ಮಕ್ಕಳ ಆಯ್ಕೆಯಲ್ಲಿ ನಂಬಿಕೆ ಏಕಿಲ್ಲ….?
ಅನಿತ.ಕೆ.ಬಿ.
ವಿವಾಹವೆಂಬುದು ನಮ್ಮ ಸಮಾಜದಲ್ಲಿ ಕಂಡುಬರುವಂತಹ ಒಂದು ಸಂಸ್ಥೆ. ಗಂಡಿಗೆ ಹೆಣ್ಣು,ಹೆಣ್ಣಿಗೆ ಗಂಡು ಆಸರೆಯಾಗಿರುತ್ತಾರೆಂಬ ನಂಬಿಕೆಯಿಂದ ವಿವಾಹ ಅವಶ್ಶಕ ಹಾಗೂ ಅನಿವಾರ್ಯ.
ಮದುವೆಯನ್ನು ಪುರಾಣಗಳ ಕಾಲದಲ್ಲಿ ಸ್ವಯಂವರ ರೀತಿ ನಡೆಸಲಾಗಿದೆ.
ಹಾಗದರೆ ಮದುವೆ ಎಂದರೇನು…? ಎಂಬ ಪ್ರಶ್ನೆಗೆ ಸಮಾಜಶಾಸ್ತ್ರಜ್ಞರಲ್ಲಿ ಒಬ್ಬರಾದ ಮ್ಶಾಲಿನೊಸ್ಕಿರವರು “ಸ್ತ್ರೀ-ಪುರುಷರ ನಡುವೆ ಲೈಂಗಿಕ ಹಾಗೂ ಮಾನಸಿಕ ಸಂಬಂಧವನ್ನ ದೃಢಪಡಿಸುವ ಮತ್ತು ಸಂತಾನೋತ್ಪತ್ತಿಗಾಗಿ ಉದ್ದೇಶಪೂರ್ವಕವಾಗಿ ಏರ್ಪಡಿಸುವ ಒಪ್ಪಂದ” ಎಂದಿದ್ದಾರೆ.
ಮದುವೆ ಇಲ್ಲದೆ ಜೀವನ ನಡೆಸಲು ಸಾಧ್ಶವಿಲ್ಲವೇ? ಯಾಕಿಲ್ಲ,ಎಷ್ಟೋ ಮಂದಿ ತಮ್ಮ ಉದ್ದೇಶಕ್ಕಾಗಿ ವಿವಾಹವಾಗದೇ ಉಳಿದಿದ್ದಾರೆ. ಆದರೆ ಯಾರೋ ಒಬ್ಬ ವಿವೇಕಾನಂದ,ಎಲ್ಲೊ ಒಬ್ಬ ಕಲಾಂ, ಮೋದಿಯಂತವರೇ ಹೊರತು ನಮ್ಮ ಅಣ್ಣ-ತಮ್ಮ,ಅಕ್ಕ-ತಂಗಿಯರಂತು ಅಲ್ಲವೇ ಅಲ್ಲ..! ವಿವಾಹವಿಲ್ಲದೆ ಮೋಕ್ಷವಿಲ್ಲ ಎಂಬುದು ಹಿಂದೂಗಳ ನಂಬಿಕೆ ಹಾಗಾಗಿ ವಿವಾಹ ಅನಿವಾರ್ಯ.
ಮದುವೆ ಎಂಬುದು ಬಂಧನವೇ? ಅಲ್ಲವೇ ಅಲ್ಲ. ಇದು ಎರಡು ಜೀವಗಳನ್ನ ಹತ್ತಿರ ತಂದು ಜೀವನವಿಡೀ ಒಂದಾಗಿ ಬಾಳಬೇಕೆಂದು ಹರಸುವಂತಹ ಒಂದು ವಿಧಿ.
ವಿವಾಹದ ಕುರಿತು ಹೆಣ್ಣು-ಗಂಡುಗಳಲ್ಲಿ ಹತ್ತಾರು ಕನಸುಗಳಿರುತ್ತವೆ,ಮಾತ್ರವಲ್ಲ ಹಲವರು ತಮ್ಮ ಸಂಗಾತಿಯನ್ನ ಆಯ್ಕೆ ಮಾಡಿಕೊಂಡಿರುತ್ತಾರೆ. ಇದಕ್ಕೆ ವಿರುದ್ಧವಾದ ಸಂದರ್ಭ ಸೃಷ್ಠಿಗೊಂಡಾಗ ಮಾತ್ರ ವಿವಾಹ ಬಂಧನವಾಗುತ್ತದೆ.
ಹೌದು ಮದ್ವೆ ಒಂದೆರಡು ದಿನದ ಜವಾಬ್ದಾರಿಯಲ್ಲ, ಒಂದೆರಡು ದಿನದ ಸಂಭ್ರಮವಲ್ಲ. ಅಂದೊಂದು ಪವಿತ್ರ ಬಂಧ.
ಒಂದೆರಡು ದಿನದ ಸಂಭ್ರಮ ಮುಗಿಸಿಹೋಗುವವರು ನೀವಾದರೆ, ಅವರು ಜೀವನದ ಕೊನೆಯ ಪಯಣದವರೆಗೂ ವಿವಾಹವಾದವರೊಡನೆ ನಡೆಯುವವರಾಗಿರುತ್ತಾರೆ. ಹಾಗಾಗಿ ಯಾರೋ ನೊಡುವ ಹೆಣ್ಣು-ಗಂಡನ್ನು ನಂಬುವ ನೀವೂ ನಿಮ್ಮ ಕೈಬೆರಳ ಹಿಡಿದು ಜೊತೆ ಜೊತೆ ಸಾಗಿ ಬಂದ ನಿಮ್ಮ ಮಕ್ಕಳ ಆಯ್ಕೆಯಲ್ಲಿ ನಂಬಿಕೆ ಏಕಿಲ್ಲ…? ಅವರ ಅಭಿಪ್ರಾಯಕ್ಕೂ ಮನ್ನಣೆ ಕೊಡಿ. ನೀವು ಪ್ರತಿನಿತ್ಶ ಪೂಜಿಸುವ ಆ ನಿಮ್ಮ ದೇವರುಗಳು ಕೂಡ ಸಂಗಾತಿಗಳನ್ನ ಆಯ್ಕೆಯಾಗೆ ತಾನೇ ವಿವಾಹವಾಗಿರುವುದು.
ಹೌದು ನಾವು ಸಮಾಜದ ಹೊರತಾಗಿ ಬದುಕಲು ಸಾಧ್ಶವಿಲ್ಲ. ಹಾಗಂತ ಸಮಾಜಕ್ಕಾಗಿ ಬದುಕುವುದು ಸರಿಯೇ?. ಸಂಗಾತಿಯನ್ನ ಆಯ್ಕೆ ಮಾಡಿಕೊಂಡ ಮಾತ್ರಕ್ಕೆ ಸಮಾಜ ಹದಗೆಡುವುದೇ?
**********
Well wrote
Supper and truth