Category: ಇತರೆ

ಇತರೆ

ಗಜಲ್ ಮುರಳಿ ಹತ್ವಾರ್ ಹೊಳೆವ ನೀರ ಮೇಲೆ ಅರಳಿದ ತಾವರೆಯಲ್ಲಿ ನಿನ್ನದೇ ನೆನಪುಸುಳಿವ ತಂಗಾಳಿಗೆ ನಾಚಿ ಸರಿವ ಅಲೆಯಲ್ಲಿ ನಿನ್ನದೇ ನೆನಪು ಶಿಶಿರದಾ ಎಳೆಬಿಸಿಲು ಉಸಿರಿತ್ತು ತೆರೆವ ಚಿಗುರಿನೆಲೆಯಲ್ಲಿಆ ನೆಲೆಯ ಹಕ್ಕಿಗಳ ಚಿಲಿಪಿಲಿಯ ಹಾಡಿನಲ್ಲಿ ನಿನ್ನದೇ ನೆನಪು! ಬಸಿರೊಡೆದ ಮುಗಿಲು ಸುರಿಸುವ ತಿಳಿನೀರ ಹನಿಹನಿಗಳ ಸ್ಪರ್ಶದಲಿಹಸಿರೊಡೆದ ಮನದಿ ಮೂಡುವ ಕಾಮನಬಿಲ್ಲಿನಲ್ಲಿ ನಿನ್ನದೇ ನೆನಪು! ನೆಗೆನೆಗೆದು ಧುಮುಕುತ್ತ ಸರಿಸರಿವ ನದಿಗಳ ಬಳುಕಿನಲ್ಲಿಅಬ್ಬರದ ಅಲೆಗಳಲಿ ದಡವನಪ್ಪುವ ಶರಧಿಯಲ್ಲಿ ನಿನ್ನದೇ ನೆನಪು! ಚಳಿಯೊಡೆವ ಇರುಳುಗಳು ಮಬ್ಬಿಟ್ಟ ನಸುಕಿನ ಮಂಜಿನಲಿರಾಧೆಯ ನೆನೆನೆನೆದು ಮೆರೆವ […]

ಗಜಲ್ ಸುಜಾತಾ ರವೀಶ್ ನೆಲವ ನೋಡುತ ನಡೆಯಲು ಒಲವು ಪದವಾಗಿ ಇಳಿಯಿತಲ್ಲ ಗೆಳೆಯಾಛಲವ ಬಿಡುತ ಸಾಗಿರಲು ನಲಿವು ಹದನಾಗಿ ಉಳಿಯಿತಲ್ಲ ಗೆಳೆಯಾ ಬಲವ ತೋರಲು ಬದುಕಿದು ಗೆಲುವು ಕಾಣುವುದು ತೋರಿಕೆಯಲಿ ಮಾತ್ರನಿಲುವ ಬದಲು ಮಾಡಿರಲು ಜಗವು ಸೊಗವೆಂದು ತಿಳಿಯಿತಲ್ಲ ಗೆಳೆಯಾ ಹಮ್ಮಿನ ಪರದೆ ಸುತ್ತೆತ್ತಲೂ ಧಿಮ್ಮನೆ ಕವಿಯುತ ಮಂಜಾಯಿತೇಕೆ ದೃಷ್ಟಿ ಬಿಮ್ಮನು ತೊರೆದು ವರ್ತಿಸಲು ಘಮ್ಮನೆ ಪರಿಮಳ ಸುಳಿಯಿತಲ್ಲ ಗೆಳೆಯಾ ಎಳವೆ ಕಲಿಸಿದ ರಾಗಗಳ  ಆಲಾಪ ಮರೆತರೆ ಪ್ರಬುದ್ದರಾದಂತೆಯೇಸುಳಿವೆ ಕಾಣಿಸದೆ ನೋವುಗಳ ಪ್ರಲಾಪ ಜೀವನದಿ ಅಳಿಯಿತಲ್ಲ ಗೆಳೆಯಾ ಅಧ್ಯಾತ್ಮ […]

