ಮತ್ಲಾ ಗಜಲ್

ಮತ್ಲಾ ಗಜಲ್

ತೇಜಾವತಿ ಹೆಚ್.ಡಿ.

Poster, The Hands Embrace, Love

ನೀನಿರದ ವಿರಾಮವು ಬೇಡವಾಗಿವೆ ಈಗ
ಮಾಯಾ ಮನಸ್ಸು ಖಿನ್ನತೆಗೆ ಜಾರುತಿವೆ ಈಗ

ನೀ ನೋಡದ ಅಲಂಕಾರವು ಮಂಕಾಗಿವೆ ಈಗ
ತೊಟ್ಟ ಆಭರಣಗಳೇ ಭಾರವಾಗಿವೆ ಈಗ

ನಿನ್ನಗಲಿದ ಇರುಳೆಲ್ಲವೂ ಘೋರವಾಗಿವೆ ಈಗ
ದೇವಾ ಕಂಡ ಕನಸೆಲ್ಲವೂ ದುಃಸ್ವಪ್ನವಾಗಿವೆ ಈಗ

ನೀನಾಡದ ಮಾತುಗಳು ಕರಗಿ ಹೋಗಿವೆ ಈಗ
ಅಳಿದುಳಿದ ಭಾವನೆಗಳು ಹೆಪ್ಪುಗಟ್ಟಿವೆ ಈಗ

ನೀನಿಲ್ಲದ ನಂದನವನ ಬರಡಾಗಿವೆ ಈಗ
ಬೀಸುವ ತಂಗಾಳಿಯೂ ಬತ್ತಿಹೋಗಿವೆ ಈಗ

‘ತೇಜ’ ನೀ ಬಾರದ ದಿನಗಳು ಸ್ತಬ್ಧವಾಗಿವೆ ಈಗ
ಹಗಲು ರಾತ್ರಿಯ ವ್ಯತ್ಯಾಸವೇ ತಿಳಿಯದಾಗಿವೆ ಈಗ

*

Leave a Reply

Back To Top