವಿ ನಿಲ್ಲಬೇಕು. ಆಗ ಮರೆವು ಮರೆಯಾಗಿ ಅರಿವಿನ ಜ್ಯೋತಿ ಬೆಳಗುತ್ತದೆ ಎಂದಿದ್ದಾರೆ ವಿದ್ವಾಂಸರು. ಮರೆವು ದೇವರು ಕೊಟ್ಟ ವರ. ಆದರೆ ಯಾವುದನ್ನು ಮರೆಯಬೇಕು, ಯಾವುದನ್ನು ಮರೆಯಬಾರದು ಎಂಬ ಅರಿವು ನಮ್ಮಲ್ಲಿರಬೇಕು. ಅದೇನೋ ಸರಿ…….. ಆದರೆ ಮೊನ್ನೆ ನಾನು ಅಡಿಗೆ ಮಾಡುತ್ತಿರುವಾಗ ಬೇರೇನೋ ನೆನಪಾಗಿ ಸ್ಟೋರ್ ರೂಮಿನ ಒಳ ಹೊಕ್ಕಾಗ ಯಾವ ಕಾರಣಕ್ಕೆ ಅಲ್ಲಿಗೆ ಹೋದೆ ಎಂಬುದೇ ಮರೆತು ಹೋಗಿತ್ತು. ಮತ್ತೆ ಮೊದಲಿದ್ದಲ್ಲಿಗೇ […]