ಅಂಕಣ ಗಜಲ್ ಜಯಶ್ರೀ.ಭ. ಭಂಡಾರಿ. ಸರಿದು ಹೋಯ್ತು ಮತ್ತೊಂದು ಪ್ರೇಮಿಗಳ ದಿನಮರೆಯಲಾರೆ ನಾವಿಬ್ಬರೂ ಸಂಧಿಸಿದ ಆ ಸುದಿನ ಸಖನೇ ಜೋರಾದ ಮಳೆ ಅಬ್ಬರಕ್ಕೆ ನಡುಗಿ ನಿಂತಿದ್ದೆ ಮರದ ಕೆಳಗೆಸರಿ ಸಮಯಕೆ ಹಿತವಾಗಿ ಬಂದು ತುಂಬಿ ನಿಂತೆ ಮೈಮನ ಸಖನೇ ಪ್ರೀತಿ ದೇವನಿಟ್ಟ ವರ ಅದಕೆ ನೀ ನನಗೆ ದಕ್ಕಿದೆ ನೀ ನಿಟ್ಟೆ ಹಣೆಗೆ ಚುಕ್ಕಿ ಅದಕೆ ಸಲ್ಲಿಸುವೆ ದೇವಗೆ ನಮನ ಸಖನೇ ಪ್ರತಿ ಬಾರಿ ಈ ದಿನ ನಮ್ಮದೆ ಗುಲಾಬಿಯಲಿ ರಂಗಾಗಲುಹೊಸ ಚೈತನ್ಯ ತುಂಬಿ ಬರುತಿರಲು ಒಲವ ಗಾನ […]

ಗಜಲ್ ರೇಖಾ ಭಟ್ ಗುಡಿಸಲುಗಳ ಹೊಸ್ತಿಲಲಿ ಹಣತೆಗಳು ಬೆಳಗಿದರೆ ಅಂದು ದೀಪಾವಳಿಹಬ್ಬಿದ ಗೆದ್ದಲುಬಳ್ಳಿ ಉದುರಿ ಹಸೆಚಿತ್ರ ಮೂಡಿದರೆ ಅಂದು ದೀಪಾವಳಿ ಹಬ್ಬವೆಂದರೆ ಹೊಸ ಬಟ್ಟೆ ಹೊಸ ವೇಷ ಹೊಸ ನೋಟ ಇಷ್ಟೇ ಅಲ್ಲಹರಿದ ಅಂಗಿಯ ತುದಿಯಲಿ ಪಾಯಸವು ಅಂಟಿದ್ದರೆ ಅಂದು ದೀಪಾವಳಿ ರಂಗು ಬೆಳಕಿನಲಿ ನಡೆವ ನಶೆಯ ಕೂಟಗಳಿಗೆ ದೀಪಾವಳಿಯೇ ಆಗಬೇಕೆ‘ಮದ್ಯ’ದಲಿ ಕರಗುವ ಪುಡಿಗಾಸು ಕೂಸಿನ ಕಾಲ್ಗೆಜ್ಜೆಗಾದರೆ ಅಂದು ದೀಪಾವಳಿ ನೊಂದ ಜೀವಗಳಲಿ ಆಶಾಭಾವದ ಮಿಣುಕು ಮೊದಲು ಉದಿಸಬೇಕಿದೆ ಇಲ್ಲಿಕಸಮುಸುರೆಯಲಿ ಕನಸರಳಿಸುವ ಕೈಗಳಿಗೆ ಬಿಡುವಾದರೆ ಅಂದು ದೀಪಾವಳಿ […]

ಗಜಲ್ ಮುತ್ತು ಬಳ್ಳಾ ಕಮತಪುರ ನಿ‌ಮಗೆ ಮುಳ್ಳಂತೆ ಚುಚ್ಚುವುದು ಗೊತ್ತು |ಪ್ರೀತಿಸಿದರೆ ಹೂ ಹಣ್ಣಾಗುವುದು ಗೊತ್ತು || ಕಂಗಳಿಗೆ‌ ಸೋಲದವರು ಯಾರು ಹೇಳಿ |ಅಂದಕೆ ಮೋಸ ಮಾಡುವುದು ಗೊತ್ತು || ನೋವುಗಳು ನುಂಗಿದ ಮೌನ ಸಾಗರದಷ್ಟು |ಒಂದು ತಪ್ಪು ಬದುಕೇ ಬದಲಿಸುವುದು ಗೊತ್ತು || ಅಲೆವ ಜೀವ ನದಿ ಕೊನೆಗೆ ಅಂತ್ಯವಾಗುದೆ |ಬೆಣ್ಣೆಯಂತ ಸ್ನೇಹ ಬೆಸೆಯುವುದು ಗೊತ್ತು || ಒಂಟಿ ಚಂದ್ರನು ಬಣ್ಣ ಬದಲಿಸಿದ ಮುತ್ತು|ಬೆವರ ಹನಿ ನೆಲವ ತಣಿಸಿರುವುದು ಗೊತ್ತು | ಕದಡಿದ ಮನದಲಿ ಆಸೆಯ […]

