ಗಝಲ್
ರತ್ನರಾಯ ಮಲ್ಲ
ದೇವರ ಮಂದಿರಗಳಿಗಿಂತ ಮಸಣವೇ ಲೇಸು
ಆಡಂಬರದ ಪ್ರದರ್ಶನಕ್ಕಿಂತ ಮೌನವೇ ಲೇಸು
ಬಜಾರ ಎಂದರೆ ಎಲ್ಲರೂ ಬೆನ್ನು ಹತ್ತುವವರೆ
ಯಾರೂ ಬರದ ಸ್ಮಶಾನದ ಪ್ರಯಾಣವೇ ಲೇಸು
ಬಂಧಗಳು ನರಳುತಿವೆ ಬಾಡಿದ ಬಾಂಧವ್ಯದಲ್ಲಿ
ತಬ್ಬಲಿಯಲ್ಲಿ ಅರಳಿದ ಈ ಒಂಟಿತನವೇ ಲೇಸು
ಶ್ರೀಮಂತಿಕೆಯು ಆಟವಾಡುತಿದೆ ಜಗದೊಳಗೆ
ಜೊತೆ ಜೊತೆಗೆ ಹೆಜ್ಜೆ ಹಾಕುವ ಬಡತನವೇ ಲೇಸು
ಅನುದಿನವೂ ಸಾಯಿಸುತಿವೆ ಮೌಲ್ಯಗಳು ನನ್ನ
‘ಮಲ್ಲಿ’ಯ ಹೃದಯದಲ್ಲಿರುವ ಮರಣವೇ ಲೇಸು
**********************
Very nice sir