Category: ಕಾವ್ಯಯಾನ

ಕಾವ್ಯಯಾನ

ಕಾವ್ಯಯಾನ

ಒಂದಿಷ್ಟು ಹಾಯ್ಕುಗಳು ಮದ್ದೂರು ಮದುಸೂದನ 1 ದೂರದ ಬೆಟ್ಟ ನುಣ್ಣಗೆ ಹೆಣ್ಣು ಕೂಡ 2 ಗಾಳಿ ಬಿಟ್ಟ ಪುಗ್ಗೆ ಒಮ್ಮೊಮ್ಮೆ ಬದುಕು 3 ತುದಿ ಕಾಣದ ಮುಗಿಲು ನಮ್ಮ ನಿಲ್ಲದ ಲಾಲಸೆ 4 ಬರಿದಾಗುತ್ತಿರುವ ಜೀವಜಲ ನಮ್ಮ ಜ್ಞಾನ 5 ಎಲ್ಲಿಯೂ ಒಂದಾಗದ ರೈಲಿನ ಹಳಿ ಜಾತಿಯತೆ 6 ಸದಾ ಕಾಡುವ ಕೊರತೆ ಮಾನವೀಯತೆ *********

ಕಾವ್ಯಯಾನ

ಗಝಲ್ ಎ.ಹೇಮಗಂಗಾ ಕಾಲಚಕ್ರ ಅರೆಕ್ಷಣವೂ ವಿರಮಿಸದೇ ಉರುಳುತ್ತಲಿದೆ ನಲ್ಲೆ ನಮ್ಮ ಪ್ರೀತಿ ಅಡೆತಡೆಯಿಲ್ಲದೇ ಬೆಳೆಯುತ್ತಲಿದೆ ನಲ್ಲೆ ನಡೆದ ಹಾದಿಯಲಿ ಎದುರಾದ ಕಷ್ಟ ಕೋಟಲೆಗಳು ನೂರು ಗಂಗಾ಼ಳದ ಗಂಜಿಯಲ್ಲೇ ಮೃಷ್ಟಾನ್ನದ ಸವಿ ತುಂಬಿದೆ ನಲ್ಲೆ ನಿನ್ನೆ ಮೊನ್ನೆಯಂತೆ ನೆನಪಿನಲ್ಲಿದೆ ಸಪ್ತಪದಿ ತುಳಿದ ಘಳಿಗೆ ದಶಕಗಳ ಅನುರಾಗದಲಿ ಈ ಬಂಧ ಬಿಗಿಗೊಂಡಿದೆ ನಲ್ಲೆ ಹುಲ್ಲಿನ ಮನೆಯೇ ಅರಮನೆಯಾಗಿರೆ ಎಲ್ಲಿಹುದು ಕೊರತೆ ? ನಾನು ಬಡವ ನೀನು ಬಡವಿ ಒಲವೇ ಸಿರಿಯಾಗಿದೆ ನಲ್ಲೆ ಬಾಳಿನ ಸಂಧ್ಯಾಕಾಲವಿದು ನನಗೆ ನೀನು ನಿನಗೆ ನಾನು […]

ಭೂಮಿ ದಿನ

ಭೂದೇವಿ ಡಾ: ಪ್ರಸನ್ನ ಹೆಗಡೆ ಕಾಣದ ದೇವರ ಹುಡುಕುವೆ ಏಕೋ ಕಾಣುವ ದೇವತೆ ಈ ಭೂಮಿ ನಾವೆಲ್ಲರೂ ಇರುವಾ ನಮ್ಮೆಲ್ಲರ ಹೊರುವಾ ಪ್ರತ್ಯಕ್ಷ ದೇವತೆ ಈ ಧರಣಿ ಗಂಧದ ಕಾಡನು ಜೇನಿನ ಗೂಡನು ಕರುಣಿಪ ದೇವತೆ ಈ ಧರಣಿ ತಣ್ಣನೆ ಹೊನಲನು ತುಂಬಿದ ಹೊಲವನು ಹೊತ್ತಿಹ ದೇವತೆ ಈ ತರುಣಿ ಏನು ಬಿತ್ತಿದರೂ ಬೆಳೆಯನು ಕೊಡುವಾ ಅಕ್ಷಯ ಪಾತ್ರೆಯೇ ಈ ಭೂಮಿ ಸಾವಿರ ತಪ್ಗಳ ನಗುತಾ ಕ್ಷಮಿಸುವ ಕ್ಷಮಾಧಾತ್ರಿಯೆ ಈ ಭೂಮಿ ಒದೆಯುವ ಕಾಲ್ಗಳ ಜರಿಯದೆ ಇರಿಯದೆ […]