ಗಜಲ್ ವೀಣಾ .ಎನ್. ರಾವ್. ಎದೆಯ ನದಿಯಲಿ ಹರಿಯಲಿ ಒಲವ ಭಾವಗಂಗೆ ಅನುದಿನ ಗೆಳೆಯಾಸುಧೆಯ ಸುಳಿಯಲಿ ಜಿನುಗಲಿ ನಾದದ ಜೀವಬಂಧ ಹೊಸದಿನ ಗೆಳೆಯಾ. ನಿಯಂತ್ರಣ ತಪ್ಪದ ಬದುಕಲಿ ಹುಡುಕಬೇಕಿದೆ ನಿನ್ನಯ ಸಾಂಗತ್ಯ ಸವಿಯಲುಆಮಂತ್ರಣ ನೀಡದೆ ಬರೆದೆ ನನ್ನೆದೆಯಲಿ ಕಾವ್ಯಕುಸುರಿ ಸುರಿದದಿನ ಗೆಳೆಯಾ. ನಿಲ್ಲದ ಅಭಿಲಾಷೆ ನೋಟದಲಿ ಬಂಧಿಸಿ ಮಧುರ ನುಡಿ ಮರೆಸಿದೆಸಲ್ಲದ ನೆಪದಲಿ ಹಗಲು ಕನಸಿಗೆ ಸ್ಪೂರ್ತಿಯು ಮರೆಯದದಿನ ಗೆಳೆಯಾ. ಕಿರುನಗೆಯನು ಕೆಣಕುತ ಸೆಳೆದ ಮನಕೆ ಪುಳಕದ ಸವಿರಸ ಉಣಿಸಿಹೊಸಬಗೆಯನು ತೋರುತ ಬಳಿಬಂದು ನೋವ ಮರೆತು ಸರಿದದಿನ […]

ಗಜಲ್ ಶಂಕರಾನಂದ ಹೆಬ್ಬಾಳ ಮಳೆಯ ಹನಿಗಳು ಇಳಿಯುತ ಇಳೆಗೆ ಎದೆಗಳ ತಂಪಾಗಿಸಲಿ ಸಖಿ|ಮನದಲಿ ಪ್ರೀತಿಯು ಚಿಮ್ಮುತ ತಾನಿಂದು ಭಾವಗಳ ಇಂಪಾಗಿಸಲಿ ಸಖಿ|| ಜೀವಗಳ ಬಾಂಧವ್ಯ ಬೆಸೆಯುವ ನಲ್ಮೆಯ ಸುಮಧುರ ಸ್ನೇಹವದು|ಭಾನುಭೂಮಿಗಳು ಜೊತೆಯಲಿ ಬೆರೆಯುತ ತನುಗಳ ಒಂದಾಗಿಸಲಿ ಸಖಿ|| ಒಲವಿನಲಿ ಕೂಡುವ ಸವಿ ಸ್ವಪ್ನಗಳು ಕಂಗಳಲಿ ನಲಿಯುತಿವೆ|ಚೆಲುವಿನ ಸಿರಿಯು ಧರಣಿಯ ಮೆಲ್ಗಡೆ ಹಸಿರಿನು ಸೊಂಪಾಗಿಸಲಿ ಸಖಿ|| ಇಬ್ಬನಿಯಲಿ ಕಿರಣಗಳು ರವಿಯ ಕಾಂತಿ ತೋಷದಲ್ಲಿ ಚಲ್ಲುತಿವೆ|ಕಾರ್ಮೋಡ ಆಗಸದಲಿ ಶರಧಿಯ ಸೇರುತ ವರುಣನ ಸ್ವಾಗತಿಸಲಿ ಸಖಿ|| ನೀಲಾಕಾಶವು ಚಣದಲ್ಲಿ ರವಿಯನ್ನು ಹೊಳೆಸಿ […]

ಗಜಲ್ ಸಿದ್ದರಾಮ ಹೊನ್ಕಲ್ ತೆರೆಯಬಾರದೇನೇ ನಿನ್ನ ಹೃದಯಕ್ಕೆ ಹಾಕಿದ ಬೀಗವನುತೋರಬಾರದೇ ದೇಹ ಮನದೊಳಗಿನ ಚೆಲುವ ಸಿರಿಯನು ಒಲವು ತುಂಬಿಟ್ಟಿರುವಿ ಯಾರೂ ಕದಿಯದಂತೆ ಕಾಪಿಟ್ಟುಮುದದಿ ಸಿಹಿ ಮುತ್ತಿಕ್ಕಿ ನೀ ತಬ್ಬದೇ ಹಬ್ಬಲು ಅರಿಯನು ಜಗದಿ ಕಳ್ಳ ಸುಳ್ಳ ಖದೀಮರೇ ಜಾಸ್ತಿ ದೋಚ ಬಲ್ಲವರುಎಚ್ಚರದಿ ದೂರವಿಡು ನಾಯಿ ನರಿ ಕಾಡು ಕೋಣಗಳನು ಹುಷಾರ್ ಕಣೇ ಬಹುದೂರ ಬಂದಿರುವಿ ಬೇಲಿ ಮರೆಯಲಿಎಲ್ಲೆಂದರಲ್ಲಿ ಕುಂತು ಹಾಕಲು ಮರೆಯದಿರು ಚಿಲುಕವನು ಹೊನ್ನಸಿರಿ’ಮೆಚ್ಚಿಹನು ನಿಸ್ವಾರ್ಥ ಸ್ವಾಭಿಮಾನ ಸಂಪತ್ತನುಜೋಪಾನದಿ ಕಾಪಾಡಿಕೋ ಮುಳ್ಳ ಮೇಲಿನ ಸೀರೆಯನು ಕಲ್ಲು ಬಂಡೆಯಂತವ […]

