ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ಕನ್ನಡಮ್ಮನ ಬೆಡಗು

ವೀಣಾ ರಮೇಶ್

ಕರುನಾಡು ನನ್ನದು
ಕನ್ನಡವದೇ ಸಾಕು
ನನಗೆ ಬಿರುದು
ಸಂಸ್ಕೃತಿಯ ತವರಿದು
ಹಸಿರು ಸಿರಿಯ
ಶೃಂಗಾರದಲಿ ಬಿರಿದು

ಧೀರ ಶರಧಿಯ ಬಗೆದು
ಕವಿಶ್ರೇಷ್ಠ ರ ಆಗೆದು
ಸಾಹಿತ್ಯ ಶಿಖರದ
ನೆತ್ತಿಯಲಿ ಇಳಿದು
ಹರಿಸಿದಳು ಅಕ್ಷರಧಾರೆ
ಮೊಗೆ ಮೊಗೆದು

ಮಲೆನಾಡ ಕಾಡಲ್ಲಿ
ಕಂಗೊಳಿಸಿದ ಸುಂದರಿ
ರಸಋಷಿಗೆ ಜ್ಞಾನಪೀಠದ
ಹೆಮ್ಮೆಯ ಗರಿ
ನಾಲ್ಕು ತಂತಿಗಳಲಿ
ಮೀಟಿದ ನಾದಲಹರಿ
ನಮ್ಮ ವರಕವಿ

ಶಿಲ್ಪಕಲೆ,ಬೇಲೂರು ಹಳೇಬೀಡಿನ ಬೆಡಗು
ರಾಜ ವೈಭೋಗದ
ಮೈಸೂರಿನ ಸೊಬಗು
ಹಂಪಿಯ ಸುವರ್ಣ ಯುಗ ಕನ್ನಡಾಂಬೆಯ
ಮೆರುಗು.

ಯಕ್ಷ ಪ್ರೇಮಿಗಳ ಹೃದಯದಲಿ
ಯಕ್ಷಗಾನದ ಹೆಜ್ಜೆಗಳಲಿ
ಮದ್ದಳೆಯ ಸದ್ದಲ್ಲಿ
ಕುಣಿಯಿತು ಯಕ್ಷಗಾನ
ಕಾರಂತರ ಹೆಜ್ಜೆಗಳಲಿ

ಎಲ್ಲೆಲ್ಲೂ
ಮೊಳಗಲಿ ನಿನ್ನ ಕಹಳೆ
ಸಮರಸದ ಸಹಬಾಳ್ವೆ
ಬೆಳಗಲಿ ,ಹರಡಲಿ
ಕನ್ನಡ ದೇವಿಯ
ಪ್ರಭಾವಳಿ

**********

About The Author

Leave a Reply

You cannot copy content of this page

Scroll to Top