ಕಾವ್ಯಯಾನ

ಕೆ.ಬಿ.ಸಿದ್ದಯ್ಯ ಹುಳಿಯಾರ್ ಷಬ್ಬೀರ್ ದಲಿತ ಕೇರಿಯ ಹುಡುಗ ಅಲ್ಲಮನ ಮಹಾಮನೆ ಹೊಕ್ಕು ದಲಿತರ ಅಕ್ಷರ ಲೋಕವನ್ನು ಅರಮನೆಯಾಗಿಸಿದ.. ದಲಿತ ಕಾವ್ಯೋದ್ಭದಲ್ಲಿ ಚಿಂತನೆಯ ಫಲ ಬೆರೆಸಿ ಮಸ , ಮಸೆದು ಹತಾರಗಳನ್ನು ಖಂಡಕಾವ್ಯವಾಗಿಸಿದವರು ಮೊನಚು ಮಾತು ಬಿಳಿಯ ಗಡ್ಡದೊಳ್ ಬೆರಳಾಟದ ಚೆಂದದೊಂದಿಗೆ ಅಂಬೇಡ್ಕರ್ ಕೂಗೇ ನಿಮ್ಮ ಕೂಗಾಗಿ ಗಾಂಧಿ ಬುದ್ಧನನ್ನು ನಿಮ್ಮೆರಡು ಕೈಗಳಲ್ಲಿ ತಬ್ಬಿ ಹಿಡಿದವರು .. ಭೌತಿಕ ಜಗತ್ತು ಆಧ್ಯಾತ್ಮದ ಮುಂದೆ ಸೋಲುವಂತೆ ಬಕಾಲ ಮುನಿಯಾಗಿ ಶಬ್ದಕ್ಕೆ ಶಬ್ದವೇ ನಾಚುವಂತೆ ಅದರಾಚೆಗೂ … ಗಲ್ಲೆಬಾನಿಯಲ್ಲೆ ಅದ್ದಿ ಅನಾತ್ಮ […]

ಕಾವ್ಯಯಾನ

ನದಿ ದಡದಲಿ ನಡೆದಾಡಿದಂತೆ ಶೋಭಾ ನಾಯ್ಕ.ಹಿರೇಕೈ ಕಂಡ್ರಾಜಿ ಕವಿತೆ ಬರಿ ಅಂದರೆ ಕವಿತೆ ಹುಟ್ಟದು ಗೆಳೆಯ ಹುಟ್ಟುವುದು ಕನಸು ಮಾತ್ರ! ಕಿರುಬೆರಳ ನೀ ಹಿಡಿದು ಕಣ್ಮುಂದೇ.. ಬಂದಂತೆ ನದಿ ದಡದ ಮೇಲೆಲ್ಲ ನಡೆದಾಡಿ ಹೋದಂತೆ ಹೋದಲ್ಲಿ ಬಂದಲ್ಲಿ ಹೂ ಅರಳಿ ನಕ್ಕಂತೆ ನಕ್ಷತ್ರವನೇ ಕಿತ್ತು ಕಣ್ಮುಂದೆ ಇಟ್ಟಂತೆ ಅಂಗೈ ಗೆರೆಗಳ ಮೇಲೆ ಕವನಗಳ ಬರೆದಂತೆ ನಯನಗಳು ಒಂದಾಗಿ ಪ್ರೇಮವನೇ ಉಂಡಂತೆ ಅರಬ್ಬಿಯ ಅಲೆಗಳಲಿ ಹೊರಳಾಡಿ ಮಿಂದಂತೆ ದೂರ ತೀರವ ದಾಟಿ ಹೊಸ ಲೋಕ ಕಂಡಂತೆ ಹಾಯಿ ದೋಣಿಯ […]