ಗಜಲ್ ಪ್ರಭುಲಿಂಗ ನೀಲೂರೆ ಬಿಗಿ ಸಾಮೀಪ್ಯ ಇಲ್ಲದೆಯೂ ನೀ ನನ್ನ ಪ್ರಾರ್ಥನೆಯೊಳಗೆ ಅಡಗಿರುವೆ ಮುದ್ದುದೇಹ ಬೇರೆಯಾದರೂ ನೀ ನನ್ನ ಉಸಿರೊಳಗೆ ಬೆರೆತಿರುವೆ ಮುದ್ದು ಎಲ್ಲಿ ನೋಡಿದರಲ್ಲಿ ನಿನ್ನದೆ ಬಿಂಬ ನಾ ಕಾಣುತಿರುವೆ ನನಗೇನಾಗಿದೆ ಹೇಳುನಿನ್ನ ಕಂಡಂದಿನಿಂದ ಶಾಶ್ವತವಾಗಿ ನೀ ನನ್ನ ಕಣ್ಣೊಳಗೆ ನೆಲೆಸಿರುವೆ ಮುದ್ದು ನಮ್ಮ ದೇಹಗಳು ಹತ್ತಿರವಿಲ್ಲದಿದ್ದರೂ ಹೃದಯಗಳು ಎಂದೋ ಒಂದಾಗಿವೆದೂರವಿದ್ದರೂ ಪ್ರತಿಕ್ಷಣ ಮನಸ್ಸಿನೊಳಗೆ ಓಡಾಡುತಿರುವೆ ಮುದ್ದು ತಲೆ ಬಾಚಿದಾಗಲೆಲ್ಲ ನಿನ್ನ ಬೆರಳುಗಳ ಓಡಾಟ ಕಂಡು ನಾಚಿ ನೀರಾಗುತ್ತೇನೆಬೆಳದಿಂಗಳಲಿ ನೀ ನೀಡಿದ ಮುತ್ತಿಗೆ ಸಾಕ್ಷಿಗೆ ಚಂದಿರನಿಗೆ […]

ಗಜಲ್ ಅಲ್ಲಾಗಿರಿರಾಜ್ ಕನಕಗಿರಿ. ಒಮ್ಮೆ ಯೋಚಿಸು ನೋಡು ಗಂಟು ಬಿದ್ದರೆ ಬಿಚ್ಚುವುದಿಲ್ಲ ಬದುಕು.ಒಮ್ಮೆ ಮನ‌ಸ್ಸಿಗೆ ಕೇಳಿ ನೋಡು ಮೈಗೆ ಮೈ ಉಂಡರೆ ಅಗಲುವುದಿಲ್ಲ ಬದುಕು. ಈ ಸುಖ ದುಃಖಗಳ ಆಟವೇ ಹೀಗೆ ಕಾಡಿಸಿ ಕೂಡಿಸಿ ಜೀವನ ಮುಗಿಸುತ್ತವೆ.ಒಮ್ಮೆ ಕನಸಿ ಕರೆದು ನೋಡು ಕತ್ತಲಿಗೂ ಸುಳಿವು ನೀಡುವುದಿಲ್ಲ ಬದುಕು. ದಿನಗಳು ಕಳೆದಂತೆ ಭಾರವಾಗುತ್ತದೆ ಜೀವನ ಸಾವಿನ ಎದುರು.ಒಮ್ಮೆ ಆತ್ಮ ಹೊರಗಿಟ್ಟು ನೋಡು ಹಗಲಿಗೆ ಅರ್ಥವಾಗುವುದಿಲ್ಲ ಬದುಕು. ಎಲ್ಲ ಸುಳ್ಳು ಮನೆ ಮಾತು ಬಂಧು ಬಳಗ ಮರಣ ಒಂದೇ ದಾಖಲೆ.ಒಮ್ಮೆ […]

Back To Top