ಪ್ರಸ್ತುತ

ಶಿಕ್ಷಣದ ಬದಲಾವಣೆ ಅನಿವಾರ್ಯ

Education: Latest News, Videos and Photos on Education - DNA News

ರೇಷ್ಮಾ ಕಂದಕೂರ

ಶಿಕ್ಷಣದ  ಬದಲಾವಣೆ ಅನಿವಾರ್ಯ

ಶಾಲೆ ಎಂಬುದು ಗಾರೆ ತುಂಬಿದ ಕಟ್ಟಡವಲ್ಲ ಜೀವಕೆ ಜೀವನ ನೀಡುವ ಸಂಗ್ರಹಾಗಾರ .ಕಾಲ ಘಟ್ಟದೊಂದಿಗೆ ಸದಾ ಹರಿವ ನೀರಿನಂತೆ ಬದಲಾಗುವ ರೀತಿಯ ಅರಿತು ಮಕ್ಕಳ ಮನವ ಅರಿತು ಬದಲಾಗುವ ಶೈಲಿಯ ರೂಢಿಸಿಕೊಂಡು ಮುಗ್ಧ ಮನಸುಗಳ ವಿಕಾಸಕ್ಕೆ ದಾರಿ ದೀಪವಾಗ ಬೇಕೆ ವಿನಃ ಕಟ್ಟುಪಾಡುಗಳಿಂದ ಚೌಕಟ್ಟಿನಲಿ ಜೋತು ಬೀಳಬಾರದು. ಅಂಕ ಶ್ರೇಣಿಯ ಹೊರತಾಗಿಯೂ ಬದುಕುವ ಜೀವನ ಶೈಲಿಗೆ ಹೊಂದಿಕೊಳ್ಳುವ ರೀತಿಯಲ್ಲಿ ಸಾಗಬೇಕು.

            ಮಾನವ ಜನಾಂಗದ ಪ್ರಗತಿಗೆ ಶಿಕ್ಷಣ ಮಹತ್ವದ ಪಾತ್ರ ವಹಿಸುತ್ತದೆ.ಮಾನವ ಶಕ್ತಿಯನ್ನು ರಾಷ್ಟ್ರವನ್ನು ಬೆಳೆಸುತ್ತಿರುವ ಅಮೂಲ್ಯ ಸಂಪನ್ಮೂಲಗಳಿಗೆ ಸರಿಯಾದ ಮಾರ್ಗದರ್ಶನ ನೀಡುತ್ತದೆ ಶಿಸ್ತು ಸಂಯಮ ಮತ್ತು ಉತ್ಪಾದಕ ಮಾನವ ಶಕ್ತಿಯನ್ನು ಸೃಷ್ಟಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.ಶಿಕ್ಷಣ ಮಾನವನ ಸಹಜ ಗುಣಗಳನ್ನು ಅಡೆತಡೆಯಿಲ್ಲದ ಮಾರ್ಪಾಡು ಮಾಡಿ ವ್ಯಕ್ತಿತ್ವ ವಿಕಸನಕ್ಕೆ ಎಡೆ ಮಾಡಿ ಕೊಡಬೇಕು.

          ದೇಶದ ಕಲ್ಯಾಣಕ್ಕೆ ತಾತ್ವಿಕವಾಗಿ ಆರ್ಥಿಕವಾಗಿ ಸಾಮಾಜಿಕ ವಲಯಕ್ಕೆ ಪೂರಕವಾದ ವಾತಾವರಣ ಸೃಷ್ಟಿಸುತ್ತದೆ. ಸಮಾನವಾಗಿ ಸಮನ್ವಯದೊಂದಿಗೆ ವಾಸ್ತವದ ನೆಲೆಗಟ್ಟು ಕಂಡುಕೊಳ್ಳಲು ಸಹಕಾರಿ ಜೀವನೋಪಾಯದ ಹಲವು ಮಜಲುಗಳನ್ನು ತಿಳಿಸುವ ಏಕೈಕ ಮಾರ್ಗ ಶಿಕ್ಷಣ.