ಕಾವ್ಯಯಾನ

ಬಿಡಿಸಲಾಗದ ಒಗಟು ಅನ್ನಪೂರ್ಣ.ಡೇರೇದ ಹಿರಿಹಿರಿ ಹಿಗ್ಗಿ ಕುಣಿದುˌ ಕುಪ್ಪಳಿಸಿ ಕನಸುಗಳೊಡಗೂಡಿ ನಲಿವಾಗ ನಸುಕ ಮುಸಕಲ್ಲಿ ಕಾಂತನೊಡನೆ ರೆಕ್ಕೆ ಬಡಿಯುತಲಿ ರೆಂಬೆ ರೆಂಬೆ ಜಿಗಿದು ನಲಿಯುತಲಿದೆ ಅದಾವುದೋ ಮಾರ್ಜಾಲ ಬಲಿಯ ಬೀಸಿತಲಿ ಒಂದೊಂದು ಕನಸು ಬಿಸಿಲಿಗೆ ಕರಗಿದ ಇಬ್ಬನಿಯಾಗಿದೆ. ಹೆಣ್ಣಬಾಳ ಕಣ್ಣೀರು ಮಣ್ಣ ಮಸಣದೊಳು ಸೇರಿ ˌಕಂಡ ಕನಸು ಒಡಲ ಕಳಚಿತು ಮೌಡ್ಯದ ನಡುವೆ ಮಡುಗಟ್ಟಿದ ಅವಳ ಬದುಕು ˌಜಾತಿ ಧರ್ಮದ ಭೂತಗನ್ನಡಿಗೆ ಹೆದರಿ ಮೂಲೆ ಗುಂಪಾಗಿದೆ. *********

ಕಾವ್ಯಯಾನ

ಗಝಲ್ ಎ.ಹೇಮಗಂಗಾ ಸ್ವಾರ್ಥ ಲಾಲಸೆಗಳೇ ತುಂಬಿ ತುಳುಕಾಡುತ್ತಿದ್ದರೂ ಬಾಳು ಸಾಗುತ್ತಲೇ ಇದೆ ಬಾಪೂ ಅಸಮಾನತೆಯ ಗೋಡೆಗಳು ಮತ್ತೆ ಎದ್ದರೂ ಬಾಳು ಸಾಗುತ್ತಲೇ ಇದೆ ಬಾಪೂ ನೀ ತೋರಿದ ಆದರ್ಶದ ಹಾದಿಯ ಪಾಲಿಸುವವರೆಷ್ಟು ನಮ್ಮ ನಡುವೆ ? ಭ್ರಷ್ಟಾಚಾರದ ಕಬಂಧಬಾಹುಗಳಲಿ ಜೀವ ನರಳಿದರೂ ಬಾಳು ಸಾಗುತ್ತಲೇ ಇದೆ ಬಾಪೂ ನೀ ಸಾರಿದ ತತ್ವಗಳು ನಿಸ್ಸತ್ವಗೊಂಡು ಮೂಲೆಗುಂಪಾಗಿ ಕಳೆದುಹೋಗಿವೆ ಜಾತಿ ವೈಷಮ್ಯದಲಿ ನಿಷ್ಪಾಪಿಗಳು ನಲುಗಿದರೂ ಬಾಳು ಸಾಗುತ್ತಲೇ ಇದೆ ಬಾಪೂ ಕಾಮಪಿಪಾಸುಗಳೆದುರು ನಡುರಾತ್ರಿ ಒಂಟಿ ಹೆಣ್ಣು ನಿರ್ಭಯದಿ ನಡೆವುದೆಂತು ? […]

ಕಾವ್ಯಯಾನ

ದ್ವೇಷದ ರೋಗಾಣು ಲಕ್ಷ್ಮಿಕಾಂತಮಿರಜಕರಶಿಗ್ಗಾಂವ. ಕೊರೋನಾ ಕೂಡ ತಬ್ಬಿಬ್ಬು ದುರಿತ ಕಾಲದಲ್ಲೂ ಧರ್ಮದ ಅಮಲೇರಿಸುವ ಕಾರ್ಯ ಅವ್ಯಾಹತವಾಗಿ ಸಾಗಿರುವುದ ಕಂಡು ಮೆದುಳು ಮಾರಿಕೊಂಡವರ ತಲೆಯಲ್ಲಿ ಈ ದೇಶವೇಕೆ ಹೀಗಿದೆ? ಬೆಕ್ಕಿನ ನೆರಳು ತೋರಿಸಿ ಹೆಬ್ಬುಲಿ ನಿಂತಿದೆ ಮರೆಯಲ್ಲಿ ಅಂತ ಪರದೆಯಲ್ಲಿ ತೋರಿಸಿದರೆ ಕ್ಷಣಾರ್ಧದಲ್ಲಿ ಎಲ್ಲ ಕಡೆ ಹೆಬ್ಬುಲಿಯದೇ ಮಾತು! ಮಾತು!ಮಾತು ಅಯ್ಯಯ್ಯಪ್ಪ ಎಂದಿರಬಹುದು ಕೊರೋನಾ ಪ್ರಾಣ ಹಿಂಡಲೂ ಬಂದ ಅಗೋಚರ ವೈರಾಣು ಕೂಡ ಅಸಹ್ಯ ಪಡುವಷ್ಟು ನಮ್ಮ ತಲೆಯಲ್ಲಿ ಅಮೇಧ್ಯದ ಹೊಲಸು ವಾಸಿಯಾಗದ ದ್ವೇಷದ ವೈರಾಣೊಂದು ತಲತಲಾಂತರದಿಂದಲೇ ಇವರ […]

ಕಾವ್ಯಯಾನ

ಗಝಲ್ ಸಹದೇವ ಯರಗೊಪ್ಪ ಗದಗ ಎದೆಯ ಸಂದೂಕಿಗೆ ಅರಿವಳಿಕೆ ಮದ್ದು ಸುರಿದು ಹೋದಳು| ಉಸಿರಿನಿಂದ ಉಸಿರು ಕದ್ದು ಸಾವು ಬರೆದು ಹೋದಳು|| ಚಾಟಿ ಇಲ್ಲದೆ ಬುಗುರಿಯಂತೆ ತಿರುಗೋಣ ಎಂದವಳು| ಪ್ರೇಮಿಗಳ ಗೋರಿಗೆ ಬಣ್ಣ ಬಳಿದು ಹೋದಳು|| ಇರುಳ ದಾರಿ ತುಂಬ ಕಣ್ಣ ದೀಪ ಬೆಳಗುವೆ ಎಂದವಳು| ಕನಸುಗಳ ಗೋಣು ಮುರಿದು ನೆತ್ತರು ಕುಡಿದು ಹೋದಳು|| ಭಾವನೆಗಳ ನಾವೆಯ ನಾವಿಕ ಎಂದವಳು| ಪ್ರತಿ ಹೆಜ್ಜೆ ಹೆಜ್ಜೆಗೆ ಕಲ್ಪನೆಗಳ ಕೊಂದು ಹೋದಳು|| ‘ಸಾಚಿ’ ಅಧರಕೆ ಜೀವ ಸತ್ವ ತುಂಬೋಣ ಎಂದವಳು| […]

ಕಾವ್ಯಯಾನ

ಶೂನ್ಯ ಡಾ.ಪ್ರಸನ್ನ ಹೆಗಡೆ ಈ ಬದುಕು ಸುಂದರ ಶೂನ್ಯ ಕಂಡಿದ್ದೆಲ್ಲವೂ ಅನ್ಯ ಹಿಂದತಿಲ್ಲ ಇಂದು ನಾಳೆಗೆ ಕಾದಿದೆ ಬೇರೊಂದು ಅಂದಂತಿಂದು ನಾನಿಲ್ಲ ಇಂದಂತಿರುವವ ನಾನಲ್ಲ ಇದು ಇಂತೆಂದೆಂಬುವನಾರಣ್ಣ? ಆ ಅಣ್ಣನೂ ಕೊನೆಗೆ ಮಣ್ಣಣ್ಣಾ ಈ ಅಕ್ಷಿಯ ಕಕ್ಷಿಯು ಕಿರಿದು ಬಾಯ್ಬಿಡಬೇಡಾ ಬಿರಿದು ಈ ಕಾಲನ ಚಕ್ರವು ಹಿರಿದು ಅದನರಿಯಲು ಸಾವದು ಬಿಡದು ಹರಿಯುವ ಹೊಳೆಯೂ ಮಾಯಾವಿ ಗಗನವೇರಲಿದೆ ಹಬೆಯಾಗಿ ಓ! ತೇಲುವ ಮೋಡವು ಮೇಲಿಲ್ಲ ಅದು ನಾಳಿನ ಹೊಳೆಯು ಸುಳ್ಳಲ್ಲ ನನ್ನದು ಎನ್ನಲು ಏನಿಲ್ಲ ನಾ ಧೂಳನು […]

Back To Top