            ಶಿಕ್ಷಣ ಆಸಕ್ತಿದಾಯಕ ಸೃಜನಶೀಲತೆಗೆ ಹೆಚ್ಚು ಒತ್ತುಕೊಟ್ಟಾಗ ಅವುಗಳ ಅನುಷ್ಠಾನಕ್ಕೆ  ಪ್ರಚೋದಿಸಿ ಸಂತೃಪ್ತ ಮನೋಭಾವ ತುಂಬಿ ಹತಾಷೆ,ನಿರಾಸಕ್ತಿಗಳನ್ನು ತಿದ್ದಿ ಹೊಸತೊಂದು ನಿರ್ಮಾಣಕ್ಕೆ ಸಹಕಾರಿಯಾಗುತ್ತದೆ.ಆದರೆ ಇಂದಿನ ಶಿಕ್ಷಣದ ವ್ಯಾಪಾರೀಕರಣ ಮಾಡುವುದು ಸಲ್ಲದು.ಮಾನವ ಇಂದು ವೈಜ್ಞಾನಿಕವಾಗಿ ಪ್ರಗತಿ ಹೊಂದಿದ್ದರೂ ಸುಖಶಾಂತಿಗಳಿಲ್ಲದೇ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾನೆ.ಈ ನಿಟ್ಟಿನಲ್ಲಿ ಶಿಕ್ಷಣ ತಜ್ಞ ಡಾ.ರಾಧಾಕೃಷ್ಣನ್ ಹೇಳುವಂತೆ ಮಾನವ ಹಕ್ಕಿಯಂತೆ ಹಾರುವುದನ್ನು ಮೀನಿನಂತೆ ಈಜುವುದನು ಕಲಿತ ಆದರೆ ಮಾನವ ಮಾನವನಾಗಿ ಬಾಳುವುದನು ಮಾತ್ರ ಕಲಿಯಲಿಲ್ಲ.  ಇದರ ಅರ್ಥ ಮಾನವ ಬರೀ ಸಂಪತ್ತು ಗಳಿಕೆಗೆ ಒತ್ತು ಕೊಟ್ಟು ವೈಜ್ಞಾನಿಕ ಸಂಶೋಧನೆ ಮಾಡಿದ. ತಂತ್ರಜ್ಞಾನದಲ್ಲಿ ಕೊಡುಗೆ ನೀಡಿದ ಮಾನವ ಮಾನವನಾಗಿ ಬಾಳಿ ಬದುಕುವುದನು ಮರೆತ.

      ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಣ

ಮೌಲ್ಯಯುತ ಅಂಶಗಳನ್ನು ಕಲಿಸುವುದು ಇಂದಿನ ದಿನಮಾನಕ್ಕೆ ಅವಶ್ಯಕ.ಓದು ಹುದ್ದೇಯೇರುವ ಹಂಬಲ ಹೆಚ್ಚಾದರೆ ಅದನ್ನು ಸಾಧಿಸದಾದಾಗ ಆತ್ಮಹತ್ಯೆ ಎಂಬ ಮಾರಕತೆಗೆ ಒಳಗಾಗಿ ಜೀವ ನಷ್ಟ ವಾಗುತ್ತದೆ.

         ಜೀವನ ಮಾಡಲು ದೊಡ್ಡ ಹುದ್ದೆಯೇ ಬೇಕೆಂದಲ್ಲ.ಇನ್ನಿತರ ಮಾರ್ಗಗಳನ್ನು ಇಂದಿನ ಶಿಕ್ಷಣ ನೀಡಬೇಕಾದುದು ಅವಶ್ಯಕ‌

       ಸಮಾಜದ ಹಿತಕಾಯ್ದುಕೊಳ್ಳಲು ಆರೋಗ್ಯಕರವಾದ ವಾತಾವರಣವನ್ನು ಸಂರಕ್ಷಿಸುವ ಉದ್ದೇಶ ಹೊಂದಿರಬೇಕಾಗುತ್ತದೆ.ಶಿಕ್ಷಣದ ಗುರಿಗಳು ಶಾರೀರಿಕ ಬೆಳವಣಿಗೆಯೊಂದಿಗೆ ಸಚ್ಛಾರಿತ್ರ್ಯ ಬದುಕುವ ಕೌಶಲಗಳನ್ನು ನೀಡುವುದು ಅವಶ್ಯಕ.

       ಪ್ರಸ್ತುತ ದಿನಮಾನಗಳಲ್ಲಿ ಶಿಕ್ಷಣ ಪಡೆಯುವುದು ಮೂಲಭೂತ ಹಕ್ಕಾಗಿದೆ.  ಇದನ್ನು ಪ್ರತಿಯೊಬ್ಬ ಪ್ರಜೆ ಪಡೆಯಲೇಬೇಕು.

       ಶಿಕ್ಷಣ ಉರು ಹೊಡೆದು ಪರೀಕ್ಷೆ ಬರೆದು ಅಂಕ ಪಡೆದರೆ ಸಾಲದು ಅನುಭವ,ಪ್ರಾಯೋಗಿಕವಾಗಿ ಪಡೆದು ಜೀವನ ನಡೆಸುವ ಕೌಶಲ್ಯಗಳನ್ನು ಧಾರೆ ಎರೆಯಬೇಕಾಗಿದೆ.ಸದೃಢ ದೇಹ ಮನಸು,ಮೌಲ್ಯಯುತ ಬದುಕು ಸಾಗಿದಾಗ ಜೀವನಕೊಂದು ಅರ್ಥ ಬರುತ್ತದೆ.

 *******

2 thoughts on “ಪ್ರಸ್ತುತ

Leave a Reply

Back To Top